ಕ್ಯಾನ್ಸರ್ ಇದ್ರೂ ಪತ್ತೆಹಚ್ಚುತ್ತೆ ಸೆಲೆಬ್ರಿಟಿಗಳು ಮಾಡಿಸ್ಕೊಳ್ಳೋ ಈ ಕಾಸ್ಟ್ಲೀ ಎಂಆರ್‌ಐ ಸ್ಕ್ಯಾನ್
ರಿಯಾಲಿಟಿ ಟಿವಿ ತಾರೆ ಕಿಮ್ ಕಾರ್ಡಶಿಯಾನ್ ಬರೋಬ್ಬರಿ 2 ಲಕ್ಷ ರೂ. ವೆಚ್ಚದ ಪೂರ್ಣ ದೇಹದ MRI ಸ್ಕ್ಯಾನ್‌ಗೆ ಒಳಗಾಗಿದ್ದಾರೆ. ಈ ಚಿಕಿತ್ಸೆಯು ಸೆಲೆಬ್ರಿಟಿಗಳಲ್ಲಿ ಜನಪ್ರಿಯವಾಗಿದೆ. ಇದು ರೋಗವನ್ನು ಮೊದಲೇ ಪತ್ತೆಹಚ್ಚುವ ಸಾಮರ್ಥ್ಯವನ್ನು ಹೊಂದಿದೆ ಎನ್ನಲಾಗುತ್ತಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಲಾಸ್ ಏಂಜಲೀಸ್: ಸೆಲಬ್ರಿಟಿಗಳು ತಮ್ಮ ಫಿಟ್‌ನೆಸ್ ಕಾಪಾಡಿಕೊಳ್ಳಲು ಎಲ್ಲಾ ರೀತಿಯ ಎಕ್ಸ್‌ಪರ್ಟ್ಸ್‌ಗಳನ್ನು ಇಟ್ಟುಕೊಂಡಿರುತ್ತಾರೆ. ಜಿಮ್ ಟ್ರೈನರ್, ಸ್ಕಿನ್ ಸ್ಪೆಷಲಿಸ್ಟ್, ಡಯಟೀಷಿಯನ್ ಹೀಗೆ ಹಲವು ತಜ್ಞರು ಅವರ ಬಳಿಯಿರುತ್ತಾರೆ. ಯಾವುದೇ ಕಾಯಿಲೆ ಬರದಂತೆ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ದುಬಾರಿ ಟ್ರೀಟ್‌ಮೆಂಟ್‌ಗಳನ್ನು ಸಹ ಪಡೆದುಕೊಳ್ಳುತ್ತಾರೆ. ಹಾಗೆಯೇ ಸದ್ಯ ರಿಯಾಲಿಟಿ ಶೋ ಸ್ಟಾರ್ ಕಿಮ್ ಕಾರ್ಡಶಿಯಾನ್ ಪ್ರೆನುವೋ ಎಂಆರ್ಐ ಸ್ಕ್ಯಾನ್ ಮಾಡಿದ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಚಿಕಿತ್ಸೆಯು ಸೆಲೆಬ್ರಿಟಿಗಳಲ್ಲಿ ಜನಪ್ರಿಯವಾಗಿದೆ. ಇದು ರೋಗವನ್ನು ಮೊದಲೇ ಪತ್ತೆಹಚ್ಚುವ ಸಾಮರ್ಥ್ಯವನ್ನು ಹೊಂದಿದೆ.
ನಟಿ ಕಿಮ್ ಕಾರ್ಡಶಿಯಾನ್ ಬರೋಬ್ಬರಿ 2 ಲಕ್ಷ ರೂ. ವೆಚ್ಚದಲ್ಲಿ ಫುಲ್ ಬಾಡಿ ಎಂಆರ್‌ಐ ಸ್ಕ್ಯಾನ್ ಮಾಡಿದ್ದಾರೆ. ಇದು ದೇಹ (Body)ದಲ್ಲಿರುವ ಸುಮಾರು 500 ರೋಗಗಳನ್ನು ಪತ್ತೆಹಚ್ಚಬಲ್ಲದು ಎಂದು ಸ್ವತಃ ಅವರೇ ಮಾಹಿತಿ ನೀಡಿದ್ದಾರೆ. ಮೆಷಿನ್ ಪಕ್ಕದಲ್ಲಿ ನಿಂತಿರುವ ಚಿತ್ರವನ್ನು, ಅವರು Instagramನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಎಂಆರ್‌ಐ ಮೆಷಿನ್ ಕುರಿತಾದ ವಿಶೇಷತೆ (Speciality)ಯನ್ನೂ ಹಂಚಿಕೊಂಡಿದ್ದಾರೆ.
ಕಿಮ್ ಕಾರ್ಡಶಿಯಾನ್ ಮನೇಲಿ ದೆವ್ವ, ನಾನಾದರೂ ಆ ಆತ್ಮ ಆಗಬಾರದಿತ್ತಾ ಅಂತಿದ್ದಾರೆ ಫ್ಯಾನ್ಸ್!
ಕಾಸ್ಟ್ಲೀ ಎಂಆರ್‌ಐ ಸ್ಕ್ಯಾನ್‌ನ ವಿಶೇಷತೆಯೇನು?
