Asianet Suvarna News Asianet Suvarna News

ಟ್ರೆಡ್‌ಮಿಲ್‌ನಲ್ಲಿ ಓಡುತ್ತಿದ್ದ ವ್ಯಕ್ತಿ ಹಾರ್ಟ್‌ಅಟ್ಯಾಕ್‌ನಿಂದ ಸಾವು, ಹೃದಯ ವಿದ್ರಾವಕ ಕ್ಷಣ ಸಿಸಿಟಿವಿಯಲ್ಲಿ ಸೆರೆ

ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದಾಗ ಕುಸಿದು ಬಿದ್ದು ಸಾವನ್ನಪ್ಪುತ್ತಿರುವ ಪ್ರಕರಣಗಳು ಇತ್ತೀಚಿಗೆ ಹೆಚ್ಚಾಗುತ್ತಿವೆ. ನಿನ್ನೆಯೂ ಇಂಥಹದ್ದೇ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. 10 ನಿಮಿಷದ ಹಿಂದಷ್ಟೇ ತಾಯಿಯೊಂದಿಗೆ ಮಾತನಾಡಿದ್ದ ವಿದ್ಯಾರ್ಥಿ, ಟ್ರೆಡ್‌ಮಿಲ್‌ನಲ್ಲಿ ವರ್ಕೌಟ್‌ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಮೃತಪಟ್ಟಿದ್ದಾನೆ.

Man Dies Of Heart Attack While Running On Treadmill At Ghaziabad Gym Vin
Author
First Published Sep 17, 2023, 12:48 PM IST

ಗಾಜಿಯಾಬಾದ್‌: ವ್ಯಾಯಾಮದ ಮೂಲಕ ಫಿಟ್ ಆಗಿರಬೇಕು ಎಂದು ಜಿಮ್‌ಗೆ ಹೋಗುವವರ ಸಂಖ್ಯೆ ಹೆಚ್ಚು. ಹೀಗೆ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದ ವೇಳೆ ಯುವಕನೊಬ್ಬ ಮೃತಪಟ್ಟಿದ್ದಾನೆ. ಗಾಜಿಯಾಬಾದ್‌ನಲ್ಲಿ ಈ ಘಟನೆ ನಡೆದಿದೆ. ಯುವಕ ಟ್ರೆಡ್‌ಮಿಲ್‌ನಲ್ಲಿ ಓಡುತ್ತಿರುವಾಗಲೇ ಕುಸಿದು ಬೀಳುವ ಆಘಾತಕಾರಿ ವೀಡಿಯೊ ಆತಂಕ ಮೂಡಿಸುತ್ತದೆ. ಸರಸ್ವತಿ ವಿಹಾರದಲ್ಲಿ ನಿನ್ನೆ ಈ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಸಿದ್ಧಾರ್ಥ್ ಕುಮಾರ್ ಸಿಂಗ್ ಎಂದು ಗುರುತಿಸಲಾಗಿದೆ. ಅವರು ತಮ್ಮ ವ್ಯಾಯಾಮದ ದಿನಚರಿಯಲ್ಲಿ ಹಠಾತ್ ಮತ್ತು ಮಾರಣಾಂತಿಕ ಹೃದಯಾಘಾತವನ್ನು ಅನುಭವಿಸಿದರು. 

ಈ ಹೃದಯ ವಿದ್ರಾವಕ ಕ್ಷಣವು ಜಿಮ್‌ನಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿದ್ಧಾರ್ಥ್ ಕುಮಾರ್ ಸಿಂಗ್ ಟ್ರೆಡ್‌ಮಿಲ್‌ ಹಠಾತ್ತನೆ ನಿಲ್ಲಿಸುವುದನ್ನು ಮತ್ತು ನಿಧಾನವಾಗಿ ಪ್ರಜ್ಞೆ ಕಳೆದುಕೊಳ್ಳುವುದನ್ನು ತೋರಿಸುತ್ತದೆ. ಸೆಕೆಂಡುಗಳ ನಂತರ, ಅವರು ಯಂತ್ರದ ಮೇಲೆ ಕುಸಿದು ಬೀಳುತ್ತಾರೆ. ಘಟನೆಯ ಸಮಯದಲ್ಲಿ ಇಬ್ಬರು ವ್ಯಕ್ತಿಗಳು ಟ್ರೆಡ್‌ಮಿಲ್‌ನಿಂದ ಕೆಲವು ಅಡಿ ದೂರದಲ್ಲಿ ನಿಂತಿದ್ದು,  ಸಿದ್ಧಾರ್ಥ್ ಕುಮಾರ್ ಸಿಂಗ್  ಬಿದ್ದ ನಂತರ ಅವರನ್ನು ಎತ್ತಿಕೊಳ್ಳಲು ವೇಗವಾಗಿ ಓಡುವುದನ್ನು ವೀಡಿಯೊ ತೋರಿಸುತ್ತದೆ.

