Asianet Suvarna News Asianet Suvarna News

ಮಳೆಯಲ್ಲಿ ಕರಿದ ತಿಂಡಿ ತಿನ್ನೋ ಮಜಾನೇ ಬೇರೆ, ಒಳ್ಳೇದಲ್ಲ ಆರೋಗ್ಯಕ್ಕೆ!

ಮಳೆಯಲ್ಲಿ ಕರಿದು ತಿಂಡಿಗಳನ್ನು ತಿನ್ನುವ ಮಜಾನೇ ಬೇರೆ. ಹೊರಗಡೆ ಮಳೆ, ಒಳಗಡೆ ಬೋಂಡಾ ಮಾಡಿಕೊಂಡು ತಿನ್ನುತ್ತಿದ್ದರೆ ಸ್ವರ್ಗಕ್ಕೆ ಮೂರೇ ಗೇಣು. ಆದರೆ, ಇದು ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತೆ ಅಂತೇನಾದರೂ ಯೋಚಿಸಿದ್ದೀರಾ?

Monsoon Infection Here are the best Food you must Eat
Author
Bangalore, First Published Jul 3, 2022, 5:32 PM IST

ಮಳೆಗಾಲದ(Monsoon) ಜಿಟಿಜಿಟಿ ಮಳೆಗೆ ಬಿಸಿ ಬಿಸಿಯಾದ ಎಣ್ಣೆಯಲ್ಲಿ(Oily Food) ಕರೆದ ಗರಿಗರಿ ಖಾರವಾದ(Spicy) ಬೋಂಡಾ, ಪಕೋಡಾ(Pakoda) ಹೀಗೆ ನಾನಾ ರೀತಿಯ ತಿನಿಸುಗಳನ್ನು ಸೇವಿಸಬೇಕು ಎಂದು ನಾಲಿಗೆ ಬಯಸುತ್ತೆ. ಆದರೆ ಈ ಮಳೆಗಾಲದಲ್ಲಿ ಎಣ್ಣೆ ಭರಿತ ಪದಾರ್ಥಗಳನ್ನು ಸೇವಿಸುವುದು ಎಷ್ಟು ಸೇಫ್? ಆರೋಗ್ಯದ ಮೇಲೆ ಏನೆಲ್ಲಾ ಪರಿಣಾಮ ಬೀರುತ್ತೆ ಗೊತ್ತೆ? ಈ ಬಗ್ಗೆ ಇಲ್ಲಿದೆ ಮಾಹಿತಿ.

ಹೆಚ್ಚಿನ ಕ್ಯಾಲೋರಿ ಇರುವ ಪದಾರ್ಥಗಳನ್ನು ತಿನ್ನುವುದರಿಂದ ಆಸಿಡಿಟಿ(Acidity), ಉಬ್ಬುವುದು(Bloating) ಮತ್ತು ಜೀರ್ಣಕ್ರಿಯೆ ಸಮಸ್ಯೆಗಳಿಗೆ(Digestion Problem) ಕಾರಣವಾಗಬಹುದು. ಇದು ತೂಕ ಇಳಿಸಲು(Weight Loss) ಅಡ್ಡಿಪಡಿಸುತ್ತದೆ. ಆದರೆ ರೋಗನಿರೋಧಕ ಶಕ್ತಿಯನ್ನು(Immunity Power) ಹೆಚ್ಚಿಸುವ ಮತ್ತು ಸೋಂಕಿನಿAದ(Disease) ತಡೆಯುವ ಆರೋಗ್ಯಕರ ಪರ್ಯಾಯಗಳೊಂದಿಗೆ ಅವುಗಳನ್ನು ಬದಲಾಯಿಸಲು ಸಾಧ್ಯವಿದೆ.

ಪ್ರತೀ ದಿನ ಸಕ್ಕರೆ(Sugar) ಹೆಚ್ಚಿರುವ ಟೀಯನ್ನು(Tea) ಕುಡಿಯುವ ಬದಲು ಅದಕ್ಕೆ ಪರ್ಯಾಯವಾಗಿ ನಿಂಬೆಹುಲ್ಲಿನ(Lemongrass) ಟೀಯನ್ನು ಕುಡಿಯುವುದು ಒಳ್ಳೆಯದು. ಕರಿದ ಚಿಪ್ಸ್(Chips), ಸಮೋಸಾದಂತಹ(Samosa) ಸ್ಟಫ್ಡ್ ಸ್ನಾö್ಯಕ್ಸ್ಗಳನ್ನು ಸೇವಿಸುವ ಬದಲು ಒಂದು ಬೌಲ್ ಪಾಪ್‌ಕಾರ್ನ್(Popcorn) ಸೇವಿಸುವುದು ಒಳ್ಳೆಯದು. ಹೀಗೆ ಮಾಡಿದಲ್ಲಿ ಮಳೆಗಾಲದಲ್ಲಿ ಆರೋಗ್ಯವನ್ನು ಕಾಯ್ದುಕೊಳ್ಳಬಹುದು. ಹಾಗಾದರೆ ಈ ಸಮಯದಲ್ಲಿ ಎಣ್ಣೆ ಪದಾರ್ಥಗಳ ಬದಲು ಯಾವೆಲ್ಲಾ ಪದಾರ್ಥ, ಹಣ್ಣುಗಳನ್ನು ಸೇವಿಸಬಹುದು. ಈ ಬಗ್ಗೆ ಇಲ್ಲಿದೆ ಮಾಹಿತಿ.

