MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • ತಾಮ್ರದ ಪಾತ್ರೆ ಕಪ್ಪಾಗೋ ಚಿಂತೆನಾ? ಇನ್ಮುಂದೆ ಟೆನ್ಷನ್​ ಬಿಡಿ- ಫಳಫಳ ಹೊಳಪಿಗೆ ಇಲ್ಲಿದೆ ಸೂಪರ್​ ಟಿಪ್ಸ್​

ತಾಮ್ರದ ಪಾತ್ರೆ ಕಪ್ಪಾಗೋ ಚಿಂತೆನಾ? ಇನ್ಮುಂದೆ ಟೆನ್ಷನ್​ ಬಿಡಿ- ಫಳಫಳ ಹೊಳಪಿಗೆ ಇಲ್ಲಿದೆ ಸೂಪರ್​ ಟಿಪ್ಸ್​

ತಾಮ್ರದ ಪಾತ್ರೆಗಳ ಆರೋಗ್ಯ ಪ್ರಯೋಜನಗಳ ಹೊರತಾಗಿಯೂ, ಅವುಗಳನ್ನು ಶುಚಿಗೊಳಿಸುವ ಕಷ್ಟದಿಂದಾಗಿ ಬಳಕೆ ಕಡಿಮೆಯಾಗಿದೆ. ಕಡಲೆ ಹಿಟ್ಟು, ಮೊಸರು, ನಿಂಬೆ ರಸದಂತಹ ವಸ್ತುಗಳನ್ನು ಬಳಸಿ, ಯಾವುದೇ ರಾಸಾಯನಿಕಗಳಿಲ್ಲದೆ ಕಪ್ಪಾದ ತಾಮ್ರದ ಪಾತ್ರೆಗಳನ್ನು ಸುಲಭವಾಗಿ ಹೊಳೆಯುವಂತೆ ಮಾಡುವ ವಿಧಾನವನ್ನು ವಿವರಿಸುತ್ತದೆ.

2 Min read
Author : Suchethana D
Published : Feb 21 2026, 10:02 PM IST
Share this Photo Gallery
  • FB
  • TW
  • Linkdin
  • Whatsapp
16
ಕಾಣೆಯಾದ ತಾಮ್ರ
Image Credit : Asianet News

ಕಾಣೆಯಾದ ತಾಮ್ರ

ಹಲವು ದಶಕಗಳ ಹಿಂದೆ ಮನೆಮನೆಗಳಲ್ಲಿ ತಾಮ್ರವೇ ರಾರಾಜಿಸುತ್ತಿದೆ. ಇದಕ್ಕೆ ಕಾರಣ, ಅದರಲ್ಲಿ ಇರುವ ಆರೋಗ್ಯವರ್ಧಕ ಅಂಶ. ಆದರೆ ಅದನ್ನು ಕ್ಲೀನ್​ ಮಾಡುವುದೇ ದೊಡ್ಡ ಸಮಸ್ಯೆ. ದಿನನಿತ್ಯ ಬಳಸುವ ತಾಮ್ರದ ಪಾತ್ರೆಗಳನ್ನು ಶುಚಿಗೊಳಿಸುವುದು ಕಷ್ಟ ಎಂದು ಅದರ ಉಸಾಬರಿ ಬೇಡ ಎಂದು ಇಂದು ಈ ಪಾತ್ರೆಗಳು ಅಟ್ಟಕ್ಕೇರಿವೆ. ಇನ್ನು ಹಬ್ಬ-ಹರಿದಿನಗಳಲ್ಲಿ ಪೂಜಾ ಸಾಮಗ್ರಿಗಳಾದ ತಾಮ್ರದ ಪಾತ್ರೆಗಳನ್ನು ಹೊರಕ್ಕೆ ತೆಗೆದು ಅದನ್ನು ಚಕಚಕಗೊಳಿಸುವುದೇ ದೊಡ್ಡ ಸವಾಲಾಗುತ್ತದೆ. ನೀರು ತಾಗಿದರೂ ಕಪ್ಪಾಗಿ ಬಿಡುತ್ತೆ ಎನ್ನುವ ಚಿಂತೆಯಲ್ಲಿರುವ ಮಹಿಳೆಯರಿಗೆ ವರದಾನವಾಗಿ ಸಿಕ್ಕಿದ್ದು, ಸ್ಟೀಲ್​. ಅದೇ ಕಾರಣಕ್ಕೆ ತಾಮ್ರ ಏನಿದ್ದರೂ ಸದ್ಯ ದೇವರ ಮನೆಯ ಮತ್ತು ಪೂಜಾ ಸಾಮಗ್ರಿಗೆ ಸೀಮಿತವಾಗಿಬಿಟ್ಟಿದೆ.

