Asianet Suvarna News Asianet Suvarna News

Happy Tips: ಸದಾ ಸಂತೋಷವಾಗಿರ್ಬೇಕೆಂದ್ರೆ ಸಾಮಾಜಿಕ ಜಾಲತಾಣ ಬಳಸ್ಬೇಡಿ

ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಒತ್ತಡ, ಕಿರಿಕಿರಿ, ಮಾನಸಿಕ ಹಿಂಸೆ ಹೆಚ್ಚಾಗ್ತಿದೆ. ಎಂಥ ಖುಷಿ ಸಂದರ್ಭದಲ್ಲೂ ಜನರು ಮನಸ್ಸು ಬಿಚ್ಚಿ ನಗ್ತಿಲ್ಲ. ಇದಕ್ಕೆ ಸಾಮಾಜಿಕ ಜಾಲತಾಣ ಕಾರಣವೆಂದ್ರೆ ನೀವು ನಂಬ್ಲೇಬೇಕು. ಇರುವ ಸಮಯವನ್ನು ಸದುಪಯೋಗಪಡಿಸಿಕೊಳ್ಳದೆ ಬೇರೆಯವರನ್ನು ನೋಡಿ ಹೊಟ್ಟೆಕಿಚ್ಚು ಹೆಚ್ಚು ಮಾಡ್ತಿದೆ ಈ  ಸಾಮಾಜಿಕ ಜಾಲತಾಣ.
 

More Use Of Social Media Is Making People Unhappy
Author
Bangalore, First Published Aug 24, 2022, 2:21 PM IST

ಸಾಮಾಜಿಕ ಜಾಲತಾಣ ಸದ್ಯ ಜನರ ಸಂತೋಷನ್ನು ಕಸಿದುಕೊಳ್ತಿದೆ. ಈ ಮಾತನ್ನು ಅನೇಕರು ನಂಬೋದಿಲ್ಲ. ಯಾಕೆಂದ್ರೆ ಬಹುತೇಕರು ಮನರಂಜನೆ ಸಿಗ್ತಿರೋದೆ ಸಾಮಾಜಿಕ ಜಾಲತಾಣದಿಂದ ಎಂದುಕೊಂಡಿದ್ದಾರೆ. ಬೆಳಿಗ್ಗೆ ಎದ್ದ ತಕ್ಷಣ ಮೊಬೈಲ್ ಹಿಡಿಯುವ ಜನರು ರಾತ್ರಿ ಹಾಸಿಗೆ ಮೇಲೆ ಮಲಗುವವರೆಗೂ ಮೊಬೈಲ್ ಬಳಕೆ ಮಾಡ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕುವ ಜೊತೆಗೆ ಅದಕ್ಕೆ ಏನೇನು ಕಮೆಂಟ್ ಬಂದಿದೆ ಎಂಬುದನ್ನು ನೋಡೋದ್ರಲ್ಲಿ ಕೆಲವರು ಬ್ಯುಸಿಯಿರ್ತಾರೆ. ಮತ್ತೆ ಕೆಲವರು ಯಾರ ಫೋಟೋಕ್ಕೆ ಕಮೆಂಟ್ ನೀಡ್ಬೇಕು, ಯಾರಿಗೆ ನೀಡಬಾರದು ಎಂಬ ಚಿಂತೆಯಲ್ಲಿರ್ತಾರೆ. ಮತ್ತೆ ಕೆಲವರು ಇಡೀ ದಿನ ಇನ್ಸ್ಟಾಗ್ರಾಮ್ ರೀಲ್ಸ್, ಯುಟ್ಯೂಬ್ ರೀಲ್ಸ್ ನೋಡ್ತಾ ಸಮಯ ಹಾಳು ಮಾಡ್ತಾರೆ. ಈಗ ವೈಯಕ್ತಿಕ ಜೀವನ ಎನ್ನುವುದು ಇಲ್ಲದಂತಾಗಿದೆ. ಎಲ್ಲ ವಿಷ್ಯಗಳನ್ನು ಜನರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ತಾರೆ. ನಿಮ್ಮ ಖುಷಿ ಫೋಟೋ ನೋಡಿ ಒಂದಿಷ್ಟು ಮಂದಿ ಖುಷಿ ಪಟ್ರೆ ಮತ್ತೆ ಕೆಲವಷ್ಟು ಮಂದಿ ಅಸೂಯೆಪಟ್ಟುಕೊಳ್ತಾರೆ. ಕಮೆಂಟ್ ಬಂದಿಲ್ಲ, ಕಮೆಂಟ್ ಹೀಗೆ ಬಂದಿದೆ, ನೋಡಿದವರು ಪ್ರತಿಕ್ರಿಯೆ ನೀಡಿಲ್ಲ, ಆಪ್ತ ಸ್ನೇಹಿತ ಹೇಳದೆ ಊರು ಸುತ್ತಿದ್ದಾನೆ ಹೀಗೆ ಸಣ್ಣ ಸಣ್ಣ ವಿಷ್ಯಗಳು ಸಾಮಾಜಿಕ ಜಾಲತಾಣದ ಮೂಲಕ ಮನಸ್ಸು ಹಾಳು ಮಾಡ್ತಿದೆ. ಎಷ್ಟೂ ಗಲಾಟೆ, ಕೊಲೆಗಳಿಗೆ ಇದು ಕಾರಣವಾಗ್ತಿದೆ. ಅನೇಕರ ಮನಸ್ಸನ್ನು ಹಾಳು ಮಾಡಿರುವ, ಸಂತೋಷವನ್ನು ಸಂಪೂರ್ಣವಾಗಿ ಕಸಿದುಕೊಂಡಿರುವ, ಸಮಯ ಹಾಳು ಮಾಡ್ತಿರುವ ಈ ಸಾಮಾಜಿಕ ಜಾಲತಾಣದಿಂದ ದೂರವಿರುವುದು ಸುಲಭವಲ್ಲ. ಅದನ್ನು ಹೇಗೆ ಕಡಿಮೆ ಮಾಡ್ಬಹುದು ಎಂಬುದನ್ನು ನಾವಿಂದು ಹೇಳ್ತೇವೆ.

