ಆಗಾಗ ನೆಟಿಕೆ ತೆಗೀತಿದ್ರೆ ಕೈ ಬೆರಳುಗಳಲ್ಲಿ ಶಕ್ತೀನೆ ಇರಲ್ಲ !
ಸುಮ್ ಸುಮ್ನೆ ನೆಟಿಕೆ (Knuckle Cracking) ತೆಗೆಯುವ ಅಭ್ಯಾಸ ಹಲವರಿಗಿರುತ್ತದೆ. ರಿಲ್ಯಾಕ್ಸ್ ಆಗೋಕೆ, ಟೆನ್ಶನ್ ಕಡಿಮೆ ಮಾಡ್ಕೊಳ್ಳೋಕೆ ಹೀಗೆಲ್ಲಾ ಮಾಡ್ತಾರೆ. ಆದ್ರೆ ಆಗಾಗ ನೆಟಿಕೆ ತೆಗೆಯೋ ಅಭ್ಯಾಸದಿಂದ ಆರೋಗ್ಯ (Health)ಕ್ಕೆಷ್ಟು ತೊಂದ್ರೆಯಿದೆ ಗೊತ್ತಾ?
ಬಹುತೇಕರಿಗೆ ಕೈಯ ನೆಟಿಕೆ (Knuckle Cracking) ಮುರಿಯುವ ಅಭ್ಯಾಸ (Habit)ವಿರುತ್ತದೆ. ಕೆಲವರು ರಿಲ್ಯಾಕ್ಸ್ ಆಗಲು ಈ ರೀತಿ ಮಾಡಿದರೆ ಇನ್ನು ಕೆಲವರು ಉದ್ವೇಗಕ್ಕೆ ಒಳಗಾದಾಗ ಹೀಗೆ ಮಾಡುತ್ತಿರುತ್ತಾರೆ. ಕೆಲವರು ಅಪರೂಪಕ್ಕೆ ಮಾಡಿದರೆ ಇನ್ನೂ ಕೆಲವರಿಗೆ ಅದು ಪ್ರತಿನಿತ್ಯದ ಅಭ್ಯಾಸವಾಗಿರುತ್ತದೆ. ಇದ್ರಿಂದ ಆರೋಗ್ಯ (Health)ಕ್ಕೆ ಒಳ್ಳೆಯದಾಗುತ್ತಾ, ಕೆಟ್ಟದಾಗುತ್ತಾ ಹಲವರಿಗೆ ತಿಳಿದಿರುವುದಿಲ್ಲ. ಹಾಗಿದ್ರೆ ಬೆರಳಿನ ನೆಟಿಕೆ ತೆಗಯುವುದರಿಂದ ಯಾವೆಲ್ಲಾ ಅಡ್ಡ ಪರಿಣಾಮಗಳಿವೆ , ಜನರು ಯಾಕಾಗಿ ಅದನ್ನು ಮಾಡುತ್ತಾರೆ ಅನ್ನೋದನ್ನು ತಿಳಿಯೋಣ.
ಬೆರಳುಗಳ ನೆಟಿಕೆ ತೆಗೆಯಲು ಯಾವುದೇ ವೈಜ್ಞಾನಿಕ ಕಾರಣವಿಲ್ಲ. ಅನೇಕರಿಗೆ ಕುತ್ತಿಗೆ ಅಥವಾ ಬೆರಳುಗಳ ನೆಟಿಕೆ ತೆಗೆಯುವ ಅಭ್ಯಾಸವಿದೆ. ಜನರು ತಮ್ಮ ಬೆರಳುಗಳ ನೆಟಿಕೆ ತೆಗೆಯುವುದರಿಂದ ಅವರಿಗೆ ಆರಾಮದಾಯಕವಾಗುತ್ತದೆ. ಹಾಗಾಗಿ ಅವರು ಪ್ರತಿದಿನ ನೆಟಿಕೆ ತೆಗೆಯುತ್ತಾ ಇರುತ್ತಾರೆ. ಶಬ್ದ ಎಲ್ಲಿಂದ ಬರುತ್ತದೆ ಎಂಬುದರ ಕುರಿತು ಸಾಕಷ್ಟು ಚರ್ಚೆಗಳು ನಡೆದಿವೆ. ಅದೃಷ್ಟವಶಾತ್ - ಕನಿಷ್ಠ ನಮ್ಮಲ್ಲಿ ಅದರ ಬಗ್ಗೆ ಕುತೂಹಲ ಹೊಂದಿರುವವರಿಗೆ ನೆಟಿಕೆ ತೆಗೆಯುವುದು ಸಾಕಷ್ಟು ಪ್ರಮಾಣದ ಸಂಶೋಧನೆಯ ವಿಷಯವಾಗಿದೆ. ನಿಮಗೂ ಬೆರಳಿನ ನೆಟಿಕೆ ತೆಗೆಯುವ ಅಭ್ಯಾಸವಿದ್ದರೆ ಇದ್ರಿಂದ ಆರೋಗ್ಯಕ್ಕೆ ಅದೆಷ್ಟು ತೊಂದ್ರೆಯಿದೆ ಅನ್ನೋದನ್ನು ಮೊದ್ಲು ತಿಳ್ಕೊಳ್ಳಿ.