26
ಆರೋಗ್ಯವರ್ಧಕ
Image Credit : INSTAGRAM

ಆರೋಗ್ಯವರ್ಧಕ

ಅಷ್ಟಕ್ಕೂ ದೇಹಕ್ಕೆ ಅಲ್ಪಪ್ರಮಾಣದಲ್ಲಿ ಅಗತ್ಯವಾದ ಖನಿಜಗಳನ್ನು ಒದಗಿಸುವ ಶಕ್ತಿ ತಾಮ್ರಕ್ಕೆ ಇದೆ. ಇದು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ನೀಡುತ್ತದೆ. ಕೆಂಪು ರಕ್ತ ಕಣಗಳು ಮತ್ತು ಕೊಲ್ಯಾಜೆನ್‌ಗಳನ್ನು ದೇಹಕ್ಕೆ ಪೂರೈಸುವಲ್ಲಿ ತಾಮ್ರವು ಬಹು ಮುಖ್ಯ ಪಾತ್ರವನ್ನು ವಹಿಸುತ್ತವೆ. ತಾಮ್ರದಲ್ಲಿ ಬ್ಯಾಕ್ಟೀರಿಯಾ ನಿವಾರಕ ಗುಣಗಳಿವೆ. ಆದ್ದರಿಂದ ಇದೇ ಕಾರಣಕ್ಕೆ ರಾತ್ರಿ ನೀರನ್ನು ತಾಮ್ರದ ಪಾತ್ರೆಯಲ್ಲಿ ಇಟ್ಟು ಬೆಳಗ್ಗೆ ಕುಡಿದರೆ ಆರೋಗ್ಯವನ್ನು ಕಾಪಿಟ್ಟುಕೊಳ್ಳಬಹುದು ಎನ್ನಲಾಗಿದೆ.

Related Articles

Related image1
ಟೇಸ್ಟಿ ಟೇಸ್ಟಿ ಒಗ್ಗರಣೆ ಚಹ ಕುಡಿದು ನೋಡಿದ್ರಾ? ಮಾಡೋದು ಸಿಂಪಲ್​- ಹೀಗೆ ಮಾಡಿ ನೋಡಿ
Related image2
Bigg Bossನಿಂದ ಬಂದ ಮೇಲೆ ಗಿಲ್ಲಿನಟನ ಮನಸ್ಥಿತಿ ಹೀಗ್ಯಾಕಾಯ್ತು? ನಟ ಸಾಧು ಕೋಕಿಲ ಏನ್​ ಹೇಳಿದ್ರು ನೋಡಿ
36
ಹಲವು ಪ್ರಯೋಜನ
Image Credit : google

