ಜಪಾನಿ ಸಾಂಪ್ರದಾಯಿಕ ಆಹಾರ ನ್ಯಾಟ್ಟೊ ತಿಂದ್ರೆ ಚಿರಯೌವನ ನಿಮ್ದು

ವಾಸನೆಗೆ ಮುಖ ಹಿಂಡದೆ ಆರೋಗ್ಯದ ಲಾಭವೊಂದನ್ನೇ ದೃಷ್ಟಿಯಲ್ಲಿ ಇಟ್ಟುಕೊಂಡು ಸೇವಿಸಬೇಕಾದ ಆಹಾರ ನ್ಯಾಟ್ಟೊ. ಜಪಾನೀಯರ ಸಾಂಪ್ರದಾಯಿಕ ಆಹಾರವಾಗಿರುವ ನ್ಯಾಟ್ಟೊದಿಂದ ಆರೋಗ್ಯಕ್ಕೆ ಭಾರೀ ಲಾಭವಿದೆ. 

 

Natto is Japanees traditional food which is very good for health

ನೀವೆಲ್ಲಾದರೂ ಜಪಾನಿ ರೆಸ್ಟೋರೆಂಟ್ ಗಳಿಗೆ ಹೋಗಿದ್ದರೆ ಅಲ್ಲಿನ ನ್ಯಾಟ್ಟೊ ಸವಿಯಲು ಪ್ರಯತ್ನ ಪಟ್ಟಿರಬಹುದು. ಅದನ್ನು ಟೇಸ್ಟ್ ಮಾಡಿ ಮುಖ ಹಿಂಡಿಕೊಂಡಿರಲೂಬಹುದು. ಏಕೆಂದರೆ, ಇದರ ವಾಸನೆ ತಿನ್ನಲು ಅಸಾಧ್ಯವೆನ್ನುವಂತೆ ಮಾಡುತ್ತದೆ. ಏಕೆಂದರೆ, ಇದರ ವಾಸನೆ ಅಮೋನಿಯಾ ರೀತಿ ಇರುತ್ತದೆ. ಅಂದರೆ, ಕಟುವಾದ ಮೂತ್ರದ ವಾಸನೆ ಹೊಂದಿರುತ್ತದೆ. ಆದರೆ, ಇದು ಜಪಾನೀಯರ ಸಾಂಪ್ರದಾಯಿಕ ಆಹಾರಗಳಲ್ಲಿ ಒಂದು.  ಹುದುಗುಬರಿಸಿದ ಸೋಯಾಬೀನ್ ಗಳಿಂದ ಮಾಡುವ ಈ ಆಹಾರ ಆರೋಗ್ಯಕ್ಕೆ ಅತ್ಯುತ್ತಮ. ಹೇಗಾದರೂ ವಾಸನೆ ಸಹಿಸಿಕೊಂಡು ಸೇವಿಸಿದರೆ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುವುದು ಗ್ಯಾರೆಂಟಿ. ಈಗೊಂದು ಮೂರ್ನಾಲ್ಕು ವರ್ಷಗಳ ಹಿಂದೆ ಜಪಾನ್ ದೇಶದ ಅಂತರ್ಜಾಲ ಸಂಸ್ಥೆ ನಿಫ್ಟಿ ನಡೆಸಿದ್ದ ಅಧ್ಯಯನದ ಪ್ರಕಾರ, ಆ ದೇಶದ ಶೇ.62ರಷ್ಟು ಜನ ನ್ಯಾಟ್ಟೊವನ್ನು ಇಷ್ಟಪಡುತ್ತಾರೆ ಹಾಗೂ ಸೇವಿಸುತ್ತಾರೆ. ಉಳಿದ ಜನಕ್ಕೆ ಅದರ ವಾಸನೆಯೇ ಇಷ್ಟವಾಗುವುದಿಲ್ಲ. ಆದರೆ, ಆರೋಗ್ಯದ ಬಗ್ಗೆ ಕಾಳಜಿಯುಳ್ಳ ಜಪಾನ್ ಜನ ವಾಸನೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಅಲ್ಲದೆ, ಇದರೊಂದಿಗೆ ತರಕಾರಿ ಅಥವಾ ಬೇರೆ ಆಹಾರವನ್ನು ಮಿಕ್ಸ್ ಮಾಡಿಕೊಳ್ಳುವ ಮೂಲಕ ವಾಸನೆ ನಿಯಂತ್ರಿಸುತ್ತಾರೆ. ನ್ಯಾಟ್ಟೊ ಒಟ್ಟಾರೆ ರೋಗ ನಿರೋಧಕ ಶಕ್ತಿಯ ಬಲವರ್ಧನೆಗೆ ಭಾರೀ ಒಳ್ಳೆಯದು. ವಾಸನೆಗೆ ಹಿಂಸೆ ಪಡದೆ ಯಾವಾಗಲಾದರೂ ನ್ಯಾಟ್ಟೊ ಸೇವಿಸುವ ಮೂಲಕ ಆರೋಗ್ಯಕ್ಕೆ ಹೀಗೆಲ್ಲ ಲಾಭ ಮಾಡಿಕೊಳ್ಳಬಹುದು. 

