Asianet Suvarna News Asianet Suvarna News

ಪಿರಿಯಡ್ ಸಿಂಕ್ ಅಂದ್ರೇನು? ನಟಿ ಭೂಮಿ ಪಡ್ನೇಕರ್ ಕೂಡ ಇದನ್ನು ನಂಬ್ತಾರಾ?

ತಿಂಗಳಲ್ಲಿ ಮೂರ್ನಾಲ್ಕು ದಿನ ಪ್ರತಿ ಮಹಿಳೆ ಅನುಭವಿಸಬೇಕಾದ ನೈಸರ್ಗಿಕ ಕ್ರಿಯೆ ಮುಟ್ಟು. ಅದರ ಬಗ್ಗೆ ಅನೇಕ ನಂಬಿಕೆಗಳಿವೆ.  ಮುಟ್ಟಿನ ಬಗ್ಗೆ ಸಂಶೋಧನೆ, ಅಧ್ಯಯನಗಳು ಸಾಕಷ್ಟು ನಡೆದಿವೆ. ನಾವಿಂದು ಮುಟ್ಟಿನ ಸಿಂಕ್ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.
 

Do Womens Periods Really Sync When They Live Together Heres The Truth roo
Author
First Published Nov 3, 2023, 3:57 PM IST

ನಿನಗೆ ಪಿರಿಯಡ್ಸ್ ಆಗಿದ್ಯಾ? ಹತ್ತಿರ ಬರಬೇಡ. ನಿನ್ನ ಜೊತೆ ಇದ್ರೆ ನನಗೂ ಪಿರಿಯಡ್ಸ್ ಆಗೋ ಸಾಧ್ಯತೆ ಇದೆ. ನಿನ್ನ – ನನ್ನ ಪಿರಿಯಡ್ಸ್ ಪ್ರತಿ ಬಾರಿ ಒಟ್ಟಿಗೆ ಬರುತ್ತೆ ಅಲ್ವಾ ಎನ್ನುವ ಮಾತುಗಳನ್ನು ನೀವು ಕೇಳಿರಬಹುದು. ಗರ್ಭಿಣಿಯನ್ನು ಪಿರಿಯಡ್ಸ್ ಆದವರು ಟಚ್ ಮಾಡ್ಲೇಬಾರದು ಎನ್ನುವ ನಿಯಮ ಕೆಲ ಕಡೆ ಇದೆ. ಇನ್ನು ಕೆಲವರು ಒಂದೇ ಮನೆಯಲ್ಲಿ ಒಟ್ಟಿಗೆ ಇರುವ ಮಹಿಳೆಯರಿಗೆ ಒಂದೇ ಬಾರಿ ಪಿರಿಯಡ್ಸ್ ಆಗುತ್ತೆ ಅಂತಾ ನಂಬುತ್ತಾರೆ. ಇದನ್ನು ಪಿರಿಯಡ್ಸ್ ಸಿಂಕ್ ಅಂತಾ ಕರೆಯಲಾಗುತ್ತೆ. ಪಿರಿಯಡ್ಸ್ ಆದವರ ಜೊತೆಗಿದ್ರೆ ಪಿರಿಯಡ್ಸ್ ಆಗುತ್ತಾ ಎನ್ನುವ ಪ್ರಶ್ನೆ ನಿಮ್ಮನ್ನು ಕಾಡಿರಬಹುದು.

ಒಂದೇ ಮನೆಯಲ್ಲಿರುವ ಅಥವಾ ಒಂದೇ ರೂಮಿನಲ್ಲಿರುವ ಅಕ್ಕ-ತಂಗಿಯರು, ಸ್ನೇಹಿತೆಯರಿಗೆ ಒಂದೇ ಸಮಯದಲ್ಲಿ ಪಿರಿಯಡ್ಸ್ (Period) ಆಗೋದಿದೆ. ಒಮ್ಮೊಮ್ಮೆ ಮನೆಯಲ್ಲಿರೋ ಮಹಿಳೆಯರೆಲ್ಲ ಮುಟ್ಟಾಗಿರ್ತಾರೆ. ಒಬ್ಬರಿಗೆ ಶುರುವಾದ್ರೆ ಮುಗೀತು. ಒಬ್ಬರಾದ್ಮೇಲೆ ಒಬ್ಬರು ಅಂತಾ ಹಿರಿಯರು ಹೇಳ್ತಿರುತ್ತಾರೆ. ಈ ಪಿರಿಯಡ್ಸ್ ಸಿಂಕನ್ನು ಅನೇಕರು ನಂಬುತ್ತಾರೆ. ಸಿನಿಮಾ ನಟಿ ಭೂಮಿ ಪೆಡ್ನೇಕರ್ (Bhumi Pednekar) ಕೂಡ ಇದನ್ನು ನಂಬುತ್ತಾರೆ. ನೇಹಾ ಧೂಪಿಯಾ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಭೂಮಿ ಪೆಡ್ನೇಕರ್, ಪಿರಿಯಡ್ ಸಿಂಕ್ ಬಗ್ಗೆ ವಿವರಿಸಿದ್ರು.

