ಆತ ಖರೀದಿಸೋಕೆ ಹೋಗಿದ್ದು ಬಿಯರ್‌ (Beer). ಆದ್ರೆ ಬಾರ್‌ನಲ್ಲಿದ್ದೋನು ಕೊಟ್ಟಿದ್ದು ಬಿಯರ್ ಬದ್ಲು ಕೆಮಿಕಲ್ ಬಾಟಲಿ(Chemical Bottle). ಬಾರ್‌ ಕಡೆಯಿಂದ ಆಗಿದ್ದು ದೊಡ್ಡ ಪ್ರಮಾದನೇ. ಹೀಗಾಗಿ ಬಿಯರ್ ಕುಡಿದವನಿಗೆ ಮದ್ಯದಂಗಡಿ ಕೊಟ್ಟಿರೋ ಪರಿಹಾರವೆಷ್ಟು ಗೊತ್ತಾ 

ಎಲ್ರಿಗೂ ಒಂದೊಂದ್ಸಾರಿ ಹೀಗೆ ಆಗುತ್ತೆ. ಯಾವ್ದೋ ವಸ್ತು ಇನ್ಯಾವುದೋ ವಸ್ತುವಿನ ಜೊತೆ ಎಕ್ಸ್‌ಚೇಂಜ್‌ ಆಗಿಬಿಡುತ್ತೆ. ಅಥವಾ ಅದು ಅಂದ್ಕೊಂಡು ಇನ್ಯಾವುದನ್ನೋ ಕೊಟ್ಟಿರ್ತೀವಿ. ಆದ್ರೆ ಸಣ್ಣಪುಟ್ಟ ಪು ಸ್ತಕಗಳು ಹೀಗಾದ್ರೆ ಸರಿ. ಆದ್ರೆ ಅಪಾಯಕಾರಿ ವಸ್ತುಗಳು ಬದಲಿಗೆ ಸಿಕ್ಕಿಬಿಟ್ರೆ ಏನು ಗತಿ. ಇಲ್ಲಾಗಿರೋದು ಹಾಗೇನೆ. ಅಷ್ಟೇ ಅಲ್ಲ ಇಲ್ಲಿ ಎಕ್ಸ್‌ಚೇಂಜ್ ಆಗಿರೋದು ಬಿಯರ್ ಬಾಟಲಿ ಬದಲಿಗೆ ಕೆಮಿಕಲ್ ಬಾಟಲಿ. ದುಡ್ಡು ವೇಸ್ಟಾಯ್ತು ಅನ್ನೋದಕ್ಕಿಂತ ಆರೋಗ್ಯಕ್ಕೆ ಏನಾಯ್ತು ಅಂತಾನೆ ಗಾಬರಿಯಾಗ್ಬೋದು. 

ಕ್ಯಾಸಿನೊ ಬಾರ್‌ (Bar)ನಲ್ಲಿ ಗ್ರಾಹಕರ ಕಾಸ್ಟ್ಲೀ ಬಿಯರ್ (Beer) ಆರ್ಡರ್ ಮಾಡಿದ್ದ. ಆದರೆ ಬಾರ್‌ನಲ್ಲಿದ್ದಾತ ಬಿಯರ್ ಕೊಡುವ ಬದಲಿಗೆ ದ್ರಾವಕಗಳನ್ನು ಸ್ವಚ್ಛಗೊಳಿಸುವ ರಾಸಾಯನಿಕ ನೀಡಿ ಎಡವಟ್ಟು ಮಾಡ್ಕೊಂಡಿದ್ದಾನೆ. ಗ್ರಾಹಕನ ಆರೋಗ್ಯ (Health) ಹದೆಗೆಟ್ಟಿರುವುದರ ಬಗ್ಗೆ ತಿಳಿದ ನಂತರ ಮೊಕದ್ದಮೆ ಹೂಡಿದ ಮಧ್ಯಮ ಶಾಲಾ ವಿಶೇಷ ಶಿಕ್ಷಣ ಶಿಕ್ಷಕರಿಗೆ ಲಾಸ್ ವೇಗಾಸ್‌ನ ತೀರ್ಪುಗಾರರು 61 ಕೋಟಿ ರೂ. ಪರಿಹಾರ (Compensation)ವನ್ನು ನೀಡುವಂತೆ ಹೇಳಿದರು.

