Asianet Suvarna News Asianet Suvarna News

ವಾಹನ ಸವಾರರೇ ಎಚ್ಚರ: ಹಗಲಲ್ಲೇ ಬಂದೂಕು ತೋರಿಸಿ ಲಕ್ಷಾಂತರ ರೂ. ದರೋಡೆ; ಸಿಸಿ ಕ್ಯಾಮೆರಾದಲ್ಲಿ ಸೆರೆ

ದೆಹಲಿಯಲ್ಲಿ ವರದಿಯಾದ ಹಗಲು ಅಪರಾಧದ ಆಘಾತಕಾರಿ ಪ್ರಕರಣದಲ್ಲಿ, ಬೈಕ್‌ನಲ್ಲಿ ಬಂದ ದರೋಡೆಕೋರರು ಪ್ರಗತಿ ಮೈದಾನದ ಸುರಂಗದಲ್ಲಿ ಬಂದೂಕು ತೋರಿಸಿ ಡೆಲಿವರಿ ಸಹಚರ ಮತ್ತು ಆತನ ಸಹಚರನನ್ನು ದರೋಡೆ ಮಾಡಿ 2 ಲಕ್ಷ ರೂ. ಹಣದೊಂದಿಗೆ ಪರಾರಿಯಾಗಿದ್ದಾರೆ.

2 men robbed at gunpoint inside delhi s pragati maidan tunnel ash
Author
First Published Jun 26, 2023, 12:52 PM IST

ನವದೆಹಲಿ (ಜೂನ್ 26, 2023): ಇತ್ತೀಚೆಗೆ ರಾಷ್ಟ್ರ ರಾಜಧಾನಿಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ಹಗಲಲ್ಲೇ ಬಂದೂಕು ತೋರಿಸಿ ಬೆದರಿಕೆ ಹಾಕಿ ಲಕ್ಷಾಂತರ ರೂ. ದರೋಡೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ದೂರು ದಾಖಲಾಗಿದ್ದು, ಸಿಸಿ ಕ್ಯಾಮೆರಾದಲ್ಲಿ ವಿಡಿಯೋ ಸಹ ಸೆರೆಯಾಗಿದೆ.

ದೆಹಲಿಯಲ್ಲಿ ವರದಿಯಾದ ಹಗಲು ಅಪರಾಧದ ಆಘಾತಕಾರಿ ಪ್ರಕರಣದಲ್ಲಿ, ಬೈಕ್‌ನಲ್ಲಿ ಬಂದ ದರೋಡೆಕೋರರು ಪ್ರಗತಿ ಮೈದಾನದ ಸುರಂಗದಲ್ಲಿ ಬಂದೂಕು ತೋರಿಸಿ ಡೆಲಿವರಿ ಸಹಚರ ಮತ್ತು ಆತನ ಸಹಚರನನ್ನು ದರೋಡೆ ಮಾಡಿ 2 ಲಕ್ಷ ರೂ. ಹಣದೊಂದಿಗೆ ಶನಿವಾರ ಪರಾರಿಯಾಗಿದ್ದಾರೆ. ದೆಹಲಿಯಲ್ಲಿ ನಾಲ್ವರು ಅಪರಿಚಿತ ವ್ಯಕ್ತಿಗಳು ಈ ಕೃತ್ಯವೆಸಗಿದ್ದು,  ಸಂತ್ರಸ್ತರು ಹಣ ತಲುಪಿಸಲು ಕ್ಯಾಬ್‌ನಲ್ಲಿ ಗುರಗಾಂವ್ ಕಡೆಗೆ ಹೋಗುತ್ತಿದ್ದಾಗ ಶನಿವಾರ (ಜೂನ್ 24) ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಇದನ್ನು ಓದಿ: ಕೊಲೆ ಮಾಡಿ ಪತ್ನಿ ಶವವನ್ನು ಶೌಚಗುಂಡಿ ಒಳಗೆ ಹಾಕಿದ್ದ ಪತಿ: 3 ವರ್ಷಗಳ ಬಳಿಕ ಪ್ರಕರಣ ಬೆಳಕಿಗೆ

ಇನ್ನು ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಹ ವೈರಲ್‌ ಆಗುತ್ತಿದ್ದು, ಈ ಅಪರಾಧ ಪ್ರಕರಣವನ್ನ ದೆಹಲಿ ಪೊಲೀಸರು ದೃಢಪಡಿಸಿದ್ದಾರೆ. ದೆಹಲಿಯ ಪ್ರಗತಿ ಮೈದಾನದ ಸುರಂಗದೊಳಗೆ 4 ಪುರುಷರು 2 ಬೈಕ್‌ಗಳಲ್ಲಿ ಬಿಳಿ ಬಣ್ಣದ ಕ್ಯಾಬ್ ಅನ್ನು ನಿಲ್ಲಿಸುವುದನ್ನು ತೋರಿಸುತ್ತದೆ. ನಂತರ ಇಬ್ಬರು ದರೋಡೆಕೋರರು ಕೆಳಗಿಳಿದು ತಮ್ಮ ಬಂದೂಕುಗಳನ್ನು ಕಾರಿನಲ್ಲಿರುವವರತ್ತ ತೋರಿಸುತ್ತಾರೆ. ನಂತರ ಅವರಲ್ಲಿ ಒಬ್ಬರು ಕಾರಿನ ಹಿಂದಿನ ಎಡ ಬಾಗಿಲು ತೆರೆದು ಕಪ್ಪು ಬಣ್ಣದ ಬ್ಯಾಗ್‌ ಅನ್ನು ಕಸಿದುಕೊಂಡಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. 

