Asianet Suvarna News Asianet Suvarna News

ಪಾದಗಳು ಹೇಳುತ್ತೆ ಮನುಷ್ಯನ ವ್ಯಕ್ತಿತ್ವ ಹೇಗೆ ಅಂತ, ಬ್ಯೂಟಿಫುಲ್ ಆಗಿ ಹೇಗಿಟ್ಟುಕೊಳ್ಳೋದು?

ಬ್ಯೂಟಿ ಪಾರ್ಲರ್‌ಗೆ (Beauty Parlor) ಹೋದಾಗ ಐಬ್ರೋಯಿಂದ (Eyebrows) ಹಿಡಿದು ಕಾಲಿನ ಪಾದಕ್ಕೂ ಸ್ನಾನ ಮಾಡಿಸುವುದು ಕಾಮನ್. ಕಾಲಿನ ಉಗುರಿನಿಂದ (Nail) ಹಿಡಿದು, ಒಡೆದ ಪಾದವನ್ನು ಸ್ವಚ್ಛಗೊಳಿಸುತ್ತಾರೆ. ಇರುವ ಕೊಳೆಯೆಲ್ಲಾ ಕಿತ್ತು ಬರುವ ಹಾಗೆ ಸ್ನಾನ ಮಾಡಿಸುವುದು ಮಸಾಜ್ (Message) ಮಾಡಿದಂತಹ ಅನುಭವ ಮೂಡುತ್ತದೆ. ಅಷ್ಟಕ್ಕೂ ಈ ಪಾದಗಳಿಗೆ ಸ್ನಾನ ಮಾಡಿಸುವುದು ಏಕೆ? ಹೇಗೆ? ಅದರಿಂದ ಲಾಭವೇನು? ಮನೆಯಲ್ಲಿ ಹೇಗೆ ಮಾಡಬಹುದು? ಇಲ್ಲಿದೆ ಮಾಹಿತಿ.

Kitchen items could help keep foot clean and neat
Author
Bangalore, First Published Jun 9, 2022, 3:59 PM IST

ಬ್ಯೂಟಿ ಪಾರ್ಲರ್‌ಗೆ (Beauty parlor) ಹೋದಾಗ ಐಬ್ರೋಯಿಂದ(Eyebrows) ಹಿಡಿದು ಕಾಲಿನ ಪಾದಕ್ಕೂ ಸ್ನಾನ ಮಾಡಿಸುವುದು ಕಾಮನ್. ಇತ್ತೀಚಿನ ದಿನಗಳಲ್ಲಿ ಸ್ಪಾ(Spa) ಎಂಬುದು ಸಾಮಾನ್ಯವಾಗಿದೆ. ಅದರಲ್ಲಿ ಪೆಡಿಕ್ಯೂರ್(Pedicure) ಸಹ ಒಂದು. ಕಾಲಿನ ಉಗುರಿನಿಂದ(Nail) ಹಿಡಿದು, ಒಡೆದ ಪಾದವನ್ನು ಸ್ವಚ್ಛಗೊಳಿಸುತ್ತಾರೆ. ಇರುವ ಕೊಳೆಯೆಲ್ಲಾ ಕಿತ್ತು ಬರುವ ಹಾಗೆ ಸ್ನಾನ ಮಾಡಿಸುವುದು ಮಸಾಜ್(Message) ಮಾಡಿದಂತಹ ಅನುಭವ ಮೂಡುತ್ತದೆ. ಅಷ್ಟಕ್ಕೂ ಈ ಪಾದಗಳಿಗೆ ಸ್ನಾನ ಮಾಡಿಸುವುದು ಏಕೆ? ಹೇಗೆ? ಅದರಿಂದ ಲಾಭವೇನು? ಮನೆಯಲ್ಲಿ ಹೇಗೆ ಮಾಡಬಹುದು? ಇಲ್ಲಿದೆ ಮಾಹಿತಿ.

ಮೊನ್ನೆ ನನ್ನ ಕಜಿನ್(Cousin) ಒಬ್ಬರ ಮದುವೆ ಇತ್ತು. ಆಕೆಯ ಜೊತೆ ಪಾರ್ಲರ್‌ಗೆ ತೆರಳಿದಾಗ ಬ್ರೆöÊಡಲ್ ಪ್ಯಾಕೇಜ್(Bridal Package) ಪ್ರಕಾರ ಒಂದೊAದೇ ಕೆಲಸ ಆರಂಭಿಸಿದರು. ಐಬ್ರೋ ನಂತರ ಪೆಡಿಕ್ಯೂರ್(Pedicure), ಮೆಡಿಕ್ಯೂರ್(Medicare) ಸಹ ಒಂದು. ಈ ಪೆಡಿಕ್ಯೂರ್ ಅಂದರೆ ಮತ್ತೇನು ಅಲ್ಲ ಪಾದಗಳಿಗೆ ಉಜ್ಜಿ ಉಜ್ಜಿ ಸ್ನಾನ ಮಾಡಿಸುವುದಷ್ಟೆ. ಇದೊಂದು ಮಸಾಜ್ ಮಾಡಿದ ಅನುಭವ ನೀಡುತ್ತದೆ. ಪಾದಗಳಿಗೆ ಸ್ನಾನ ಮಾಡಿಸುವುದನ್ನು ಕಂಡಾಗ ಹಲವು ವಿಷಯಗಳನ್ನು ಕಲೆ ಹಾಕಿದೆ. ಇದನ್ನು ಮನೆಯಲ್ಲೇ ಸ್ವತಃ ಮಾಡಬಹುದು. ಅದು ಹೇಗೆ ಎಂಬುದರ ಡೀಟೈಲ್ಸ್(Details) ಇಲ್ಲಿದೆ.

ರಾತ್ರಿ ಮಲಗೋ ಮುನ್ನ ಪಾದಗಳನ್ನು ತೊಳೆದ್ರೆ ಖಿನ್ನತೆ ದೂರ

ಸಾಮಾನ್ಯವಾಗಿ ಕಾಲಿನಲ್ಲಿ ಸ್ವಲ್ಲಿಂಗ್(Swelling), ಕಾಲು ನೋವು(Leg Pain) ಇದ್ದಾಗ ಒಂದು ಬಕೆಟ್‌ನಲ್ಲಿ(Bucket) ಬಿಸಿ ನೀರಿಗೆ(Warm Water) ನೀಲಗಿರಿ ಎಣ್ಣೆ(Eucalyptus oil) ಅಥವಾ ಬೇವಿನ ಎಣ್ಣೆಯನ್ನು(Neem Oil) ಹಾಕಿ ಕಾಲು ನೀಳವಾಗಿ ಅದರೊಳಗೆ ಬಿಟ್ಟುಕೊಂಡು ಅರ್ಧಗಂಟೆ(Half an Hour) ಕೂರುತ್ತೇವೆ. ಇದರಿಂದ ಕಾಲಿನಲ್ಲಿನ ಸಮಸ್ಯೆ ನಿವಾರಣೆ ಜೊತೆಗೆ ಎಷ್ಟೋ ಪ್ರಯೋಜನಗಳು ಅರಿವಿಗೆ ಬರದೇ ನಡೆದಿರುತ್ತವೆ. ರಕ್ತ ಸಂಚಾರ(Blood Flow) ಸುಗಮವಾಘುವುದು, ನೋವು ನಿವಾರಣೆ, ಬ್ಯಾಕ್ಟೀರಿಯಾಗಳು(Bacteria) ದೂರಾಗುವುದು ಹೀಗೆ ಹಲವು ಪ್ರಯೋಜನಗಳಿವೆ. 

ಪಾದಗಳನ್ನು ನೀರಿನಲ್ಲಿಡುವ ಮುನ್ನ ಅಡುಗೆ ಮನೆಯಲ್ಲಿರುವ(Kitchen) ಕೆಲ ಪದಾರ್ಥಗಳನ್ನು ಬಳಸಿದರೆ ಅದರ ಚಮತ್ಕಾರವೇ ಬೇರೆ. ಯಾವೆಲ್ಲಾ ಪದಾರ್ಥಗಳನ್ನು ಇದರಲ್ಲಿ ಬಳಸಬಹುದು? ಅದರಿಂದೇನು ಲಾಭ ಇಲ್ಲಿದೆ ಮಾಹಿತಿ.

ಪ್ರಯೋಜನ
ಪಾದಗಳಿಗೆ ಸ್ನಾನ ಮಾಡಿಸುವುದರಿಂದ ಬಹಳ ಪ್ರಯೋಜನವಿದೆ. ಅದು ಕೇವಲ ಮಸಾಜ್(Message) ಅನುಭವ ನೀಡುವುದಷ್ಟೇ ಅಲ್ಲದೆ ವ್ಯಕ್ತಿಗೆ ಮಾನಸಿಕವಾಗಿಯೂ(Mentally) ಪರಿಣಾಮ ಬೀರುತ್ತದೆ. ದೇಹದ ತಾಪ ಕಡಿಮೆ(Body Temperature), ಸ್ನಾಯು ಸೆಳೆತ ನಿವಾರಣೆ, ಮಾನಸಿಕ ಒತ್ತಡ ಮರೆಸುವುದರ(Mentally Stress) ಜೊತೆಗೆ ಬಿಳಿ ರಕ್ತ ಕಣಗಳನ್ನು(White Blood cells) ಹೆಚ್ಚಿಸುತ್ತದೆ. ವರಟಾಗಿದ್ದ ಪಾದಗಳು ಈ ಸ್ನಾನದ ನಂತರ ಮೃದುವಾಗುತ್ತದೆ(Soften). ಪಾದಗಳನ್ನು ನೀರಿನಲ್ಲಿ ನೆನೆಸಿಟ್ಟಾಗಲೆ ಡೆಡ್ ಸ್ಕಿನ್‌ಗಳನ್ನು(Ded Skin) ತೆಗೆಯುವುದಕ್ಕೆ ಒಳ್ಳೆಯ ಸಮಯ. ಏಕೆಂದರೆ ಈ ಸಂದರ್ಭದಲ್ಲಿ ನೀರಿನಲ್ಲಿ ನೆನೆದ ಕಾರಣ ಮೃದುವಾಗಿರುತ್ತವೆ ಹಾಗೂ ಸುಲಭವಾಗಿ ಹೊರ ತೆಗೆಯಬಹುದು. 

ಏನೆಲ್ಲಾ ಪದಾರ್ಥಗಳನ್ನು ಬಳಸಲಾಗುತ್ತದೆ
ಪಾದಗಳಿಗೆ ಸ್ನಾನ ಮಾಡಿಸುವುದರಿಂದ ಹಲವು ಪ್ರಯೋಜನಗಳಿವೆ. ಆರೋಗ್ಯದ(Health) ದೃಷ್ಟಿಯಿಂದಲೂ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಪಾದಗಳಿಗೆ ಸ್ನಾನ ಮಾಡಿಸುವ ಮುನ್ನ ಬಿಸಿ ನೀರಿಗೆ ಎಪ್ಸಮ್ ಸಾಲ್ಟ್(Epsom Salt) ಮತ್ತು ವಿನೆಗರ್(Vinegar) ಅನ್ನು ಪ್ರಮುಖವಾಗಿ ಬಳಸಲಾಗುತ್ತದೆ. 

ಮುಳ್ಳು ಅಥವಾ ಗಾಜಿನ ಪೀಸ್ ಚುಚ್ಚಿದ್ರೆ ಚಿಕಿತ್ಸೆ ಏನ್ಮಾಡ್ಬೇಕು?

ವಿನೇಗರ್ 
ವಿನೇಗರ್ ಇದೊಂದು ಆಯಸಿಡ್(Acid) ರೀತಿ ಕೆಲಸ ಮಾಡುತ್ತದೆ. ಒಂದು ಬಕೆಟ್ ಬಿಸಿ ನೀರಿನಲ್ಲಿ ಸ್ವಲ್ಪ ವಿನೇಗರ್ ಹಾಕಿ ಕಾಲುಗಲನ್ನು ಇಳೆಬಿಡಬೇಕು. 10ರಿಂದ 30 ನಿಮಿಷಗಳ ಹಾಗೆ ಇದ್ದು, ನಂತರ ಪಾದಗಳನ್ನು ಚೆನ್ನಾಗಿ ತಿಕ್ಕಿ ತೊಳೆಯಬೇಕು. ಇದರಿಂದ ಬೆರಳುಗಳ ಸಂಧಿಯಲ್ಲಿರುವ ಫಂಗಲ್ ಇನ್ಫೆಕ್ಷನ್(Fungal Infection), ಬ್ಯಾಕ್ಟೀರಿಯಾಗಳು(Bacteria), ಧೂಳು(Dust) ಎಲ್ಲವೂ ಕ್ಲೀನ್ ಆಗುತ್ತದೆ. 

