17,500 ರೂ. ಕೊಟ್ಟು ಮುಖಕ್ಕೆ ಫೇಶಿಯಲ್ ಮಾಡಿಸಿಕೊಂಡ ಮಹಿಳೆಯ ಮುಖವೇ ಸುಟ್ಟೋಯ್ತು!
ಮುಖದ ಮಸಾಜ್ ಟ್ರೀಟ್ಮೆಂಟ್ ಬಳಿಕ ಮಹಿಳೆಯ ಮುಖದ ಚರ್ಮಕ್ಕೆ ಸುಟ್ಟ ಗಾಯಗಳಾಗಿದ್ದು, ಮತ್ತು ಶಾಶ್ವತ ಹಾನಿಗೊಳಗಾಗಿದೆ. ಈ ಹಿನ್ನೆಲೆ ಮಹಿಳೆಯೊಬ್ಬರು ಬ್ಯೂಟಿ ಸಲೂನ್ ವಿರುದ್ಧ ಎಫ್ಐಆರ್ ದಾಖಲಿಸಿರುವ ಘಟನೆ ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ನಡೆದಿದೆ.
ಮುಂಬೈ (ಜೂನ್ 20, 2023): ಮುಖಕ್ಕೆ ಫೇಶಿಯಲ್ ಮಾಡಿಸಿಕೊಳ್ಳುವುದು ಸಾಮಾನ್ಯ. ಕೆಲ ಪುರುಷರು ಅಪರೂಪಕ್ಕೊಮ್ಮೆ ಫೇಶಿಯಲ್ ಮಾಡಿಸಿಕೊಳ್ಳುತ್ತಾರಾದರೂ, ಮಹಿಳೆಯರು ಹೆಚ್ಚಾಗಿ ಫೇಶಿಯಲ್ ಮಾಡಿಸಿಕೊಳ್ಳುತ್ತಿರುತ್ತಾರೆ. ಇದಕ್ಕೆ ಸಾವಿರಾರು ರೂಪಾಯಿಯನ್ನು ಖರ್ಚು ಮಾಡುತ್ತಾರೆ. ಆದರೆ, ಇಲ್ಲೊಬ್ಬುರ ಮಹಿಳೆ ಹತ್ತಾರು ಸಾವಿರ ರೂ. ಖರ್ಚು ಮಾಡಿಸಿಕೊಂಡು ಫೇಶಿಯಲ್ ಮಾಡಿಸಿಕೊಂಡು ಅವರ ಮುಖ ಹೇಗಾಗಿದೆ ನೋಡಿ..
ಮುಖದ ಮಸಾಜ್ ಟ್ರೀಟ್ಮೆಂಟ್ ಬಳಿಕ ಮಹಿಳೆಯ ಮುಖದ ಚರ್ಮಕ್ಕೆ ಸುಟ್ಟ ಗಾಯಗಳಾಗಿದ್ದು, ಮತ್ತು ಶಾಶ್ವತ ಹಾನಿಗೊಳಗಾಗಿದೆ. ಈ ಹಿನ್ನೆಲೆ ಮಹಿಳೆಯೊಬ್ಬರು ಬ್ಯೂಟಿ ಸಲೂನ್ ವಿರುದ್ಧ ಎಫ್ಐಆರ್ ದಾಖಲಿಸಿರುವ ಘಟನೆ ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ನಡೆದಿದೆ. ಜೂನ್ 17 ರಂದು ಈ ಘಟನೆ ನಡೆದಿದ್ದು, ಹೆಸರು ಬಹಿರಂಗಪಡಿಸದ ಮಹಿಳೆ ಅಂಧೇರಿಯ ಕಾಮಧೇನು ಶಾಪಿಂಗ್ ಸೆಂಟರ್‌ನಲ್ಲಿರುವ ಗ್ಲೋ ಲಕ್ಸ್ ಸಲೂನ್‌ನಿಂದ 17,500 ರೂಪಾಯಿ ಮೌಲ್ಯದ ಹೈಡ್ರಾಫೇಶಿಯಲ್ ಟ್ರೀಟ್ಮೆಂಟ್ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನು ಓದಿ: "ಜೈ ಶ್ರೀ ರಾಮ್" ಘೋಷಣೆ ಕೂಗಲು ಒತ್ತಾಯಿಸಿ ಮುಸ್ಲಿಂ ವ್ಯಕ್ತಿ ಥಳಿಸಿ ಮರಕ್ಕೆ ಕಟ್ಟಿ ಹಾಕಿದ ಪಾಪಿಗಳು: ಓವೈಸಿ ಆಕ್ರೋಶ
ಹೈಡ್ರಾಫೇಶಿಯಲ್ ಎಂಬುದು ವೈದ್ಯಕೀಯ-ದರ್ಜೆಯ ರೀಸರ್ಫೇಸಿಂಗ್ ಚಿಕಿತ್ಸೆಯಾಗಿದ್ದು ಅದು ರಂಧ್ರಗಳನ್ನು ಕ್ಲಿಯರ್ ಮಾಡುತ್ತದೆ ಹಾಗೂ ಚರ್ಮವನ್ನು ಹೈಡ್ರೇಟ್ ಮಾಡುತ್ತದೆ. ಪರವಾನಗಿ ಪಡೆದ ವೈದ್ಯಕೀಯ ವೃತ್ತಿಪರ ಸೌಲಭ್ಯಗಳಲ್ಲಿ ಅಥವಾ ಪ್ರಮಾಣೀಕೃತ ಹೈಡ್ರಾಫೇಶಿಯಲ್ ಸೌಂದರ್ಯಶಾಸ್ತ್ರಜ್ಞರು ಲಭ್ಯವಿರುವಲ್ಲಿ ಇದನ್ನು ನೀಡಲಾಗುತ್ತದೆ.
