ಶಕ್ತಿ ಬರ್ಲಿ ಅಂತ ಬೇಕಾಬಿಟ್ಟಿ ಮಲ್ಟಿವಿಟಮಿನ್ ಮಾತ್ರೆ ತಗೊಂಡ್ರೆ ಅಷ್ಟೇ ಕಥೆ, ಬೇಡ ಬಿಟ್ಬಿಡಿ!

ವರ್ಷ ನಲವತ್ ಆದ್ಮೇಲೆ ವಿಟಮಿನ್ ಮಾತ್ರೆಗಳು ಅಗತ್ಯ ಎಂಬ ಮಾತನ್ನು ನೀವು ಕೇಳಿರ್ತೀರಿ. ನಿಮ್ಮ ದೇಹದಲ್ಲಿ ಆ ವಿಟಮಿನ್ ಇದ್ಯೋ ಇಲ್ವೋ, ನೀವು ಅದನ್ನು ಸೇವನೆ ಮಾಡ್ತೀರಿ. ಈಗ್ಲೂ ಪರೀಕ್ಷೆ ಮಾಡಿಸದೆ ವಿಟಮಿನ್ ಮಾತ್ರೆ ತೆಗೆದುಕೊಳ್ತಿದ್ದರೆ ಈಗ್ಲೇ ನಿಲ್ಲಿಸಿ. ಇದು ಬಹಳ ಅಪಾಯಕಾರಿ. 
 

Multivitamins Increase Risk Of This Deadly Disease By Thirty Per Cent roo

ಹಿಂದಿನ ಕಾಲಕ್ಕಿಂತ ಈಗ ಬಹುತೇಕ ಮಂದಿಯ ಆಹಾರ ಪದ್ಧತಿಗಳು ಬದಲಾಗಿವೆ. ತಂತ್ರಜ್ಞಾನ, ಸೌಲಭ್ಯ ಮುಂದುವರೆದಂತೆ ಜನರ ಆಹಾರ ಪದ್ಧತಿಯಲ್ಲಿ ದೊಡ್ಡ ಬದಲಾವಣೆ ಆಗಿದೆ. ಪ್ರತಿ ದಿನ ಬೆಳಗಾದರೆ ಅವರು ಜಂಕ್ ಫುಡ್, ಬೇಕರಿ ಅಥವಾ ಕರಿದ ಪದಾರ್ಥಗಳನ್ನೇ ಹೆಚ್ಚು ಇಷ್ಟಪಡುತ್ತಿದ್ದಾರೆ. ಇದರಿಂದಾಗಿ ಸ್ವಾಭಾವಿಕವಾಗಿಯೇ ಪೌಷ್ಠಿಕಾಂಶದ ಕೊರತೆ ಜನರನ್ನು ಕಾಡುತ್ತಿದೆ.

ಇತ್ತೀಚೆಗೆ ಚಿಕ್ಕ ಮಕ್ಕಳನ್ನು ಹಿಡಿದು ದೊಡ್ಡವರೂ ಕೂಡ ವಿಟಮಿನ್ (Vitamin) ಕೊರತೆಯಿಂದ ಬಳಲುತ್ತಿದ್ದಾರೆ. ವಿಟಮಿನ್ ಗಳ ಕೊರತೆ ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಹಾಗೆಯೇ ಆರೋಗ್ಯ (Health ) ದ ಸಮಸ್ಯೆಯಿದ್ದಾಗ ಶರೀರದಲ್ಲಿ ಪೌಷ್ಠಿಕಾಂಶದ ಕೊರತೆ ಉಂಟಾಗುವುದು ಕೂಡ ಸಾಮಾನ್ಯ ಸಂಗತಿ. ನಮ್ಮ ಆಹಾರ ಪದಾರ್ಥದಲ್ಲೇ ವಿಭಿನ್ನ ಜೀವಸತ್ವಗಳು ಇರುವುದರಿಂದ ನಾವು ಸರಿಯಾದ ಆಹಾರ ಪದ್ಧತಿಯನ್ನು ಅನುಸರಿಸಿದರೆ ಪೌಷ್ಠಿಕಾಂಶಗಳ ಕೊರತೆಯನ್ನು ನೀಗಿಸಬಹುದು. ಆದರೆ ಕೆಲವು ಮಂದಿ ದೇಹದಲ್ಲಿನ ಪೌಷ್ಠಿಕಾಂಶದ ಕೊರತೆಯನ್ನು ನೀಗಿಸಲು ವಿಟಮಿನ್ ಮಾತ್ರೆ (Pill) ಗಳನ್ನು ತೆಗೆದುಕೊಳ್ಳುತ್ತಾರೆ. ವಿಟಮಿನ್ ಮಾತ್ರೆಗಳು ದೇಹಕ್ಕೆ ಶಕ್ತಿಯನ್ನು ಒದಗಿಸುವುದು ನಿಜ. ಆದರೆ ಹೆಚ್ಚು ಹೆಚ್ಚು ಮಲ್ಟಿವಿಟಮಿನ್ ಮಾತ್ರೆಗಳ ಸೇವನೆಯಿಂದ ಶರೀರ ಹಾನಿಗೊಳಗಾಗುತ್ತದೆ. ಇವು ನಮ್ಮ ದೇಹವನ್ನು ಅಸ್ವಸ್ಥಗೊಳಿಸಿ ಅನೇಕ ಮಾರಣಾಂತಿಕ ಖಾಯಿಲೆಗಳಿಗೆ ಎಡೆಮಾಡಿಕೊಡುತ್ತದೆ.

