ಮಹಾರಾಷ್ಟ್ರ ಸರ್ಕಾರವು 0-14 ವರ್ಷದ ಹೆಣ್ಣುಮಕ್ಕಳಿಗೆ ಉಚಿತ ಕ್ಯಾನ್ಸರ್ ಲಸಿಕೆ ನೀಡಲು ನಿರ್ಧರಿಸಿದೆ. ಬದಲಾಗುತ್ತಿರುವ ಜೀವನಶೈಲಿಯಿಂದ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿದ್ದು, ಎಲ್ಲ ವಯಸ್ಸಿನವರನ್ನು ಬಾಧಿಸುತ್ತಿದೆ. ಈ ಸಮಸ್ಯೆಯನ್ನು ಎದುರಿಸಲು ಸರ್ಕಾರ ಲಸಿಕೆ ಕಾರ್ಯಕ್ರಮವನ್ನು ಜಾರಿಗೆ ತರಲಿದೆ ಎಂದು ಆರೋಗ್ಯ ಸಚಿವ ಆಬಿಟ್ಕರ್ ತಿಳಿಸಿದ್ದಾರೆ. ಹಣಕಾಸು ಸಚಿವರು ಪ್ರಸ್ತಾಪವನ್ನು ಅನುಮೋದಿಸಿದ್ದಾರೆ.
ಮಹಾರಾಷ್ಟ್ರದ ಫಡ್ನವೀಸ್ ಸರ್ಕಾರವು ಹೆಣ್ಣುಮಕ್ಕಳಿಗಾಗಿ ಒಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. 0-14 ವರ್ಷದ ಹೆಣ್ಣುಮಕ್ಕಳಿಗೆ ಉಚಿತ ಕ್ಯಾನ್ಸರ್ ಲಸಿಕೆ ನೀಡಲು ಫಡ್ನವೀಸ್ ಸರ್ಕಾರ ಘೋಷಿಸಿದೆ. ಬದಲಾಗುತ್ತಿರುವ ಜೀವನಶೈಲಿಯಿಂದಾಗಿ ಕ್ಯಾನ್ಸರ್ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ ಮತ್ತು ಈ ರೋಗವು ಈಗ ಎಲ್ಲಾ ವಯಸ್ಸಿನ ಜನರನ್ನು ಬಾಧಿಸುತ್ತಿದೆ ಎಂದು ರಾಜ್ಯದ ಆರೋಗ್ಯ ಸಚಿವ ಪ್ರಕಾಶ್ ಆಬಿಟ್ಕರ್ ಹೇಳಿದ್ದಾರೆ. ಈ ಗಂಭೀರ ಸಮಸ್ಯೆಯನ್ನು ನಿಭಾಯಿಸಲು ರಾಜ್ಯ ಸರ್ಕಾರವು ಉಚಿತ ಕ್ಯಾನ್ಸರ್ ಲಸಿಕೆ ಕಾರ್ಯಕ್ರಮವನ್ನು ಜಾರಿಗೆ ತರಲು ನಿರ್ಧರಿಸಿದೆ ಎಂದು ಆಬಿಟ್ಕರ್ ತಿಳಿಸಿದ್ದಾರೆ.
ಹುಷಾರಾಗಿರಿ...ಈ ರೀತಿ ಇಡ್ಲಿ ತಿಂದರೆ ಬರುತ್ತೆ ಕ್ಯಾನ್ಸರ್, ವರದಿಯಿಂದ ಬಹಿರಂಗ!
14 ವರ್ಷದವರೆಗಿನ ಹೆಣ್ಣುಮಕ್ಕಳಿಗೆ ಗಿಫ್ಟ್:
ವರದಿ ಪ್ರಕಾರ, ಮಹಾರಾಷ್ಟ್ರದ ಆರೋಗ್ಯ ಸಚಿವ ಪ್ರಕಾಶ್ ಆಬಿಟ್ಕರ್ ಅವರು ಉಪ ಮುಖ್ಯಮಂತ್ರಿ ಮತ್ತು ಹಣಕಾಸು ಸಚಿವ ಅಜಿತ್ ಪವಾರ್ ಅವರನ್ನು 0-14 ವರ್ಷದ ಹೆಣ್ಣುಮಕ್ಕಳಿಗೆ ಉಚಿತ ಕ್ಯಾನ್ಸರ್ ಲಸಿಕೆ ಒದಗಿಸುವಂತೆ ಕೇಳಿಕೊಂಡಿದ್ದರು. ಈಗ ಅಜಿತ್ ಪವಾರ್ ಈ ಪ್ರಸ್ತಾಪವನ್ನು ಅನುಮೋದಿಸಿದ್ದಾರೆ ಮತ್ತು ರಾಜ್ಯ ಸರ್ಕಾರವು ಶೀಘ್ರದಲ್ಲೇ ಈ ಯೋಜನೆಯನ್ನು ಜಾರಿಗೆ ತರಲಿದೆ.