'ನಾನು ಇತ್ತೀಚೆಗೆ ಈ @prenuvo ಸ್ಕ್ಯಾನ್ ಮಾಡಿದ್ದೇನೆ ಮತ್ತು ಈ ಜೀವ ಉಳಿಸುವ ಯಂತ್ರದ ಬಗ್ಗೆ ನಿಮಗೆ ಎಲ್ಲವನ್ನೂ ಹೇಳಬೇಕಾಗಿತ್ತು. Prenuvo ಫುಲ್ ಬಾಡಿ ಸ್ಕ್ಯಾನ್ ಕ್ಯಾನ್ಸರ್ ಅನ್ನು ಪತ್ತೆಹಚ್ಚುವ ಸಾಮರ್ಥ್ಯವನ್ನು ಹೊಂದಿದೆ. ಅನೆರೈಸ್ಮ್‌ನಂತಹ ಕಾಯಿಲೆಗಳನ್ನು (Disease) ಯಾವುದೇ ರೋಗ ಲಕ್ಷಣವಿಲ್ಲದಿದ್ದರೂ ಸುಲಭವಾಗಿ ಪತ್ತೆ ಹಚ್ಚುತ್ತದೆ. ರೇಡಿಯೇಶನ್ ಇಲ್ಲದೇ ಒಂದು ಗಂಟೆ ಎಂಆರ್ ಐ ಮಾಡಿಸಿಕೊಳ್ಳಬಹುದು. ಇದು ನಿಜವಾಗಿಯೂ ನನ್ನ ಕೆಲವು ಸ್ನೇಹಿತರ ಜೀವಗಳನ್ನು ಉಳಿಸಿದೆ ಮತ್ತು ನಾನು ಈ ಕುರಿತಾದ ಹಂಚಿಕೊಳ್ಳಲು ಬಯಸುತ್ತೇನೆ' ಎಂದು ಕಿಮ್ ಕಾರ್ಡಶಿಯಾನ್ ಮಾಹಿತಿ ಹಂಚಿಕೊಂಡಿದ್ದಾರೆ.
ಈ ಕುರಿತಾಗಿ ಇನ್ನಷ್ಟು ಮಾತನಾಡಿರುವ ಕಿಮ್, 'ನನ್ನ ಜನ್ಮದಿನವು (Birthday) ಸಮೀಪಿಸುತ್ತಿದೆ. ಪ್ರತಿ ಬಾರಿ ನಾನು ಜನ್ಮದಿನದಂದು, ನಾನು ನನ್ನ ಆರೋಗ್ಯದ ಮೇಲೆ ಹೆಚ್ಚು ಕೇಂದ್ರೀಕರಿಸಲು ಪ್ರಾರಂಭಿಸುತ್ತೇನೆ. ನನ್ನ ಬಗ್ಗೆ ಕಾಳಜಿ ವಹಿಸಲು ನಾನು ಏನು ಮಾಡಬೇಕೆಂದು ಯೋಚಿಸಲು ಪ್ರಾರಂಭಿಸುತ್ತೇನೆ. ಇದರಲ್ಲಿ ಅತೀ ಮುಖ್ಯ ಈ ಸ್ಕ್ಯಾನ್ ಮಾಡಿಕೊಳ್ಳುವುದು ಎಂದು ನನಗೆ ಅರಿವಾಗಿದೆ. ಏಕೆಂದರೆ ದೇಹದ ಒಳಭಾಗದಲ್ಲಿ ಏನಾದರೂ ನಡೆಯುತ್ತಿದೆಯೇ ಎಂಬುದು ನಮಗೆ ಇದರಿಂದಷ್ಟೇ ತಿಳಿದು ಬರಲಿದೆ. ಸ್ಕ್ಯಾನ್ ಕೇವಲ ಒಂದು ಗಂಟೆಗಿಂತ ಕಡಿಮೆ ಸಮಯ (Time) ತೆಗೆದುಕೊಳ್ಳುತ್ತದೆ' ಎಂದು ಅವರು ಮಾಹಿತಿ ನೀಡಿದ್ದಾರೆ.
Kimye ಜೊತೆ ಡಿವೋರ್ಸ್ ನಂತರ Kim Kardashian 4ನೇ ಮದುವೆ ಆಗ್ತಾರಾ?
'ನಾನು ನಿಜವಾಗಿಯೂ ದೀರ್ಘಕಾಲ ಬದುಕಲು ಬಯಸುತ್ತೇನೆ. ಇದಕ್ಕೆ ನನಗೆ ಸಾಕಷ್ಟು ಶಕ್ತಿಯ ಅಗತ್ಯವಿದೆ. ನಾನು ಮಾಡಲು ಬಯಸುವ ಕೆಲಸಗಳನ್ನು ಮಾಡಲು ನಾನು ಬಯಸುತ್ತೇನೆ. ನನ್ನ ಆರೋಗ್ಯ ರಕ್ಷಣೆಯಲ್ಲಿ ನಾನು ಎಷ್ಟು ಪೂರ್ವಭಾವಿಯಾಗಿ ಇದ್ದೇನೆ ಎಂದು ನಾನು ನಿಮಗೆ ಹೇಳಲಾರೆ. ನನ್ನ ತಾಯಿ 82 ವರ್ಷ ವಯಸ್ಸಿನವರೆಗೂ ಕೆಲಸ ಮಾಡುತ್ತಿದ್ದರು. ಈ ಒತ್ತಡದ ಜೀವನಶೈಲಿಯಲ್ಲಿ ನಾವು ಅವರಂತೆ ಬದುಕಬೇಕಾದರೆ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ' ಎಂದು ಕಿಮ್ ಕಾರ್ಡಶಿಯಾನ್ ತಿಳಿಸಿದ್ದಾರೆ.
Kim Baby Bar Exam Passed: ಮೂರನೇ ಸಲ ಪರೀಕ್ಷೆ ಬರೆದು ಪಾಸ್ ಆದ ಖ್ಯಾತ ನಟಿ!