Asianet Suvarna News Asianet Suvarna News

ಸಂಬಂಧದಲ್ಲಿರುವ 15 ವರ್ಷದ ಮಗಳು ಕದ್ದುಮುಚ್ಚಿ ಅಳ್ತಾಳೆ ಏನು ಮಾಡ್ಲಿ?

ಹದಿಹರೆಯ ಜೀವನದ ಅತ್ಯಂತ ಸುಂದರ ಸಮಯ. ಇಲ್ಲಿ ಎಲ್ಲವೂ ಹೊಸತು. ಆದ್ರೆ ಸ್ವಲ್ಪ ಎಡವಿದ್ರೂ ಭವಿಷ್ಯ ಪಾತಾಳಕ್ಕೆ ಬಿದ್ದಂತೆ. ಹದಿಹರೆಯದ ಮಕ್ಕಳ ಪಾಲಕರು ಅಡಗತ್ತರಿಯಲ್ಲಿ ಜೀವನ ನಡೆಸಬಾರದು ಅಂದ್ರೆ ಕೆಲ ಟಿಪ್ಸ್ ಫಾಲೋ ಮಾಡ್ಬೇಕು. 
 

How Parents Confronts Teenage Child When They Are In A Bad Relationship
Author
First Published Jan 19, 2023, 4:09 PM IST

ಬಾಲ್ಯದಲ್ಲಿ ಮಕ್ಕಳು ಕಿಲಾಡಿ ಮಾಡಿದ್ರೂ ಅವರನ್ನು ನೋಡಿಕೊಳ್ಳುವುದು ಸುಲಭ. ಮಕ್ಕಳು ಹದಿಹರೆಯಕ್ಕೆ ಬಂದಂತೆ ಅವರನ್ನು ಪಾಲನೆ ಮಾಡೋದು ಸವಾಲಿನ ಕೆಲಸ. ಮಕ್ಕಳು ದೊಡ್ಡವರಾಗ್ತಿದ್ದಂತೆ ಅವರ ವೈಯಕ್ತಿಕ ವಿಷ್ಯವನ್ನು ಪಾಲಕರ ಮುಂದೆ ಹೇಳೋದಿಲ್ಲ. ಅವರ ಸ್ನೇಹಿತರ ಬಗ್ಗೆ, ಅವರ ಸಂಬಂಧದ ಬಗ್ಗೆ ಮುಚ್ಚಿಡಲು ಶುರು ಮಾಡ್ತಾರೆ. ಮಕ್ಕಳು ತಮ್ಮ ವಿಷ್ಯವನ್ನು ಮುಚ್ಚಿಡುವ ಕಾರಣ ಪಾಲಕರಿಗೆ ಇದ್ರ ಬಗ್ಗೆ ಸ್ವಲ್ಪವೂ ಅರಿವಿರೋದಿಲ್ಲ. ಎಲ್ಲವೂ ಕೈ ಮೀರಿದಾಗ, ಮಕ್ಕಳು ತಮ್ಮ ಜೀವಕ್ಕೆ ಹಾನಿ ಮಾಡಿಕೊಂಡಾಗ ಪಾಲಕರಿಗೆ ವಿಷ್ಯ ತಿಳಿಯುತ್ತದೆ. 

ಹದಿಹರೆಯದಲ್ಲಿ ಎಲ್ಲವೂ ಆಕರ್ಷಕ (Attractive) ವಾಗಿರುತ್ತದೆ. ತಮ್ಮ ಸೌಂದರ್ಯ (Beauty) ದ ಬಗ್ಗೆ ಸ್ವಲ್ಪ ಹೊಗಳಿಕೆ ಮಾತನಾಡಿದ್ರೂ ಹುಡುಗಿಯರು ಪ್ರೀತಿ (Love) ಯಲ್ಲಿ ಬೀಳ್ತಾರೆ. ಈ ವಯಸ್ಸಿನಲ್ಲಿ ಮಕ್ಕಳು ದಾರಿತಪ್ಪುವ ಅಪಾಯ ಹೆಚ್ಚಿರುತ್ತದೆ. ಇತ್ತ ಬಾಲ್ಯವೂ ಅಲ್ಲ ಅತ್ತ ಹರೆಯವೂ ಅಲ್ಲದ ಸ್ಥಿತಿ ಅದು. ತಮಗೆ ಸೂಕ್ತವಲ್ಲದ ವ್ಯಕ್ತಿಗಳ ಜೊತೆ ಸಂಬಂಧ (Relationship) ಬೆಳೆಸಿ ಅನೇಕರು ಪರಿತಪಿಸುತ್ತಿರುತ್ತಾರೆ.

