ಮಹಾರಾಷ್ಟ್ರ ಬಸ್‌ ದುರಂತಕ್ಕೆ ‘ರೋಡ್‌ ಹಿಪ್ನೋಸಿಸ್‌’ ಕಾರಣ: 25 ಜನರ ಜೀವವನ್ನೇ ತೆಗೆದ ಈ ಸಮಸ್ಯೆ!

ದೀರ್ಘ, ತಡೆರಹಿತ, ಖಾಲಿ ಹೆದ್ದಾರಿಗಳಲ್ಲಿ ವಿಶ್ರಾಂತಿಯಿಲ್ಲದೆ, ಏಕತಾನದಿಂದ ವಾಹನ ಓಡಿಸುವವರಿಗೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಚಾಲಕ ಎಲ್ಲರಂತೆಯೇ ಕಣ್ಣು ಬಿಟ್ಟಿರುತ್ತಾನೆ. ಏಕತಾನತೆಯಿಂದಾಗಿ ಆತನ ಮೆದುಳು ವಿಶ್ರಾಂತಿಗೆ ಜಾರುತ್ತದೆ. ಆಗ ಬಾಹ್ಯ ಪ್ರಪಂಚದ ಸಂಪರ್ಕವನ್ನು ಚಾಲಕ ಕಳೆದುಕೊಳ್ಳುತ್ತಾನೆ.

maharashtra road tragedy road hypnosis one of the causes of accidents on samruddhi expressway ash

ನಾಗಪುರ (ಜುಲೈ 2, 2023): ಮಹಾರಾಷ್ಟ್ರದ ಸಮೃದ್ಧಿ ಮಹಾಮಾರ್ಗದಲ್ಲಿ 25 ಮಂದಿಯನ್ನು ಬಲಿ ಪಡೆದ ಬಸ್‌ ಅಪಘಾತಕ್ಕೆ ‘ಸ್ಲೀಪ್‌ ಹಿಪ್ನೋಸಿಸ್‌’ ಕಾರಣ ಇರಬಹುದು ಎಂಬ ವಾದ ಕೇಳಿಬಂದಿದೆ. ಚಾಲಕರು ಕಣ್ಣುಬಿಟ್ಟಿದ್ದರೂ ಅವರಿಗೆ ಗೊತ್ತಿಲ್ಲದಂತೆ ನಿದ್ರೆ ಮಾಡುತ್ತಿರುತ್ತಾರೆ. ಇದನ್ನೇ ಸ್ಲೀಪ್‌ ಹಿಪ್ನೋಸಿಸ್‌ ಎಂದು ಕರೆಯಲಾಗುತ್ತದೆ.

ದೀರ್ಘ, ತಡೆರಹಿತ, ಖಾಲಿ ಹೆದ್ದಾರಿಗಳಲ್ಲಿ ವಿಶ್ರಾಂತಿಯಿಲ್ಲದೆ, ಏಕತಾನದಿಂದ ವಾಹನ ಓಡಿಸುವವರಿಗೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಚಾಲಕ ಎಲ್ಲರಂತೆಯೇ ಕಣ್ಣು ಬಿಟ್ಟಿರುತ್ತಾನೆ. ಏಕತಾನತೆಯಿಂದಾಗಿ ಆತನ ಮೆದುಳು ವಿಶ್ರಾಂತಿಗೆ ಜಾರುತ್ತದೆ. ಆಗ ಬಾಹ್ಯ ಪ್ರಪಂಚದ ಸಂಪರ್ಕವನ್ನು ಚಾಲಕ ಕಳೆದುಕೊಳ್ಳುತ್ತಾನೆ. ಸಮೃದ್ಧಿ ಮಹಾಮಾರ್ಗದಲ್ಲಿ ಹೋರ್ಡಿಂಗ್‌ ಅಥವಾ ಬಿಲ್‌ ಬೋರ್ಡ್‌ಗಳು, ಹೋಟೆಲ್‌ / ಢಾಬಾಗಳು ಇಲ್ಲ. ಹೀಗಾಗಿ ಚಾಲಕನಿಗೆ ಏಕತಾನತೆ ಕಾಡುತ್ತದೆ. ಬುಲ್ಡಾನಾ ಬಸ್‌ ದುರಂತಕ್ಕೂ ಇದೇ ಕಾರಣವಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಓದಿ: ಮಹಾರಾಷ್ಟ್ರದಲ್ಲಿ ಭೀಕರ ಬಸ್‌ ಅಪಘಾತ: ಸವಿನಿದ್ರೆಯಲ್ಲಿದ್ದ 25 ಮಂದಿ ಸಜೀವ ದಹನ

2022ರ ಡಿಸೆಂಬರ್‌ನಿಂದ 2023ರ ಏಪ್ರಿಲ್‌ವರೆಗೆ ಈ ರಸೆಯಲ್ಲಿ 358 ಅಪಘಾತಗಳು ಸಂಭವಿಸಿ 39 ಜನರು ಸಾವಿಗೀಡಾಗಿದ್ದಾರೆ. ಬಹುತೇಕ ಅಪಘಾತಗಳಿಗೆ ಈ ರೀತಿಯ ಸಮಸ್ಯೆಯೇ ಕಾರಣ ಎಂದು ಹೇಳಲಾಗಿದೆ. ಹೀಗಾಗಿ ಪ್ರತಿ ಅರ್ಧ ಗಂಟೆ ಪ್ರಯಾಣ ದಾರಿಯುದ್ದಕ್ಕೂ ಹಳದಿ ಹಾಗೂ ಬಿಳಿಯ ಧ್ವಜಗಳು, ಪ್ರತಿಬಿಂಬಕಗಳನ್ನು ಅಳವಡಿಸಿ ಚಾಲಕರ ಗಮನಸೆಳೆದು ಅವರ ಮೆದುಳು ಸಕ್ರಿಯವಾಗಿರುವಂತೆ ಮಾಡುವುದಾಗಿ ಮಹಾರಾಷ್ಟ್ರ ಹೆದ್ದಾರಿ ಪೊಲೀಸರು ತಿಳಿಸಿದ್ದರು. ಆದರೆ ಅದು ಇನ್ನೂ ಜಾರಿಗೆ ಬಂದಿಲ್ಲ.

