Asianet Suvarna News Asianet Suvarna News

ಬ್ರಾ ಹರಿದಿಲ್ಲ ಅಂತ ಬಳಸ್ತಾನೇ ಇದ್ರೆ? ಬರೀ ಸೌಂದರ್ಯಕ್ಕಲ್ಲ, ನಿಮ್ಮ ವಿಶ್ವಾಸಕ್ಕೇ ಕುತ್ತು!

ಡ್ರೆಸ್ ಬಗ್ಗೆ ಹೆಚ್ಚು ಆಸಕ್ತಿ ತೋರಿಸುವ ಕೆಲವರು ಒಳ ಉಡುಪನ್ನು ನಿರ್ಲಕ್ಷ್ಯ ಮಾಡ್ತಾರೆ. ಅದು ಯಾರಿಗೂ ಕಾಣಲ್ಲ ಎನ್ನುವ ಕಾರಣಕ್ಕೆ ಹರಿದ, ಹಳೆಯ ಒಳ ಉಡುಪು ಧರಿಸ್ತಾರೆ. ಬ್ರಾ ವಿಷ್ಯದಲ್ಲೂ ನೀವು ಹೀಗೆ ಮಾಡ್ತಿದ್ದರೆ ಸ್ವಲ್ಪ ಎಚ್ಚೆತ್ತುಕೊಳ್ಳಿ. 
 

Side Effects Of Using Old Brasiers inneware hygine and health tips for women roo
Author
First Published Oct 31, 2023, 3:09 PM IST

ಬಟ್ಟೆಗಳು ಶುಭ್ರವಾಗಿದ್ದರೆ ನಮ್ಮ ಆರೋಗ್ಯವೂ ಚೆನ್ನಾಗಿರುತ್ತೆ. ಹಳೆಯ ಹಾಗೂ ಕೊಳಕಾದ ಬಟ್ಟೆಗಳನ್ನು ಧರಿಸುವುದರಿಂದಲೇ ಅನೇಕ ಆರೋಗ್ಯ ಸಮಸ್ಯೆಗಳು ಮತ್ತು ಚರ್ಮಕ್ಕೆ ಸಂಬಂಧಿಸಿದ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಅದರಲ್ಲೂ ಒಳ ಉಡುಪುಗಳ ವಿಷಯದಲ್ಲಂತೂ ರಾಜಿ ಮಾಡಿಕೊಳ್ಳಲೇಬಾರದು. ಹಳೆಯದಾದ ಒಳ ಉಡುಪುಗಳನ್ನು ಧರಿಸುವುದರಿಂದ ನಮ್ಮ ಆರೋಗ್ಯ ಹಾಳಾಗುತ್ತದೆ.

ಈಗ ಬಹುತೇಕ ಎಲ್ಲ ಹೆಣ್ಣುಮಕ್ಕಳು ಹಾಗೂ ಮಹಿಳೆಯರು ಬ್ರಾ (Bra) ಧರಿಸುತ್ತಾರೆ. ಇದು ಮಹಿಳೆಯರ ಅವಶ್ಯಕತೆಗಳಲ್ಲಿ ಒಂದಾಗಿದೆ. ಕೆಲವು ಮಂದಿ ಬ್ರಾವನ್ನು ಆಗಾಗ ಬದಲಾಯಿಸುವುದೇ ಇಲ್ಲ. ಅದೇನು ಹಾಳಾಗಿಲ್ಲ, ಹರಿದಿಲ್ಲ ಎನ್ನುವ ಕಾರಣಕ್ಕೆ ಅದನ್ನು ವರ್ಷಗಟ್ಟಲೆ ಬಳಕೆ ಮಾಡುತ್ತಾರೆ. ಇದರಿಂದ ಅನೇಕ ಸಮಸ್ಯೆಗಳು ಎದುರಾಗುತ್ತವೆ. ನಾವು ಬಳಕೆ ಮಾಡುವ ಎಲ್ಲ ವಸ್ತುಗಳಂತೆಯೇ ಬ್ರಾ ಗೆ ಕೂಡ ಎಕ್ಸಪೈರಿ (Expiry) ಡೇಟ್ ಇರುತ್ತದೆ. ಆ ಅವಧಿ ಮುಗಿದ ನಂತರ ಅದನ್ನು ಬಳಸುವುದು ಒಳ್ಳೆಯದಲ್ಲ.

