400 ಕಾರಿನ ಬೆಂಗಾವಲು ಪಡೆ ಜತೆ 300 ಕಿ.ಮೀ. ಪ್ರಯಾಣ ಮಾಡಿ ಬಿಜೆಪಿಯಿಂದ ಮರಳಿ ಕಾಂಗ್ರೆಸ್‌ ಸೇರಿದ ನಾಯಕ

ಮಧ್ಯಪ್ರದೇಶದ ಶಿವಪುರಿಯಿಂದ ಭೋಪಾಲ್‌ಗೆ ಸುಮಾರು 300 ಕಿ.ಮೀ ಪ್ರಯಾಣ ಮಾಡಿದ್ದಾರೆ. ಅವರಷ್ಟೇ ಅಲ್ಲ, ಜತೆಗೆ 400 ಕಾರುಗಳ ಬೆಂಗಾವಲು ಪಡೆ ಸೈರೆನ್‌ ಹೊಡೆದುಕೊಂಡು ಪಕ್ಷಕ್ಕೆ ಸೇರಿದ್ದಾರೆ.

bjp leader heads to congress in 400 car convoy sirens blaring ash

ಭೋಪಾಲ್ (ಜೂನ್ 15, 2023): ಕರ್ನಾಟಕದಲ್ಲಿ ಕಾಂಗ್ರೆಸ್‌ ಭರ್ಜರಿ ಗೆಲುವಿನ ಬೆನ್ನಲ್ಲೇ ಕೈ ಪಕ್ಷಕ್ಕೆ ಬೂಸ್ಟರ್‌ ಡೋಸ್‌ ಸಿಕ್ಕಂತಾಗಿದೆ. ಇದೇ ರೀತಿ, ಈ ವರ್ಷ ಮಧ್ಯ ಪ್ರದೇಶ ಸೇರಿ ಅನೇಕ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲೂ ಗೆಲ್ಲಲು ಪ್ಲ್ಯಾನ್‌ ಮಾಡ್ತಿದೆ. ಪ್ರಿಯಾಂಕಾ ಗಾಂಧಿ ಪ್ರಚಾರ ಕಾರ್ಯಕ್ಕೆ ಚಾಲನೆಯನ್ನೂ ನೀಡಿದ್ರು. ಈ ಮಧ್ಯೆ, ಚುನಾವಣೆ ಹತ್ತಿರ ಬರುತ್ತಿದ್ದಂತೆ ಬಿಜೆಪಿಯಿಂದ ಕಾಂಗ್ರೆಸ್‌ಗೆ ನಾಯಕರೊಬಬ್ರು ಜಿಗಿದಿದ್ದಾರೆ.

ಈ ಹಿಂದೆ ಕಾಂಗ್ರೆಸ್‌ನಲ್ಲೇ ಇದ್ದ ಬೈಜನಾಥ್‌ ಸಿಂಗ್‌, ಈಗ ಕಮಲ ಪಕ್ಷದಿಂದ ಮತ್ತೆ ಕೈಗೆ ಸೇರ್ಪಡೆಯಾಗಿದ್ದಾರೆ. ಇದ್ರಲ್ಲೇನು ವಿಶೇಷ ಅಂತೀರಾ..? ಅವರು ಸೇರ್ಪಡೆಯಾಗಿರುವ ರೀತಿಯೇ ವಿಶಿಷ್ಟ. ಮಧ್ಯಪ್ರದೇಶದ ಶಿವಪುರಿಯಿಂದ ಭೋಪಾಲ್‌ಗೆ ಸುಮಾರು 300 ಕಿ.ಮೀ ಪ್ರಯಾಣ ಮಾಡಿದ್ದಾರೆ. ಅವರಷ್ಟೇ ಅಲ್ಲ, ಜತೆಗೆ  400 ಕಾರುಗಳ ಬೆಂಗಾವಲು ಪಡೆ ಸೈರೆನ್‌ ಹೊಡೆದುಕೊಂಡು ಪಕ್ಷಕ್ಕೆ ಸೇರಿದ್ದಾರೆ. ಜ್ಯೋತಿರಾದಿತ್ಯ ಸಿಂಧಿಯಾ ನೇತೃತ್ವದ 2020 ರ ಬಂಡಾಯದ ಸಮಯದಲ್ಲಿ ಕಾಂಗ್ರೆಸ್‌ ತೊರೆದಿದ್ದ ಇವರು ಈಗ ಮತ್ತೆ ಪಕ್ಷಕ್ಕೆ ಮರಳುವಿಕೆಯನ್ನು ಇದು ಸೂಚಿಸುತ್ತದೆ.

