Asianet Suvarna News Asianet Suvarna News

ಭಾರತದ ಈ ರಾಜ್ಯದಲ್ಲಿ ಅತೀ ಹೆಚ್ಚು ಜೋಡಿಗಳಿಂದ ಕಾಂಡೋಮ್ ಬಳಕೆ, ಕರ್ನಾಟಕದ ಸ್ಥಾನ ಎಷ್ಟು?

ಕಾಂಡೋಮ್ ಇಲ್ಲದೆ ಲೈಂಗಿಕ ಕ್ರಿಯೆ ಟ್ರೆಂಡ್ ಇತ್ತೀಚೆಗೆ ಹೆಚ್ಚಾಗುತ್ತಿದೆ ಅನ್ನೋ ವಿಶ್ವ ಆರೋಗ್ಯ ಸಂಸ್ಥೆ ವರದಿ ಆತಂಕ ಹೆಚ್ಚಿಸಿತ್ತು. ಇದರ ಬೆನ್ನಲ್ಲೇ ಭಾರತದಲ್ಲಿ ಯಾವ ರಾಜ್ಯಗಳು ಹೆಚ್ಚು ಕಾಂಡೋಮ್ ಬಳಕೆ ಮಾಡುತ್ತಿದೆ. ಈ ಪೈಕಿ ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ?
 

List of States with highest numbers of condom usage among Indian couples ckm
Author
First Published Sep 1, 2024, 3:43 PM IST | Last Updated Sep 1, 2024, 3:49 PM IST

ಬೆಂಗಳೂರು(ಸೆ.01) ಲೈಂಗಿಕ ಕ್ರಿಯೆ ವೇಳೆ ಕಾಂಡೋಮ್ ಬಳಕೆ ಪ್ರಮಾಣ ಕಡಿಮೆಯಾಗುತ್ತಿದೆ ಅನ್ನೋ ಆತಂಕವನ್ನು ವಿಶ್ವ ಆರೋಗ್ಯ ಸಂಸ್ಥೆ ವ್ಯಕ್ತಪಡಿಸಿದೆ. ಭಾರತದಲ್ಲಿ ಕಾಂಡೋಮ್ ಬಳಕೆ ಕುರಿತು ಜಾಗೃತಿ ಕಾರ್ಯಕ್ರಮಗಳು, ಅರಿವು ಮೂಡಿಸುವ ಕಾರ್ಯವನ್ನು ಆರೋಗ್ಯ ಇಲಾಖೆ ಮಾಡುತ್ತಿದೆ. ಆದರೆ ಕಾಂಡೋಮ್, ಲೈಂಗಿಕ ಕ್ರಿಯೆಗಳಲ್ಲಿ ಗೌಪ್ಯತೆ ಹೆಚ್ಚಾಗಿರುವ ಕಾರಣ ಆರೋಗ್ಯ ಕುರಿತು ಸಮಸ್ಯೆಗಳು ಹೆಚ್ಚಾಗುತ್ತಿದೆ ಅನ್ನೋ ವಾದವಿದೆ. ಇದರ ನಡುವೆ ಭಾರತದಲ್ಲಿ ಕಾಂಡೋಮ್ ಬಳಕೆ ಪ್ರಮಾಣ ಎಷ್ಟು? ಯಾವ ರಾಜ್ಯದ ಜೋಡಿಗಳು ಹೆಚ್ಚು ಕಾಂಡೋಮ್ ಬಳಕೆ ಮಾಡುತ್ತಾರೆ ಅನ್ನೋ ಮಾಹಿತಿ ಬಯಲಾಗಿದೆ. ಭಾರತದ ದಿಯು ದಮನ್ ಕೇಂದ್ರಾಡಳಿತ ಪ್ರದೇಶದ ದಾದ್ರಾ ನಗರ್ ಹಾವೆಲಿಯ ಜೋಡಿಗಳು ಅತೀ ಹೆಚ್ಚು ಕಾಂಡೋಮ್ ಬಳಕೆ ಮಾಡುತ್ತಾರೆ ಎಂದು ಸಮೀಕ್ಷಾ ವರದಿ ಹೇಳುತ್ತಿದೆ.

ರಾಷ್ಟ್ರೀಯ ಕುಟುಂಬ ಆರೋಗ್ಯ ಇಲಾಖೆಯ 2021-22ರಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ, ದಾದ್ರಾ ನಗರ್ ಹಾವೆಲಿಯ ಗರಿಷ್ಠ ಕಾಂಡೋಮ್ ಬಳಕೆಯ ಭಾರತದ ಪ್ರದೇಶ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರತಿ ರಾಜ್ಯ, ಕೇಂದ್ರಾಡಳಿತ ಪ್ರದೇಶದ 10,000 ಜೋಡಿಗಳನ್ನು ಮಾದರಿಗಳಾಗಿ ಪರಿಗಣಿಸಿ ಸಮೀಕ್ಷೆ ನಡೆಸಲಾಗಿದೆ. ಈ ಪೈಕಿ ದಾದ್ರಾ ನಗರ್ ಹಾವೆಲಿಯಲ್ಲಿ 10 ಸಾವಿರ ಜೋಡಿಗಳ ಪೈಕಿ 993 ಜೋಡಿಗಳು ಕಾಂಡೋಮ್ ಬಳಕೆ ಮಾಡುತ್ತಾರೆ. 