ಸಾಮಾಜಿಕ ಜಾಲತಾಣ (Social Media ) ದಿಂದ ದೂರವಿರಲು ಹೀಗೆ ಮಾಡಿ : 
ಸಮಯ (Time) ದ ಮಿತಿ ಇರಲಿ :
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ ಜನರ ಜೀವನ (Life) ದಲ್ಲಿ ಪ್ರಾಬಲ್ಯ ಮೆರೆದಿದೆ. ಸೋಷಿಯಲ್ ಮೀಡಿಯಾ ಇಲ್ಲದಿದ್ದರೆ ಜೀವನ ಇಲ್ಲ ಎನ್ನುವಂತಾಗಿದೆ. ಅನೇಕರಿಗೆ ಸಾಮಾಜಿಕ ಜಾಲತಾಣ ಬಿಟ್ಟು ಒಂದು ಗಂಟೆ ಇರಲು ಸಾಧ್ಯವಿಲ್ಲ. ಕೈನಿಂದ ಮೊಬೈಲ್ ಕೈತಪ್ಪಿದ್ರೆ ಜೀವ ಹೋದ ಅನುಭವವಾಗುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ಸಾಮಾಜಿಕ ಜಾಲತಾಣ ಜಾಲಾಡಿ ಬರ್ತಾರೆ. ಆ ಸಂದರ್ಭದಲ್ಲಿಯೇ ಕೆಲವರ ಮೂಡ್ ಹಾಳಾಗಿರುತ್ತದೆ.  ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಜನರ ದೈಹಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದಲ್ಲದೆ ಮಾನಸಿಕ ಒತ್ತಡವೂ ಹೆಚ್ಚುತ್ತಿದೆ. ಸಾಮಾಜಿಕ ಜಾಲತಾಣದ ಬಳಕೆಯನ್ನು ಸಂಪೂರ್ಣ ನಿಲ್ಲಿಸಲು ಒಂದೇ ಬಾರಿ ಸಾಧ್ಯವಿಲ್ಲ. ಹಾಗಾಗಿ ಅದರ ವೀಕ್ಷಣೆ ಸಮಯ ಕಡಿಮೆ ಮಾಡಬಹುದು. ಇದಕ್ಕಾಗಿ ಸಮಯ ಟ್ರ್ಯಾಕ್ ಮಾಡುವ ಅಪ್ಲಿಕೇಶನ್  ಬಳಸಬಹುದು. ಒಬ್ಬ ವ್ಯಕ್ತಿ ಎಷ್ಟು ಸಮಯದವರೆಗೆ ಆನ್‌ಲೈನ್‌ನಲ್ಲಿದ್ದಾನೆ ಎಂಬುದನ್ನು ಇದು ಮೇಲ್ವಿಚಾರಣೆ ಮಾಡಿ, ಎಚ್ಚರಿಸುತ್ತದೆ.

