ಹಲ್ಲು ನೋವು ಅಂತಾ ಮಲಗಿದವಳು ಎದ್ದದ್ದು 32 ವರ್ಷದ ನಂತರವೇ!
ಜಗತ್ತಿನಲ್ಲಿ ಚಿತ್ರ ವಿಚಿತ್ರ ಖಾಯಿಲೆಗಳಿವೆ. ಕೆಲವೊಂದನ್ನು ಪತ್ತೆ ಮಾಡಲು ವೈದ್ಯಲೋಕಕ್ಕೆ ಸಾಧ್ಯವಾಗಿಲ್ಲ. ಸ್ವಿಡನ್ ಮಹಿಳೆ ಕೂಡ ಅಪರೂಪದ ಸಮಸ್ಯೆ ಎದುರಿಸಿದ್ದಾಳೆ. ತನ್ನ 32 ವರ್ಷವನ್ನು ಹಾಸಿಗೆಯಲ್ಲೇ ಕಳೆದಿದ್ದಾಳೆ.
ಸಾಮಾನ್ಯವಾಗಿ ನಾವು ಆರರಿಂದ ಏಳು ಗಂಟೆ ನಿದ್ರೆ ಮಾಡ್ತೇವೆ. ಕೆಲಸದ ಒತ್ತಡದಲ್ಲಿದ್ದಾಗ ಜನರು ನಿದ್ರೆ ಕಡಿಮೆ ಮಾಡ್ತಾರೆ. ಮತ್ತೆ ಕೆಲವರು ಒಂಭತ್ತು, ಹತ್ತು ಗಂಟೆ ನಿದ್ರೆ ಮಾಡೋದಿದೆ. ಅತಿ ಹೆಚ್ಚು ಸುಸ್ತಾಗಿದೆ ಎಂದಾಗ ಅಥವಾ ಅನಾರೋಗ್ಯಕ್ಕೊಳಗಾಗಿ ನಿದ್ರೆ ಮಾತ್ರೆ ಸೇವನೆ ಮಾಡಿದಾಗ ಒಂದು ಇಡೀ ದಿನ ನಿದ್ರೆ ಮಾಡೋರನ್ನು ನಾವು ನೋಡಬಹುದು. ಆದ್ರೆ ಇಲ್ಲೊಬ್ಬ ಮಹಿಳೆ ಒಂದು ರಾತ್ರಿ ಅಥವಾ ಒಂದು ದಿನವಲ್ಲ ಬರೋಬ್ಬರಿ 32 ವರ್ಷ ನಿದ್ರೆಯಲ್ಲೇ ಕಳೆದಿದ್ದಾಳೆ. ಅಚ್ಚರಿಯಾದ್ರೂ ಇದು ಸತ್ಯ. ಈ ಘಟನೆ ನಡೆದಿದ್ದು ಎಲ್ಲಿ ಮತ್ತು ಆಕೆ ಯಾರು ಎಂಬ ವಿವರ ಇಲ್ಲಿದೆ.
ಈ ಮಹಿಳೆಯ ಹೆಸರು ಕರೋಲಿನಾ ಓಲ್ಸನ್ (Karolina Olsson). ಅವಳು ಸ್ವೀಡನ್ ಪ್ರಜೆ. ಕರೋಲಿನಾ ತನ್ನ ನಾಲ್ವರು ಒಡಹುಟ್ಟಿದವರೊಂದಿಗೆ ಸ್ವೀಡನ್‌ನ (Sweden) ಓಕ್ನೋ ದ್ವೀಪದಲ್ಲಿ ವಾಸಿಸುತ್ತಿದ್ದಳು. ಬಾಲ್ಯದಲ್ಲಿ ಎಲ್ಲವೂ ಸರಿ ಇತ್ತು. ಆದ್ರೆ ಆಕೆ ಶಾಲೆಗೆ ಹೋಗುವಾಗ ನಡೆದ ಘಟನೆ ಇಡೀ ಕುಟುಂಬಕ್ಕೆ ಶಾಕ್ ನೀಡಿತ್ತು.
ಜಪಾನೀಯರ ಸುದೀರ್ಘ ಬದುಕಿನ ಸೂತ್ರ, ನೀವೂ ಆಯುಷ್ಯ ಹೆಚ್ಚಿಸಿಕೊಳ್ಳಿ!
