Asianet Suvarna News Asianet Suvarna News

ಮಕ್ಕಳ ಮನಸ್ಸಲ್ಲಿ ಧನಾತ್ಮಕ ಚಿಂತನೆ ಬೆಳೆಸುವುದು ಹೀಗೆ

ಯಶಸ್ಸು(Success), ಸವಾಲು(Challenge), ಪ್ರತಿಭೆ(Talent), ಕೌಶಲ್ಯ ಇವೆಲ್ಲವೂ ಮನಸ್ಥಿತಿಯ ಬೆಳವಣಿಗೆಯ ಕೀಲಿಕೈಗಳು. ಇತ್ತೀಚಿನ ದಿನಗಳಲ್ಲಿ ಮಕ್ಕಳ ಶಿಕ್ಷಣದಲ್ಲಿ(Education) ಮನಸ್ಥಿತಿಯ ಬೆಳವಣಿಗೆಯ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಆದರೆ ಈ ಕೆಲಸ ಮನೆಯಿಂದಲೇ ಆಗಬೇಕು. ಅದಕ್ಕಾಗಿ ಪೋಷಕರು ಏನು ಮಾಡಬೇಕು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
 

Necessary of Growth Mindset in Childrens
Author
First Published Jan 20, 2023, 4:44 PM IST

ಮನಸ್ಥಿತಿಯ ಬೆಳವಣಿಗೆ ಮಕ್ಕಳಲ್ಲಿ ಮೂಡಿಸುವುದ ಶಿಕ್ಷಣದ ಅಡಿಗಲ್ಲಾಗಿ ಇಂದು ಕಾಣಬಹುದು. ಮಕ್ಕಳಲ್ಲಿ ಈ ಬೆಳವಣಿಗೆಯ ಮೊಳಕೆಯು ಮನೆಯಿಂದಲೇ ಶುರುವಾಗಬೇಕು. ಅದಕ್ಕೆ ಪೋಷಕರು ಮೊದಲು ಈ ಬಗ್ಗೆ ಅರ್ಥಮಾಡಿಕೊಳ್ಳುವುದರ ಜೊತೆಗೆ ಮಕ್ಕಳ ಬೆಳವಣಿಗೆಯಲ್ಲಿ ಸಹಾಯ ಮಾಡಬೇಕು.

 ಮಕ್ಕಳು ತಮ್ಮ ಜೀವನದಲ್ಲಿ ಪ್ರಬುದ್ಧರಾಗಿ ಸಾಗಲು, ಜೀವನದಲ್ಲಿ ಬರುವ ಸವಾಲುಗಳನ್ನು(Challenges) ಧೈರ್ಯದಿಂದ ಎದುರಿಸಲು, ಸೋಲನ್ನು(Failure) ಬೆಳವಣಿಗೆಯ ಒಂದು ಅವಕಾಶವಾಗಿ ಸ್ವಿಕರಿಸುವ ದೃಢತೆಯನ್ನು ಮೂಡಿಸಲು ಇದು ಸಹಾಯ ಮಾಡುತ್ತದೆ. ಹಾಗಾಗಿ ಮಕ್ಕಳ ಈ ಕಲಿಕೆಯಲ್ಲಿ ಪೋಷಕರು ಯಾವ ರೀತಿ ಪಾತ್ರವಹಿಸಬೇಕು ಎಂಬುದನ್ನು ನಾವಿಲ್ಲಿ ತಿಳಿಸಿದ್ದೇವೆ. 
ಇಂದಿನ ಶಿಕ್ಷಣದಲ್ಲಿ ನಿಶ್ವಿತ ಮನಸ್ಥಿತಿ(Fixed Mindset) ಹಾಗೂ ಮನಸ್ಥಿತಿಯ ಬೆಳವಣಿಗೆಯ(Growth Mindset) ಬಗ್ಗೆ ತರಬೇತಿ ನೀಡಲಾಗುತ್ತಿದೆ. ಮಕ್ಕಳಲ್ಲಿ ಸ್ಥಿರ ಮತ್ತು ಬೆಳವಣಿಗೆಯ ಮನಸ್ಥಿತಿಗಳ ಪರಿಕಲ್ಪನೆಯನ್ನು ಸ್ಟಾö್ಯನ್ ಫೋರ್ಡ್ ವಿಶ್ವವಿದ್ಯಾಲಯದ(Stanford University) ಮನಶಾಸ್ತçಜ್ಞ ಕರೋಲ್ ಡ್ವೆಕ್(Carol Dweck) ತಮ್ಮ ಸಂಶೋಧನೆಯ ಮೂಲಕ ಮೊದಲ ಬಾರಿ ತಿಳಿಸಿದರು. 'Mindset: The New Psychology Of Success' ಎಂಬ ಆಕೆಯ ಸಂಶೋಧನೆಯು ಜಗಜ್ಜಾಹೀರವಾಯಿತು(World Famous). ಈ ಬಗ್ಗೆ ಅನೇಕ ಶಾಲೆಗಳು(Schools) ಮತ್ತು ತರಗತಿಗಳಲ್ಲಿ ಈಗ ಮಕ್ಕಳ ಆತ್ಮವಿಶ್ವಾಸವನ್ನು ಬೆಳೆಸಲು ಮತ್ತು ಬೆಂಬಲಿಸುವ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ. 