ಮಹಾರಾಷ್ಟ್ರ ಸರ್ಕಾರದ ನಿರ್ಧಾರ:
ಕ್ಯಾನ್ಸರ್ಗೆ ಮುಖ್ಯವಾಗಿ ಧೂಮಪಾನ ಮತ್ತು ಇತರ ಮಾದಕ ವ್ಯಸನಗಳು ಕಾರಣವೆಂದು ಪರಿಗಣಿಸಲಾಗುತ್ತಿತ್ತು, ಆದರೆ ಈಗ ಈ ರೋಗವು ಎಲ್ಲಾ ವಯಸ್ಸಿನ ಜನರನ್ನು ಬಾಧಿಸುತ್ತಿದೆ ಎಂದು ಆಬಿಟ್ಕರ್ ಹೇಳಿದರು. ಇದನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರವು ಈ ಗಂಭೀರ ಸಮಸ್ಯೆಯನ್ನು ನಿಭಾಯಿಸಲು ಲಸಿಕೆ ಕಾರ್ಯಕ್ರಮವನ್ನು ಪ್ರಾರಂಭಿಸಲು ನಿರ್ಧರಿಸಿದೆ. ವೇಗವಾಗಿ ಹರಡುತ್ತಿರುವ ಬರ್ಡ್ ಫ್ಲೂ ಪ್ರಕರಣಗಳು ಆರೋಗ್ಯ ಸಚಿವರು, ವಿಧರ್ಭ ದಲ್ಲಿ ವೇಗವಾಗಿ ಹರಡುತ್ತಿರುವ ಬರ್ಡ್ ಫ್ಲೂ ಪ್ರಕರಣಗಳ ಬಗ್ಗೆ ಸರ್ಕಾರ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ.
ಕಾಗೆಗಳಲ್ಲಿ ಏವಿಯನ್ ಇನ್ಫ್ಲುಯೆನ್ಸ (ಬರ್ಡ್ ಫ್ಲೂ) ದೃಢಪಟ್ಟಿರುವ ಕಾರಣ ಪ್ರದೇಶದಲ್ಲಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಆದಾಗ್ಯೂ, ಈವರೆಗೆ ಮನುಷ್ಯರಲ್ಲಿ ಈ ರೋಗದ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಸರ್ಕಾರ ಪರಿಸ್ಥಿತಿಯನ್ನು ಗಮನಿಸುತ್ತಿದೆ ಮತ್ತು ಸೋಂಕನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ಇಡ್ಲಿಯಿಂದ ಡೆಡ್ಲಿ ಕ್ಯಾನ್ಸರ್: ತನಿಖೆಗೆ ಕೇಂದ್ರ ಸರ್ಕಾರದ ಆದೇಶ
ಕರ್ನಾಟಕ ಸರ್ಕಾರವೂ ಈ ಬಗ್ಗೆ ನಿರ್ಧರಿಸುತ್ತಾ?
ಮಹಾರಾಷ್ಟ್ರದ ಬೆನ್ನಲ್ಲೇ ಕರ್ನಾಟಕ ಸರ್ಕಾರವೂ ಉಚಿತ ಲಸಿಕೆ ನೀಡಬಹುದಾ ಎಂದು ಪ್ರಶ್ನೆ ಎದ್ದಿದೆ. ಕರ್ನಾಟಕದಲ್ಲೂ ಕ್ಯಾನ್ಸರ್ ತಡೆಗಟ್ಟುವ ಲಸಿಕೆ ಇದೆ. ಆದರೆ ಉಚಿತವಾಗಿ ಕೆಲವು ಸಂಘಟನೆಗಳು ಹಿಂದುಳಿದ ಬಡ ಹೆಣ್ಣು ಮಕ್ಕಳಿಗೆ ಪೂರೈಸಿದೆ ಹೊರತು ಉಚಿತವಾಗಿ ಸರ್ಕಾರದ ಕಡೆಯಿಂದಲೂ ಇಲ್ಲ. ವಿಶ್ವದ ಮಹಿಳೆಯರಲ್ಲಿ ಎರಡನೇ ಅತ್ಯಂತ ಸಾಮಾನ್ಯವಾದ ಕ್ಯಾನ್ಸರ್ ಆಗಿರುವ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಮತ್ತು ಅದರಿಂದ ಬಳಲುತ್ತಿರುವವರಿಗೆ ಗುಣವಾಗಲು ಮೆಡಿಸಿನ್ ಕಂಡು ಹಿಡಿಯುವ ಪ್ರಕ್ರಿಯೆಗಳು ನಡೆಯುತ್ತಲೇ ಇದೆ.