ಮಹಿಳೆಯರನ್ನೂ ಕಾಡುತ್ತೆ ಸೆಕ್ಸುವಲ್ ಡಿಸ್ಫಂಕ್ಷನ್….ಪತ್ತೆ ಮಾಡೋದು ಹೀಗೆ?

ಹಳೆಯ ಬ್ರಾ ಧರಿಸೋದ್ರಿಂದ ಈ ಸಮಸ್ಯೆಗಳು ಉಂಟಾಗುತ್ತೆ : ತ್ವಚೆ (Skin) ಯ ಸಮಸ್ಯೆಗಳು : ಬ್ರಾವನ್ನು ಬಳಸಿದ ನಂತರ ಮತ್ತೆ ಮತ್ತೆ ಅವುಗಳನ್ನು ನಾವು ತೊಳೆಯುತ್ತೇವೆ. ಇದರಿಂದ ಅದು ಸವೆಯುತ್ತದೆ. ಹೀಗೆ ಸವೆದ ಬ್ರಾಗಳನ್ನು ಧರಿಸುವುದರಿಂದ ಚರ್ಮದಲ್ಲಿ ದದ್ದುಗಳು, ಚರ್ಮ ಕೆಂಪಾಗುವುದು ಹಾಗೂ ಚರ್ಮ ವಿಪರೀತ ಸೂಕ್ಷ್ಮವಾಗುವುದು ಮುಂತಾದ ಸಮಸ್ಯೆಗಳು ಎದುರಾಗುತ್ತವೆ. ಇದಲ್ಲದೇ ಹಳೆಯ ಬ್ರಾಗಳಲ್ಲಿ ಉಂಟಾದ ಕಲೆಗಳನ್ನು ಕೂಡ ಹೋಗಲಾಡಿಸುವುದು ಕಷ್ಟ. ಬೆವರು ಮತ್ತು ಎಣ್ಣೆ ಮುಂತಾದವುಗಳಿಂದ ಅದರಲ್ಲಿ ಬ್ಯಾಕ್ಟೀರಿಯಾಗಳು ಕೂಡ ಬೆಳೆಯುವುದರಿಂದ ತ್ವಚೆಯ ಸೋಂಕು ಮತ್ತು ಇನ್ನಿತರ ಚರ್ಮದ ಸಮಸ್ಯೆಗಳು ಕೂಡ ಉಂಟಾಗಬಹುದು.

ರಕ್ತ ಸಂಚಾರಕ್ಕೆ ತೊಂದರೆ : ಬ್ರಾ ವಿಪರೀತ ಬಿಗಿಯಾಗಿದ್ದರೆ ಅಥವಾ ಅದರ ಫಿಟಿಂಗ್ ಸರಿಯಾಗಿಲ್ಲವೆಂದರೆ ಅದರಿಂದ ದಿನವಿಡೀ ಕಿರಿಕಿರಿಯ ಅನುಭವವಾಗುತ್ತದೆ. ಅದರಿಂದ ಉಸಿರಾಟಕ್ಕೂ ತೊಂದರೆಯಾಗಬಹುದು. ಹೆಚ್ಚು ಬಿಗಿಯಾದ ಬ್ರಾ ಧರಿಸೋದ್ರಿಂದ ಎದೆ ಮತ್ತು ಸೊಂಟದ ಭಾಗದಲ್ಲಿ ರಕ್ತ ಸಂಚಾರ ಸರಿಯಾಗಿ ಆಗುವುದಿಲ್ಲ. ಇದರಿಂದ ಮುಂದೆ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಬೆನ್ನು ಮತ್ತು ಭುಜದ ನೋವು : ವರ್ಷಗಟ್ಟಲೆ ಹಳೆಯ ಬ್ರಾವನ್ನು ಧರಿಸುವುದರಿಂದ ಅದರ ಫಿಟಿಂಗ್ ಕೆಡುತ್ತದೆ. ಬ್ರಾ ಫಿಟಿಂಗ್ ಸರಿಯಿಲ್ಲದೇ ಇದ್ದಾಗ ಅದರಿಂದ ಸ್ತನಗಳ ಆಕಾರ ಕೂಡ ಬದಲಾಗುತ್ತದೆ. ಹೀಗೆ ಫಿಟಿಂಗ್ ಸರಿಯಾಗಿಲ್ಲದ ಬ್ರಾಗಳನ್ನು ದೀರ್ಘಕಾಲದ ತನಕ ಬಳಸಿದರೆ ಬೆನ್ನು ಹಾಗೂ ಭುಜದ ನೋವಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಮುಖದ ಅಂದ ಹೆಚ್ಚಿಸುತ್ತೆ ಮನೆಯಂಗಳದಲ್ಲಿರುವ ತುಳಸಿ, ಬಳಸೋದು ಹೇಗೆ?