ಪಿರಿಯಡ್ ಸಿಂಕ್ ಅಂದ್ರೇನು? ನಟಿ ಭೂಮಿ ಪಡ್ನೇಕರ್ ಕೂಡ ಇದನ್ನು ನಂಬ್ತಾರಾ?

ವಿಟಮಿನ್ ಮಾತ್ರೆಗಳಿಂದ ಕ್ಯಾನ್ಸರ್ ! :  ವಿಟಮಿನ್ ಮಾತ್ರೆಗಳು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ ಹಾಗೂ ದೀರ್ಘಕಾಲದ ಖಾಯಿಲೆಗಳಿಂದ ನಮ್ಮನ್ನು ರಕ್ಷಿಸುತ್ತವೆ. ಆದರೆ ಹೊಸ ಅಧ್ಯಯನ, ಮಲ್ಟಿವಿಟಮಿನ್ ಮಾತ್ರೆಗಳು ಕ್ಯಾನ್ಸರ್ ಅಪಾಯವನ್ನು ಪ್ರತಿಶತ 30 ರಷ್ಟು ಹೆಚ್ಚಿಸಬಹುದು ಎಂದು ಹೇಳಿದೆ. ಈ ಕಾರಣಕ್ಕಾಗಿ ಇದನ್ನು ಬಳಸುವಾಗ ಎಚ್ಚರಿಕೆಯಿಂದಿರಬೇಕು ಎಂದು ಅಧ್ಯಯನಕಾರರು ಹೇಳಿದ್ದಾರೆ. ಈ ಕಾರಣಕ್ಕಾಗಿಯೇ ಅಮೆರಿಕ ಕಿಲ್ಲಿಂಗ್ ಕ್ಯಾನ್ಸರ್ ಕೈಂಡ್ಲಿ ಸಂಸ್ಥೆಯು ಅಮೆರಿಕ ಸರಕಾರವನ್ನು ಮಲ್ಟಿವಿಟಮಿನ್ ಮಾತ್ರೆಗಳ ದೀರ್ಘಾವಧಿ ಬಳಕೆಯನ್ನು ನಿರ್ಬಂಧಿಸುವಂತೆ ಒತ್ತಾಯಿಸಿದೆ.

ಆಹಾರದಲ್ಲಿನ ನೈಸರ್ಗಿಕ ಜೀವಸತ್ವಗಳು (Natural Vitamins) ನಿಧಾನವಾಗಿ ದೇಹಕ್ಕೆ ಸೇರುವುದರಿಂದ ಅವು ಯಾವುದೇ ಅಪಾಯನ್ನುಂಟುಮಾಡುವುದಿಲ್ಲ. ಆದರೆ ಸಂಶ್ಲೇಷಿತ ವಿಟಮಿನ್ ಸೇವನೆ ಶ್ವಾಸಕೋಶ, ಕರುಳು, ಸ್ತನ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ನ ಅಪಾಯವನ್ನು ಹೆಚ್ಚಿಸುತ್ತದೆ. ಬೀಟಾ-ಕ್ಯಾರೋಟಿನ್ ಮತ್ತು ಫೋಲಿಕ್ ಎಸಿಡ್ ನಂತಹ ಆಮ್ಲಗಳು ಶ್ವಾಸಕೋಶದ ಕ್ಯಾನ್ಸರ್ ಮತ್ತು ಹೃದಯರೋಗವನ್ನು ಹೆಚ್ಚಿಸುತ್ತವೆ ಹಾಗೂ ಕೊಲೊನ್ ನಲ್ಲಿ ಪೂರ್ವಭಾವಿ ಪೊಲಿಪ್ ಗಳನ್ನು ಹೆಚ್ಚಿಸುತ್ತವೆ. ಇದರಿಂದ ವಿಟಮಿನ್ ಮಾತ್ರೆಗಳನ್ನು ಮಿತವಾಗಿ ಬಳಸಬೇಕು, ವಿಟಮಿನ್ ಕೊರತೆಯನ್ನು ಹೊಂದಿದವರು ವಿಟಮಿನ್ ಕೊರತೆಯನ್ನು ನೀಗಿಸಲು ಮಾತ್ರ ಮಾತ್ರೆಗಳನ್ನು ಬಳಸಬೇಕು ಎಂದು ವೈದ್ಯರು ಹೇಳುತ್ತಾರೆ.