Menstruation: ಕೀಲುನೋವಿನ ಸಮಸ್ಯೆಗೆ ಪರಿಹಾರ ಹೀಗಿವೆ ನೋಡಿ..!
ನೆಟಿಕೆ ತೆಗೆಯುವಾಗ ಶಬ್ದವೇಕೆ ಬರುತ್ತದೆ ?
ಬೆರಳುಗಳ ಕೀಲುಗಳಲ್ಲಿ ಸೈನೋವಿಯಲ್ ದ್ರವವಿದೆ ಎನ್ನಲಾಗುತ್ತದೆ. ಇದು ಸಾರಜನಕ, ಆಮ್ಲಜನಕ ಮತ್ತು ಕಾರ್ಬನ್ ಡೈಆಕ್ಸೈಡ್‌ನ ಗುಳ್ಳೆಗಳನ್ನು ಬಿಡುಗಡೆ ಮಾಡುತ್ತದೆ. ಬೆರಳುಗಳನ್ನು ಬಗ್ಗಿಸಿದಾಗ ಈ ಗುಳ್ಳೆಗಳು ಸಿಡಿಯುತ್ತವೆ. ಈ ಕಾರಣದಿಂದಾಗಿ ಮುರಿದ ಶಬ್ದವಾಗುತ್ತದೆ. ನೀವು ಒಮ್ಮೆ ನೆಟಿಕೆ ತೆಗೆದ ನಂತರ ಮತ್ತೊಮ್ಮೆ ನೆಟಿಗೆ ತೆಗೆದಾಗ ಶಬ್ಧ ಬರದಿರಲು ಕಾರಣವೆಂದರೆ ಕಾರಣವೆಂದರೆ ಗ್ಯಾಸ್ ಗುಳ್ಳೆಗಳು ಜಂಟಿಯಾಗಿ ಮತ್ತೆ ಸಂಗ್ರಹಗೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಅತೀ ಹೆಚ್ಚು ಬಾರಿ ನೆಟಿಕೆ ತೆಗೆಯುವುದು ಕೀಲುತಪ್ಪುವಿಕೆ ಅಥವಾ ಸ್ನಾಯುರಜ್ಜು ಗಾಯಗಳಿಗೆ ಕಾರಣವಾಗಬಹುದು.
ಜನರು ಯಾಕೆ ನೆಟಿಕೆ ತೆಗೆಯುತ್ತಾರೆ ?
ಮೈ ಕೈ ನೋವು ಅನಿಸಿದ ಸಂದರ್ಭ ರಿಲ್ಯಾಕ್ಸ್ ಆಗಲು ಹಲವರು ಬೆರಳಿನ ನೆಟಿಕೆ ತೆಗೆಯುತ್ತಾರೆ. ಇನ್ನು ಕೆಲವು ಜನರು ಬೆರಳಿನ ನೆಟಿಗೆ ತೆಗೆಯುವಾಗ ಅದರ ಶಬ್ಧ ಕೇಳಲು ಇಷ್ಟಪಡುತ್ತಾರೆ. ಇದು ಒತ್ತಡವನ್ನು ನಿವಾರಿಸುತ್ತದೆ ಮತ್ತು ಚಲನಶೀಲತೆಯನ್ನು ಹೆಚ್ಚಿಸುತ್ತದೆ ಎಂದು ನಂಬುತ್ತಾರೆ. ಇನ್ನು ಕೆಲವರು ಹೆಚ್ಚು ಉದ್ವೇಗ, ಆತಂಕ, ಗೊಂದಲದಲ್ಲಿದ್ದಾಗ ಮುಂದೇನು ಮಾಡಬೇಕು ಎಂಬುದು ತಿಳಿಯದಾಗ ಬೆರಳಿನ ನೆಟಿಕೆ ತೆಗೆಯುತ್ತಾರೆ. ಇದ್ರಿಂದ ಏನೆಲ್ಲಾ ತೊಂದ್ರೆಯಾಗುತ್ತೆ ನೋಡಿ.
