ಹೃದಯಾಘಾತದಿಂದ ಪೊಲೀಸ್ ಕಾನ್ಸ್‌ಟೇಬಲ್ ಸಾವು: ಅಯ್ಯೋ ವಿಧಿಯೇ ಇದೆಂಥಾ ಸಾವು!
ಹೃದಯಾಘಾತದಿಂದ ಪೊಲೀಸ್ ಕಾನ್ಸ್‌ಟೇಬಲ್ ಸಾವನಪ್ಪಿದ ಘಟನೆ ಯಾದಗಿರಿ ನಡೆದಿದೆ. ಗೋಗಿ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ದೇವೀಂದ್ರಪ್ಪ (42) ಮೃತ ದುರ್ಧೈವಿ.
ಯಾದಗಿರಿ (ಆ.24): ಹೃದಯಾಘಾತದಿಂದ ಪೊಲೀಸ್ ಕಾನ್ಸ್‌ಟೇಬಲ್ ಸಾವನಪ್ಪಿದ ಘಟನೆ ಯಾದಗಿರಿ ನಡೆದಿದೆ. ಗೋಗಿ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ದೇವೀಂದ್ರಪ್ಪ (42) ಮೃತ ದುರ್ಧೈವಿ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಪೊಲೀಸ್ ಠಾಣೆಯಲ್ಲಿ ದೇವೇಂದ್ರಪ್ಪ ಕರ್ತವ್ಯ ನಿರ್ವಹಿಸ್ತಿದ್ದ. ದೇವೇಂದ್ರಪ್ಪ ಮೂಲತಃ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಬಿಳ್ಹಾರ ಗ್ರಾಮದವರು. ಆರೋಗ್ಯ ಸಮಸ್ಯೆಯಿಂದ ಜೂನ್ ತಿಂಗಳಿನಿಂದ ದೇವೇಂದ್ರಪ್ಪ ರಜೆ ಮೇಲಿದ್ದರು. ಅಲ್ಲದೇ ಬೆಂಗಳೂರಿನ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನೂ ಪಡೆದಿದ್ದರು. ಆಸ್ಪತ್ರೆಯಲ್ಲಿದ್ದಾಗಲೇ ದೇವೇಂದ್ರಪ್ಪ ಅವರಿಗೆ ಹೃದಯಾಘಾತವಾಗಿ ಸಾವನಪ್ಪಿದ್ದು, ಕಾನ್ಸ್‌ಟೇಬಲ್ ಸಾವಿಗೆ ಯಾದಗಿರಿ ಪೊಲೀಸರು ಸಂತಾಪ ಸೂಚಿಸಿದ್ದಾರೆ.
ದಿಢೀರ್ ಹೃದಯಾಘಾತ, ಆಟೋ ಚಾಲಕ ನಡು ರಸ್ತೆಯಲ್ಲೇ ಸಾವು: ರಸ್ತೆ ಬದಿ ಆಟೋ ನಿಲ್ಲಿಸಿ ಟೀ ಕುಡಿಯಲು ತೆರಳುತ್ತಿದ್ದ ಆಟೋ ಚಾಲಕನಿಗೆ ದಿಢೀರ್ ಹೃದಯಾಘಾತವಾಗಿ ನಡುರಸ್ತೆಯಲ್ಲೇ ಮೃತಪಟ್ಟಿರುವ ಘಟನೆ ಮಂಗಳವಾರ ನಡೆದಿದೆ. ಸಂಪಂಗಿರಾಮನಗರ ನಿವಾಸಿ ತಿಮ್ಮೇಶ್(53) ಮೃತ ಆಟೋ ಚಾಲಕ. ಸಂಪಂಗಿರಾಮನಗರ 4ನೇ ಕ್ರಾಸ್ ಬಳಿ ಬೆಳಗ್ಗೆ 9.30ರ ಸುಮಾರಿಗೆ ಈ ಘಟನೆ ನಡೆದಿದೆ. ಮಂಡ್ಯ ಮೂಲದ ತಿಮ್ಮೇಶ್ ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದು, ಹಲವು ವರ್ಷಗಳಿಂದ ಕುಟುಂಬದೊಂದಿಗೆ ನಗರದಲ್ಲಿ ನೆಲೆಸಿದ್ದರು.
ಎಲೆಕ್ಟ್ರಾನಿಕ್ ಸಿಟಿಗೆ ಮೆಟ್ರೋ ಮತ್ತಷ್ಟು ಕಾಲ ವಿಳಂಬ: ಯಾಕೆ ಗೊತ್ತಾ?