ದೇಹದ ಭಂಗಿಯೂ ಕೆಡುತ್ತದೆ :  ಸಡಿಲವಾದ ಬ್ರಾಗಳು ದೇಹಕ್ಕೆ ಸರಿಯಾಗಿ ಸಪೋರ್ಟ್ ಮಾಡದೇ ಇದ್ದಾಗ ಅದರಿಂದ ದೇಹದ ಭಂಗಿಯೂ ಬದಲಾಗುತ್ತದೆ. ಇದರಿಂದ ದೇಹವು ಮುಂದೆ ಬಾಗಿ ಗೂನಾಗಬಹುದು.

ಶರೀರದಲ್ಲಿ ಕಲೆಗಳು :  ಹಳೆಯ ಬ್ರಾಗಳಿಂದ ಅಥವಾ ಫಿಟಿಂಗ್ ಸರಿಯಿಲ್ಲದ ಬ್ರಾವನ್ನು ತೊಡುವುದರಿಂದ ಸ್ತನದ ಕೆಳಗೆ ಮತ್ತು ದೇಹದ ಸುತ್ತಲೂ ಕಪ್ಪು ಕಲೆಗಳು ಮತ್ತು ಗೆರೆಗಳು ಉಂಟಾಗುತ್ತದೆ. ಇದರಿಂದ ನಿಮಗೆ ಮುಜುಗರವಾಗಬಹುದು ಮತ್ತು ನಿಮಗಿಷ್ಟವಾಗುವ ಬಟ್ಟೆಗಳನ್ನು ಧರಿಸಲು ಆಗದೇ ಇರಬಹುದು. ಇವು ದೇಹದ ಆಕರ್ಷಣೆಯನ್ನು ಕೂಡ ಕಡಿಮೆಮಾಡುತ್ತವೆ.

ಬ್ರೆಸ್ಟ್ ಶೇಪ್ ಸರಿಯಾಗಿರೋದಿಲ್ಲ : ಪ್ಯಾಷನ್ ಯುಗದಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯ ಬಟ್ಟೆ ಧರಸುತ್ತಾರೆ. ಸಂದರ್ಭಕ್ಕೆ ಅನುಸಾರವಾಗಿ ಡ್ರೆಸ್ ಗಳನ್ನು ಹಾಕೋದು ಈಗಿನ ಟ್ರೆಂಡ್. ಅಂತಹ ಫ್ಯಾಷನ್ ಧರಿಸುಗಳನ್ನು ಧರಿಸಿವಾಗ ಒಳಬಟ್ಟೆಗಳು ಕೂಡ ಸರಿಯಾದ ಫಿಟಿಂಗ್ ಅನ್ನು ಹೊಂದಿರುವುದು ಮುಖ್ಯವಾಗಿರುತ್ತದೆ. ಬ್ರಾ ಫಿಟಿಂಗ್ ಸರಿಯಾಗಿಲ್ಲವೆಂದರೆ ಎದೆಯ ಆಕಾರ ಹಾಳಾಗುತ್ತದೆ. ಇದರಿಂದ ಯಾವ ಡ್ರೆಸ್ ಗಳೂ ಚೆನ್ನಾಗಿ ಕಾಣಿಸೋದಿಲ್ಲ. ಹಾಗಾಗಿ ಬ್ರಾ ಫಿಟಿಂಗ್ ಕೆಟ್ಟಾಗ, ಅದನ್ನು ಧರಿಸಿದ ನಂತರ ಮೈ ಮೇಲೆ ಬಣ್ಣದ ಗುರುತುಗಳು ಕಾಣಿಸಿಕೊಂಡಾಗ ತಕ್ಷಣವೇ ಬ್ರಾ ಬದಲಾಯಿಸಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ. 
 

Follow Us:
Download App:
  • android
  • ios