ಮೊಬೈಲ್ ಬಳಕೆಯಿಂದ ಮಿದುಳು ಕ್ಯಾನ್ಸರ್ ? ಆಕ್ಸ್‌ಫರ್ಡ್ ಅಧ್ಯಯನ ಹೇಳಿದ್ದಿಷ್ಟು
* ಮೊಬೈಲ್‌ನಿಂದ ಆರೋಓಗ್ಯಕ್ಕೆ ಭಾರೀ ಅಪಾಯ?
* ಮೊಬೈಲ್ ಬಳಕೆಯಿಂದ ಮಿದುಳು ಕ್ಯಾನ್ಸರ್ ?
* 1 ದಶಕದಲ್ಲಿ 4 ಲಕ್ಷಕ್ಕೂ ಅಧಿಕ ಜನರ ಮೇಲೆ ಅಧ್ಯಯನ
ನವದೆಹಲಿ(ಮಾ.31): ನಿಯಮಿತವಾಗಿ ಮೊಬೈಲ್ ಫೋನ್ ಬಳಕೆ ಮಾಡುವುದು ಮಿದುಳಿನ ಕ್ಯಾನ್ಸರ್ ಉಂಟಾಗುವ ಅಪಾಯವನ್ನು ಹೆಚ್ಚು ಮಾಡುವುದಿಲ್ಲ ಎಂದು ಆಕ್ಸ್‌ಫರ್ಡ್ ವಿವಿ ಅಧ್ಯಯನವೊಂದು ತಿಳಿಸಿದೆ.
ಇದಕ್ಕಾಗಿ ಸುಮಾರು 1 ದಶಕದಲ್ಲಿ 4 ಲಕ್ಷಕ್ಕೂ ಅಧಿಕ ಜನರ ಮೇಲೆ ಅಧ್ಯಯನ ನಡೆಸಲಾಗಿದೆ. ಈ ಅವಧಿಯಲ್ಲಿ ಮೊಬೈಲ್ ಬಳಸುವ ಶೇ.0.41ರಷ್ಟುಮಹಿಳೆಯರಲ್ಲಿ ಮಿದುಳು ಕ್ಯಾನ್ಸರ್ ಕಂಡುಬಂದಿದೆ. ಆದರೆ ಮೊಬೈಲ್ ಬಳಸದ ಶೇ.0.44ರಷ್ಟುಜನರಲ್ಲಿ ಮಿದುಳು ಕ್ಯಾನ್ಸರ್ ಪತ್ತೆಯಾಗಿದೆ. ಹಾಗಾಗಿ ಮೊಬೈಲ್ ಬಳಕೆಗೂ ಮಿದುಳು ಕ್ಯಾನ್ಸರ್‌ಗೂ ಸಂಬಂಧವಿಲ್ಲ ಎಂದು ಸಾಬೀತಾಗಿದೆ’ ಎಂದು ಅಧ್ಯಯನ ಹೇಳಿದೆ.
ಅಧ್ಯಯನವನ್ನು ಜರ್ನಲ್ ಆಫ್ ನ್ಯಾಷನಲ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ನಲ್ಲಿ ಪ್ರಕಟಿಸಿದೆ.
1.5 ಮಿಲಿ ರಕ್ತದಲ್ಲಿ ಈ ಪ್ರಮಾಣದ Cancer Cells ಇದ್ರೆ ಅಪಾಯ ಖಂಡಿತಾ!
ಕ್ಯಾನ್ಸರ್ (Cancer) ಹೆಸರು ಕೇಳಿದ್ರೆ ಭಯ (Fear) ವಾಗುತ್ತದೆ. ಅನೇಕರಿಗೆ ಕೊನೆ ಹಂತದಲ್ಲಿ ಕ್ಯಾನ್ಸರ್ ಇರುವುದು ಪತ್ತೆಯಾಗುತ್ತದೆ. ಬ್ಲಡ್ (Blood) ಕ್ಯಾನ್ಸರ್,ಲಿವರ್ ಕ್ಯಾನ್ಸರ್, ಕಣ್ಣಿನ ಕ್ಯಾನ್ಸರ್, ಗಂಟಲಿನ ಕ್ಯಾನ್ಸರ್ ಹೀಗೆ ದೇಹದ ಎಲ್ಲ ಭಾಗಗಳಲ್ಲೂ ಈ ಕ್ಯಾನ್ಸರ್ ಗಡ್ಡೆಗಳು ಏಳ್ತವೆ. ಕ್ಯಾನ್ಸರ್ ಮೊದಲ ಹಂತದಲ್ಲಿದ್ದರೆ ಅದನ್ನು ಸುಲಭವಾಗಿ ಕಡಿಮೆ ಮಾಡ್ಬಹುದು. ಮೂರನೇ ಹಂತ ದಾಟಿದ ನಂತ್ರ ಸಾಕಷ್ಟು ಹೋರಾಟ ನಡೆಸಬೇಕು. ಕ್ಯಾನ್ಸರ್ ನಿಂದ ಬಲಿಯಾಗ್ತಿರುವವರ ಸಂಖ್ಯೆ ಕೂಡ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಕ್ಯಾನ್ಸರ್ ಅಪಾಯ ಮಟ್ಟಕ್ಕೆ ತಲುಪಿದೆ ಎಂಬುದನ್ನು ಹೇಗೆ ಪತ್ತೆ ಮಾಡ್ಬಹುದು ಎಂಬುದನ್ನು ಸಂಶೋಧಕರು ಕಂಡು ಹಿಡಿದಿದ್ದಾರೆ. ಬಾಯಿ ಕ್ಯಾನ್ಸರ್ ಗೆ ಸಂಬಂಧಿಸಿದಂತೆ ಸಂಶೋಧಕರು ಮಹತ್ವದ ವಿಷ್ಯವೊಂದನ್ನು ಹೇಳಿದ್ದಾರೆ.