ಎಂದಿನಂತೆ ತಿಮ್ಮೇಶ್ ಬೆಳಗ್ಗೆ ಮನೆಯಿಂದ ಆಟೋ ತೆಗೆದುಕೊಂಡು ಬಾಡಿಗೆ ಹುಡುಕಿ ಹೊರಗೆ ಬಂದಿದ್ದಾರೆ. ಟೀ ಕುಡಿಯಲು ಸಂಪಂಗಿರಾಮನಗರ 4ನೇ ಕ್ರಾಸ್ ಬಳಿ ರಸ್ತೆ ಬಳಿ ಆಟೋ ನಿಲುಗಡೆ ಮಾಡಿ ಕೆಳಗೆ ಇಳಿದ್ದಾರೆ. ಈ ವೇಳೆ ಎದೆನೋವು ಕಾಣಿಸಿಕೊಂಡಿದ್ದು, ಎದೆ ಉಜ್ಜಿಕೊಂಡು ರಸ್ತೆ ದಾಟಲು ನಾಲ್ಕೈದು ಹೆಜ್ಜೆ ಮುಂದೆ ಬಂದಿದ್ದಾರೆ. ಅಷ್ಟರಲ್ಲಿ ನಡು ರಸ್ತೆಯಲ್ಲಿ ಕುಸಿದು ಬಿದ್ದಿದ್ದಾರೆ. ತಕ್ಷಣ ಸ್ಥಳೀಯರು ತಿಮ್ಮೇಶ್ ನೆರವಿಗೆ ಧಾವಿಸಿದ್ದು, ಎದೆ ಉಜ್ಜಿ ನೀರು ಕುಡಿಸಲು ಪ್ರಯತ್ನಿಸಿದ್ದಾರೆ. ಅಷ್ಟರಲ್ಲಿ ತಿಮ್ಮೇಶ್ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ತಿಮ್ಮೇಶ್ ಕುಟುಂಬದವರು ಮೃತದೇಹವನ್ನು ಕೊಂಡೊಯ್ದಿದ್ದಾರೆ. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಸಂಪಂಗಿರಾಮನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹೃದಯಾಘಾತಕ್ಕೆ ವ್ಯಕ್ತಿ ಬಲಿ: ಅಪಘಾತದಲ್ಲಿ ಆತ್ಮೀಯ ಸ್ನೇಹಿತ ಮೃತಪಟ್ಟಸುದ್ದಿ ತಿಳಿದು ವ್ಯಕ್ತಿ ಹೃದಯಾಘಾತಕ್ಕೆ ಬಲಿಯಾದ ಘಟನೆ ತಾಲೂಕಿನ ಪುನೇದಹಳ್ಳಿ ಗ್ರಾಮದಲ್ಲಿ ಶನಿವಾರ ರಾತ್ರಿ ಸಂಭವಿಸಿದೆ. ಆನಂದ್ (30) ಅಪಘಾತದಲ್ಲಿ ಮೃತಪಟ್ಟವ್ಯಕ್ತಿ. ಈ ವಿಚಾರ ತಿಳಿದು ಸ್ನೇಹಿತ ಸಾಗರ್ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಆನಂದ್ ಮತ್ತು ಯುವರಾಜ್ ಸ್ನೇಹಿತನ ಹುಟ್ಟುಹಬ್ಬದ ಕೇಕ್ ತೆಗೆದುಕೊಂಡು ಬೈಕಿನಲ್ಲಿ ಶಿಕಾರಿಪುರದಿಂದ ಪುನೇದಹಳ್ಳಿಗೆ ಹೊರಟಿದ್ದರು. ಪುನೇದಹಳ್ಳಿಯಲ್ಲಿ ಬಳಿಯ ಕೆಎಸ್‌ಆರ್‌ಟಿಸಿ ಬಸ್ ಡಿಪೋ ಬಳಿ ಶಿಕಾರಿಪುರ ಕಡೆ ಹೋಗುತ್ತಿದ್ದ ಜಾವೇದ್ (30) ಎನ್ನುವವರ ಬೈಕ್ ಡಿಕ್ಕಿ ಹೊಡೆದಿದೆ.
ರಿಯಲ್ ಎಸ್ಟೇಟ್ ಉದ್ಯಮಿ ಕೊಲೆ ಯತ್ನ: ಕುಖ್ಯಾತ ರೌಡಿಗಳ ವಿರುದ್ಧ ಎಫ್ಐಆರ್
ಘಟನೆಯಲ್ಲಿ ಜಾವೇದ್ (30) ಮಂಡಿ ಚಿಪ್ಪು ಕಿತ್ತುಬಂದಿದ್ದರೆ, ಮೊಹಮ್ಮದ್ ಮಲ್ಲಿಕ್ (19) ಎಂಬಾತ ಸಹ ಗಾಯಗೊಂಡಿದ್ದಾರೆ. ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿಸಲಾಗಿದೆ. ತಲೆ ಮತ್ತು ದವಡೆ ಭಾಗದಲ್ಲಿ ಹೊಡೆತ ಬಿದ್ದಿರುವ ಯುವರಾಜ್ ಮತ್ತು ಜಾವೀದ್ (30) ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ದುರಂತವೆಂದರೆ, ಈ ಘಟನೆಯಲ್ಲಿ ಆನಂದ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಈ ವಿಷಯ ತಿಳಿದ ಪುನೇದಹಳ್ಳಿಯ ಸಾಗರ್‌ಗೆ ಹೃದಯಘಾತ ಉಂಟಾಗಿ, ಅವರು ಸಹ ಮೃತಪಟ್ಟಿದ್ದಾರೆ. ಶಿಕಾರಿಪುರದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.