ಹಾಲಿವುಡ್​ ತಾರೆ ಕಿಮ್ ಕಾರ್ಡಶಿಯಾನ್ ಅವರು ಫೋಟೋ ಒಂದನ್ನು ಕ್ಲಿಕ್ಕಿಸಿಕೊಂಡಿದ್ದು, ಅದರ ಹಿಂಭಾಗದಲ್ಲಿ ಮಹಿಳೆಯ ಆಕೃತಿಯೊಂದು ಕಾಣಿಸುತ್ತಿದೆ.  

ಆತ್ಮ, ಭೂತ, ಪಿಶಾಚಿ, ಪ್ರೇತ, ಸತ್ತ ಮೇಲಿನ ಬದುಕು, ಪುನರ್ಜನ್ಮ... ಇವುಗಳೆಲ್ಲವೂ ಊಹೆಯ ನಿಲುಕದ್ದು. ಇವುಗಳ ಕುರಿತು ಹಲವಾರು ಜನರು ತಮ್ಮದೇ ಆದ ರೀತಿಯಲ್ಲಿ ಹಲವು ರೀತಿಯ ವ್ಯಾಖ್ಯಾನಗಳನ್ನು ಮಾಡುತ್ತಾರೆ. ದೆವ್ವ, ಆತ್ಮ, ಪ್ರೇತ ಇವುಗಳನ್ನು ತಾವು ಖುದ್ದು ಕಂಡಿರುವುದಾಗಿ ಹಲವರು ಹೇಳುವುದೂ ಉಂಟು. ಅವುಗಳ ಇರುವಿಕೆಯ ಕುರಿತಾಗಿ ಕೆಲವು ತಜ್ಞರು ವೈಜ್ಞಾನಿಕವಾಗಿ (scientific) ಬಣ್ಣಿಸುವುದೂ ಇದ್ದರೆ, ಇವೆಲ್ಲಾ ಮಾನಸಿಕ ಸಮಸ್ಯೆಗಳೇ ವಿನಾ ಇವುಗಳ ಅಸ್ತಿತ್ವವೇ ಇಲ್ಲ ಎನ್ನುವುದು ಇನ್ನು ಕೆಲವರ ವಾದ. ಆತ್ಮ ಎಂದರೇನು? ಒಬ್ಬ ವ್ಯಕ್ತಿ ಸತ್ತ ಬಳಿಕ ಅದರ ಅಸ್ತಿತ್ವ ಹೇಗಿರುತ್ತದೆ ಎಂಬ ಬಗ್ಗೆಯೂ ಇದಾಗಲೇ ಸಂಶೋಧನೆಯ ಮೂಲಕ ಕೆಲವರು ಹೇಳಿದ್ದೂ ಇದೆ. ಹೀಗೆ ಈ ನಿಗೂಢತೆಯ ಕುರಿತು ಅದೆಷ್ಟೋ ಚರ್ಚೆಗಳು ಆಗಿವೆ, ಇನ್ನೂ ನಡೆಯುತ್ತಲೇ ಇದೆ. ಅದೇನೇ ವಾದ-ಪ್ರತಿವಾದ ಇದ್ದರೂ ನಟಿಯೊಬ್ಬರ ಫೋಟೋ ಮಾತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ಸಕತ್​ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ, ಆಕೆಯ ಫೋಟೋದಲ್ಲಿ ಮಹಿಳೆಯಂತೆ ತೋರುವ ಆಕೃತಿಯೊಂದು ಕಂಡುಬಂದಿದ್ದು! ಈ ಕುರಿತು ಖುದ್ದು ನಟಿ ಇನ್​ಸ್ಟಾಗ್ರಾಮ್​ನಲ್ಲಿ ಫೋಟೋ ಶೇರ್​ ಮಾಡಿದ್ದು, ಅವುಗಳ ಕುರಿತು ಹಲವಾರು ಮಂದಿ ಹಲವು ರೀತಿಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