ದೇಹಕ್ಕೆ ವಿಟಮಿನ್ ಡಿ ಬೇಕು, ಅತಿಯಾದರೆ ವಿಷವಾಗುತ್ತೆ!

ಮಳೆಗಾಲದಲ್ಲಿ ಸೇವಿಸಬಹುದಾದ ಆರೋಗ್ಯಕ್ಕೂ ಉತ್ತಮವಾದ ಪದಾರ್ಥಗಳು ಇಲ್ಲಿವೆ. ಇವು ನಾಲಿಗೆಗೆ ರುಚಿ ನೀಡುವುದಲ್ಲದೆ(Taste buds), ಮಳೆ ಬರುವಾಗ ಆನಂದಿಸಲೂ(Enjoy) ಬಹುದು. ಈ ಬಗ್ಗೆ ಮಾಹಿತಿ ಇಲ್ಲಿದೆ. 

1. ಪಾಪ್‌ಕಾರ್ನ್
ಪಾಪ್‌ಕಾರ್ನ್(Popcorn) ಎಂದಾಕ್ಷಣ ಎಲ್ಲರೂ ಅಮೇರಿಕನ್ ಕಾರ್ನ್(American Corn) ಬಗ್ಗೆ ಯೋಚಿಸುವುದು ಸಾಮಾನ್ಯ. ಆದರೆ ಇಲ್ಲಿ ಹೇಳುತ್ತಿರುವ ಪಾಪ್‌ಕಾರ್ನ್ ಸ್ಥಳೀಯ ಕಾರ್ನ್(Local Corn) ಬಗ್ಗೆ. ಅಂದರೆ ಸ್ಥಳೀಯವಾಗಿ ಸಿಗುವ ಮೆಕ್ಕೆಜೋಳದ ಬಗ್ಗೆ. ಇದನ್ನು ಬೆಣ್ಣೆ(Butter) ಹಾಗೂ ಕಪ್ಪು ಉಪ್ಪಿನಲ್ಲಿ(Black Salt) ಹುರಿದು ಸೇವಿಸುವುದು ಒಳ್ಳೆಯದು. ಇದು ಜೀವನ ಪರ್ಯಂತವಿರುವ ರೋಗಗಳಿಂದ ರಕ್ಷಿಸುತ್ತದೆ. ಅಂದರೆ ಈ ಪಾಪ್‌ಕಾರ್ನ ಸೇವನೆಯಿಂದ ಹಾರ್ಟ್ ಅಟ್ಯಾಕ್(Heart Attack) ಆಗುವುದು ನಿಯಂತ್ರಿಸುವುದಲ್ಲದೆ, ಡಯಾಬಿಟೀಸ್(Diabetes), ರಕ್ತದೊತ್ತಡ(Blood Pressure) ಹೆಚ್ಚುವುದನ್ನು ತಡೆಯುತ್ತದೆ. ಇದರಲ್ಲಿ ಫೆನೊಲಿಕ್ ಆಸಿಡ್(Phenolic acid) ಎಂಬ ಆಂಟಿಆಕ್ಸಿಡೆAಟ್(Antioxidant) ಅಂಶವು ಹೇರಳವಾಗಿದೆ. 

2. ನೇರಳೆ
ಮಳೆಗಾಲದಲ್ಲಿ ಮಾತ್ರ ಸಿಗುವ ಈ ನೇರಳೆಹಣ್ಣು(Jamun) ಆರೋಗ್ಯದ ದೃಷ್ಟಿಯಿಂದ ಬಹಳ ಉಪಕಾರಿ. ಆಯುರ್ವೇದದಲ್ಲೂ(Ayurveda) ಇದಕ್ಕೆ ಮಹತ್ವದ ಸ್ಥಾನ ಇದೆ. ಇದನ್ನು ಸೇವಿಸುವುದರಿಂದ ಹೃದಯ ಸಂಬAಧಿ(Heart Disease) ಕಾಯಿಲೆಗಳು, ಅಸ್ತಮಾ(Asthma), ಹೊಟ್ಟೆ ನೋವು(Stomach Pain), ಅತಿಸಾರ, ವಾಯು, ಕರುಳಿನ ಸಮಸ್ಯೆಯನ್ನು ನಿಯಂತ್ರಿಸುತ್ತದೆ. ಮೂತ್ರವರ್ಧಕ ಪರಿಣಾಮವು ಮೂತ್ರಪಿಂಡಗಳಿAದ(Kidney) ವಿಷವನ್ನು(Toxins) ಹೊರಹಾಕುತ್ತದೆ. ಇದರಲ್ಲಿನ ಹೆಚ್ಚಿನ ಪ್ರಮಾಣದ ಫೈಬರ್(Fiber) ಅಂಶವು ಜೀರ್ಣಕ್ರಿಯೆಗೆ(Digestion) ಸಹಾಯ ಮಾಡುತ್ತದೆ. 