ಹಲವು ಪ್ರಯೋಜನ

ಇಂಥ ನೀರನ್ನು ಕುಡಿಯುವುದರಿಂದ ಹೊಟ್ಟೆಯಲ್ಲಿರುವ ಹಲವಾರು ಕಾಯಿಲೆ ಬರಿಸುವ ಬ್ಯಾಕ್ಟೀರಿಯಾಗಳನ್ನು ಕೊಂದು ಜೀರ್ಣವ್ಯವಸ್ಥೆಯನ್ನು ಉತ್ತಮಗೊಳಿಸಲು ನೆರವಾಗುತ್ತದೆ. ದೇಹದಲ್ಲಿ ತಾಮ್ರ ಕಡಿಮೆಯಾದರೆ ನಮ್ಮ ದೇಹ ಕಬ್ಬಿಣವನ್ನು ಹೀರಿಕೊಳ್ಳುವ ಸಾಮರ್ಥವೂ ಕಡಿಮೆಯಾಗುತ್ತದೆ. ಪರಿಣಾಮ, ರಕ್ತಹೀನತೆ. ಹಾಗಾಗಿ ಆಹಾರದಲ್ಲಿ ಕಬ್ಬಿಣದ ಅಂಶವಿದ್ದರೂ, ಇದನ್ನು ಹೀರಿಕೊಳ್ಳಲು ತಾಮ್ರದ ನೆರವು ಬೇಕೇ ಬೇಕು. ತಾಮ್ರದ ಅಂಶ ದೇಹದಲ್ಲಿ ಹೆಚ್ಚಿದರೆ ಕಬ್ಬಿಣದ ಅಂಶವೂ ಹೆಚ್ಚುತ್ತದೆ, ತನ್ಮೂಲಕ ರಕ್ತಹೀನತೆಯ ತೊಂದರೆ ಇಲ್ಲವಾಗಿಸುತ್ತದೆ.

46
ಶುಚಿ ಪೌಡರ್​
Image Credit : Gemini

ಶುಚಿ ಪೌಡರ್​

ಪ್ರತಿದಿನವೂ ಪೂಜಾ ಸಾಮಗ್ರಿಯನ್ನು ಬಳಸುವವರು ತಮ್ಮದೇ ಆದ ರೀತಿಯಲ್ಲಿ ತಾಮ್ರದ ಸಾಮಗ್ರಿಗಳು ತೊಳೆದರೂ ಅವು ಬಹು ಬೇಗನೇ ಕಪ್ಪಾಗಿಬಿಡುತ್ತವೆ. ಇವುಗಳನ್ನು ಜಗಮಗಗೊಳಿಸುವ ಹಲವು ಪೌಡರ್​ಗಳನ್ನು (Powder) ಮಾರುಕಟ್ಟೆಯಲ್ಲಿ ಲಭ್ಯವಿವೆ. ಆದರೆ ಅವುಗಳಲ್ಲಿನ ರಾಸಾಯನಿಕದಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಖಂಡಿತ. ಆದ್ದರಿಂದ ಇವುಗಳಿಂದ ಮುಕ್ತಿ ಹೊಂದಿ ಸುಲಭದಲ್ಲಿ ತಾಮ್ರದ ಪಾತ್ರೆಗಳನ್ನು ಚಕಚಕಗೊಳಿಸೋ ಸುಲಭ ವಿಧಾನ ಇಲ್ಲಿದೆ.

56
ಮನೆಯಲ್ಲಿಯೇ ರೆಡಿ ಮಾಡಿ ನೋಡಿ!
Image Credit : freepik

ಮನೆಯಲ್ಲಿಯೇ ರೆಡಿ ಮಾಡಿ ನೋಡಿ!

  • 3 ಸ್ಪೂನ್ ಕಡಲೆ ಹಿಟ್ಟು (Gram Floor) ತೆಗೆದುಕೊಳ್ಳಿ.
  • ಹಿಟ್ಟಿಗೆ 1 ಚಮಚ ಉಪ್ಪನ್ನು ಸೇರಿಸಿ.
  • ಮಿಶ್ರಣಕ್ಕೆ 3 ಚಮಚ ಮೊಸರು (curd) ಮಿಶ್ರಣ ಮಾಡಿ.
  • ಮಿಶ್ರಣಕ್ಕೆ 1 ಚಮಚ ಅರಿಶಿನ ಸೇರಿಸಿ.
  • ಅಂತಿಮವಾಗಿ, 2 ಚಮಚ ನಿಂಬೆ ರಸವನ್ನು ಸೇರಿಸಿ.
  • ಒಂದು ಹದಕ್ಕೆ ಬರುವವರೆಗೆ ಪೇಸ್ಟ್ ಆಗುವಂತೆ ಮಿಕ್ಸ್​ ಮಾಡಿ.
  • ಇಷ್ಟು ಮಾಡಿದರೆ ಪೇಸ್ಟ್​ ಸಿದ್ಧವಾಗುತ್ತದೆ.
66
ತಾಮ್ರದ ಶುಚಿಗೊಳಿಸುವ ವಿಧಾನ
Image Credit : X