ಇದನ್ನೂ ಓದಿ: ಈ ಬ್ಲಡ್‌ ಗ್ರೂಪ್‌ ಜನರ ಹಾರ್ಟ್ ತುಂಬಾ ವೀಕ್, ಹುಷಾರಾಗಿರಿ

ಕುಟುಂಬಸ್ಥರು ಜೊತೆಗಿದ್ದಾಗ ಬೇಡ ಸಾಮಾಜಿಕ ಜಾಲತಾಣ : ಕೆಲವರು ಹಗಲಿನಲ್ಲಿ ನಡೆಯುವ ಎಲ್ಲಾ ಸಣ್ಣ, ದೊಡ್ಡ ಚಟುವಟಿಕೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಾರೆ. ಕುಟುಂಬದವರ ಜೊತೆಗಿದ್ದಾಗ ಅವರ ಜೊತೆ ಮಾತನಾಡುವ ಬದಲು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಪೋಸ್ಟ್ ಮಾಡುವ ಅಥವಾ ಕಮೆಂಟ್ ಮಾಡುವ ಬ್ಯುಸಿಯಲ್ಲಿರುತ್ತಾರೆ. ಸಾಮಾಜಿಕ ಜಾಲತಾಣದಿಂದ ದೂರವಿರಲು ಉತ್ತಮ ಮಾರ್ಗವೆಂದರೆ ಕುಟುಂಬಸ್ಥರು. ಕುಟುಂಬಸ್ಥರ ಜೊತೆ ಸಮಯವನ್ನು ಕಳೆಯಬೇಕು. ಈ ಸಂದರ್ಭದಲ್ಲಿ ಮೊಬೈಲ್ ನಿಂದ ದೂರವಿರುವುದು ಒಳ್ಳೆಯದು. ಮನಸ್ಸು ಮೊಬೈಲ್ ಮೇಲಿದ್ದು, ದೇಹ ಮಾತ್ರ ಕುಟುಂಬಸ್ಥರ ಜೊತೆಗಿದ್ದರೆ ಪ್ರಯೋಜನವಿಲ್ಲ. ಸಾಮಾಜಿಕ ಜಾಲತಾಣದ ಆಲೋಚನೆ ಕೂಡ ಬರದಂತೆ ನೀವು ಕುಟುಂಬದ ಜೊತೆಗಿರಬೇಕಾಗುತ್ತದೆ.  ಕುಟುಂಬ ಮತ್ತು ಸ್ನೇಹಿತರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವುದ್ರಿಂದ ನಿಮ್ಮ ಸಂತೋಷ ಇಮ್ಮಡಿಯಾಗುತ್ತದೆ. ಇದು ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ಸಂಬಂಧಗಳನ್ನು ಸುಧಾರಿಸುತ್ತದೆ. 

ಇದನ್ನೂ ಓದಿ: ಈ ಒಳಾಂಗಣ ವ್ಯಾಯಾಮಗಳು ನಿಮ್ಮ ಕ್ಯಾಲೋರಿ ಬರ್ನ್ ಮಾಡುತ್ತೆ!

ಇತರ ಚಟುವಟಿಕೆ : ಮೊಬೈಲ್ ಬಳಕೆ ತಪ್ಪಿಸಲು ನೀವು ಕೆಲ ಆಟ, ಹವ್ಯಾಸದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಬೇಕು. ಆ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಮೊಬೈಲ್ ಬಳಕೆ ಮಾಡಬಾರದು.

Follow Us:
Download App:
  • android
  • ios