ಆದರೂ, ಈ ಚಿಕಿತ್ಸೆಯ ನಂತರ, ಮಹಿಳೆಯು ಸುಡುವ ಸಂವೇದನೆಯನ್ನು ಅನುಭವಿಸಿದರು ಹಾಗೂ ನಂತರ ಚರ್ಮಶಾಸ್ತ್ರಜ್ಞರನ್ನು ಸಂಪರ್ಕಿಸಿದರು ಎಂದು ತಿಳಿದುಬಂದಿದೆ. ಅವರು ಮಸಾಜ್‌ನಿಂದ ಚರ್ಮದ ಸುಟ್ಟಗಾಯಗಳು ಮತ್ತು ಶಾಶ್ವತ ಹಾನಿಯನ್ನು ಅನುಭವಿಸಿದ್ದಾರೆ ಎಂದು ಹೇಳಿದರು. ನಂತರ ಸ್ಥಳೀಯ ಎಂಎನ್‌ಎಸ್ ಕಾರ್ಪೊರೇಟರ್ ಪ್ರಶಾಂತ್ ರಾಣೆ ಅವರ ಸಹಾಯದಿಂದ ಎಫ್‌ಐಆರ್ ದಾಖಲಿಸಿದರು ಎಂದೂ ತಿಳಿದುಬಂದಿದೆ.
ಇದನ್ನೂ ಓದಿ: ‘ಕುರ್ಚಿ’ಗಾಗಿ ಕುರ್ಚಿಯಲ್ಲೇ ಕಿತ್ತಾಡಿದ ಯುವ ಕಾಂಗ್ರೆಸ್ ಕಾರ್ಯಕರ್ತರು: ವಿಡಿಯೋ ವೈರಲ್
ಈ ಟ್ವೀಟ್ ವೈರಲ್ ಆಗಿದ್ದು, ಟ್ವಿಟ್ಟರ್ ಬಳಕೆದಾರರು ಘಟನೆಯ ಬಗ್ಗೆ ಆಘಾತದಿಂದ ಪ್ರತಿಕ್ರಿಯಿಸಿದ್ದಾರೆ ಮತ್ತು ಅಂತಹ ಸಲೂನ್‌ಗಳನ್ನು ನಿಯಂತ್ರಿಸಬೇಕೆಂದು ಕರೆ ನೀಡಿದರು.
"ಓ ದೇವರೇ! 17,500 ರೂಪಾಯಿ ತೆಗೆದುಕೊಂಡ ನಂತರವೂ ಮಹಿಳೆಯ ಚರ್ಮವನ್ನು ಹಾಳುಮಾಡಿದ ಪರಿಣಾಮ ಹೀಗಿದೆ. ಭಯಾನಕ," ಎಂದು ಟ್ವಿಟ್ಟರ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. "ಪಾರ್ಲರ್‌ಗಳ ಮೇಲೆ ಯಾವುದೇ ಕಾನೂನು ಇಲ್ಲ, ಅದಕ್ಕಾಗಿಯೇ ಅವು ನಗರದಾದ್ಯಂತ ನಾಯಿಕೊಡೆಗಳಂತೆ ಬೆಳೆಯುತ್ತಿದೆ. ಮತ್ತು ಪ್ರತಿಯೊಬ್ಬರೂ ರಾತ್ರೋರಾತ್ರಿ ಶ್ರೀಮಂತರಾಗಲು ಬಯಸಿದಾಗ ಇಂತಹ ಸಮಸ್ಯೆಗಳು ಸ್ಫೋಟಗೊಳ್ಳುತ್ತವೆ" ಎಂದೂ ಮತ್ತೊಬ್ಬರು ಬರೆದಿದ್ದಾರೆ.
ಇನ್ನು, ಮೂರನೆಯ ಬಳಕೆದಾರರು "ಒಳ್ಳೆಯ ಬ್ಯೂಟಿಷಿಯನ್ ಜೊತೆಗೆ, ಮುಖವು ವಿಶ್ರಾಂತಿ ಮತ್ತು ಹಿತಕರವಾಗಿರುತ್ತದೆ. ಆದರೆ ಕೆಲವೊಮ್ಮೆ ಕೆಲವು ಕ್ರೀಮ್‌ಗೆ ಅಲರ್ಜಿಯ ಪ್ರತಿಕ್ರಿಯೆ, ತಪ್ಪು ಮಸಾಜ್ ತಂತ್ರಗಳು ಅಥವಾ ಬ್ಯೂಟಿಷಿಯನ್ ಕಡೆಯಿಂದ ಅಜ್ಞಾನದಿಂದಾಗಿ ಒಳ್ಳೆಯದಕ್ಕಿಂತ ಹೆಚ್ಚು ಹಾನಿ ಮಾಡುತ್ತದೆ’’ ಎಂದೂ ಸೂಚಿಸಿದ್ದಾರೆ.
ಇದನ್ನೂ ಓದಿ: 400 ಕಾರಿನ ಬೆಂಗಾವಲು ಪಡೆ ಜತೆ 300 ಕಿ.ಮೀ. ಪ್ರಯಾಣ ಮಾಡಿ ಬಿಜೆಪಿಯಿಂದ ಮರಳಿ ಕಾಂಗ್ರೆಸ್ ಸೇರಿದ ನಾಯಕ