ಹಳೆ ಕೀಲು ನೋವು ಕಾಡುತಿದ್ದರೆ, ತಕ್ಷಣವೇ ಈ ಪರಿಣಾಮಕಾರಿ ಮನೆಮದ್ದು ಟ್ರೈ ಮಾಡಿ!
ಕೀಲುಗಳ ರಚನೆಯಲ್ಲಿ ಬದಲಾವಣೆ: ನೆಟಿಗೆ ಮುರಿಯುವುದರಿಂದ ನೋವು ಆಗದಿದ್ದರೂ ಅದು ಬೆರಳಿನ ಕೀಳುಗಳ ರಚನೆಯನ್ನು ಬದಲಾಯಿಸಬಹುದು. ಕೆಲವೊಮ್ಮೆ ಊತವನ್ನು ಸಹ ಉಂಟುಮಾಡಬಹುದು. ಬೆರಳನ್ನು ಮೂಳೆಯಿಂದ ಹೊರಗೆ ಎಳೆಯುವುದರಿಂದ ಮೂಳೆಗೆ ಸಮಸ್ಯೆ ಆಗಬಹುದು. ಬೆರಳುಗಳ ನೆಟಿಗೆ ತೆಗೆಯುವುದಿಂದ ಕೈಗಳಲ್ಲಿ ದೌರ್ಬಲ್ಯ ಉಂಟಾಗುತ್ತದೆ. ನೀವು ನೆಟಿಗೆಯನ್ನು ವಿರುದ್ಧ ದಿಕ್ಕಿನಲ್ಲಿ ತೆಗೆದರೆ ಇದು ನೋವಿಗೆ ಕಾರಣವಾಗುತ್ತದೆ.
ಸಂಧಿವಾತಕ್ಕೆ ಕಾರಣವಾಗುತ್ತದೆ: ಬೆರಳಿನ ನೆಟಿಗೆ ಮುರಿಯುವುದು ಕೆಟ್ಟ ಅಭ್ಯಾಸ. ಇದು ಚಡಪಡಿಕೆಯ ಸಂಕೇತ. ಇದು ನಿರಂತರವಾಗಿ ಮಾಡಿದಾಗ ಬೆರಳುಗಳ ಕೀಲುಗಳಲ್ಲಿ ಯಾವುದೇ ನಮ್ಯತೆ ಇರುವುದಿಲ್ಲ. ಈ ರೀತಿಯಲ್ಲಿ ಬೆರಳುಗಳನ್ನು ಬಿರುಕುಗೊಳಿಸುವುದು ಜಂಟಿ ಜಾಗವನ್ನು ಕಡಿಮೆ ಮಾಡುತ್ತದೆ. ಇದು ಕ್ರಮೇಣ ಬೆರಳುಗಳಲ್ಲಿ ಸಂಧಿವಾತದ ಬೆಳವಣಿಗೆಗೆ ಕಾರಣವಾಗುತ್ತದೆ.
ಕೈ ಹಿಡಿತದ ಸಾಮರ್ಥ್ಯ ಕಡಿಮೆಯಾಗುತ್ತದೆ: ಬೆರಳುಗಳ ನೆಟಿಕೆಗಳ ನಿರಂತರವಾಗಿ ತೆಗೆಯುತ್ತಿದೆ, ಪ್ರಯತ್ನದ ನಂತರ ಜಂಟಿ ಕೀಲುತಪ್ಪಿಕೆಗಳು ಮತ್ತು ಸ್ನಾಯುರಜ್ಜು ಗಾಯಗಳನ್ನು ವಿವರಿಸಲಾಗಿದೆ. 1990 ರಲ್ಲಿ ಪ್ರಕಟವಾದ ಒಂದು ಅಧ್ಯಯನವು ತಮ್ಮ ನೆಟಿಕೆಗಳನ್ನು ನಿಯಮಿತವಾಗಿ ಬಿರುಕುಗೊಳಿಸುವ 74 ಜನರಲ್ಲಿ, ಅವರ ಸರಾಸರಿ ಹಿಡಿತದ ಸಾಮರ್ಥ್ಯವು ಕಡಿಮೆಯಾಗಿದೆ ಮತ್ತು ತಮ್ಮ ನೆಟಿಕೆಗಳನ್ನು ತೆಗೆಯದ 226 ಜನರಿಗಿಂತ ಹೆಚ್ಚು ಕೈ ಊತದ ನಿದರ್ಶನಗಳಿವೆ ಎಂದು ಕಂಡುಹಿಡಿದಿದೆ. ಆದಾಗ್ಯೂ, ಸಂಧಿವಾತದ ಸಂಭವವು ಎರಡೂ ಗುಂಪುಗಳಲ್ಲಿ ಒಂದೇ ಆಗಿರುತ್ತದೆ.