ಇಡೀ ಪ್ರಪಂಚ ಗಿರಗಿರನೇ ಸುತ್ತುತ್ತಿರುವ ಅನುಭವವಾಗ್ತಿದ್ಯಾ? ಈ ಕಾಯಿಲೆ ಆಗಿರ್ಬೋದು ಹುಷಾರ್‌!

ಭಾರತದಲ್ಲಿ 9.9 ದಶಲಕ್ಷಕ್ಕಿಂತ ಹೆಚ್ಚಿನ ಜನರು ವರ್ಟಿಗೊ ಸಮಸ್ಯೆಯನ್ನು ಅನುಭವಿಸುತ್ತಾರೆ . ಬಹುತೇಕ ಪ್ರತಿಯೊಬ್ಬರೂ ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ತಲೆಸುತ್ತುವಿಕೆಯನ್ನು ಅನುಭವಿಸಿದರೂ ವಿಭಿನ್ನವಾದುದು. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

More than 9.9 million people in India suffer from vertigo Vin

ವರ್ಟಿಗೊ ಎಂಬುದು ಸಮತೋಲನಕ್ಕೆ ಸಂಬಂಧಿಸಿದ ಪರಿಸ್ಥಿತಿಯಾಗಿದ್ದು, ವ್ಯಕ್ತಿಗೆ ಇದ್ದಕ್ಕಿದ್ದಂತೆ ಅಸಹಜ ಭಾವವೇರ್ಪಟ್ಟು, ಇಡೀ ಪ್ರಪಂಚವೇ ಸುತ್ತುತ್ತಿರುವಂತೆ ಭಾಸವಾಗಬಹುದು. ಇದು ಬಹಳ ಆತಂಕಕಾರಿಯಾದುದು ಮತ್ತು ಯಾವುದೇ ಮುನ್ನೆಚ್ಚರಿಕೆ ನೀಡದೆ ಬರುತ್ತದೆ. ಇದನ್ನು ಕೇವಲ 'ಒಂದು ಕ್ಷಣದ ತಲೆಸುತ್ತುವಿಕೆ' ಎಂದು ನಿರ್ಲಕ್ಷಿಸದಿರುವುದು ಬಹಳ ಮುಖ್ಯ.  ವರ್ಟಿಗೋವನ್ನು ಪರೀಕ್ಷಿಸಿಕೊಳ್ಳದೇ ಹೋದರೆ ಅದು ಜೀವನವನ್ನೇ ಬುಡಮೇಲು ಮಾಡಿಬಿಡಬಹುದು. ಸಾಮಾನ್ಯ ಕೆಲಸಗಳೇ ಆಗಿರಬಹುದು ಅಥವಾ ವಿಶೇಷ ಸಂದರ್ಭಗಳೇ ಆಗಿರಬಹುದು. ದಿನಸಿ ಶಾಪಿಂಗ್, ಪ್ರಯಾಣ, ಕೆಲಸ, ಸ್ನೇಹಿತರು ಮತ್ತು ಕುಟುಂಬದವರಲ್ಲಿಗೆ ಭೇಟಿ ನೀಡುವುದು, ರಜೆ ಪ್ರವಾಸ ಹೋಗುವುದು ಮುಂತಾದ ಬಹುತೇಕ ಜನರು ಗಂಭೀರವಾಗಿ ಪರಿಗಣಿಸದೆ ಇರುವಂತಹ ಸಂಗತಿಗಳು ವರ್ಟಿಗೋ ಇರುವ ಜನರಿಗೆ ಬಹಳ ಕಠಿಣವಾಗಿರುತ್ತವೆ. 

ಸುಪ್ರಸಿದ್ಧ ಜಾಗತಿಕ ವರ್ಟಿಗೊ ತಜ್ಞರಾದ ಜರ್ಮನಿಯ ಮ್ಯೂನಿಚ್‌ನ ಹಾಸ್ಪಿಟಲ್ ಆಫ್ ಲುಡ್ವಿಗ್ ವಿಶ್ವವಿದ್ಯಾಲಯದ ನರರೋಗ ವಿಭಾಗ ಮತ್ತು ಜರ್ಮನ್ ಸೆಂಟರ್ ಫಾರ್ ವರ್ಟಿಗೊ ಅಂಡ್ ಬ್ಯಾಲೆನ್ಸ್ ಡಿಸಾರ್ಡರ್ಸ್ ವಿಭಾಗದ ನರರೋಗಶಾಸ್ತ್ರ(ನ್ಯುರಾಲಜಿ)ದ ಪ್ರೊಫೆಸರ್ ಡಾ.ಮೈಕೆಲ್ ಸ್ಟ್ರುಪ್, 'ಜಗತ್ತಿನಾದ್ಯಂತ 10 ಜನರಲ್ಲಿ 1 ವ್ಯಕ್ತಿ ವರ್ಟಿಗೊದಿಂದ ಬಾಧಿಸಲ್ಪಡುತ್ತಾರೆ. ಆದರೂ, ಇದರ ರೋಗಪತ್ತೆಯು ಸವಾಲುಗಳಿಂದ ಕೂಡಿದ್ದು, ಇದಕ್ಕೆ ಚಿಕಿತ್ಸೆ (Treatment)ಯನ್ನು ಪಡೆಯುವ ಮಾರ್ಗ ದೀರ್ಘ ಹಾಗೂ ಕಠಿಣವಾಗಿರುತ್ತದೆ. ಅತ್ಯಧಿಕ ಸಂಖ್ಯೆಯಲ್ಲಿ ಇದು ಪ್ರಚಲಿತದಲ್ಲಿದ್ದರೂ, ರೋಗಿಗಳು (Disease) ಮತ್ತು ಆರೋಗ್ಯಶುಶ್ರೂಷಾ ವೃತ್ತಿಪರರು ಇಬ್ಬರಲ್ಲೂ ಈ ಪರಿಸ್ಥಿತಿಯ ಕುರಿತು ಅರಿವಿನ ಕೊರತೆ ಇದೆ. ಆದರೆ ಒಮ್ಮೆ ಇದನ್ನು ಸರಿಯಾಗಿ ರೋಗಪತ್ತೆ ಮಾಡಿದಲ್ಲಿ, ಇದಕ್ಕೆ ಚಿಕಿತ್ಸೆ ಒದಗಿಸಬಹುದು' ಎಂದು ಹೇಳಿದರು.  