Republic Day : ಪಾಲಕರೇ…ಮಕ್ಕಳಲ್ಲಿ ದೇಶ ಪ್ರೇಮ ಹೆಚ್ಚಿಸಿ, ರಾಷ್ಟ್ರೀಯ ಹಬ್ಬದ ಮಹತ್ವ ತಿಳಿಸಿ

ಬೆಳವಣಿಗೆಯ ಮನಸ್ಥಿತಿ ಎಂದರೇನು?(Growth Mindset)
ಮಗುವಿನಲ್ಲಿ ಮೂಲ ಸಾಮರ್ಥ್ಯಗಳು ಸ್ಥಿರವಾಗಿಲ್ಲ ಮತ್ತು ಕಾಲಾನಂತರದಲ್ಲಿ ಬುದ್ಧಿವಂತಿಕೆಯನ್ನು ಅಭಿವೃದ್ಧಿಪಡಿಸಬಹುದು ಅವರಲ್ಲಿ ತುಂಬುವ ಒಂದು ನಂಬಿಕೆ, ಆತ್ಮಸ್ಥೆöÊರ್ಯ, ಧೈರ್ಯದ(Dare) ಬೆಳವಣಿಗೆಯ ಮನಸ್ಥಿತಿಯಾಗಿದೆ. ಪ್ರಯತ್ನ ಮತ್ತು ನಿರ್ಣಯದ ಮೂಲಕ, ಬುದ್ಧಿವಂತಿಕೆ ಮತ್ತು ಮೂಲಭೂತ ಗುಣಗಳು ಬೆಳೆಯಬಹುದು. 
'ನಾನು ಕಷ್ಟಪಟ್ಟು ಓದಿದ್ದರಿಂದ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಲಾಯಿತು' ಅಥವಾ 'ಪರೀಕ್ಷೆಯಲ್ಲಿ ನಾನು ಕಡಿಮೆ ಅಂಕ ಪಡೆಯಲು ಕಾರಣವೇನು ಮತ್ತು ಮುಂದಿನ ಬಾರಿ ಅದೇ ತಪ್ಪು ಮಾಡಬಾರದು' ಎಂಬ ಧನಾತ್ಮಕ ಮನಸ್ಥಿತಿಯ ಬೆಳವಣಿಗೆಯು ಮಕ್ಕಳಲ್ಲಿ ಮೂಡಿಸುವುದೇ ಇದರ ಉದ್ದೇಶ. 