ಕೋವಿಡ್‌ ಲಸಿಕೆಯಿಂದ್ಲೇ ಹೆಚ್ಚಾಗ್ತಿದ್ಯಾ ಹೃದಯಾಘಾತ? ಅಧ್ಯಯನ ವರದಿ ಹೇಳಿದ್ದೀಗೆ..

ಘಟನೆ ನಡೆಯೋ 10 ನಿಮಿಷದ ಮೊದಲು ತಾಯಿಯೊಂದಿಗೆ ಮಾತನಾಡಿದ್ದ ಸಿದ್ಧಾರ್ಥ್ ಸಿಂಗ್‌
ಜಿಮ್‌ನಲ್ಲಿ ಕುಸಿದುಬಿದ್ದ ನಂತರ, ಸಿದ್ದಾರ್ಥ್‌ರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ದುರದೃಷ್ಟವಶಾತ್, ಅವರ ಜೀವವನ್ನು ಉಳಿಸಲು ಸಾಧ್ಯವಾಗಲಿಲ್ಲ. ಸಿದ್ಧಾರ್ಥ್‌ ಸಿಂಗ್ ನೋಯ್ಡಾದ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿ ಮತ್ತು ಪೋಷಕರ ಏಕೈಕ ಮಗ. ಅವರು ತಮ್ಮ ತಂದೆಯೊಂದಿಗೆ ನೋಯ್ಡಾದಲ್ಲಿ ವಾಸಿಸುತ್ತಿದ್ದರು, ಅವರ ತಾಯಿ ಬಿಹಾರದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. ಘಟನೆ ನಡೆಯೋ 10 ನಿಮಿಷಗಳ ಮೊದಲು ಸಿಂಗ್ ತನ್ನ ತಾಯಿಯೊಂದಿಗೆ ಮಾತನಾಡಿದ್ದರು. ಮೃತಪಟ್ಟ ವಿಷಯ ತಿಳಿದ ಬಳಿಕ ಸಿದ್ಧಾರ್ಥ್ ಸಿಂಗ್ ತಂದೆ ಮಗನ ಮೃತದೇಹವನ್ನು ಸ್ವಗ್ರಾಮ ಸಿವಾನ್‌ಗೆ ಕೊಂಡೊಯ್ದರು. ಘಟನೆಯ ನಂತರ ಜಿಮ್ ಅನ್ನು ಮುಚ್ಚಲಾಗಿದೆ.

ವ್ಯಾಯಾಮ ಮಾಡುವಾಗಲೇ ವ್ಯಕ್ತಿಯೊಬ್ಬರು ಏಕಾಏಕಿ ಕುಸಿದು ಬಿದ್ದಿರುವ ಇದು ಮೊದಲ ಬಾರಿಯೇನಲ್ಲ. ಇದು ಇತ್ತೀಚಿಗೆ ನಡೆದಿರುವ ಮತ್ತೊಂದು ಪ್ರಕರಣವಾಗಿದೆ. ಕೆಲವು ತಿಂಗಳ ಹಿಂದೆ, ಪ್ರಾಪರ್ಟಿ ಡೀಲರ್ ಕಚೇರಿಯಲ್ಲಿ ಕಾಯುತ್ತಿರುವಾಗ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು. ಇನ್ನೊಬ್ಬರು ಮದುವೆಯಲ್ಲಿ ನೃತ್ಯ ಮಾಡುವಾಗ ಕುಸಿದುಬಿದ್ದು ಮೃತಪಟ್ಟಿದ್ದರು.

