ಪುರುಷರಲ್ಲಿ ಮತ್ತೆ ಜನಪ್ರಿಯವಾಗ್ತಿದೆ ಲಂಗೋಟಿ, ಅಮೇಜಾನ್‌ನಲ್ಲೂ ಭರ್ಜರಿ ಮಾರಾಟ!

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪುರುಷರು ತಮ್ಮ ಆರೋಗ್ಯ ಮತ್ತು ಸೌಂದರ್ಯಕ್ಕಾಗಿ ಲಂಗೋಟಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಲಂಗೋಟಿ ಧರಿಸುವುದರಿಂದ ಸ್ಪರ್ಮ್ ಕೌಂಟ್ ಹೆಚ್ಚುತ್ತದೆ ಮತ್ತು ಒಟ್ಟಾರೆ ಪುರುಷ ಆರೋಗ್ಯ ಸುಧಾರಿಸುತ್ತದೆ ಎಂದು ಹೇಳಲಾಗುತ್ತದೆ.

Langoti is back in popularity among men selling well on Amazon too san

ಬೆಂಗಳೂರು (ಆ,24): ಜಾಕಿ, ವಿಐಪಿ, ಯುಎಸ್‌ ಫೋಲೋ.. ಇಂದು ಮಾರುಕಟ್ಟೆಯಲ್ಲಿ ಜನಪ್ರಿಯವಾದ ಅಂಡರ್‌ವೇರ್‌ ಬ್ರ್ಯಾಂಡ್‌ಗಳಿವೆ. ಆದರೆ, ಹೆಚ್ಚಿನ ಪುರುಷರು ಮಾತ್ರ ಅದಕ್ಕೂ ಹಿಂದಿನ ಕಾಲಕ್ಕೆ ತಿರುಗಿದ್ದಾರೆ. ತಮ್ಮ ಮರ್ಮಾಂಗದ ಶುಚಿತ್ವ ಹಾಗೂ ಕಂಫರ್ಟ್‌ಗಾಗಿ ಅವರು ಲಂಗೋಟಿಗಳತ್ತ ಮುಖ ಮಾಡಿದ್ದಾರೆ ಎಂದು ವರದಿಯಾಗಿದೆ. ಈಗಾಗಲೇ ಮಾಡೆಲ್‌ಗಳು ಹಾಗೂ ಕೆಲ ಸ್ಪೋರ್ಟ್ಸ್‌ ಪರ್ಸನಾಲಿಟಿಗಳು ಖೂಡ ಲಂಗೋಟಿಯನ್ನು ಬಳಸುತ್ತಾರೆ. ಇನ್ನು ಟೆಸ್ಟಿಕಲ್ ಪೈನ್ (ವೃಷಣ ಬೀಜದ ನೋವು) ಇರೋರಿಗೆ ಲಂಗೋಟಿ ಧರಿಸಲು ವೈದ್ಯರೇ ಸಲಹೆ ನೀಡುತ್ತಾರೆ. ಇದು ಪುರುಷರ ಆರೋಗ್ಯಕ್ಕೆ ಅದರಲ್ಲಿಯೂ ಸ್ಪರ್ಮ್ ಹೆಚ್ಚಿಸಲು ಅತ್ಯುತ್ತಮ ಒಳ್ಳೇ ಮಾರ್ಗ ಎಂದೂ ಹೇಳ್ತಾರೆ. ಇನ್ನು ಅಮೇಜಾನ್‌ ವೈಬ್‌ಸೈಟ್‌ ಕೂಡ ಲಂಗೋಟಿಯನ್ನು ಮಾರಾಟಕ್ಕೆ ಇಟ್ಟಿದೆ. ಐದು ಪೀಸ್‌ನ ಲಂಗೋಟಿಗೆ 554 ರೂಪಾಯಿ ಆಗಿದ್ದು, ಖರೀದಿ ಮಾಡಿರುವ ಹೆಚ್ಚಿನವರು ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ. ಇತ್ತೀಚೆಗೆ ಕನ್ನಡದಲ್ಲಿ ಲಂಗೋಟಿ ಮ್ಯಾನ್‌ ಎನ್ನುವ ಚಿತ್ರ ಕೂಡ ಬಿಡುಗಡೆಯಾಗುತ್ತಿದೆ. ಇದರಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಅವಹೇಳನಕಾರಿಯಾಗಿ ಚಲನಚಿತ್ರದ ಟೀಸರ್‌ ಬಿಎಉಗಡೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದದೆ. ಯಾವುದೇ ಕಾರಣಕ್ಕೂ ಈ ಚಿತ್ರ ಬಿಡುಗಡೆ ಆಗಬಾರದು ಎಂದು ಬ್ರಾಹ್ಮಣ ಸಮುದಾಯದವರು ಮನವಿ ಮಾಡಿಕೊಂಡಿದ್ದಾರೆ.

