ಭೂ ಮಾಫಿಯಾ ಬಗ್ಗೆ ವರದಿ: ಪತ್ರಕರ್ತನ ಮೇಲೆ ಗುಂಡಿನ ದಾಳಿ; ಆಸ್ಪತ್ರೆಗೆ ದಾಖಲು
ಗುಂಡಿನ ದಾಳಿಗೆ ಗಾಯಗೊಂಡ ಪತ್ರಕರ್ತನನ್ನು ಮನು ಅವಸ್ಥಿ ಎಂದು ಗುರುತಿಸಲಾಗಿದ್ದು, ಪೊಲೀಸರು ಈ ಸಂಬಂಧ ಟ್ವಿಟ್ಟರ್‌ನಲ್ಲಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಲಖನೌ (ಜೂನ್ 26, 2023): ಉತ್ತರ ಪ್ರದೇಶದಲ್ಲಿ ಪತ್ರಕರ್ತರೊಬ್ಬರ ಮೇಲೆ ಗುಂಡಿನ ದಾಳಿ ನಡೆಸಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಯುಪಿಯ ಉನ್ನಾವೊ ಜಿಲ್ಲೆಯಲ್ಲಿ 25 ವರ್ಷದ ಸ್ಥಳೀಯ ಪತ್ರಕರ್ತರೊಬ್ಬರ ಮೇಲೆ ಶನಿವಾರ ರಾತ್ರಿ ಗುಂಡು ಹಾರಿಸಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಂಡಿನ ದಾಳಿಗೆ ಗಾಯಗೊಂಡ ಪತ್ರಕರ್ತನನ್ನು ಮನು ಅವಸ್ಥಿ ಎಂದು ಗುರುತಿಸಲಾಗಿದ್ದು, ಪೊಲೀಸರು ಈ ಸಂಬಂಧ ಟ್ವಿಟ್ಟರ್‌ನಲ್ಲಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಗಾಯಗೊಂಡ ಪತ್ರಕರ್ತನನ್ನು ಮೊದಲು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ಬಳಿಕ ಉತ್ತಮ ಚಿಕಿತ್ಸೆಗಾಗಿ ಕಾನ್ಪುರದ ಹ್ಯಾಲೆಟ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದೂ ಮಾಹಿತಿ ನೀಡಿದ್ದಾರೆ.
ಇದನ್ನು ಓದಿ: ವಾಹನ ಸವಾರರೇ ಎಚ್ಚರ: ಹಗಲಲ್ಲೇ ಬಂದೂಕು ತೋರಿಸಿ ಲಕ್ಷಾಂತರ ರೂ. ದರೋಡೆ; ಸಿಸಿ ಕ್ಯಾಮೆರಾದಲ್ಲಿ ಸೆರೆ
ಇನ್ನು, ಈ ಗುಂಡೇಟಿಗೆ ಸರಿಯಾದ ಕಾರಣ ತಿಳಿದುಬಂದಿಲ್ಲವಾದ್ರೂ, ಮನು ಅವಸ್ಥಿ ಅವರು ತಮ್ಮ ವರದಿಯ ಬಗ್ಗೆ ಭೂ ಮಾಫಿಯಾದ ಸದಸ್ಯರು ಬೆದರಿಕೆ ಹಾಕಿದ್ದಾರೆ ಎಂದು 3 ತಿಂಗಳ ಹಿಂದೆಯೇ ದೂರು ದಾಖಲಿಸಿದ್ದರು ಎಂಬುದು ಬೆಳಕಿಗೆ ಬಂದಿದೆ. "ನನಗೆ ಫೋನ್‌ನಲ್ಲಿ ಬೆದರಿಕೆ ಹಾಕಲಾಗುತ್ತಿದೆ. ನನ್ನ ಮೇಲೆ ದಾಳಿಯಾದರೆ ಅಥವಾ ನನ್ನ ಕುಟುಂಬದ ಯಾರ ಮೇಲಾದ್ರೂ ದಾಳಿಯಾದ್ರೆ, ಇವರೇ ಜವಾಬ್ದಾರರು" ಎಂದು ಅವರು ದೂರು ನೀಡಿ ಈ ಸಂಬಂಧ ಎಫ್‌ಐಆರ್ ದಾಖಲಾಗಿತ್ತು. ಹಾಗೂ, ವಿಡಿಯೋವೊಂದರಲ್ಲೂ ಈ ಹೇಳಿಕೆ ನೀಡಿದ್ದರು. ತನ್ನನ್ನು ಹಿಂಬಾಲಿಸಿ ಕಿರುಕುಳ ನೀಡಲಾಗುತ್ತಿದೆ ಎಂದೂ ಆರೋಪಿಸಿದ್ದರು.