ಬಸ್ಸಿನ ಕಿಟಕಿ ಒಡೆದು ಬಚಾವಾದೆ: ಪ್ರಯಾಣಿಕನ ಭಯಾನಕ ಅನುಭವ
ಬುಲ್ಢಾನಾ: ಮಹಾರಾಷ್ಟ್ರದ ಸಮೃದ್ಧಿ ಎಕ್ಸ್‌ಪ್ರೆಸ್‌ ವೇನಲ್ಲಿ ಸಂಭವಿಸಿದ ಬಸ್‌ ಅಪಘಾತದಲ್ಲಿ 8 ಪ್ರಯಾಣಿಕರು ಪವಾಡ ಸದೃಶ ರೀತಿಯಲ್ಲಿ ಬಚಾವಾಗಿದ್ದಾರೆ. ‘ಹೊತ್ತಿ ಉರಿಯಲು ಆರಂಭವಾಗಿದ್ದ ಬಸ್ಸಿನಲ್ಲಿ ಕಿಟಕಿ ಗಾಜು ಒಡೆದು ಕ್ಷಣಾರ್ಧದಲ್ಲಿ ಪಾರಾದೆವು’ ಎಂದು ಪಾರಾದ ಪ್ರಯಾಣಿಕರು ಭಯಾನಕ ಅನೂಭವ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಅಯ್ಯೋ ಪಾಪಿ: ಮಗಳ ಮದುವೆಯ ದಿನವೇ ತಂದೆಯನ್ನು ಕೊಂದ ಮಾಜಿ ಪ್ರೇಮಿ

‘ಬಸ್‌ ಟೈರ್‌ ಸ್ಫೋಟಗೊಂಡು ಡಿವೈಡರ್‌ಗೆ ಡಿಕ್ಕಿ ಹೊಡೆದು ಉರುಳು ಬಿತ್ತು. ತಕ್ಷಣವೇ ಬಸ್ಸಿಗೆ ಬೆಂಕಿ ಹೊತ್ತಿಕೊಂಡಿತು. ನಾನು ಹಾಗೂ ನನ್ನ ಪಕ್ಕದಲ್ಲಿದ್ದ ಇನ್ನೊಬ್ಬ ಪ್ರಯಾಣಿಕ ಹಿಂದಿನ ಕಿಟಕಿ ಒಡೆದು ಹೊರಬಂದೆವು’ ಎಂದು ಒಬ್ಬ ಪ್ರಯಾಣಿಕ ನುಡಿದರು.

‘4-5 ಪ್ರಯಾಣಿಕರು ಕಿಡಕಿ ಒಡೆದು ಹೊರಬಂದರು. ಉಳಿದವರಿಗೆ ಇದು ಸಾಧ್ಯವಾಗಲಿಲ್ಲ. ಕಿಟಕಿ ಒಡೆಯಲು ಕೆಲವರು ಯತ್ನಿಸಿದರು. ಆದರೆ ಅಷ್ಟರಲ್ಲೇ ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿ ಸಜೀವವಾಗಿ ದಹಿಸಿ ಹೋದರು’ ಎಂದು ಸ್ಥಳೀಯರೊಬ್ಬರು ಹೇಳಿದರು.

ಇದನ್ನೂ ಓದಿ: ಭೂ ಮಾಫಿಯಾ ಬಗ್ಗೆ ವರದಿ: ಪತ್ರಕರ್ತನ ಮೇಲೆ ಗುಂಡಿನ ದಾಳಿ; ಆಸ್ಪತ್ರೆಗೆ ದಾಖಲು

‘ಆದರೆ ರಸ್ತೆಯಲ್ಲಿ ಸಾಗುತ್ತಿದ್ದ ಇತರ ವಾಹನಗಳ ಪ್ರಯಾಣಿಕರಿಂದ ಸಹಾಯಕ್ಕೆ ಕೋರಿದೆವು. ಆದರೆ ಯಾರೊಬ್ಬರೂ ಸಹಾಯ ಮಾಡದೇ ಮುಂದೆ ಸಾಗಿದರು. ಅವರು ಸಹಾಯ ಮಾಡಿದ್ದರೆ ಇನ್ನಷ್ಟು ಜೀವ ಉಳಿಸಬಹುದಿತ್ತು’ ಎಂದು ಬಚಾವಾದ ಇನ್ನೊಬ್ಬ ಪ್ರಯಾಣಿಕ ಹೇಳಿದರು.

ಇದನ್ನೂ ಓದಿ: ವಾಹನ ಸವಾರರೇ ಎಚ್ಚರ: ಹಗಲಲ್ಲೇ ಬಂದೂಕು ತೋರಿಸಿ ಲಕ್ಷಾಂತರ ರೂ. ದರೋಡೆ; ಸಿಸಿ ಕ್ಯಾಮೆರಾದಲ್ಲಿ ಸೆರೆ

Latest Videos
Follow Us:
Download App:
  • android
  • ios