ಕಾಂಡೋಮ್‌ ಹೇಗೇಗೋ ಇದ್ರೆ ಸಂಭೋಗ ಖುಷಿ ಕೊಡಲ್ಲ, ಖರೀದಿಸೋ ಮುನ್ನ ಈ ವಿಚಾರ ತಿಳ್ಕೊಳ್ಳಿ

15 ವರ್ಷದ ಹುಡುಗಿಯ ತಾಯಿಯೊಬ್ಬಳು ತನ್ನ ನೋವನ್ನು ತೋಡಿಕೊಂಡಿದ್ದಾಳೆ. ಮಗಳು ಸಂಬಂಧದಲ್ಲಿದ್ದಾಳೆ. ಆದ್ರೆ ಈ ವಿಷ್ಯವನ್ನು ನನಗೆ ಹೇಳಿಲ್ಲ. ಆಕೆ ಸದಾ ಕದ್ದು ಮುಚ್ಚಿ ಅಳ್ತಿರುತ್ತಾಳೆ. ಇದು ನನ್ನನ್ನು ಚುಚ್ಚುತ್ತಿದೆ. ಹಾಗಂತ ಆಕೆ ಸಮಸ್ಯೆ ಏನು ಅಂತಾ ಕೇಳೋದು ಕಷ್ಟವಾಗಿದೆ. ಆಕೆ ನನ್ನ ಬಳಿ ನೋವನ್ನು ಹೇಳಿಕೊಳ್ಳಲು ಭಯಪಡ್ತಿದ್ದಾಳೆ. ಏನು ಮಾಡ್ಲಿ ಅನ್ನೋದು ತಿಳಿಯುತ್ತಿಲ್ಲವೆಂದು ತಾಯಿ ತಮ್ಮ ಸಮಸ್ಯೆ ಮುಂದಿಟ್ಟಿದ್ದಾಳೆ. ಇದು ಬರೀ ಈ ತಾಯಿಯ ನೋವಲ್ಲ. ಹದಿಹರೆಯದ ಮಕ್ಕಳನ್ನು ಹೊಂದಿರುವ ಬಹುತೇಕ ಪಾಲಕರು ಇಂಥ ಸಮಸ್ಯೆ ಎದುರಿಸುತ್ತಾರೆ. ಮಕ್ಕಳಿಗೆ ಸಂಬಂಧದ ವಿಷ್ಯ ತೆಗೆದು ಬೈದ್ರೆ ಅವರು ಪ್ರಾಣ ತೆಗೆದುಕೊಳ್ಳುವ ಅಪಾಯವಿರುತ್ತದೆ. ಹಾಗಂತ ಹಾಗೆ ಬಿಟ್ರೆ ಅವರ ಭವಿಷ್ಯ ಹಾಳಾಗುತ್ತದೆ. ಇಂಥ ಸಂದರ್ಭದಲ್ಲಿ ಪಾಲಕರು ಎಚ್ಚರಿಕೆಯ ಹಾಗೂ ಬುದ್ಧಿವಂತಿಕೆಯ ಹೆಜ್ಜೆ ಇಡಬೇಕಾಗುತ್ತದೆ.

ಸ್ನೇಹಿತರಂತೆ ಮಾತನಾಡಿ (Speak like a friend) : ನೀವು ಅವರಿಗೆ ಸ್ನೇಹಿತರಾಗಲು ಪ್ರಯತ್ನಿಸಬೇಕು. ಅನೇಕ ಬಾರಿ ನೀವು ಸ್ನೇಹಿತರಂತೆ ವರ್ತಿಸಿದ್ರೂ ಮಕ್ಕಳು ನಿಮ್ಮನ್ನು ಸ್ನೇಹಿತರೆಂದು ಒಪ್ಪಿಕೊಳ್ಳದೆ ಇರಬಹುದು. ನಿಮ್ಮ ಮೇಲೆ ಅವರಿಗೆ ಭಯವಿರಬಹುದು. ಇಂಥ ಸಂದರ್ಭದಲ್ಲಿ ನೀವು ನೇರವಾಗಿ ಅವರ ಸಮಸ್ಯೆ ಕೇಳಬೇಕೆಂದೇನಿಲ್ಲ. ನೀವು ಸಂಬಂಧದ ಬಗ್ಗೆ ಸುಮ್ಮನೆ ಚರ್ಚೆ ಮಾಡಿ. ಸಂಬಂಧ ಹೇಗಿರಬೇಕು, ಅದ್ರ ಮಿತಿ ಏನು, ಸಂಬಂಧವನ್ನು ಎಂಥ ವ್ಯಕ್ತಿ ಜೊತೆ ಬೆಳೆಸಬೇಕು ಎಂಬೆಲ್ಲ ವಿಷ್ಯದ ಬಗ್ಗೆ ಅವರ ಜೊತೆ ಚರ್ಚೆ ನಡೆಸುವ ಮೂಲಕ ಅವರಿಗೊಂದಿಷ್ಟು ಮಾಹಿತಿ ರವಾನೆ ಮಾಡಿ. 