Dizziness Causes: ಬೆಳಿಗ್ಗೆ ಏಳುವಾಗ ಬವಳಿ ಬೀಳುವಂತಾಗುತ್ತಾ? ಇದ್ಯಾಕೆ ಗೊತ್ತಾ?

ಮಾತ್ರವಲ್ಲ, 'ಚಿಕಿತ್ಸೆಗಳು ರೋಗಲಕ್ಷಣಗಳನ್ನು ಸುಧಾರಿಸಿದರೂ, ಅನೇಕ ವೇಳೆ ವರ್ಟಿಗೋ ಇರುವ ಜನರು ಶಿಫಾರಸ್ಸು ಮಾಡಲಾದ ಚಿಕಿತ್ಸೆಯನ್ನು ಕಟ್ಟುನಿಟ್ಟಾಗಿ ಪಾಲಿಸುವುದಿಲ್ಲ.ಇದು ರೋಗಲಕ್ಷಣಗಳು ಮರಳಿ ಬರುವುದಕ್ಕೆ ಕಾರಣವಾಗುತ್ತದೆ. ನಾವು ಇದರ ಚಿಹ್ನೆಗಳ ಕುರಿತು ಮತ್ತು ಶಿಫಾರಸ್ಸು ಮಾಡಿರುವಂತ ಚಿಕಿತ್ಸೆಯ ಪಡೆದುಕೊಳ್ಳುವ ಮೂಲಕ ಅದನ್ನು ನಿರ್ವಹಿಸುವ ರೀತಿಯ ಕುರಿತು ಜಾಗೃತಿ ಹೆಚ್ಚಿಸುವ ಅಗತ್ಯವಿದೆ. ಇದರಿಂದ ವರ್ಟಿಗೋ ಇರುವ ಜನರು ತಮ್ಮ ವರ್ಟಿಗೋವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಅಗತ್ಯವಾದ ಬೆಂಬಲವನ್ನು ಪಡೆಯುವುದು ಸಾಧ್ಯವಾಗುತ್ತದೆ' ಎಂದು ಸೇರಿಸಿದರು. 