ದಿನಕ್ಕೆರಡು ಬಿಯರ್ ಕುಡಿಯೋದು ಮೆದುಳಿಗೆಷ್ಟು ಡೇಂಜರ್ ಗೊತ್ತಾ ?

38ರ ಹರೆಯದ ಲಾನ್ ಎನ್‌ರೈಟ್ ಅವರು ಲಾಸ್ ವೇಗಾಸ್ ಸ್ಟ್ರಿಪ್ ರೆಸ್ಟೋರೆಂಟ್‌ಗಳಲ್ಲಿ ವೈನ್ ಸ್ಟೀವರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಹೆಂಡರ್ಸನ್‌ನಲ್ಲಿರುವ ಬಾರ್ಲಿಯ ಕ್ಯಾಸಿನೊ ಮತ್ತು ಬ್ರೂಯಿಂಗ್ ಕಂನಲ್ಲಿ ಡಿಸೆಂಬರ್ 2018ರಲ್ಲಿ ನಡೆದ ಅನಾಹುತದಿಂದಾಗಿ ಅವರು ರುಚಿಯ ಪ್ರಜ್ಞೆಯನ್ನು ಕಳೆದುಕೊಂಡರು ಎಂದು ಅವರ ವಕೀಲ ಆಂಡ್ರೆ ಲಾಗೊಮಾರ್ಸಿನೊ ಹೇಳಿದ್ದಾರೆ. ಪಿಎಚ್‌ಡಿ ಮಾಡಿರುವ ಎನ್‌ರೈಟ್ ಅವರು, ಬಾಸ್ಕೆಟ್‌ಬಾಲ್ ಕಲಿಸಲು ಮತ್ತು ತರಬೇತಿ ನೀಡುವುದನ್ನು ಮುಂದುವರೆಸಿದ್ದಾರೆ,. ಆದರೆ ಬಿಯರ್ ಬದಲು ರಾಸಾಯನಿಕ ಸೇವಿಸಿದ ಕಾರಣ ಹೊಟ್ಟೆ ಮತ್ತು ಅನ್ನನಾಳದ ಹುಣ್ಣುಗಳನ್ನು ಹೊಂದಿದ್ದಾರೆ. ಇದರಿಂದಾಗಿ ಅವರಲ್ಲಿ ಕ್ಯಾನ್ಸರ್ ಅಪಾಯವೂ ಹೆಚ್ಚಿದೆ ಎಂದು ಲಾಗೊಮಾರ್ಸಿನೊ ಹೇಳಿದರು. 

ವಕೀಲರು ತಮ್ಮ ಕ್ಲೈಂಟ್‌ನ ಆರೋಗ್ಯಕ್ಕಾಗಿ ಹಾಗೂ ಪರಿಹಾರವಾಗಿ ಮೊತ್ತವನ್ನು ಕೇಳಿದ್ದಾರೆ. ಬಾರ್ಲಿಯ ಕಾರ್ಪೊರೇಟ್ ಪೋಷಕ ಸ್ಟೇಷನ್ ಕ್ಯಾಸಿನೊಗಳ ವಕ್ತಾರರು ಮಾರ್ಚ್ 18 ರಂದು ಕ್ಲಾರ್ಕ್ ಕೌಂಟಿ ಜಿಲ್ಲಾ ನ್ಯಾಯಾಲಯದಲ್ಲಿ ತಲುಪಿದ ತೀರ್ಪಿನ ಕುರಿತು ಸಂದೇಶಗಳಿಗೆ ತಕ್ಷಣ ಪ್ರತಿಕ್ರಿಯಿಸಲಿಲ್ಲ. ರಾಹುಲ್ ರವಿಪುಡಿ ಸೇರಿದಂತೆ ಎನ್‌ರೈಟ್‌ನ ವಕೀಲರು ಈ ಕುರಿತು ಹೊಣೆಗಾರಿಕೆಯನ್ನು ಒಪ್ಪಿಕೊಂಡರು. 