ಭಾರತೀಯ ವಿಜ್ಞಾನಿಗಳು ಬಾಯಿ ಕ್ಯಾನ್ಸರ್ ಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಿದ್ದಾರೆ. ಅಧ್ಯಯನದ ಪ್ರಕಾರ, ಬಾಯಿಯ ಕ್ಯಾನ್ಸರ್ ರೋಗಿಯ 1.5 ಮಿಲಿ ರಕ್ತದಲ್ಲಿ 12 ಕ್ಕಿಂತ ಕಡಿಮೆ ಕ್ಯಾನ್ಸರ್ ಕೋಶವಿದ್ದರೆ, ಆ ವ್ಯಕ್ತಿಯು ಹೆಚ್ಚು ಕಾಲ ಬದುಕುವ ಸಾಧ್ಯತೆಯಿದೆ ಎಂದು ಭಾರತೀಯ ವಿಜ್ಞಾನಿಗಳು ಹೇಳಿದ್ದಾರೆ. ಬಾಯಿ ಕ್ಯಾನ್ಸರ್ ನಿಂದ ಬಳಲುತ್ತಿರುವ ರೋಗಿಯ 1.5 ಮಿಲಿ ರಕ್ತದಲ್ಲಿ 20 ಕ್ಕಿಂತ ಹೆಚ್ಚು ಕ್ಯಾನ್ಸರ್ ಜೀವಕೋಶವಿದ್ದರೆ, ರೋಗಿಯ ಕ್ಯಾನ್ಸರ್ ಮುಂದುವರಿದ ಹಂತವನ್ನು ತಲುಪಿದೆ ಎಂದರ್ಥ. ರಕ್ತವನ್ನು ತಲುಪುವ ಈ ಕ್ಯಾನ್ಸರ್ ಕೋಶಗಳನ್ನು ಸರ್ಕ್ಯುಲೇಟಿಂಗ್ ಟ್ಯೂಮರ್ ಸೆಲ್ (CTC) ಎಂದು ಕರೆಯಲಾಗುತ್ತದೆ. ಮುಂಬೈನ ಟಾಟಾ ಮೆಮೋರಿಯಲ್ ಆಸ್ಪತ್ರೆಯ ಡಾ.ಪಂಕಜ್ ಚತುರ್ವೇದಿ, ಡಾ.ಜಯಂತ್ ಖಂಡಾರೆ ಅವರ ತಂಡ ಮತ್ತು ಪುಣೆಯ ಆಕ್ಟೋರಿಯಸ್ ಡಾಟಾಸ್ಕಾರ್ ಟೆಕ್ನಾಲಜಿ ಹೆಸರಿನ ಕಂಪನಿ ಈ ಅಧ್ಯಯನವನ್ನು ನಡೆಸಿದೆ.
500 ರೋಗಿಗಳ ಡೇಟಾ ವಿಶ್ಲೇಷಣೆ : ಬಾಯಿಯ ಕ್ಯಾನ್ಸರ್ ಹೊಂದಿರುವ 500 ರೋಗಿಗಳ ಡೇಟಾ ವಿಶ್ಲೇಷಿಸಲಾಗಿದೆ. ಇವರಲ್ಲಿ 152 ರೋಗಿಗಳನ್ನು 4 ವರ್ಷಗಳ ಕಾಲ ಈ ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಅವರ ದೇಹದಿಂದ 1.5 ಮಿಲಿ ರಕ್ತವನ್ನು ತೆಗೆದುಕೊಂಡು CTC ಅನ್ನು ಲೆಕ್ಕಹಾಕಲಾಯಿತು. ಇದು ಭಾರತದಲ್ಲಿ ತಲೆ ಮತ್ತು ಗಂಟಲಿನ ಕ್ಯಾನ್ಸರ್‌ಗಳ ಅತಿ ದೊಡ್ಡ ಅಧ್ಯಯನ ಎನ್ನಲಾಗಿದೆ.