ಹಣ್ಣು - ತರಕಾರಿ ಸಿಪ್ಪೆ ಬಿಸಾಕ್ತೀರ? ಹಣ್ಣಿಗಿಂತ ಹೆಚ್ಚ ಒಳ್ಳೇದು ಅದರ ಸಿಪ್ಪೆ

3. ಆಮ್ಲಾ ಮುರಬ್ಬಾ
ಮಳೆಗಾಲದಲ್ಲಿ ನೆಲ್ಲಿಕಾಯಿ(Amla) ಸೇವನೆಯು ಆರೋಗ್ಯಕ್ಕೆ ಬಹಳ ಉಪಕಾರಿಯಾಗಿದೆ. ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ರೋಗಗಳ(Monsoon Disease) ವಿರುದ್ಧ ಹೋರಾಡಲು ದೇಹದಲ್ಲಿ ರೋಗ ನಿರೋಧಕ ಶಕ್ತಿ(Immunity Power) ಹೆಚ್ಚುತ್ತದೆ. ಅಲ್ಲದೆ ಭಾರತದಲ್ಲಿ ಸಿಗುವ ನೆಲ್ಲಿಕಾಯಿಯನ್ನು ಸೇವಿಸಿದರೆ ಹೊಟ್ಟೆ ನೋವಿನ ಸಮಸ್ಯೆಗಳೂ(Stomach Pain) ಗುಣವಾಗುತ್ತದೆ. ಇದರಲ್ಲಿ ಆಂಟಿಆಕ್ಸಿಡೆAಟ್(Antioxidants) ಅಂಶ ಹೇರಳವಾಗಿದ್ದು, ಪ್ರತೀ ದಿನ ಸೇವಿಸದರೆ ದಿನವಿಡೀ ಚೈತನ್ಯಭರಿತರಾಗಿ ಹಾಗೂ ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ.

4. ಮಜ್ಜಿಗೆ ಹುಲ್ಲು
ಮಜ್ಜಿಗೆ ಹುಲ್ಲು ಆಯುರ್ವೇದದಲ್ಲಿ ಇದಕ್ಕೆ ಮಹತ್ವದ ಸ್ಥಾನ ಇದೆ. ಇದಕ್ಕೆ ಇಂಗ್ಲಿಷ್‌ನಲ್ಲಿ ಲೆಮನ್ ಗ್ರಾಸ್(Lemongrass) ಎಂದು ಕರೆಯುತ್ತಾರೆ. ಮಜ್ಜಿಗೆ ಹುಲ್ಲಿನ ಟೀ ಸೇವಿಸುವುದರಿಂದ ನಿಮಿಷಾರ್ಧದಲ್ಲಿ ನಮ್ಮಲ್ಲಿನ ಆತಂಕ(Anxiety) ಕಡಿಮೆ ಮಾಡುತ್ತದೆ. ಇದನ್ನು ಸೇವಿಸುವುದರಿಂದ ಮನಸ್ಸಿಗೆ ಶಾಂತಿ(Calm) ಸಿಗುತ್ತದೆ. ಮಳೆಗಾಲದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಇನ್ಫೆಕ್ಷನ್‌ಗಳಿಗೆ(Infection) ಇದು ರಾಮಬಾಣವಾಗಿದೆ. ಎಣ್ಣೆ ಪದಾರ್ಥಗಳು, ಪಕೋಡಾ ತಿಂದಾಗ ಸಾಮಾನ್ಯವಾಗಿ ಹೊಟ್ಟೆ ಉಬ್ಬುವ ಸಮಸ್ಯೆ(Bloating) ಕಾಣಿಸಿಕೊಳ್ಳುತ್ತದೆ. ಈ ಸಮಯದಲ್ಲಿ ಮಜ್ಜಿಗೆ ಹುಲ್ಲಿನ ಟೀ ಸೇವಿಸಿದರೆ 5 ನಿಮಿಷದಲ್ಲಿ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲದೆ ಹಲವು ಔಷಧೀಯ ಗುಣಗಳು ಇದರಲ್ಲಿದೆ.

 

Monsoon Infection Here are the best Food you must Eat

 

Follow Us:
Download App:
  • android
  • ios