ವರ್ಟಿಗೋ ಸಂದರ್ಭ ಯಾವುದೇ ವಯಸ್ಸಿನಲ್ಲೂ ಏರ್ಪಡಬಹುದಾದರೂ ಇದು ವೃದ್ಧರಲ್ಲಿ ಅತಿಸಾಮಾನ್ಯವಾಗಿ ಕಂಡುಬರುತ್ತದೆ. 60 ವರ್ಷಕ್ಕಿಂತ ಮೇಲ್ಪಟ್ಟ ಜನರ ಪೈಕಿ 30% ಮಂದಿ ಮತ್ತು 85 ವರ್ಷಕ್ಕಿಂತ ಮೇಲ್ಪಟ್ಟ ಜನರ ಪೈಕಿ 50% ಮಂದಿ ವರ್ಟಿಗೊ ಮತ್ತು ತಲೆಸುತ್ತುವಿಕೆ ಅನುಭವಿಸುತ್ತಾರೆ.  ಭಾರತದ ವೃದ್ಧ ಜನಸಂಖ್ಯೆ(60 ವರ್ಷ ಮತ್ತು ಅದಕ್ಕೆ ಮೇಲ್ಪಟ್ಟವರು) 2031ರ ವೇಳೆಗೆ 194 ದಶಲಕ್ಷ ತಲುಪುವ ನಿರೀಕ್ಷೆಯಿದೆ.  ವರ್ಟಿಗೊ ಅಪಾಯಕಾರಿ ಅಲ್ಲದಿದ್ದರೂ, ಇದ್ದಕ್ಕಿದ್ದಂತೆ ಏರ್ಪಡುವ ಆಘಾತ ಬೆಚ್ಚಿಬೀಳಿಸುವಂತಿರುತ್ತದೆ ಮತ್ತು ಬೀಳುವಿಕೆ ಮತ್ತು ಫ್ರಾಕ್ಚ್‌ಗಳನ್ನು ಏರ್ಪಡಿಸುವ ಮೂಲಕ ಅವರ ಜೀವನ ಗುಣಮಟ್ಟದ ಮೇಲೆ ಪ್ರಭಾವ ಬೀರುತ್ತದೆ. ಬೀಳುವ ಭಯವು, ಆತಂಕ ಮತ್ತು ಖಿನ್ನತೆ ಮಾತ್ರವಲ್ಲದೆ ಪ್ಯಾನಿಕ್ ಅಟಾಕ್ಸ್‌ನಂತಹ ಮಾನಸಿಕ ಸಮಸ್ಯೆಗಳನ್ನೂ ಹೆಚ್ಚಿಸಿ ಅವರ ಕ್ಷೇಮಾಭಿವೃದ್ಧಿಯನ್ನು ಬಾಧಿಸುತ್ತದೆ. ಇದರಿಂದ ವಯಸ್ಸಾದವರು ತಪ್ಪಿಸಿಕೊಳ್ಳಲು ಕಠಿಣವಾದ ಅಥವಾ ನೆರವು ಇಲ್ಲದಂತಹ ಪರಿಸ್ಥಿತಿಗಳಲ್ಲಿ ಇರಬೇಕಾದುದರ ಬಗ್ಗೆ ಭಯ ಬೆಳೆಸಿಕೊಳ್ಳುವರು. 

ಆರೋಗ್ಯವಾಗಿರಬೇಕೇ? ಹಾಗಿದ್ರೆ ಈ 10 ಟೆಸ್ಟ್ ಗಳನ್ನು ನೀವು ಮಾಡಿಸಲೇಬೇಕು

ಹೆಚ್ಚುವರಿಯಾಗಿ, ವರ್ಟಿಗೊ ಮಹಿಳೆಯರಲ್ಲಿ (Woman) ಹೆಚ್ಚು ಸಾಮಾನ್ಯವಾಗಿದೆ ಮತ್ತು ಪುರುಷರಿಗೆ ಹೋಲಿಸಿದರೆ ಅವರು ವರ್ಟಿಗೊದಿಂದ ಬಳಲುವ ಸಾಧ್ಯತೆ ಎರಡರಿಂದ ಮೂರು ಪಟ್ಟು ಹೆಚ್ಚಾಗಿರುತ್ತದೆ.  ಇದಕ್ಕೆ ಕಾರಣ ಅಸ್ಪಷ್ಟವಾಗಿದ್ದರೂ, ಹಾರ್ಮೋನುಗಳ ಪ್ರಭಾವದಿಂದ ಇದು ಏರ್ಪಡಬಹುದು ಎಂದು ತಜ್ಞರು (Experts) ಸೂಚಿಸುತ್ತಾರೆ. ಒಬ್ಬ ಮಹಿಳೆಯ ಜೀವನದ ವಿವಿಧ ಹಂತಗಳಾದ್ಯಂತ ಹೆಚ್ಚಿದ ಹಾರ್ಮೋನುಗಳ ಏರುಪೇರಿನಿಂದಾಗಿ ವರ್ಟಿಗೊ ಏರ್ಪಡಬಹುದು. ಉದಾಹರಣೆಗೆ, ಕೆಲವು ಮಹಿಳೆಯರು, ತಮ್ಮ ಮಾಸಿಕ ಋತುಚಕ್ರಕ್ಕೆ ಮುನ್ನ ಹೆಚ್ಚಿನ ವರ್ಟಿಗೊ ರೀತಿಯ ಅನುಭವಗಳನ್ನು ವರದಿ ಮಾಡಿದ್ದರು. ಋತುಬಂಧ ಪರಿವರ್ತನೆಯ ಸಮಯದಲ್ಲಿ ಮಹಿಳೆಯರು ಈ ಹಾರ್ಮೋನುಗಳ ಏರುಪೇರಿನಿಂದಾಗಿ ಮೈಗ್ರೇನ್ ಕೂಡ ಅನುಭವಿಸಬಹುದು. ವರ್ಟಿಗೊಗೂ ಮೈಗ್ರೇನ್‌ಗೂ ಇರುವ ಸಂಬಂಧವನ್ನು ಪರಿಗಣಿಸಿದಾಗ, ವರ್ಟಿಗೊ ಮಹಿಳೆಯರನ್ನು ಏಕೆ ಹೆಚ್ಚು ಬಾಧಿಸುತ್ತದೆ ಎಂಬುದಕ್ಕೆ ವಿವರಣೆ ಸಿಗಬಹುದು. 

Latest Videos
Follow Us:
Download App:
  • android
  • ios