ನ್ಯಾಯಬದ್ಧ ಸುರಕ್ಷಿತ ಆಟಕ್ಕೆ, ಒಪ್ಪಿಗೆಯ ಗೇಮ್; ಒಲಿಂಪಿಕ್ಸ್‌ನ ಕಾಂಡೋಮ್ ಸ್ಲೋಗನ್‌ಗೆ ನೆಟ್ಟಿಗರು ಸುಸ್ತು!

ಎರಡನೇ ಸ್ಥಾನದಲ್ಲಿ ಆಂಧ್ರ ಪ್ರದೇಶ ವಿರಾಜಮಾನವಾಗಿದೆ. ಆಂಧ್ರ ಪ್ರದೇಶದಲ್ಲಿ ಸಮೀಕ್ಷೆಗೆ ಒಳಪಡಿಸಿ 10,000 ಜೋಡಿಗಳ ಪೈಕಿ 978ಜೋಡಿ  ಕಾಂಡೋಮ್ ಬಳಕೆ ಮಾಡುತ್ತಿದ್ದಾರೆ.  ಈ ಸ್ಥಾನಮಾನ ಪೈಕಿ ಕರ್ನಾಟಕ 15ನೇ ಸ್ಥಾನದಲ್ಲಿದೆ. ಕರ್ನಾಟಕದ 10,000 ಜೋಡಿಗಳನ್ನು ಮಾದರಿಗಳಾಗಿ ಪರಿಗಣಿಸಿ ಸಮೀಕ್ಷೆ ನಡೆಸಿದಾಗ 307 ಜೋಡಿಗಳು ಕಾಂಡೋಮ್ ಬಳಕೆ ಮಾಡುತ್ತಿರುವುದಾಗಿ ಹೇಳಿದ್ದಾರೆ.

ವಿಶೇಷ ಅಂದರೆ ಭಾರತದಲ್ಲಿ ಶೇಕಡಾ 94 ರಷ್ಟು ಪುರುಷರಿಗೆ ಕಾಂಡೋಮ್ ಕುರಿತ ಮಾಹಿತಿ ಇದೆ. ಆದರೆ ಬಳಕೆ ಪ್ರಮಾಣ ಮಾತ್ರ ತೀರಾ ಕಡಿಮೆ. ಭಾರತದಲ್ಲಿ ಸರಾಸರಿ 33.07 ಕೋಟಿ ಕಾಂಡೋಮ್‌ಗಳ ವಿತರಣೆಯಾಗುತ್ತಿದೆ. ಉತ್ತರ ಪ್ರದೇಶದಲ್ಲಿ 5.3 ಕೋಟಿ ಕಾಂಡೋಮ್ ವಿತರಣೆಯಾಗುತ್ತಿದೆ. ಇದು ಇತರ ರಾಜ್ಯಗಳಿಗೆ ಹೋಲಿಸಿದರೆ ಗರಿಷ್ಠ. ಉತ್ತರ ಪ್ರದೇಶದಲ್ಲಿ 2024ರ ಒಟ್ಟು ಜನಸಂಖ್ಯೆ ಸರಿಸುಮಾರು  22 ಕೋಟಿ.

ಸರ್ಕಾರಿ ಪ್ರಾಥಮಿಕ ಸೇರಿದಂತೆ ಇತರ ಆರೋಗ್ಯ ಕೇಂದ್ರಗಳಲ್ಲಿ ಕಾಂಡೋಮ್‌ಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಆದರೆ ಬಳಕೆ ಮಾಡುವ ಪ್ರಮಾಣ ಮಾತ್ರ ಕಡಿಮೆಯಾಗುತ್ತಿದೆ ಅನ್ನೋದು ಸಮೀಕ್ಷೆಯಿಂದ ಬಯಲಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಎಚ್ಚರಿಕೆ: ಹೆಚ್ಚಾಗ್ತಿದೆ ಕಾಂಡೋಮ್ ಇಲ್ಲದೇ ಲೈಂಗಿಕ ಸಂಬಂಧ ಬೆಳೆಸೋ ಟ್ರೆಂಡ್!

 

10,000 ಜೋಡಿಗಳ ಪೈಕಿ ಕಾಂಡೋಮ್ ಬಳಕೆ ಮಾಡುವ ಜೋಡಿಗಳ ಸಂಖ್ಯೆ

ಪುದುಚೇರಿ: 960
ಪಂಜಾಬ್: 895
ಚಂಡೀಘಡ:822
ಹರ್ಯಾಣ: 685
ಹಿಮಾಚಲ ಪ್ರದೇಶ: 567
ರಾಜಸ್ಥಾನ:514
ಗುಜರಾತ್: 430
ಸಿಕ್ಕಿಂ: 390
ಲಕ್ಷದ್ಪೀಪ:381
ಮಧ್ಯಪ್ರದೇಶ:351
ಉತ್ತರಖಂಡ:308
ಕರ್ನಾಟಕ : 307

Latest Videos
Follow Us:
Download App:
  • android
  • ios