ಒಂದು ದಿನ ಶಾಲೆಗೆ ಹೋಗ್ತಿದ್ದ ಕರೋಲಿನಾ ಓಲ್ಸನ್ ಇದ್ದಕ್ಕಿದ್ದಂತೆ ಕೆಳಗೆ ಬಿದ್ದಿದ್ದಾಳೆ. ಆಕೆ ತಲೆ ಪಾದಾಚಾರಿ ಮಾರ್ಗಕ್ಕೆ ಹೊಡೆದಿದೆ. ತಲೆ ಗಾಯವಾಗಿದ್ದ ಕಾರಣ ಕರೋಲಿನಾ ಸ್ವಲ್ಪ ವಿಶ್ರಾಂತಿ ಪಡೆಯಬೇಕಾಗಿತ್ತು. ಕೆಲವೇ ದಿನಗಳಲ್ಲಿ ಆಕೆ ಚೇತರಿಸಿಕೊಂಡಿದ್ದಳು. ಆದ್ರೆ ಅದೇ ವರ್ಷ ಫೆಬ್ರವರಿ 22, 1876ರಲ್ಲಿ 14 ವರ್ಷದ ಕರೋಲಿನಾ ಓಲ್ಸನ್ ಜೀವನದಲ್ಲಿ ಮತ್ತೊಂದು ಆಘಾತ ನಡೆದಿತ್ತು. ಆಕೆಗೆ ಹಲ್ಲು ನೋವು ಕಾಣಿಸಿಕೊಂಡಿತ್ತು. ಹಲ್ಲು ನೋವು ವಿಪರೀತವಾಗಿರುವ ಕಾರಣ ಬೇಗ ನಿದ್ರೆ ಮಾಡುತ್ತೇನೆಂದು ಕುಟುಂಬಸ್ಥರಿಗೆ ಹೇಳಿದ ಕರೋಲಿನಾ ಓಲ್ಸನ್ ನಿದ್ರೆ ಮಾಡಲು ಹೋಗಿದ್ದಳು. ಆದ್ರೆ ಆಕೆ ಮತ್ತೆ ಏಳೋದು 32 ವರ್ಷಗಳ ನಂತ್ರ ಎಂಬುದು ಮನೆಯವರಿಗೆ ತಿಳಿದಿರಲಿಲ್ಲ.
ಗರ್ಭಿಣಿಯು ಗ್ರೀನ್ ಟೀ ಕುಡಿದರೆ ಅಪಾಯವೇನಾದ್ರೂ ಇದೆಯಾ?
ರಾತ್ರಿ ಮಲಗಿದ ಕರೋಲಿನಾ ಓಲ್ಸನ್, ಏಳಲೇ ಇಲ್ಲ. ಆಕೆ ಒಂದೆರಡು ದಿನ ಹಾಗೇ ನಿದ್ರೆ ಮಾಡಿದ್ದಳು. ಕುಟುಂಬಸ್ಥರು ವೈದ್ಯರನ್ನು ಕರೆಸಿ ಪರೀಕ್ಷೆ ಮಾಡಿಸಿದರು. ವೈದ್ಯರು ಕೂಡ ಕರೋಲಿನಾ ಓಲ್ಸನ್ ಸ್ಥಿತಿ ನೋಡಿ ಅಚ್ಚರಿಗೊಂಡಿದ್ದರು. ವೈದ್ಯರು ಹಲವಾರು ದಿನಗಳವರೆಗೆ ಕರೋಲಿನಾ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡಿದರು. ಆದರೆ, ಕರೋಲಿನಾ ಸ್ಥಿತಿ ಕೋಮಾ ಆಗಿಲ್ಲ ಎಂಬುದನ್ನು ಕಂಡು ವೈದ್ಯರೂ ಬೆಚ್ಚಿಬಿದ್ದರು. ಅವಳು ಸತ್ತ ಶವದಂತೆ ಕಾಣುತ್ತಿದ್ದಳು. ಆದ್ರೆ ಅವಳು ಉಸಿರಾಡುತ್ತಿದ್ದಳು. ಅವಳ ಉಗುರುಗಳು ಮತ್ತು ಕೂದಲುಗಳು ಬೆಳೆಯುತ್ತಿರಲಿಲ್ಲ. ಅವಳ ತೂಕದಲ್ಲಿ ಯಾವುದೇ ಬದಲಾವಣೆ ಕಂಡುಬಂದಿರಲಿಲ್ಲ. ಈ ಘಟನೆ ನಡೆದು ಆರು ವರ್ಷವಾದ ನಂತ್ರ ಅಂದರೆ 1882 ರಲ್ಲಿ ಕರೋಲಿನಾ ಅವಳನ್ನು ಎಲೆಕ್ಟ್ರೋಶಾಕ್ ಥೆರಪಿ ಚಿಕಿತ್ಸೆಗಾಗಿ ಓಸ್ಕರ್ಷಮನ್ ಗೆ ವರ್ಗಾಯಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ. ವೈದ್ಯರು ನಂತರ ತಮ್ಮ ಚಿಕಿತ್ಸೆಯನ್ನು ಕೈಬಿಟ್ಟರು.