ಹೃದಯಾಘಾತದಿಂದ ಪೊಲೀಸ್ ಕಾನ್ಸ್‌ಟೇಬಲ್ ಸಾವು: ಅಯ್ಯೋ ವಿಧಿಯೇ ಇದೆಂಥಾ ಸಾವು!

ವರ್ಕೌಟ್​​​ ಮಾಡುವಾಗ ಹೃದಯಾಘಾತ ಆಗೋದು ಯಾಕೆ?
ಆರೋಗ್ಯ ತಜ್ಞರ ಪ್ರಕಾರ, ತಮ್ಮ ದೇಹವು (Body) ನಿಭಾಯಿಸಬಲ್ಲದಕ್ಕಿಂತ ಹೆಚ್ಚಿನ ವ್ಯಾಯಾಮ ಮಾಡುವ ಜನರು ಪರಿಧಮನಿಯ ಕ್ಯಾಲ್ಸಿಫಿಕೇಶನ್ ಸಮಸ್ಯೆ ಅಭಿವೃದ್ಧಿಪಡಿಸುವ ಸಾಧ್ಯತೆಯಿದೆ ಎಂದು ಅನೇಕ ಅಧ್ಯಯನಗಳು (Study) ಕಂಡುಹಿಡಿದಿದೆ. ವಾರಕ್ಕೆ 450 ನಿಮಿಷಗಳ ಮಧ್ಯಮ ಚಟುವಟಿಕೆಯನ್ನು ಮಾಡುವ ವಯಸ್ಕರು, ಕಡಿಮೆ ವ್ಯಾಯಾಮ ಮಾಡಿದವರಿಗೆ ಹೋಲಿಸಿದರೆ, ಆರೋಗ್ಯ ಸಮಸ್ಯೆ ಅಭಿವೃದ್ಧಿಪಡಿಸುವ ಅಪಾಯವನ್ನು 27 ಪ್ರತಿಶತದಷ್ಟು ಹೊಂದಿರುತ್ತಾರೆ ಎಂದು ತಿಳಿದುಬಂದಿದೆ.

ಹೃದಯಾಘಾತವು ತುಂಬಾ ಆರೋಗ್ಯಕರವಾಗಿರುವ, ಉತ್ತಮ ಆಹಾರಕ್ರಮವನ್ನು ಅನುಸರಿಸುವ ಮತ್ತು ನಿಯಮಿತವಾಗಿ ವ್ಯಾಯಾಮ ಮಾಡುವವರಲ್ಲಿಯೂ ಸಹ ಸಾಮಾನ್ಯವಾಗಿದೆ. ಜಿಮ್‌ನಲ್ಲಿ ಹೆಚ್ಚುವರಿ ಭಾರವನ್ನು (Weight) ಎತ್ತುವುದು ಮತ್ತು ದೇಹವನ್ನು ಒಮ್ಮೆಗೆ ಹೆಚ್ಚಿನ ಒತ್ತಡಕ್ಕೆ ಒಳಪಡಿಸುವುದರಿಂದ ದೇಹದ ಆಮ್ಲಜನಕದ ಬೇಡಿಕೆಯನ್ನು ಹೆಚ್ಚಿಸುತ್ತದೆ. ಈ ಕಾರಣದಿಂದಾಗಿ, ರಕ್ತನಾಳಗಳಲ್ಲಿ ರಕ್ತ ಪೂರೈಕೆಯ ವೇಗವು ಹೆಚ್ಚಾಗುತ್ತದೆ ಮತ್ತು ನಾಳಗಳು ಹಾನಿಗೊಳಗಾಗುವ ಸಾಧ್ಯತೆಯಿದೆ. ಇದು  ಹೃದಯಾಘಾತಕ್ಕೆ ಕಾರಣವಾಗುತ್ತದೆ. ಹಾಗಾಗಿ ಮಿತಿ ಮೀರಿದ ವ್ಯಾಯಾಮ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುತ್ತಾರೆ ವೈದ್ಯರು.

Follow Us:
Download App:
  • android
  • ios