ಗರ್ಭಿಣಿಯರಿಗೆ ಹೃದಯಾಘಾತ..! ಮುನ್ನೆಚ್ಚರಿಕೆ ಹೇಗೆ?

2016 ರಲ್ಲಿ ಹೈಶಾ ಚಿತ್ರೀಕರಣದಲ್ಲಿ ನಿರತರಾಗಿದ್ದ ಸಮಯದಲ್ಲಿ ಭೂಮಿ, ಮನೆಯಿಂದ ದೂರವಿದ್ರಂತೆ. ಆದ್ರೆ ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಮನೆಗೆ ಬಂದು ಸೇರಿಕೊಂಡಿದ್ದರು.  ಭೂಮಿ ತನ್ನ ತಾಯಿ ಮತ್ತು ಸಹೋದರಿ ಸೇರಿದಂತೆ ತನ್ನ ಮನೆಯಲ್ಲಿ ವಾಸಿಸುವ ಎಲ್ಲಾ ಆರು ಮಹಿಳೆಯರಿಗೆ ಬಹುತೇಕ ಒಂದೇ ಸಮಯದಲ್ಲಿ ಪಿರಿಯಡ್ಸ್ ಆಗ್ತಿತ್ತು ಎಂದಿದ್ದಾರೆ. ಒಂದೇ ಸಮಯದಲ್ಲಿ ಎಲ್ಲರಿಗೂ ಆಗೋದ್ರಿಂದ  ಕೆಲವೊಮ್ಮೆ ಬಹಳಷ್ಟು ತೊಂದರೆಗಳನ್ನು ಅನುಭವಿಸಬೇಕಾಗ್ತಿತ್ತು ಎಂದು ಭೂಮಿ ಹೇಳಿದ್ದಾರೆ. ಸಮಸ್ಯೆ ಆಗ್ಬಾರದು ಎನ್ನುವ ಕಾರಣಕ್ಕೆ ಅವರ ಮನೆಯವರು ಪಿರಿಯಡ್ಸನ್ನು ಕ್ಯಾಲೆಂಡರ್ ನಲ್ಲಿ ಗುರುತು ಹಾಕಿಟ್ಟುಕೊಳ್ತಿದ್ದರು. ಪ್ರತಿಯೊಬ್ಬರಿಗೂ ಅವರದೆ ಸ್ಥಳ ಹಾಗೂ ಸೌಕರ್ಯ ಸಿಗಲಿ, ಸಮಸ್ಯೆ ಆಗದಿರಲಿ ಎನ್ನುವುದು ಅವರ ಉದ್ದೇಶವಾಗಿತ್ತು ಎನ್ನುತ್ತಾರೆ ಭೂಮಿ. ಒಂದೇ ರೂಮಿನಲ್ಲಿರುವ ಸ್ನೇಹಿತೆಯರು ಅಥವಾ ಆಪ್ತ ಸ್ನೇಹಿತೆಯರು ಒಂದೇ ಬಾರಿ ಪಿರಿಯಡ್ಸ್ ಆಗ್ತಿರುತ್ತಾರೆ. ಹೌದು ಪಿರಿಯಡ್ಸ್ ಸಿಂಕ್ ಇದೆ ಅಂತಾ ನೀವೂ ನಂಬ್ತೀರಾ? 

ಮುಟ್ಟಿನ ಸಮಯದಲ್ಲಿ ಕಾಡುವ ಬ್ರೌನ್ ಡಿಸ್ಜಾರ್ಜಿಗೇನು ಕಾರಣ?