ಎನ್‌ರೈಟ್‌ನ ನಿರ್ಲಕ್ಷ್ಯದ ಮೊಕದ್ದಮೆಯು ಟ್ಯಾಪ್‌ನಲ್ಲಿ ಹನಿ ಬ್ಲಾಂಡ್ ಏಲ್‌ನ ಮಾದರಿಯನ್ನು ಕೇಳಿದಾಗ ಮತ್ತು ಬಿಯರ್ ಟ್ಯಾಪ್‌ಗಳು ಮತ್ತು ಲೈನ್‌ಗಳನ್ನು ಸ್ವಚ್ಛಗೊಳಿಸಲು ಸಾಮಾನ್ಯವಾಗಿ ಬಳಸುವ ಕಾಸ್ಟಿಕ್ ರಾಸಾಯನಿಕಗಳನ್ನು ನೀಡಿದ ನಂತರ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ಸೆಳೆತವನ್ನು ಅನುಭವಿಸಿದರು ಎಂದು ಹೇಳಲಾಗಿದೆ. ಅಂತೂ ಇತ್ತ ಗ್ರಾಹಕನಿಗೂ ಬಹಳಷ್ಟು ಸಮಸ್ಯೆಗಳಾಗಿದ್ದು ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಿದೆ. ಇದನ್ನು ಗಣನೆಗೆ ತೆಗೆದುಕೊಂಡು ಆತನಿಗೆ ದೊಡ್ಡ ಮೊತ್ತದ ಪರಿಹಾರ ನೀಡುವಂತೆ ಕೋರ್ಟ್ ತೀರ್ಪು ನೀಡಿದೆ.

ಬಸ್‌ನಲ್ಲಿ ಬಿಯರ್ ಕುಡಿದು ತೂರಾಡಿದ ಶಾಲಾ ವಿದ್ಯಾರ್ಥಿನಿಯರು

ಇಂಥಹ ಬಹಳಷ್ಟು ಘಟನೆಗಳು ನಡೆಯುತ್ತಿದ್ದು ವಿಮಾನದ ಟಿಕೆಟ್ ಬುಕ್ ಮಾಡಿದರೂ ಕೊನೆಕ್ಷಣದಲ್ಲಿ ಕ್ಯಾನ್ಸಲ್ ಮಾಡಿದ್ದಕ್ಕಾಗಿಯೋ, ಅಥವಾ ಕೇಳಿದ ಸೀಟ್ ನೀಡದೆ ವಂಚಿಸಿದ್ದೋ ಇಂತಹ ಪ್ರಕರಣಗಳಲ್ಲಿ ಕೋಟಿಗಟ್ಟಲೆ ಪರಿಹಾರ ನೀಡಿದ್ದನ್ನು ನಾವು ಕೇಳಿದ್ದೇವೆ. ಸಂಸ್ಥೆಯ ಸಿಬ್ಬಂದಿಯಿಂದ ನಡೆಯುವ ಇಂಥಾ ತಪ್ಪಿನಿಂ ಮಾಲೀಕರು ಕೋಟಿ ಕೋಟಿ ಕಳೆದುಕೊಳ್ಳಬೇಕಾಗುತ್ತದೆ. ಇದೇ ರೀತಿಯ ಘಟನೆ ಇದಾಗಿದ್ದು ಇಲ್ಲಿ ಮಾತ್ರ ಗ್ರಾಹಕನಿಗೆ ಸಿಕ್ಕಿರೋ ಮೊತ್ತ ಮಾತ್ರ ನೋಡುಗರನ್ನು ನಿಬ್ಬೆರಗಾಗಿಸಿದೆ ಅನ್ನೋದಂತೂ ಸತ್ಯ.