ಇದನ್ನು ಓದಿ: ಕರ್ನಾಟಕದಲ್ಲಿ 'ಕೈ' ದಿಗ್ವಿಜಯ ಬೆನ್ನಲ್ಲೇ ಮಧ್ಯ ಪ್ರದೇಶದಲ್ಲೂ ಗೆಲುವಿಗೆ ಪ್ಲ್ಯಾನ್‌: ಚುನಾವಣಾ ಪ್ರಚಾರಕ್ಕೆ ಪ್ರಿಯಾಂಕಾ ಚಾಲನೆ

ಶಿವಪುರಿಯಲ್ಲಿ ರಾಜಕೀಯ ಪ್ರಭಾವವನ್ನು ಹೊಂದಿರುವ ಬೈಜನಾಥ್ ಸಿಂಗ್ ಅವರು 2020 ರ ಮಧ್ಯಪ್ರದೇಶ ಕಾಂಗ್ರೆಸ್ ಬಂಡಾಯದ ಸಮಯದಲ್ಲಿ ಕಮಲ್ ನಾಥ್ ಸರ್ಕಾರವನ್ನು ಉರುಳಿಸಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತಂದ ಸಂದರ್ಭದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಅವರ ಜತೆ ಬಿಜೆಪಿಗೆ ಸೇರಿದ್ದರು. ಈ ದಂಗೆಯ ನೇತೃತ್ವ ವಹಿಸಿದ್ದ ಸಿಂಧಿಯಾ ಈಗ ಕೇಂದ್ರ ನಾಗರಿಕ ವಿಮಾನಯಾನ ಸಚಿವರಾಗಿದ್ದಾರೆ.

ವಿಧಾನಸಭಾ ಚುನಾವಣೆಗೆ ಬೈಜನಾಥ್ ಸಿಂಗ್ ಬಿಜೆಪಿ ಟಿಕೆಟ್‌ಗಾಗಿ ತೀವ್ರ ಲಾಬಿ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ಆದರೆ ಟಿಕೆಟ್‌ ಸಿಗುವ ಭರವಸೆ ಇಲ್ಲದ ಕಾರಣ ಅವರು ಮತ್ತೆ ಕಾಂಗ್ರೆಸ್ ಸೇರಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಮುಳುಗುವ ಪರಿಸ್ಥಿತಿಯಲ್ಲಿದ್ದ ಕಾಂಗ್ರೆಸ್‌ ‘ಕೈ’ ಹಿಡಿದ ಕರ್ನಾಟಕ ಮತದಾರ: ಲೋಕಸಭೆ ಚುನಾವಣೆಗೂ ಬೂಸ್ಟರ್ ಡೋಸ್‌!

ಇನ್ನೊಂದೆಡೆ, ಹಿರಿಯ ಕಾಂಗ್ರೆಸ್ ನಾಯಕರಾದ ಕಮಲ್ ನಾಥ್ ಮತ್ತು ದಿಗ್ವಿಜಯ ಸಿಂಗ್ ಅವರು ಬೈಜನಾಥ್ ಸಿಂಗ್ ಅವರನ್ನು ಪಕ್ಷಕ್ಕೆ ಮರಳಿ ಸ್ವಾಗತಿಸಿದರು. ಬೈಜನಾಥ್ ಸಿಂಗ್ ಜೊತೆಗೆ ಬಿಜೆಪಿಯ 15 ಜಿಲ್ಲಾ ಮಟ್ಟದ ನಾಯಕರು ಕಾಂಗ್ರೆಸ್‌ಗೆ ಸೇರ್ಪಡೆಯಾದರು. 