•    ಜೀರ್ಣಕ್ರಿಯೆಯ (Digestion) ಬಲವರ್ಧನೆ
ನ್ಯಾಟ್ಟೊ (Natto) ಅತ್ಯುತ್ತಮ ಪ್ರಮಾಣದಲ್ಲಿ ಪ್ರೊಬಯಾಟಿಕ್ಸ್ (Probiotics) ಹೊಂದಿರುವುದರಿಂದ ಜೀರ್ಣಾಂಗ ವ್ಯೂಹಕ್ಕೆ ಭಾರೀ ಉತ್ತಮ ಪರಿಣಾಮ ಬೀರುತ್ತದೆ. ನಿಯಮಿತವಾಗಿ ಬಳಕೆ ಮಾಡುವುದರಿಂದ ಕರುಳಿಗೆ (Gut) ಸಂಬಂಧಿಸಿದ ಯಾವುದೇ ಸಮಸ್ಯೆ ಬಾಧಿಸದಂತೆ ನೋಡಿಕೊಳ್ಳಬಹುದು. ವಿಶೇಷವಾಗಿ ಮಕ್ಕಳಿಗೆ ಡಯೇರಿಯಾ ಆಗದಂತೆ ತಡೆಯುತ್ತದೆ. ಬೇರೆ ಯಾವುದೇ ಆಹಾರ (Food)ದಲ್ಲಿ ಇಷ್ಟು ಪ್ರಮಾಣದ ಪ್ರೊಬಯಾಟಿಕ್ಸ್ ನಿಮಗೆ ದೊರೆಯುವುದಿಲ್ಲ. 

ಮಕ್ಕಳನ್ನು ಸ್ಟ್ರಾಂಗ್ ಆಗಿಸೋ ಆಹಾರಗಳಿವು

•    ಹೃದಯದ ಆರೋಗ್ಯಕ್ಕೆ (Heart Health) ಅತ್ಯುತ್ತಮ
ನ್ಯಾಟ್ಟೊದಲ್ಲಿ ನಾರಿನಂಶ (Fibre) ಚೆನ್ನಾಗಿರುತ್ತದೆ. ಮೊದಲೇ ಹೇಳಿದಂತೆ ಪ್ರೊಬಯಾಟಿಕ್ಸ್ ಕೂಡ ಉತ್ತಮ ಪ್ರಮಾಣದಲ್ಲಿ ಇರುತ್ತದೆ. ಇವೆರಡೂ ಜತೆಯಾಗಿ ದೇಹದಲ್ಲಿರುವ ಕೊಬ್ಬನ್ನು (Fat) ಕರಗಿಸಲು ಮಹತ್ವದ ಕೊಡುಗೆ ನೀಡುತ್ತವೆ. ಕಿನಾಸಿ ಎನ್ನುವ ಎಂಝೈಮ್ (Enzyme) ಉತ್ಪಾದನೆಯಾಗುತ್ತದೆ. ಈ ಎಂಝೈಮ್ ರಕ್ತ ಹೆಪ್ಪುಗಟ್ಟುವುದನ್ನು (Blood Clot) ತಡೆಗಟ್ಟಿ ದೇಹದಲ್ಲಿ ರಕ್ತದ ಚಲನೆ ಸರಾಗವಾಗುವಂತೆ ಮಾಡುತ್ತದೆ. ರಕ್ತವನ್ನು ತೆಳುವಾಗಿಸಲು ಬಳಸುವ ಬೇರೆ ಯಾವುದೇ ಮಾರ್ಗಕ್ಕಿಂತ ಇದು ಅತ್ಯುತ್ತಮ, ಏಕೆಂದರೆ ನ್ಯಾಟ್ಟೊ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. 