ಮಕ್ಕಳಿಗೆ ಸಂಬಂಧವನ್ನು ಅರ್ಥ ಮಾಡಿಸಿ : ಅನಾರೋಗ್ಯಕರ ಸಂಬಂಧ ಅಂದ್ರೇನು ಎಂಬುದನ್ನು ಪಾಲಕರಾದವರು ಮಕ್ಕಳಿಗೆ ತಿಳಿಸಬೇಕಾಗುತ್ತದೆ. ಅಸೂಯೆಪಡುವ ವ್ಯಕ್ತಿ ಅಥವಾ ನಮ್ಮ ಜೀವನವನ್ನು ನಿಯಂತ್ರಿಸುವ ಸಂಗಾತಿಯಿಂದ ಮುಂದೆ ದುಃಖವೇ ಹೊರತು ಸಂತೋಷ ಸಿಗಲಾರದು, ನಮ್ಮನ್ನು ಗೌರವಿಸುವ, ನಮ್ಮ ಸಂತೋಷದಲ್ಲಿ ಜೊತೆಯಾಗುವ ವ್ಯಕ್ತಿಯಿಂದ ಮಾತ್ರ ಜೀವನ ಸುಖಕರವಾಗಿರಲು ಸಾಧ್ಯ ಎಂಬುದನ್ನು ತಿಳಿಸಬೇಕು. ಮಕ್ಕಳ ಜೊತೆ ನೇರವಾಗಿ ಈ ವಿಷ್ಯ ಮಾತನಾಡುವ ಬದಲು ಸಂಭಾಷಣೆ, ಯಾವುದೋ ಕಥೆ ಅಥವಾ ಯಾರದ್ದೋ ಕಥೆಯನ್ನು ನೀವು ಉದಾಹರಣೆಯಾಗಿ ತೆಗೆದುಕೊಂಡು ಹೇಳಬಹುದು.

ದಾಂಪತ್ಯದಲ್ಲಿ ಸಂತೋಷವಿದೆ, ಆದರೆ ಥ್ರಿಲ್ ಇಲ್ಲವೆಂದು ಅನೈತಿಕ ಸಂಬಂಧಕ್ಕೆ ಮುಂದಾಗ್ತಾರಾ?

ಮಕ್ಕಳ ಜೊತೆ ಸದಾ ನಾವಿದ್ದೇವೆಂಬ ಭರವಸೆ ನೀಡಿ : ಮಕ್ಕಳು ಯಾವುದೇ ತಪ್ಪು ಹೆಜ್ಜೆಯಿಟ್ಟರೂ ಅವರನ್ನು ತಿದ್ದಬೇಕಾಗಿರುವುದು ಪಾಲಕರ ಕರ್ತವ್ಯ. ಅದಕ್ಕಾಗಿ ಮಕ್ಕಳಿಗೆ ಬೈದು, ಹೊಡೆದು ಮಾಡುವುದು ಸೂಕ್ತವಲ್ಲ. ಹಾಗೆಯೇ ಸಂಬಂಧದಿಂದ ಹೊರ ಬರ್ತೇನೆ ಎಂಬ ನಿರ್ಧಾರಕ್ಕೆ ಮಕ್ಕಳು ಬಂದ್ರೆ ಅವರ ಜೊತೆ ಪಾಲಕರು ನಿಲ್ಲಬೇಕು. ಮಕ್ಕಳಿಗೆ ಸಹಾಯ ಮಾಡಬೇಕು. ಮಕ್ಕಳಿಗೆ ಸುರಕ್ಷತೆ ಒದಗಿಸಿ. ಫೋನ್ ಸದಾ ಕೈನಲ್ಲಿ ಇಟ್ಟುಕೊಳ್ಳುವಂತೆ ಹೇಳಿ. ತುರ್ತು ಸಮಯದಲ್ಲಿ ಏನು ಮಾಡ್ಬೇಕು ಎಂಬುದನ್ನು ಹೇಳಿ. ಸಂಬಂಧದಿಂದ ಹೊರ ಬಂದಾಗ ಮಕ್ಕಳು ನೋವನುಭವಿಸುತ್ತಾರೆ. ಈ ವೇಳೆ ಪಾಲಕರಾದವರು ಅವರನ್ನು ಒಂಟಿಯಾಗಿ ಬಿಡಬೇಡಿ.  
 

Follow Us:
Download App:
  • android
  • ios