ಅಂದಹಾಗೆ ಈ ಒಂದು ಆತ್ಮದ ಫೋಟೋ ಎನ್ನುವ ಚಿತ್ರ ಕಂಡುಬಂದಿದ್ದು ಹಾಲಿವುಡ್​ ನಟಿ ಅಮೆರಿಕ ಮೂಲದ ಕಿಮ್ ಕಾರ್ಡಶಿಯಾನ್ (Kim Kardashian) ಫೋಟೋದಲ್ಲಿ. ಈಕೆ ಖ್ಯಾತ ನಟಿ ಮಾತ್ರವಲ್ಲದೇ ಖ್ಯಾತ ಉದ್ಯಮಿ ಕೂಡ. ಗ್ಲಾಮರಸ್​ ಫೋಟೋಗಳಿಗೂ ಈಕೆ ಸಕತ್​ ಫೇಮಸ್​. ಲಕ್ಷಾಂತರ ಫಾಲೋವರ್ಸ್​ಗಳನ್ನು ಹೊಂದಿರುವ ಕಿಮ್​ ಈಗ ತಮ್ಮ ಫ್ಯಾನ್ಸ್​ ಬೆಚ್ಚಿ ಬೀಳುವ ಫೋಟೋ ಒಂದನ್ನು ಶೇರ್​ ಮಾಡಿದ್ದಾರೆ. ಅದರಲ್ಲಿ ಆಕೆ ಕನ್ನಡಿಯ ಮುಂದೆ ನಿಂತುಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಕೈಯಲ್ಲಿ ಫೋನ್​ ಹಿಡಿದು ಪೋಸ್​ ಕೊಟ್ಟಿದ್ದಾರೆ. ಆದರೆ ಫೋಟೋದ ಹಿಂಭಾಗದಲ್ಲಿ ಇರುವ ಕನ್ನಡಿಯಲ್ಲಿ ಮಹಿಳೆಯಂತೆ ತೋರುವ ಆಕೃತಿಯೊಂದು ಕಾಣಿಸುತ್ತಿದೆ. ಅದು ಗರ್ಭವತಿಯಂತೆ ತೋರುತ್ತಿದೆ. ಫೋಟೋ ನೋಡಿದ ನಂತರ ತಾವು ಖುದ್ದು ಬೆಚ್ಚಿ ಬಿದ್ದಿರುವುದಾಗಿ ಹೇಳಿಕೊಂಡಿದ್ದಾರೆ ನಟಿ. ನಾನು ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದೇನೆ. ನನ್ನನ್ನು ಹೊರತುಪಡಿಸಿ ಮನೆಯಲ್ಲಿ ಯಾರೂ ಇಲ್ಲ. ಆದರೂ ಈ ಫೋಟೋ ಎಲ್ಲಿಂದ ಬಂತು ಎಂದು ತಿಳಿಯುತ್ತಿಲ್ಲ ಎಂದು ಇನ್​ಸ್ಟಾಗ್ರಾಮ್​ನಲ್ಲಿ (Instagram) ಹೇಳಿಕೊಂಡಿದ್ದಾರೆ.

ಭೂತ ಪ್ರೇತಗಳನ್ನು ಓಡಿಸಲು ಭಾರತದ ಈ ಸ್ಥಳ ಫೇಮಸ್!