•    ತೂಕ ಇಳಿಕೆಗೆ ಸಹಕಾರಿ (Weight Loss)
ದೇಹದಲ್ಲಿರುವ ಕೊಬ್ಬು (Fat) ಕರಗಿದರೆ ತೂಕ ಇಳಿಯುವುದು ಸುಲಭ. ಹುದುಗುಬರಿಸಿದ ಸೋಯಾ (Fermented Soy) ತೂಕ ಕಡಿಮೆ ಮಾಡಲು ಹೆಚ್ಚು ಬಳಕೆಯಲ್ಲಿದೆ. ಪ್ರೊಬಯಾಟಿಕ್ಸ್ ಹಾಗೂ ಇತರ ಪೌಷ್ಟಿಕಾಂಶಗಳು ದೇಹದಲ್ಲಿ ಕೊಬ್ಬಿನ ಸಂಗ್ರಹವಾಗದಂತೆ ತಡೆಯುತ್ತವೆ. ನಾವು ಸೇವಿಸುವ ಆಹಾರದಲ್ಲಿನ ಕ್ಯಾಲರಿ ಹೀರಿಕೊಳ್ಳುವ ಅಂಶವನ್ನು ಪ್ರೊಬಯಾಟಿಕ್ಸ್ ಕಡಿಮೆಗೊಳಿಸುತ್ತದೆ. ಹೀಗಾಗಿ, ತೂಕ ಇಳಿಕೆಯಾಗುವುದು ಸಾಮಾನ್ಯ. ಹೀಗಾಗಿ, ಜಪಾನೀಯರು ಹೆಚ್ಚು ತೂಕ ಹೊಂದಿರುವುದಿಲ್ಲ. 

ಅಜ್ಜಿಯ ಅಡುಗೆ ಟಿಪ್ಸ್ ರುಚಿಯೋ ರುಚಿ

•    ಸದೃಢ ಮೂಳೆ (Strong Bone) ಹೊಂದಲು ಸಾಧ್ಯ
ವಯಸ್ಸಾಗುತ್ತ ಹೋದಂತೆ ಮನುಷ್ಯನ ದೇಹದ ಮೂಳೆಗಳು ಸವೆಯುತ್ತವೆ ಹಾಗೂ ದುರ್ಬಲವಾಗುತ್ತವೆ. ಆದರೆ, ಈ ಕ್ರಿಯೆಗೆ ನ್ಯಾಟ್ಟೊ ತಡೆ ಒಡ್ಡುತ್ತದೆ. ಇದರಲ್ಲಿ ವಿಟಮಿನ್ ಕೆ2 ಅಧಿಕ ಪ್ರಮಾಣದಲ್ಲಿ ಇರುತ್ತದೆ. ಈ ವಿಟಮಿನ್ ನಿಂದಲೇ ನಮ್ಮ ಮೂಳೆಗಳು ಸದೃಢವಾಗಿರುತ್ತವೆ. ವಯಸ್ಸಾಗುವಾಗ ದೇಹದಲ್ಲಿ ವಿಟಮಿನ್ ಕೊರತೆಯಾಗುವುದು ಸಹಜ. ಇದನ್ನು ನ್ಯಾಟ್ಟೊ ನಿವಾರಣೆ ಮಾಡುತ್ತದೆ. ಅಲ್ಲದೆ, ದೇಹದಲ್ಲಿ ಖನಿಜ ಸಾಂದ್ರತೆ ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ. ಇದರಿಂದ ಓಸ್ಟಿಯೋಪೊರೊಸಿಸ್ ನಂತಹ ಸಮಸ್ಯೆಗಳು ಉಂಟಾಗುವುದಿಲ್ಲ. ಹೀಗಾಗಿ, ಇದನ್ನು ನಿಯಮಿತವಾಗಿ ಸೇವಿಸುವ ಜಪಾನೀಯರು ಚಿರಯೌವನಿಗರಂತೆ ಕಾಣುವುದರಲ್ಲಿ ಅಚ್ಚರಿ ಇಲ್ಲ.  
 

Latest Videos
Follow Us:
Download App:
  • android
  • ios