ಇನ್ನು ಲಂಗೋಟಿ ಧರಿಸುವುದು ಪುರುಷರ ಆರೋಗ್ಯಕ್ಕೂ ಸಂಬಂಧಿಸಿದೆ. ಲಂಗೋಟಿ ಧರಿಸುವುದು ಅವರ ಲೈಂಗಿಕ ಜೀವನವನ್ನು ಸುಧಾರಿಸುತ್ತದೆ. ಅದಕ್ಕಾಗಿಯೇ ಈಗ ಕೆಲವು ಜಿಮ್‌ಗಳಲ್ಲಿ ಸಂಕೀರ್ಣ ವ್ಯಾಯಾಮದ ಸಮಯದಲ್ಲಿ ಲಂಗೋಟಿ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಸಾಮಾನ್ಯವಾಗಿ ಕುಸ್ತಿ ಪಂದ್ಯಗಳ ವೇಳೆ ಇಬ್ಬರೂ ಸ್ಪರ್ಧಿಗಳು ಲಂಗೋಟಿ ಧರಿಸಿಯೇ ಕಣಕ್ಕೆ ಇಳಿದಿರೋದನ್ನ ನೋಡಿಯೇ ಇರುತ್ತೀರಿ. ಲಂಗೋಟಿ ಇಲ್ಲದೆ, ಆಧುನಿಕ ಕಾಲದ ಅಂಡರ್‌ವೇರ್‌ ಧರಿಸಿ ಅವರು ಕಣಕ್ಕೆ ಇಳಿಯುವಂತಿಲ್ಲ.

ಲಂಗೋಟಿ ಅನ್ನೋದು ಪುರುಷರ ಒಳ ಉಡುಪು. ಅಂಡರ್‌ವೇರ್‌ಗಳು ಬರುವ ಮುನ್ನ ಇದೇ ಕೆಲಸ ಮಾಡ್ತಿತ್ತು. ಇದು ಹೊಲಿಯದ ತ್ರಿಕೋನ ಬಟ್ಟೆಯಾಗಿದೆ. ಇದನ್ನು ವಿಶೇಷವಾಗಿ ಪುರುಷ ಜನನಾಂಗಗಳನ್ನು ಅಂದರೆ ವೃಷಣ ಮತ್ತು ಶಿಶ್ನ ಪ್ರದೇಶವನ್ನು ಮುಚ್ಚಲು ತಯಾರಿಸಲಾಗುತ್ತದೆ. ಆದರೆ ಅದನ್ನು ಕಟ್ಟಲು ವಿಶೇಷ ಮಾರ್ಗವಿದೆ. ಈ ಕಾರಣದಿಂದಾಗಿ ಇದು ಪುರುಷರ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.

ಲಂಗೋಟಿ ಸರಳವಾಗಿ ಕಾಣಿಸಬಹುದು ಆದರೆ ಅದನ್ನು ಕಟ್ಟಲು ವಿಶೇಷ ಮಾರ್ಗವಿದೆ. .ಲಂಗೋಟಿಯನ್ನು ವೃಷಣಗಳು ಮತ್ತು ಶಿಶ್ನ ಪ್ರದೇಶದ ಸುತ್ತಲೂ ಸುತ್ತುವ ಮೂಲಕ ಅದು ಬೆಂಬಲವನ್ನು ಪಡೆಯುತ್ತದೆ ಮತ್ತು ಅನಗತ್ಯ ಒತ್ತಡವನ್ನು ಸೃಷ್ಟಿಸುವುದಿಲ್ಲ. ಇದು ವೃಷಣಗಳ ಗಾತ್ರವನ್ನು ಸಮತೋಲನದಲ್ಲಿಡುತ್ತದೆ. ನೀವು ಯಾವುದೇ ಸಂಕೀರ್ಣ ವ್ಯಾಯಾಮ  ಮಾಡಿದಾಗ, ಆ ಸಮಯದಲ್ಲಿ ಲಂಗೋಟಿ ಧರಿಸಿದರೆ ಒಳ್ಳೆಯದು. ಪುರುಷರ ಖಾಸಗಿ ಅಂಗಗಳ ಆರೋಗ್ಯಕ್ಕೆ ಇದು ಮುಖ್ಯವಾಗಿದೆ. ಇದರಿಂದ ಅನಗತ್ಯ ಒತ್ತಡ ಆಗೋದಿಲ್ಲ. ಕಾರ್ಡಿಯೋ ಮಾಡುವಾಗಲೂ ಈ ರೀತಿ ನಿಮ್ಮ ಆರೈಕೆಯನ್ನು ಮಾಡಿಕೊಳ್ಳಬಹುದು.