ನೀರೊಡೆಯದೆ ಅವಳಿ ಮಕ್ಕಳ ಜನನ: 80 ಸಾವಿರದಲ್ಲಿ ಒಬ್ಬರಿಗೆ ಮಾತ್ರ ಇಂಥಾ ಹುಟ್ಟು
20 ಕ್ಕಿಂತ ಹೆಚ್ಚು ಸಿಟಿಸಿ ನಂತರ ಮುಂದುವರಿದ ಹಂತ
20 ಕ್ಕಿಂತ ಹೆಚ್ಚು ಸಿಟಿಸಿ ಹೊಂದಿರುವ ರೋಗಿಗಳಲ್ಲಿ ಕ್ಯಾನ್ಸರ್ ಮಿತಿ ಮೀರಿದ ಹಂತದಲ್ಲಿತ್ತು. ಅಂದರೆ ಅವರು ಇನ್ನು ಹೆಚ್ಚು ದಿನ ಬದುಕುವುದಿಲ್ಲ ಎಂಬುದು ಸ್ಪಷ್ಟವಾಗಿತ್ತು. 12 ಸಿಟಿಸಿ ಗಳನ್ನು ಹೊಂದಿರುವ ರೋಗಿಗಳು ಕ್ಯಾನ್ಸರ್ ನ ಆರಂಭಿಕ ಹಂತವನ್ನು ಹೊಂದಿರುತ್ತಾರೆ. ಅವರು ಹೆಚ್ಚು ಕಾಲ ಬದುಕುವು ನಿರೀಕ್ಷೆ ಇಟ್ಟುಕೊಳ್ಳಬಹುದೆಂದು ಅಧ್ಯಯನದಲ್ಲಿ ಹೇಳಲಾಗಿದೆ.
ಭಾರತದಲ್ಲಿದ್ದಾರೆ ಇಷ್ಟು ಕ್ಯಾನ್ಸರ್ ರೋಗಿಗಳು : ರಾಷ್ಟ್ರೀಯ ಕ್ಯಾನ್ಸರ್ ನೋಂದಣಿ ಪ್ರಕಾರ, ಪ್ರಸ್ತುತ ದೇಶದಲ್ಲಿ ಸುಮಾರು 14 ಲಕ್ಷ ನಾಗರಿಕರು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. 1.2 ಲಕ್ಷ ಅಂದರೆ ಸುಮಾರು 9 ಪ್ರತಿಶತ ಮಹಾರಾಷ್ಟ್ರದಲ್ಲಿಯೇ ಇದ್ದಾರೆ. ಮೂರು ವರ್ಷಗಳ ಹಿಂದೆ ಈ ರಾಜ್ಯದಲ್ಲಿ ಕ್ಯಾನ್ಸರ್ ನಿಂದ 5,727 ಜನರು ಸಾವನ್ನಪ್ಪಿದ್ದಾರೆ. ಕಳೆದ ವರ್ಷ ಈ ಸಂಖ್ಯೆ 11,306 ಆಗಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.
ವಿಟಮಿನ್ ಮಾತ್ರೆಗಳನ್ನು ತಿನ್ತಿದ್ದೀರಾ ? ಹಾಗಿದ್ರೆ ಈ ವಿಚಾರಗಳನ್ನು ತಿಳ್ಕೊಳ್ಳಿ
ಈ ಆಧಾರದ ಮೇಲೆ ನಿರ್ಧಾರ : ಸಿಟಿಸಿ ಹೆಚ್ಚಾಗಿದೆ ಎಂದ್ರೆ ರೋಗಿಯಲ್ಲಿ ನೋಡಲ್ ಮೆಟಾಸಿಸ್ ಆರಂಭವಾಗಿದೆ ಎಂದರ್ಥ. ಅಂದ್ರೆ ಕ್ಯಾನ್ಸರ್ ಶುರುವಾದ ಭಾಗದಿಂದ ಉಳಿದ ಭಾಗಗಳಿಗೆ ರಕ್ತದ ಮೂಲಕ ಕ್ಯಾನ್ಸರ್ ಕೋಶಗಳು ತಲುಪುತ್ತಿವೆ ಎಂದರ್ಥ.
ತನಿಖೆ : ತನಿಖೆಯು ಅಧ್ಯಯನದಲ್ಲಿ ತೊಡಗಿಸಿಕೊಂಡಿರುವ ಕಂಪನಿಯ ಆನ್ಕೋಡಿಸ್ಕವರ್ ಪರೀಕ್ಷೆಯನ್ನು ನಡೆಸಿದೆ. ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆಯ ಆರ್ಥಿಕ ನೆರವಿನೊಂದಿಗೆ ಇದನ್ನು ಸಿದ್ಧಪಡಿಸಲಾಗಿದೆ. ಇದು ತನ್ನದೇ ಆದ ನಿಯಮಗಳ ಅಡಿಯಲ್ಲಿ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ ಪ್ರಮಾಣೀಕರಿಸಲ್ಪಟ್ಟ ಏಕೈಕ ಸಿಟಿಸಿ ಪರೀಕ್ಷೆಯಾಗಿದೆ.