ಶನಿವಾರ ಮನು ಅವಸ್ಥಿಯನ್ನು ಸ್ಕೂಟರ್‌ನಲ್ಲಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು, ಅವರ ಬಲ ಭುಜಕ್ಕೆ ಗಾಯವಾಗಿತ್ತು. ನಂತರ ಅವರನ್ನು ಕಾನ್ಪುರದ ಲಾಲಾ ಲಜಪತ್ ರಾಯ್ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ತಿಳಿದುಬಂದಿದೆ. ಇನ್ನು, ಉತ್ತರ ಪ್ರದೇಶ ಪೊಲೀಸರು ಅಪರಾಧ ಸ್ಥಳದಿಂದ ಜೀವಂತ ಮತ್ತು ಬಳಸಿದ ಕಾರ್ಟ್ರಿಡ್ಜ್ ಅನ್ನು ವಶಪಡಿಸಿಕೊಂಡಿದ್ದಾರೆ. ಆದರೂ, ಈ ಕಾರ್ಟ್ರಿಡ್ಜ್ ದೇಹದಲ್ಲಿ ಆಗಿರುವ ಗಾಯಕ್ಕೂ ಗುಂಡಿಗೂ ಹೊಂದಿಕೆಯಾಗಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಮತ್ತು ವೈದ್ಯರ ಅಂತಿಮ ವರದಿಗಾಗಿ ಕಾಯುತ್ತಿದ್ದು, ಇದು ಪೆಲೆಟ್ ಗಾಯ ಎಂದು ಶಂಕಿಸಿದ್ದಾರೆ.
ಇದನ್ನೂ ಓದಿ: ಕೊಲೆ ಮಾಡಿ ಪತ್ನಿ ಶವವನ್ನು ಶೌಚಗುಂಡಿ ಒಳಗೆ ಹಾಕಿದ್ದ ಪತಿ: 3 ವರ್ಷಗಳ ಬಳಿಕ ಪ್ರಕರಣ ಬೆಳಕಿಗೆ
ಅಪಾಯದಿಂದ ಪಾರಾಗಿರುವ ಪತ್ರಕರ್ತ
25 ವರ್ಷದ ಪತ್ರಕರ್ತ ಕಾನ್ಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಮತ್ತು ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ರಾತ್ರಿ 10.25ರ ಸುಮಾರಿಗೆ ಪಿ. ಡಿ ನಗರದ ನಿವಾಸಿ ಮನು ಅವಸ್ಥಿ ಎಂಬಾತನ ಮೇಲೆ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ ಎಂದೂ ತಿಳಿದುಬಂದಿದೆ.
ಇನ್ನು, ಎಲ್ಲಾ ಸಂಭಾವ್ಯ ಕೋನಗಳನ್ನು ತನಿಖೆ ಮಾಡಲಾಗಿದೆ. ಆದರೆ, ದಾಳಿಯ ಹಿಂದಿನ ಉದ್ದೇಶ ತಕ್ಷಣವೇ ತಿಳಿದುಬಂದಿಲ್ಲ. ಸಾಧ್ಯವಿರುವ ಎಲ್ಲ ಕೋನಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ತೃತೀಯಲಿಂಗಿಗಳ ಬರ್ಬರ ಹತ್ಯೆ: ಡಬ್ಬಲ್ ಮರ್ಡರ್‌ಗೆ ಕಾರಣ ಹೀಗಿದೆ..
ಜೌನ್ಪುರ ಘಟನೆ
ಈ ವರ್ಷದ ಫೆಬ್ರವರಿಯಲ್ಲಿ ಉತ್ತರ ಪ್ರದೇಶದ ಜೌನ್‌ಪುರ್ ನಗರದಲ್ಲಿ ಪತ್ರಕರ್ತರೊಬ್ಬರ ಮೇಲೆ ಗುಂಡು ಹಾರಿಸಲಾಗಿತ್ತು. ಈ ವೇಳೆ, ಎರಡು ಗುಂಡುಗಳು ತಗುಲಿ ಅವರು ಗಾಯಗೊಂಡಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಪುಷ್ಪರಾಜ್ ಸಿಂಗ್ ಅವರ ಸಹೋದರ ಹಾಗೂ ಇತರರ ಹೆಸರನ್ನು ಪ್ರಕರಣದ ದೂರಿನಲ್ಲಿ ದಾಖಲಿಸಲಾಗಿತ್ತು ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಪತ್ರಕರ್ತ ದೇವೇಂದ್ರ ಖರೆ ಅವರು ಪುಷ್ಪರಾಜ್ ಸಿಂಗ್ ಅವರ ಸಹೋದರ ರಿತುರಾಜ್ ಸಿಂಗ್ ಅವರೇ ಈ ಗುಂಡಿನ ದಾಳಿಯನ್ನು ಪ್ಲ್ಯಾನ್ ಮಾಡಿ ನಡೆಸಿದ್ದಾರೆ ಎಂದು ಹೆಸರಿಸಿದ್ದರು.
ಇದನ್ನೂ ಓದಿ: ಲಂಡನ್‌ನಲ್ಲಿ ವಾರದಲ್ಲಿ ಮೂವರು ಭಾರತೀಯ ಮೂಲದವರ ಹತ್ಯೆ: ಆತಂಕದಲ್ಲಿ ಅನಿವಾಸಿ ಭಾರತೀಯರು!