ಇದು ಪುರುಷರ ವೃಷಣಗಳನ್ನು ಆರೋಗ್ಯವಾಗಿರಿಸುತ್ತದೆ. ಕೆಲವೊಮ್ಮೆ ಅತಿಯಾದ ವ್ಯಾಯಾಮದಿಂದಾಗಿ ಅವುಗಳ ಗಾತ್ರವು ಹೆಚ್ಚಾಗುತ್ತದೆ. ಇದರಿಂದಾಗಿ ಅವು ನೋಯಲು ಆರಂಭವಾಗುತ್ತದೆ. ಫಲವತ್ತತೆಯನ್ನು ಕಾಪಾಡಿಕೊಳ್ಳಲು, ವೃಷಣಗಳ ಆರೋಗ್ಯವನ್ನು ಕಾಳಜಿ ವಹಿಸುವುದು ಅತ್ಯಂತ ಮುಖ್ಯ ಎಂದು ವಿಜ್ಞಾನಿಗಳು ಹೇಳುತ್ತಾರೆ. ಕೆಲವೊಮ್ಮೆ ಅವುಗಳಲ್ಲಿ ನೀರು ತುಂಬುವ ಸಮಸ್ಯೆ ಇದೆ. ಇದು ಲೈಂಗಿಕ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ಎಲ್ಲಾ ಸಮಸ್ಯೆಗಳನ್ನು ತಡೆಗಟ್ಟುವಲ್ಲಿ ಲಂಗೋಟಿ ತುಂಬಾ ಸಹಾಯಕವಾಗಿದೆ.

ಮತ್ತೆ ಬಂದ್ರು ಸಂಜೋತ ಭಂಡಾರಿ, 'ಲಂಗೋಟಿ ಮ್ಯಾನ್' ಟೀಸರ್ ಲಾಂಚ್ ಮಾಡಿದ ನಟ ಶರಣ್‌!

ಲಂಗೋಟಿಯ ದೊಡ್ಡ ವೈಶಿಷ್ಟ್ಯವೆಂದರೆ ಅದು ಸರಳವಾದ ಹತ್ತಿ ಬಟ್ಟೆಯಿಂದ ಮಾಡಲ್ಪಟ್ಟಿದೆ. ಇದರಿಂದಾಗಿ ಯಾವುದೇ ದದ್ದುಗಳು ಅಥವಾ ಇತರ ಸಮಸ್ಯೆಗಳು ಎದುರಾಗೋದಿಲ್ಲ. ಇದನ್ನು ಚರ್ಮ ಸ್ನೇಹಿ ಎಂದು ಪರಿಗಣಿಸಲಾಗುತ್ತದೆ. ಇದರಿಂದಾಗಿ ಅನಗತ್ಯ ಶಾಖ ಉತ್ಪತ್ತಿಯಾಗುವುದಿಲ್ಲ. ಅದಕ್ಕಾಗಿಯೇ ಲಂಗೋಟಿ ಧರಿಸುವುದು ಪುರುಷರ ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ.

‘ಪುಟಗೋಸಿ’: ಅನಂತ್ ಹೆಗಡೆಗೆ ತನ್ನದೇ ಶೈಲಿಯಲ್ಲಿ ತಿರುಗೇಟು ಕೊಟ್ಟ ಮುಖ್ಯಮಂತ್ರಿ ಚಂದ್ರು

 

Latest Videos
Follow Us:
Download App:
  • android
  • ios