ತಾಮ್ರದ ಶುಚಿಗೊಳಿಸುವ ವಿಧಾನ

  •  ಸ್ವಲ್ಪ ಪ್ರಮಾಣದ ಪೇಸ್ಟ್ (paste) ತೆಗೆದುಕೊಂಡು ಅದನ್ನು ನೀವು ಸ್ವಚ್ಛಗೊಳಿಸಲು ಬಯಸುವ ತಾಮ್ರದ ಉತ್ಪನ್ನಗಳ ಮೇಲೆ ಉಜ್ಜಿಕೊಳ್ಳಿ.
  • ತಾಮ್ರದ ವಸ್ತುಗಳನ್ನು ಪೇಸ್ಟ್‌ನೊಂದಿಗೆ ನಿಧಾನವಾಗಿ ಉಜ್ಜಲು ಮೃದುವಾದ ಬಟ್ಟೆ ಅಥವಾ ಮೃದುವಾದ ಬ್ರಷ್ ಬಳಸಿ.
  • ಕೊಳಕು ಹೊರಬರಲು ಪ್ರಾರಂಭವಾಗುವವರೆಗೆ ಉಜ್ಜುವುದನ್ನು ಮುಂದುವರಿಸಿ.
  • ಪೇಸ್ಟ್‌ ಸಂಪೂರ್ಣವಾಗಿ ಪಾತ್ರೆಯಿಂದ ಹೋಗುವವರೆಗೆ ನೀರಿನಿಂದ ಚೆನ್ನಾಗಿ ತೊಳೆಯಿರಿ.
  • ತಾಮ್ರದ ವಸ್ತುಗಳನ್ನು ಸ್ವಚ್ಛವಾದ ಬಟ್ಟೆಯಿಂದ ಒರೆಸಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಮಹಿಳೆಯರು
ಆರೋಗ್ಯ
ಆರೋಗ್ಯ ಸಮಸ್ಯೆಗಳು

Latest Videos
Recommended Stories
Recommended image1
ದಿನಾ ಸೋಂಪು ಕಾಳು ತಿಂದರೆ ಸಿಗುತ್ತೆ ಈ 7 ಅದ್ಭುತ ಪ್ರಯೋಜನಗಳು
Recommended image2
ವೈರಲ್ ಆಗ್ತಿದೆ Dark Showering Trend… ಈ ರೀತಿ ಸ್ನಾನ ಮಾಡಿದ್ರೆ ನಿದ್ರೆಯ ಸಮಸ್ಯೆನೆ ಬರಲ್ಲ
Recommended image3
ನೆನಪಿನ ಶಕ್ತಿ ಹೆಚ್ಚಿಸೋ 'ಬ್ರಾಹ್ಮೀ' ಚಟ್ನಿ ಸಖತ್ ರುಚಿಯಾಗಬೇಕೆ? ಈ ಒಂದು ರಹಸ್ಯ ಪದಾರ್ಥ ಸೇರಿಸಲು ಮರೆಯಬೇಡಿ!
Related Stories
Recommended image1
ಟೇಸ್ಟಿ ಟೇಸ್ಟಿ ಒಗ್ಗರಣೆ ಚಹ ಕುಡಿದು ನೋಡಿದ್ರಾ? ಮಾಡೋದು ಸಿಂಪಲ್​- ಹೀಗೆ ಮಾಡಿ ನೋಡಿ
Recommended image2
Bigg Bossನಿಂದ ಬಂದ ಮೇಲೆ ಗಿಲ್ಲಿನಟನ ಮನಸ್ಥಿತಿ ಹೀಗ್ಯಾಕಾಯ್ತು? ನಟ ಸಾಧು ಕೋಕಿಲ ಏನ್​ ಹೇಳಿದ್ರು ನೋಡಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved