Asianet Suvarna News Asianet Suvarna News

ಮುಳ್ಳು ಅಥವಾ ಗಾಜಿನ ಪೀಸ್ ಚುಚ್ಚಿದ್ರೆ ಚಿಕಿತ್ಸೆ ಏನ್ಮಾಡ್ಬೇಕು?

ಸಣ್ಣಪುಟ್ಟ ಗಾಯಗಳನ್ನ ಅನೇಕ ಬಾರಿ ನಿರ್ಲಕ್ಷ್ಯ ಮಾಡ್ತೇವೆ. ಆದ್ರೆ ಅದೇ ಗಾಯ, ನೋವು ನೀಡುವ ಜೊತೆಗೆ ಸೋಂಕಿನ ಸಮಸ್ಯೆ ತಂದಿಡುತ್ತದೆ. ಕೆಲವೊಂದು ಗಾಯ ನೋಡಲು ಚಿಕ್ಕದಾಗಿದ್ರೂ ನೋವು ಅನುಭವಿಸುವುದು ಕಷ್ಟವಾಗುತ್ತದೆ. ಮನೆಯಲ್ಲಿರುವ ಕೆಲ ವಸ್ತುಗಳನ್ನು ಬಳಸಿ ಅದಕ್ಕೆ ಪರಿಹಾರ ಕಂಡುಕೊಳ್ಳಬಹುದು. 
 

How to Remove a Broken Glass from Your Foot
Author
Bangalore, First Published Mar 26, 2022, 2:32 PM IST

ಕೈ- ಕಾಲುಗಳಿಗೆ ಗಾಯ (Injury) ಗಳಾಗೋದು ಮಾಮೂಲಿ. ತರಕಾರಿ (Vegetable) ಕತ್ತರಿಸುವುದ್ರಿಂದ ಹಿಡಿದು ಹೊಲದಲ್ಲಿ ಕೆಲಸ ಮಾಡುವವರೆಗೆ ಎಲ್ಲ ಕಡೆ ಗಾಯಗಳಾಗುವ ಸಾಧ್ಯತೆಯಿರುತ್ತದೆ. ಕಚೇರಿ (Office) ಸ್ಥಳದಲ್ಲಿಯೂ ಸಣ್ಣಪುಟ್ಟ ಗಾಯಗಳು ಆಗ್ತಿರುತ್ತವೆ. ಕೆಲ ಗಾಯ ಹಾಗೂ ಗಾಯದ ನೋವು (Pain) ಬಲುಬೇಗ ಮಾಸುತ್ತದೆ. ಆದ್ರೆ ಮತ್ತೆ ಕೆಲ ಗಾಯಗಳು ಚಿಕ್ಕದಾಗಿದ್ದರೂ ವಿಪರೀತ ನೋವು ನೀಡುತ್ತವೆ. ತಿಳಿಯದೆ ಕಾಲಿ (Foot) ನ ಬೆರಳುಗಳನ್ನು ಮೇಜು ಅಥವಾ ಬೇರೆ ಯಾವುದೋ ಜಾಗಕ್ಕೆ ಗುದ್ದಿರುತ್ತೇವೆ. ಬೆರಳು ಒಡೆದು ರಕ್ತ ಸೋರುತ್ತಿರುತ್ತದೆ. ಇದು ವಿಪರೀತ ನೋವು ನೀಡುತ್ತದೆ. ಹಾಗೆ ಕೆಲಸದ ವೇಳೆ ಕಾಲಿಗೆ ಮುಳ್ಳು (Thorn) ಅಥವಾ ಗಾಜಿ (Glass) ನ ಪೀಸ್ (Pieces) ಸೇರಿರುತ್ತದೆ. ಅದನ್ನು ತೆಗೆಯದೆ ಹಾಗೆ ಬಿಟ್ಟರೆ ಅಲ್ಲಿ ಪಸ್ ಆಗುವ ಸಾಧ್ಯತೆಯಿರುತ್ತದೆ. ಸೋಂಕು ಹರಡುತ್ತದೆ. ಆಗ ಓಡಾಡಲು ಸಾಧ್ಯವಾಗದಷ್ಟು ನೋವನ್ನು ಅನುಭವಿಸಬೇಕಾಗುತ್ತದೆ. ಕಾಲಿಗೆ ಗಾಜಿನ ಪೀಸು ಅಥವಾ ಮುಳ್ಳು ಚುಚ್ಚಿಕೊಂಡಾಗ ತಕ್ಷಣ ಅದಕ್ಕೆ ಚಿಕಿತ್ಸೆ ನೀಡಬೇಕು. ಹಾಗಾದಲ್ಲಿ ಮಾತ್ರ ಸೋಂಕಿನಿಂದ ರಕ್ಷಣೆ ಪಡೆಯಬಹುದು. 

ಸ್ವಚ್ಛತೆ : ಈ ಸಂದರ್ಭದಲ್ಲಿ ಸ್ವಚ್ಛತೆ ಬಹಳ ಮುಖ್ಯವಾಗುತ್ತದೆ. ಯಾವ ಜಾಗದಲ್ಲಿ ಮುಳ್ಳು ಅಥವಾ ಗಾಜಿನ ತುಂಡು ಚುಚ್ಚಿದೆಯೋ ಆ ಜಾಗವನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ. ಅದಕ್ಕೆ ಮಣ್ಣು ಅಥವಾ ಧೂಳು ಸೇರಿದ್ರೆ ಸೋಂಕು ಹರಡುವ ಅಪಾಯವಿರುತ್ತದೆ. ಯಾವುದೇ ಔಷಧಿ ಹಚ್ಚುವ ಮೊದಲು ಗಾಯವಾದ ಜಾಗವನ್ನು ನೀರಿನಿಂದ ತೊಳೆದುಕೊಳ್ಳುವುದು ಉತ್ತಮ.

Summer Health : ಸಪ್ಪೆ ನೀರು ಕುಡ್ದು ಬೋರ್ ಆಗಿದ್ರೆ ರುಚಿ ಹೆಚ್ಚಾಗಲು ಹೀಗೆ ಮಾಡಿ

ಆಲ್ಕೋಹಾಲ್ : ಗಾಯವಾದ ಜಾಗಕ್ಕೆ ಆಲ್ಕೋಹಾಲ್ ಅಥವಾ ಹೈಡ್ರೋಜನ್ ಪೆರಾಕ್ಸೈಡ್ ಅನ್ನು ಬಳಸಬಹುದು. ಗಾಯವಾದ ಜಾಗವನ್ನು ಸ್ವಚ್ಛವಾಗಿ ತೊಳೆದ ನಂತ್ರ ನೀವು ಆ ಜಾಗಕ್ಕೆ ಆಲ್ಕೋಹಾಲ್ ಅಥವಾ ಹೈಡ್ರೋಜನ್ ಪೆರಾಕ್ಸೈಡ್ ಹಚ್ಚಬಹುದು.

ಗಾಜು –ಮುಳ್ಳನ್ನು ಹೀಗೆ ತೆಗೆಯಿರಿ : ಗಾಯವಾದ ಜಾಗದಲ್ಲಿಯೇ ಗಾಜಿನ ಪೀಸ್ ಅಥವಾ ಮುಳ್ಳು ಇದ್ದರೆ ಅದನ್ನು ನಿಧಾನವಾಗಿ ತೆಗೆಯಿರಿ. ಅದು ಅಲ್ಲೇ ಇದ್ದರೆ ನೋವು ಹೆಚ್ಚಾಗುತ್ತದೆ. ಹಾಗಾಗಿ ಗಾಜಿನ ತುಂಡು ಸಿಕ್ಕಿರುವ ಜಾಗದ ಸುತ್ತಮುತ್ತಲ ಜಾಗವನ್ನು ನಿಮ್ಮ ಬೆರಳಿನ ಸಹಾಯದಿಂದ ಮೃದುವಾಗಿ ಒತ್ತುತ್ತಿರಿ. ಇದ್ರಿಂದ ಚುಚ್ಚಿದ ಗಾಜು ಅಥವಾ ಮುಳ್ಳಿನ ತುಂಡು ಕ್ರಮೇಣ ಹೊರಬರುತ್ತದೆ. 

ಕ್ಯಾಸ್ಟರ್ ಆಯಿಲ್  ಬಳಕೆ : ಕೈ ಮತ್ತು ಪಾದಗಳಲ್ಲಿ ಗಾಜು ಅಥವಾ ಮುಳ್ಳು ಹೊಕ್ಕಿದ್ದರೆ ನೀವು ಕ್ಯಾಸ್ಟರ್ ಆಯಿಲ್ ಅನ್ನು ಪ್ರಥಮ ಚಿಕಿತ್ಸೆಯಾಗಿ ಬಳಸಬಹುದು. ಹತ್ತಿಗೆ ಕ್ಯಾಸ್ಟರ್ ಆಯಿಲ್ ಹಾಕಿ ಮತ್ತು ಗಾಯಗೊಂಡ ಜಾಗದಲ್ಲಿ ಸ್ವಲ್ಪ ಸಮಯದವರೆಗೆ ಇರಿಸಿ. ಹೀಗೆ ಮಾಡುವುದರಿಂದ ಪಾದದಲ್ಲಿ ಚುಚ್ಚಿದ ಗಾಜಿನ ತುಂಡು ಹೊರಬರುತ್ತದೆ ಮತ್ತು ಸೋಂಕು ದೇಹಕ್ಕೆ ಹರಡುವುದಿಲ್ಲ.

ರೋಸ್ ವಾಟರ್ ಕುಡಿಯೋದ್ರಿಂದ ಏನೇನು ಪ್ರಯೋಜನಗಳಿವೆ ನೋಡಿ

ಮನೆ ಮದ್ದು ಅರಿಶಿನ : ಗಾಜು ಅಥವಾ ಮುಳ್ಳು ತೆಗೆದ ನಂತರ ನೀವು ಆ ಗಾಯದ ಮೇಲೆ ಅರಿಶಿನವನ್ನು ಹಾಕಬಹುದು. ಅರಿಶಿನವು ನೈಸರ್ಗಿಕ ನಂಜುನಿರೋಧಕ ಮತ್ತು ಪ್ರತಿಜೀವಕ ಗುಣಗಳನ್ನು ಹೊಂದಿದೆ. ಅರಿಶಿನವನ್ನು ಹಾಕುವುದ್ರಿಂದ ದೇಹಕ್ಕೆ ಸೋಂಕು ಹರಡುವುದಿಲ್ಲ. ಜೊತೆಗೆ ನೋವು ನಿಧಾನವಾಗಿ ಕಡಿಮೆಯಾಗುತ್ತದೆ. 

ಜೇನುತುಪ್ಪ : ಅರಿಶಿನ ಬೇಡ ಎನ್ನುವವರು ಜೇನುತುಪ್ಪವನ್ನು ಕೂಡ ಬಳಸಬಹುದು. ಜೇನುತುಪ್ಪವು ಔಷಧೀಯ ಗುಣಗಳನ್ನು ಹೊಂದಿದೆ. ಇದಲ್ಲದೆ, ಗಾಯವನ್ನು ಗುಣಪಡಿಸುವ ಗುಣಗಳು ಜೇನುತುಪ್ಪದಲ್ಲಿ ಕಂಡುಬರುತ್ತವೆ. ಹಾಗಾಗಿ ಗಾಯವನ್ನು ಸ್ವಚ್ಛಗೊಳಿಸಿದ ನಂತ್ರ ಆ ಜಾಗವನ್ನು ಮೃದುವಾದ ಬಟ್ಟೆಯಲ್ಲಿ ಒರೆಸಿ ನಂತ್ರ ಜೇನುತುಪ್ಪವನ್ನು ಹಚ್ಚಬಹುದು.

Follow Us:
Download App:
  • android
  • ios