ತಮ್ಮ ಪಕ್ಷ ಬದಲಾವಣೆಯನ್ನು ಗುರುತಿಸಲು, ಬೈಜನಾಥ್ ಸಿಂಗ್ ಶಿವಪುರಿಯಿಂದ ಭೋಪಾಲ್‌ನಲ್ಲಿರುವ ಕಾಂಗ್ರೆಸ್ ಕಚೇರಿಗೆ 400  ಕಾರುಗಳ ಬೆಂಗಾವಲು ಪಡೆಯನ್ನು ಕರೆದೊಯ್ದರು. ಹಲವಾರು ಕಾರುಗಳು ಸೈರನ್ ಹಾಕಿಕೊಂಡು ಹೋಗುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಜನರು ವೀಡಿಯೊಗಳನ್ನು ಚಿತ್ರೀಕರಿಸುವುದು ಮತ್ತು ಕಾರುಗಳಿಗೆ ಕೈ ಬೀಸುವುದು ಕಂಡುಬರುತ್ತದೆ.

ಇದನ್ನೂ ಓದಿ: Karnataka Election Result 2023: ಸರಳತೆ ಮೆರೆದ ರಾಹುಲ್‌, ಪ್ರಿಯಾಂಕಾ ಗಾಂಧಿಗೆ ಜೈ ಎಂದ ಕರ್ನಾಟಕ ಮತದಾರ

ಈ ವಿಡಿಯೋ ವೈರಲ್ ಆದ ನಂತರ, ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಬೆಂಗಾವಲು ಪಡೆಯ ಎಸ್‌ಯುವಿಗಳ ಸಾಲುಗಳು ಮತ್ತು ಬ್ಲಾಕ್‌ಬಸ್ಟರ್ ಬಾಲಿವುಡ್ ಚಿತ್ರ ಸಿಂಘಮ್‌ನಲ್ಲಿನ ದೃಶ್ಯಗಳ ನಡುವೆ ಹೋಲಿಕೆ ಮಾಡಿದ್ದು, ಇದು ಸಹ ವೈರಲ್‌ ಆಗಿದೆ.

ಕೆಲವು ಬಳಕೆದಾರರು ಸೈರನ್‌ಗಳ ಬಳಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾನೂನಿನ ಪ್ರಕಾರ, ತುರ್ತು ಸೇವೆಗಳನ್ನು ಒದಗಿಸುವ ವಾಹನಗಳಿಗೆ ಮಾತ್ರ ರಸ್ತೆಯಲ್ಲಿ ಸೈರನ್ ಬಳಸಲು ಅನುಮತಿ ಇದೆ. ಇವುಗಳಲ್ಲಿ ಆಂಬ್ಯುಲೆನ್ಸ್‌, ಅಗ್ನಿಶಾಮಕ ದಳ ಮತ್ತು ಕೆಲವು ಸಂದರ್ಭಗಳಲ್ಲಿ ಪೊಲೀಸರು ಸೇರಿದ್ದಾರೆ. ಇನ್ನು, ಇದಕ್ಕೆ ಕಿಡಿ ಕಾರಿರುವ ಬಿಜೆಪಿ, ಸೈರನ್‌ಗಳ ಬಳಕೆ ಕಾಂಗ್ರೆಸ್‌ನ ಊಳಿಗಮಾನ್ಯ ಮನಸ್ಥಿತಿಯನ್ನು ಬಿಂಬಿಸುತ್ತದೆ ಎಂದು ಕಿಡಿ ಕಾರಿದೆ. 

ಇದನ್ನೂ ಓದಿ: ತೆಲಂಗಾಣದ ಮೇದಕ್‌ನಿಂದ ಪ್ರಿಯಾಂಕಾ ಗಾಂಧಿ ಚುನಾವಣಾ ಕಣಕ್ಕೆ? ಇಂದಿರಾ ಗಾಂಧಿ ಗೆದ್ದಿದ್ದ ಕ್ಷೇತ್ರದಿಂದ ಮೊಮ್ಮಗಳು?

Latest Videos
Follow Us:
Download App:
  • android
  • ios