ಸ್ಥಿರ ಮನಸ್ಥಿತಿ ಎಂದರೇನು?(Fixed Mindset)
ಮಗುವಿನಲ್ಲಿನ ಬುದ್ಧಿವಂತಿಕೆಯನ್ನು ಯಾವುದೇ ಅರ್ಥಪೂರ್ಣ ರೀತಿಯಲ್ಲಿ ಬದಲಾಯಿಸಲಾಗುವುದಿಲ್ಲ ಎಂಬುದಾಗಿದೆ. ಅಂದರೆ ವ್ಯಕ್ತಿಯಿಂದ ವ್ಯಕ್ತಿಯು ಭಿನ್ನರಾಗಿರುತ್ತಾರೆ(Different). ಎಲ್ಲರೂ ಬುದ್ಧಿವಂತರಾಗಿರುವುದಿಲ್ಲ. 'ನಾನು ಬುದ್ಧಿವಂತನಾಗಿರುವುದರಿAದ(Talent) ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದಿದ್ದೇನೆ' ಅಥವಾ 'ನಾನು ಗಣಿತದಲ್ಲಿ ಚುರುಕಿಲ್ಲದ ಕಾರಣ ನಾನು ಕಡಿಮೆ ಅಂಕವನ್ನು(Marks) ಪಡೆದಿದ್ದೇನೆ' ಈ ರೀತಿಯ ವ್ಯಕ್ತಿಗಳು ಸ್ಥಿರ ಮನಸ್ಥಿತಿಯನ್ನು ಹೊಂದಿರುತ್ತಾರೆ. ಈ ರೀತಿಯ ವ್ಯಕ್ತಿಗಳು 'ನನಗೆ ಆಗುವುದಿಲ್ಲ'(Impossible) ಎಂದು ಸುಲಭವಾಗಿ ತಳ್ಳಿಹಾಕುತ್ತಾರೆ. ಅವರಲ್ಲಿ ಪ್ರಯತ್ಮ, ಧೈರ್ಯದ ಸಾಮರ್ಥ್ಯದ ಕೊರತೆ ಹೆಚ್ಚಾಗಿರುತ್ತದೆ. ಇವರನ್ನು ಬೆಳವಣಿಗೆಯ ಮನಸ್ಥಿತಿಗೆ ಬದಲಾಯಿಸುವುದೇ ಶಿಕ್ಷಣ ಹಾಗೂ ಪೋಷಕರ ಪ್ರಮುಖ ಗುರಿಯಾಗಬೇಕು.

ಮಕ್ಕಳಲ್ಲಿ ಬೆಳವಣಿಗೆಯ ಮನಸ್ಥಿತಿಯನ್ನು ಅಭಿವೃದ್ಧಿಪಡಿಸುವಲ್ಲಿ ಪೋಷಕರು ಮಾಡಬೇಕಾದ ಅಂಶಗಳು
1. ಮಗುವನ್ನು ನಿಮ್ಮ ಬಳಿ ಕೂರಿಸಿಕೊಂಡು ಮತ್ತು ಬೆಳವಣಿಗೆಯ ಮನಸ್ಥಿತಿಯ ಬಗ್ಗೆ ಹೇಳಿದರೆ ಅವರಿಗೆ ಅರ್ಥವಾಗುವುದಿಲ್ಲ. ಇದಕ್ಕೆ ಪ್ರಮುಖವಾಗಿ ದೀರ್ಘಾವಧಿಯ ಪ್ರಯತ್ನ(Long Term Process) ಬೇಕಾಗುತ್ತದೆ. ಅಂದರೆ ಮಕ್ಕಳನ್ನು ಆಗಾಗ್ಗೆ ನಿಧಾನವಾಗಿ ಟ್ರೈನ್ ಮಾಡಬೇಕಾಗುತ್ತದೆ. 