 ಇದನ್ನು ಕಂಡು ಈಕೆಯ ಹಲವು ಅಭಿಮಾನಿಗಳು (Fans) ಬೆಚ್ಚಿಬಿದ್ದಿದ್ದರೆ, ಇನ್ನು ಹಲವರು ತಮಾಷೆಯ ಕಮೆಂಟ್ಸ್​ ಮಾಡುತ್ತಿದ್ದಾರೆ. ಇದು ಯಾವುದೋ ನೆರಳು, ಮಹಿಳೆ ಅಲ್ಲ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಾಮಾನ್ಯವಾಗಿ ಅಲ್ಲಿರುವ ಯಾವುದಾದರೂ ವಸ್ತುಗಳು ಈ ಫೋಟೋದಲ್ಲಿ ಕಂಡಿರಲಿಕ್ಕೆ ಸಾಕು, ಅದು ಮಹಿಳೆಯ ರೂಪದಲ್ಲಿ ಕಾಣಿಸುತ್ತಿದೆ ಎಂದು ಕೆಲವರು ಹೇಳಿದ್ದರೆ, ಅದು ನಟಿಯ ಅಕ್ಕನೋ, ಅಮ್ಮನೋ ಇರಬೇಕು ಎಂದಿದ್ದಾರೆ ಇನ್ನು ಕೆಲವರು. ಮತ್ತೆ ಕೆಲವರು ಈಕೆಯ ಮನೆಯಲ್ಲಿ ಯಾರಾದರೂ ಮೃತಪಟ್ಟಿದ್ದರೆ ಅವರ ಆತ್ಮ ಇರಬೇಕು ಎಂದಿದ್ದರೆ, ಬಹುಶಃ ಈ ದೆವ್ವ ಕಿಮ್​ ಅವರ ಇನ್​ಸ್ಟಾಗ್ರಾಮ್​ ಫಾಲೋವರ್​ ಆಗಿರಬೇಕು ಎಂದು ಹಲವರು ತಮಾಷೆ ಮಾಡಿದ್ದಾರೆ.

ಕಿಮ್​ ಅವರ ಅಭಿಮಾನಿಯೊಬ್ಬ ‘ಈ ದೆವ್ವ ಕಿಮ್​ ಮನೆಯಲ್ಲಿ ಇರಲು ಅದೆಷ್ಟು ಪುಣ್ಯ ಮಾಡಿರಬೇಕು. ನಾನು ಒಂದು ವೇಳೆ ದೆವ್ವವಾದರೆ ಖಂಡಿತವಾಗಿಯೂ ಕಿಮ್‌ನ ಮನೆಯಲ್ಲಿ ವಾಸಿಸುತ್ತೇನೆ’ ಎಂದು ಚಟಾಕಿ ಹಾರಿಸಿದ್ದಾನೆ. ಇನ್ನೊಬ್ಬ ಫ್ಯಾನ್​ ಕೂಡ ಇದೇ ರೀತಿ ಬರೆದಿದ್ದು, ಕಿಮ್ ಮನೆಯಲ್ಲಿ ವಾಸವಾಗಲು ನನಗೆ ಅವಕಾಶ ಸಿಕ್ಕರೆ, ಬೇಗನೇ ಆತ್ಮಹತ್ಯೆ ಮಾಡಿಕೊಳ್ಳಲು ಸಿದ್ಧ ಎಂದು ಹೇಳಿದ್ದಾನೆ! ಇನ್ನು ಕೆಲವರು ಪುರುಷ ಆತ್ಮ ಆಗಿದ್ದರೆ ಏನಾದರೂ ಹೇಳಬಹುದಿತ್ತು. ಹೋಗಿ ಹೋಗಿ ಮಹಿಳೆಯ ಆತ್ಮ ಬಂದಿದೆಯಲ್ಲ, ಇದು ಸರಿಯಲ್ಲ ಎಂದೂ ಕಾಲೆಳೆದಿದ್ದರೆ, ಕಿಮ್​ ಬದಲು ನಟನ ಫೋಟೋದಲ್ಲಿ ಹೀಗೆ ಗರ್ಭಿಣಿ ಕಾಣಿಸಿಕೊಂಡಿದ್ದರೆ ಏನಾದರೂ ಹೇಳಬಹುದಿತ್ತು, ಈಗ ಹಾಗೂ ಹೇಳುವಂತಿಲ್ಲ ಎಂದಿದ್ದಾನೆ! ಒಟ್ಟಿನಲ್ಲಿ ನಟಿ ಕಿಮ್​ ಅವರ ಈ ಪೋಸ್ಟ್​ ಆಕೆಯ ಫ್ಯಾನ್ಸ್​ಗಳಲ್ಲಿ ಬಹಳ ಚರ್ಚೆಯ ವಿಷಯವಾಗಿದೆ. 

ಇದು ‘ಅಘೋರಿಯ ರಹಸ್ಯ’: ಶವದ ಜೊತೆ ದೈಹಿಕ ಸಂಪರ್ಕ, ಮಾಂಸ ಭಕ್ಷಣೆ

View post on Instagram