 

 

ನಂತರ ದರೋಡೆಕೋರರು ಬೈಕ್‌ಗಳಲ್ಲಿ ಪರಾರಿಯಾಗಿದ್ದು, ಜೂನ್ 24 ರಂದು ಈ ಘಟನೆ ನಡೆದಿದೆ ಎಂದು ದೆಹಲಿ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಖಚಿತಪಡಿಸಿದ್ದಾರೆ. ಈ ಘಟನೆ ಸಂಬಂಧ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಯತ್ನಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ತೃತೀಯಲಿಂಗಿಗಳ ಬರ್ಬರ ಹತ್ಯೆ: ಡಬ್ಬಲ್‌ ಮರ್ಡರ್‌ಗೆ ಕಾರಣ ಹೀಗಿದೆ..

ದೂರುದಾರರಾದ ಪಟೇಲ್ ಸಜನ್ ಕುಮಾರ್ ಅವರು ಚಾಂದಿನಿ ಚೌಕ್‌ನಲ್ಲಿರುವ ಸಂಸ್ಥೆಯೊಂದರಲ್ಲಿ ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಘಟನೆ ವೇಳೆ ಅವರು ತನ್ನ ಸ್ನೇಹಿತ ಜಿಗರ್ ಪಟೇಲ್ ಜೊತೆಗಿದ್ದರು ಎಂದು ತಿಳಿದುಬಂದಿದೆ. ಇವರು ತಿಲಕ್ ಮಾರ್ಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ (ನವದೆಹಲಿ) ಪ್ರಣವ್ ತಯಾಲ್ ಮಾಹಿತಿ ನೀಡಿದ್ದಾರೆ.

ದೂರುದಾರರು ತಮ್ಮ ಸಹಚರರೊಂದಿಗೆ ಗುರಗಾಂವ್‌ಗೆ ನಗದು ಹೊಂದಿದ್ದ ಬ್ಯಾಗ್‌ ತಲುಪಿಸಲು ಹೋಗುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ. ಅವರು ಲಾಲ್ ಕಿಲಾದಿಂದ ಓಲಾ ಕ್ಯಾಬ್ ಅನ್ನು ಬುಕ್‌ ಮಾಡಿದ್ದು, ನಂತರ ಅವರು ರಿಂಗ್ ರೋಡ್‌ನಲ್ಲಿ ಸುರಂಗವನ್ನು ಪ್ರವೇಶಿಸಿದಾಗ, ಎರಡು ಮೋಟಾರ್‌ಸೈಕಲ್‌ಗಳಲ್ಲಿ ಬಂದ 4 ಜನರು ತಮ್ಮ ವಾಹನವನ್ನು ಅಡ್ಡಗಟ್ಟಿ ಬಂದೂಕು ತೋರಿಸಿ ಅವರ ಬ್ಯಾಗ್ ಅನ್ನು ತೆಗೆದುಕೊಂಡು ಹೋದರು ಎಂದೂ ತಿಳಿಸಿದ್ದಾರೆ.

ಇದನ್ನೂ ಓದಿ: ಲಂಡನ್‌ನಲ್ಲಿ ವಾರದಲ್ಲಿ ಮೂವರು ಭಾರತೀಯ ಮೂಲದವರ ಹತ್ಯೆ: ಆತಂಕದಲ್ಲಿ ಅನಿವಾಸಿ ಭಾರತೀಯರು!

ಈ ಪ್ರಕರಣ ಸಂಬಂಧ ಐಪಿಸಿ ಸೆಕ್ಷನ್ 397 (ದರೋಡೆ, ಅಥವಾ ಸಾವು ಅಥವಾ ಘೋರವಾದ ಗಾಯವನ್ನು ಉಂಟುಮಾಡುವ ಪ್ರಯತ್ನದೊಂದಿಗೆ ಡಕಾಯಿತಿ) ಮತ್ತು 34 (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಆರೋಪಿಗಳ ಪತ್ತೆಗೆ ತನಿಖೆ ನಡೆಸಲಾಗುತ್ತಿದೆ. ಅಲ್ಲದೆ, ಇದು ಆಂತರಿಕ ಕೆಲಸವೇ ಎಂದು ಖಚಿತಪಡಿಸಿಕೊಳ್ಳಲು ದೂರುದಾರರು, ಅವರ ಉದ್ಯೋಗದಾತ ಮತ್ತು ಇತರ ಸಿಬ್ಬಂದಿಯನ್ನು ಸಹ ವಿಚಾರಣೆ ನಡೆಸುತ್ತಿದ್ದೇವೆ ಎಂದೂ ದೆಹಲಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಮಹಿಳಾ ಜೈಲಲ್ಲಿ ಭೀಕರ ಗಲಭೆ: 41 ಕೈದಿಗಳನ್ನು ಸುಟ್ಟು, ಶೂಟ್‌ ಮಾಡಿ ಕೊಂದ ಗ್ಯಾಂಗ್‌ಸ್ಟರ್‌ಗಳು

Follow Us:
Download App:
  • android
  • ios