ವಿಜ್ಞಾನಿಗಳಿಗೆ ಈ ಪ್ರಶ್ನೆ ಕೇಳಿದ್ರೆ ಇಲ್ಲ ಎನ್ನುತ್ತಾರೆ. ಈ ಬಗ್ಗೆ ಕೆಲ ಸಂಶೋಧನೆ ಕೂಡ ನಡೆದಿದೆ. ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ ಮತ್ತು ಟ್ರ್ಯಾಕರ್ ಅಪ್ಲಿಕೇಶನ್ ಕ್ಲೂ ಪಿರಿಯಡ್ ಸಿಂಕ್ ಬಗ್ಗೆ ಪರೀಕ್ಷೆ ನಡೆಸಿದೆ. ಇದರಲ್ಲಿ 1500 ಮಹಿಳೆಯರು ಒಟ್ಟಿಗೆ ವಾಸಿಸುತ್ತಿದ್ದರು. ಆದರೆ ಒಬ್ಬರೂ ಪಿರಿಯಡ್ ಸಿಂಕ್ ಹೊಂದಿರಲಿಲ್ಲ ಎಂದು ಸಮೀಕ್ಷೆ ಹೇಳಿದೆ. ಚೀನಾದ ಸಂಶೋಧಕರು 2006 ರಲ್ಲಿ 186 ಮಹಿಳೆಯರ ಮೇಲೆ  ಸಂಶೋಧನೆ ನಡೆಸಿದ್ದರು. ಈ ಮಹಿಳೆಯರಲ್ಲಿ ಯಾರೊಬ್ಬರ ಅವಧಿಯು ಸಿಂಕ್ ಆಗಿಲ್ಲ ಎಂದು ವರದಿ ಹೇಳಿದೆ.

ಒಂದೇ ಬಾರಿ ಇಬ್ಬರಿಗೆ ಪಿರಿಯಡ್ಸ್ ಆಗಲು ಇದು ಕಾರಣ : ಪಿರಿಯಡ್ಸ್ ಚಕ್ರ 28 ದಿನಗಳಿರುತ್ತದೆ. ಕೆಲವರಿಗೆ ಒಂದೆರಡು ದಿನ ಮೊದಲೇ ಪಿರಿಯಡ್ಸ್ ಆಗೋದಿದೆ. ಮತ್ತೆ ಕೆಲವರಿಗೆ ಸಮಯಕ್ಕಿಂತ ಒಂದೆರಡು ದಿನದ ನಂತ್ರ ಪಿರಿಯಡ್ಸ್ ಆಗುತ್ತದೆ. ಏಳು ದಿನಗಳ ವ್ಯತ್ಯಾಸವನ್ನು ನಾವು ನೋಡ್ಬಹುದಾಗಿದೆ. ಹಾಗಾಗಿ ಕೆಲವೊಮ್ಮೆ ಇಬ್ಬರ ಪಿರಿಯಡ್ಸ್ ಒಟ್ಟಿಗೆ ಬರುತ್ತದೆ.  

ಪಿರಿಯಡ್ಸ್ ಚಕ್ರ ಮತ್ತು ಚಂದ್ರ : ಅನೇಕರು ಚಂದ್ರನ ಚಲಿಸುವ ಚಕ್ರಕ್ಕೆ ಪಿರಿಯಡ್ಸ್ ಹೋಲಿಕೆ ಮಾಡ್ತಾರೆ. ಇವೆರಡರ ಮಧ್ಯೆಯೂ ಸಂಬಂಧವಿದೆ ಎನ್ನುತ್ತಾರೆ. ಈ ಬಗ್ಗೆಯೂ ಕೆಲ ಅಧ್ಯಯನ ನಡೆದಿದೆ. ಅದ್ರಲ್ಲಿ ಕೂಡ ಚಂದ್ರ ಹಾಗೂ ಮಹಿಳೆಯರ ಪಿರಿಯಡ್ಸ್ ಗೆ ಯಾವುದೇ ಸಂಬಂಧವಿಲ್ಲ ಎಂಬ ಸಂಗತಿ ಹೊರಬಿದ್ದಿದೆ. 
 

Follow Us:
Download App:
  • android
  • ios