ಸಾಮಾನ್ಯವಾಗಿ ಕೆಲವರಲ್ಲಿ ಕಾಲು ಸ್ವೆಟ್(Sweat) ಅಂದರೆ ಬೆವರುವುದು ಹೆಚ್ಚು. ಅದು ದುರ್ವಾಸನೆ ಮೂಡಿಸುತ್ತಲ್ಲದೆ, ಇನ್ಫೆಕ್ಷನ್(Infection) ಹರಡಲು ಕಾರಣವಾಗಬಹುದು. ಇದಕ್ಕೆ ಕಾರಣ ಬ್ಯಾಕ್ಟೀರಿಯ ಹಾಗೂ ಬೆವರು ಎರಡು ಸಮನ್ವಯಿಸುವುದರಿಂದ ಈ ರೀತಿಯ ದುರ್ವಾಸನೆ ಮೂಡುತ್ತದೆ. ವಿನೇಗರ್ ಹಾಕಿದ ನೀರಿನಲ್ಲಿ ಪಾದ ತೊಳೆದರೆ ಈ ರೀತಿಯ ಸಮಸ್ಯೆಗಳು ದೂರವಾಗುತ್ತವೆ. 

ಒಡೆದ ಪಾದ(Cracked Feet) ಮತ್ತು ವರಟು ಕಾಲುಗಳಿಗೆ ಸರಿಯಾದ ಔಷಧ ಎಂದರೆ ಅದು ವಿನೇಗರ್. ಇದರಲ್ಲಿ ಶುದ್ಧೀಕರಿಸುವ ಗುಣವಿದ್ದು, ಚರ್ಮವನ್ನು(Skin) ಮೃದುಗೊಳಿಸಿ(Soften) ಒಡೆದ ಚರ್ಮ ಕೂಡುವಂತೆ ಮಾಡುತ್ತದೆ. 

Health Tips: ಈ ಮನೆಮದ್ದುಗಳನ್ನು ಟ್ರೈ ಮಾಡಿದ್ರೆ ಬೆವರಿನ ವಾಸನೆ ಬರೋದೇ ಇಲ್ಲ

ಎಪ್ಸಮ್ ಸಾಲ್ಟ್
ಎಪ್ಸಮ್ ಸಾಲ್ಟ್(Epsom Salt) ಬಳಸಿ ಪಾದಗಳಿಗೆ ಸ್ನಾನ ಮಾಡಿಸಿದರೆ ಬಹಳ ಒಳ್ಳೆಯ ರಿಸಲ್ಟ್ ನೀಡುತ್ತದೆ. ಇದು ಅರ್ಥರಿಟಿಸ್(Arthritis) ನಿಂದ ಹಿಡಿದು ಪಾದದ ಊತವನ್ನೂ(Swelling) ಕಡಿಮೆ ಮಾಡುತ್ತದೆ. ಈ ಉಪ್ಪಿನಲ್ಲಿ ಮೆಗ್ನೀಶಿಯಂ(Magnesium) ಹಾಗೂ ಸಲ್ಫೇಟ್(Sulfate) ಅಂಶವಿದ್ದು, ಪಾದಗಳಿಗೆ ಉತ್ತಮ ಹೊಳಪನ್ನು(Shining) ನೀಡುತ್ತದೆ. 

ಪಾದಗಳಲ್ಲಿನ ಸಮಸ್ಯೆ ಬೇಗ ಗುಣವಾಗಲೆಂದು ಹೆಚ್ಚಿನ ಪ್ರಮಾಣದಲ್ಲಿ ಎಪ್ಸಮ್ ಸಾಲ್ಟ್ ಹಾಕಿದರೆ ಅಪಾಯವೂ ಉಂಟಾಗುತ್ತದೆ. ಮೆಗ್ನೀಶಿಯಂ ಅಂಶ ಹೆಚ್ಚಾದರೆ ಕೆಲವರಲ್ಲಿ ತಲೆನೋವು(Headache), ವಾಕರಿಕೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಸೂಕ್ಷö್ಮ ಚರ್ಮ ಇರುವವರು, ಗರ್ಭಿಣಿಯರು(Pregnant) ಇದನ್ನು ಬಳಸದೇ ಇರುವುದು ಒಳ್ಳೆಯದು. 

Follow Us:
Download App:
  • android
  • ios