ಗರ್ಭಿಣಿಯರಿಗೆ ಹೃದಯಾಘಾತ..! ಮುನ್ನೆಚ್ಚರಿಕೆ ಹೇಗೆ?

ವಿಟಮಿನ್ ಕೊರತೆಯಿಂದ ಏನಾಗುತ್ತದೆ?: ವಿಟಮಿನ್ ಗಳು ನಮ್ಮ ದೇಹದಲ್ಲಿ ಚಯಾಪಚಯ ಕ್ರಿಯೆ ಸರಾಗವಾಗಿ ನಡೆಯಲು ಸಹಾಯ ಮಾಡುತ್ತವೆ. ದೇಹದ ರಾಸಾಯನಿಕ ಪ್ರಕ್ರಿಯೆಗಳು ಆಹಾರದಲ್ಲಿನ ವಿಟಮಿನ್ ಗಳನ್ನು ಶಕ್ತಿಯನ್ನಾಗಿ ಬದಲಾಯಿಸುತ್ತವೆ. ಜೀವಸತ್ವಗಳ ಕೊರತೆಯಾದಾಗ ದೀರ್ಘಕಾಲದ ಖಾಯಿಲೆಗಳು ಉಂಟಾಗುತ್ತವೆ. ಆಯಾಸ, ನಿದ್ರಾಹೀನತೆಯ ತೊಂದರೆಗಳೂ ಕಾಡುತ್ತವೆ. ಇಂತಹ ಕೊರತೆಯನ್ನು ನೀಗಿಸಿ ದೇಹಕ್ಕೆ ಪೋಷಕಾಂಶಗಳನ್ನು ಒದಗಿಸುವಂತಹ ಅನೇಕ ನೈಸರ್ಗಿಕ ಸಂಪನ್ಮೂಲಗಳು ನಮ್ಮ ಆಹಾರದಲ್ಲಿವೆ. ನಮ್ಮ ಆಹಾರದಲ್ಲಿನ ವಿವಿಧ ರೀತಿಯ ವಿಟಮಿನ್ ಗಳು ದೇಹಕ್ಕೆ ವಿಟಮಿನ್ ಒದಗಿಸಿ ಉತ್ತಮ ಆರೋಗ್ಯಕ್ಕೆ ಸಹಾಯ ಮಾಡುತ್ತವೆ.

ಮಲ್ಟಿವಿಟಮಿನ್ ಮಾತ್ರೆಗಳಿಂದ ಅನೇಕ ಅಡ್ಡಪರಿಣಾಮಗಳಾಗುತ್ತವೆ. ಆದ್ದರಿಂದ ವೈದ್ಯರ ಸಲಹೆಯನ್ನು ಪಡೆಯದೇ ಯಾವುದೇ ವಿಟಮಿನ್ ಮಾತ್ರೆಗಳನ್ನು ಸೇವಿಸಬಾರದು. ಇವುಗಳ ಅತಿಯಾದ ಸೇವನೆಯಿಂದ ದೇಹದಲ್ಲಿ ಹಾರ್ಮೋನ್ ಅಸಮತೋಲನ (Imbalance of Harmones) ಹಾಗೂ ರಕ್ತದೊತ್ತಡದ (Blood Pressure) ಸಮಸ್ಯೆ ಹೆಚ್ಚಾಗಬಹುದು. ಹಾಗಾಗಿ ವಿಟಮಿನ್ ಮಾತ್ರೆಗಳನ್ನು ಕಡಿಮೆ ಸೇವಿಸಿ ತರಕಾರಿ, ಹಣ್ಣು, ಡ್ರೈ ಫ್ರುಟ್ಸ್ (Dry Fruits) ಹಾಗೂ ಡೈರಿ ಉತ್ಪನ್ನಗಳನ್ನು ಸೇವಿಸಬೇಕು.
 

Latest Videos
Follow Us:
Download App:
  • android
  • ios