ಕರೋಲಿನಾಗೆ ಇನ್ನಾವ ಚಿಕಿತ್ಸೆಯೂ ಫಲ ನೀಡುವುದಿಲ್ಲ, ಮನೆಯಲ್ಲಿಯೇ ಇರಿಸಿಕೊಳ್ಳಿ, ಯಾವುದಾದ್ರೂ ಪವಾಡ ನಡೆದಲ್ಲಿ ಮಾತ್ರ ಕರೋಲಿನಾ ಉಳಿಸಲು ಸಾಧ್ಯವೆಂದು ಅವರು ಹೇಳಿದ್ದರು. ಈ ಸ್ಥಿತಿಯಲ್ಲಿ ಕರೋಲಿನಾಗೆ ಯಾವುದೇ ಘನ ಆಹಾರವನ್ನು ನೀಡಲು ಸಾಧ್ಯವಾಗ್ತಿರಲಿಲ್ಲ. ಆಕೆಗೆ ಸಕ್ಕರೆ ಮತ್ತು ಹಾಲನ್ನು ಮಾತ್ರ ಕುಟುಂಬದವರು ನೀಡುತ್ತಿದ್ದರು.
ಕೊನೆಗೂ ಕಣ್ಣು ಬಿಟ್ಟ ಕರೋಲಿನಾ : ಕರೋಲಿನಾ ಹಾಸಿಗೆಯ ಮೇಲೆ ಪ್ರಜ್ಞಾಹೀನಳಾಗಿ ಮಲಗಿದ್ದರೂ ಮನಸ್ಸು ಸಂಪೂರ್ಣವಾಗಿ ಸಕ್ರಿಯವಾಗಿತ್ತು. ಹಲವು ವರ್ಷಗಳ ನಂತರ, ಕರೋಲಿನಾ ಅವರ ಸಹೋದರರೊಬ್ಬರು ನಿಧನರಾದಾಗ, ಕರೋಲಿನಾ ನಿದ್ರೆಯಲ್ಲಿ ಅಳುತ್ತಿರುವುದು ಕಂಡುಬಂದಿತು. ಸುದೀರ್ಘ ಕಾಯುವಿಕೆಯ ನಂತರ, ಏಪ್ರಿಲ್ 3, 1908 ರಂದು ಕರೋಲಿನಾ ನೆಲದ ಮೇಲೆ ತೆವಳುತ್ತಿರುವುದನ್ನು ಸೇವಕಿ ನೋಡಿದಳು. ಕರೋಲಿನಾ ತುಂಬ ಸಣ್ಣವಳಾಗಿದ್ದಳು. ದೇಹದ ಬಣ್ಣ ಕಳೆಗುಂದಿತ್ತು. ಬೆಳಕನ್ನು ನೋಡಲು ಕಷ್ಟಪಡುತ್ತಿದ್ದಳು. ಮಾತನಾಡಲೂ ಕಷ್ಟವಾಗುತ್ತಿತ್ತು.
ಕರೋಲಿನಾ ನಿದ್ರೆಯಿಂದ ಎದ್ದಾಗ ಆಕೆಗೆ 46 ವರ್ಷ ವಯಸ್ಸಾಗಿತ್ತು. ಆದರೆ ಆಕೆ ಇನ್ನೂ ಸಣ್ಣವಳಂತೆ ಕಾಣುತ್ತಿದ್ದಳು. ಮುಖದಲ್ಲಿ ಯಾವುದೇ ವಯಸ್ಸಾದ ಲಕ್ಷಣ ಇರಲಿಲ್ಲ.