ಸಂಬಂಧದಲ್ಲಿರುವ 15 ವರ್ಷದ ಮಗಳು ಕದ್ದುಮುಚ್ಚಿ ಅಳ್ತಾಳೆ ಏನು ಮಾಡ್ಲಿ?

2. ಮಕ್ಕಳ ಬುದ್ಧಿವಂತಿಕೆಯು ಅವರ ಸುತ್ತಲಿನ ವಾತಾವರಣದ(Atmosphere) ಮೇಲೂ ಪ್ರಭಾವಬೀರುತ್ತದೆ. ಹೊಗಳುವಾಗ ಫಲಿತಾಂಶ(Result) ಅಥವಾ ವ್ಯಕ್ತಿಗಿಂತ ಪ್ರಕ್ರಿಯೆಯ ಮೇಲೆ ಕೇಂದ್ರೀಕರಿಸುವುದು ಉತ್ತಮ. ಅಂದರೆ ಮಕ್ಕಳಿಗೆ ಬಳಸುವ ಮಾತಿನ ಪದಗಳ(Talking Sense) ಮೇಲೆ ನಿಂತಿರುತ್ತದೆ. ಅಂದರೆ ಮಗುವು ಲೆಕ್ಕದಲ್ಲಿ ತಪ್ಪು ಮಾಡಿದೆ ಎಂದು ಬೈಯ್ಯುವುದಕ್ಕಿಂತ(Scolding) ಪ್ರಯತ್ನ ಚೆನ್ನಾಗಿದೆ ಆದರೆ ಅದು ಹೀಗೆ ಮಾಡಬೇಕೆಂದು ತಿದ್ದುವುದು ಸೂಕ್ತ. ಇದರರ್ಥ ಮಕ್ಕಳ ಓದಿನಲ್ಲಿ ಅಥವಾ ಯಾವುದಾದರೂ ವಿಷಯದ ಬಗ್ಗೆ ಪ್ರೇರೆಪಿಸುವುದು, ಬೆಳವಣಿಗೆ ಪ್ರೋತ್ಸಾಹಿಸುವುದು, ಕೇಂದ್ರೀಕರಿಸುವAತೆ ನೋಡಿಕೊಳ್ಳುವುದಾಗಿದೆ. 

3. ಮಗು ಹೊಸದನ್ನು ಕಲಿತಾಗಲೆಲ್ಲಾ ತಪ್ಪಾಗುವುದು(Mistakes) ಸಹಜ. ಅವರ ಮೆದುಳು ಬೆಳೆಯುತ್ತಿದೆ ಎಂಬುದನ್ನು ಮೊದಲು ದೊಡ್ಡವರು ಅರಿಯಬೇಕು. ಮಕ್ಕಳ ತಪ್ಪನ್ನು ಗುರುತಿಸುವ ಬದಲು ಅವರನ್ನು ಪ್ರೋತ್ಸಾಹಿಸಿ ಉತ್ತಮವಾಗಿಸಲು ತಪ್ಪನ್ನು ಸವಾಲಾಗಿ(Challenge) ತೆಗೆದುಕೊಳ್ಳುವಂತೆ ಪ್ರೇರೇಪಿಸಬೇಕು. ಅಂದರೆ ತಪ್ಪು ಮಾಡುವುದು ಸರಿ ಎಂದು ತಿಳಿಸಿ ಈ ಮೂಲಕ ಸವಾಲುಗಳನ್ನು ಬೆಳವಣಿಗೆಗೆ ಒಂದು ಅವಕಾಶವಾಗಿ(Chance) ಧನಾತ್ಮಕ ರೀತಿಯಲ್ಲಿ(Positive Vibes) ನೋಡಬೇಕು. ಅದಕ್ಕೆ ಹೊಸ ತಂತ್ರಗಳನ್ನು ಪ್ರಯತ್ನಿಸಿ.

Follow Us:
Download App:
  • android
  • ios