MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Health
  • ಗರ್ಭಿಣಿಯು ಗ್ರೀನ್ ಟೀ ಕುಡಿದರೆ ಅಪಾಯವೇನಾದ್ರೂ ಇದೆಯಾ?

ಗರ್ಭಿಣಿಯು ಗ್ರೀನ್ ಟೀ ಕುಡಿದರೆ ಅಪಾಯವೇನಾದ್ರೂ ಇದೆಯಾ?

ಗರ್ಭಾವಸ್ಥೆಯಲ್ಲಿ ಗ್ರೀನ್ ಟೀ ಕುಡಿಯಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಜನರ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳು ಮೂಡುತ್ತವೆ. ನಿಮಗೂ ಇದೇ ರೀತಿಯ ಯೋಚನೆ ಇದ್ರೆ ಇದನ್ನು ಕುಡಿಯೋದ್ರಿಂದ ಏನಾಗುತ್ತೆ ಅನ್ನೋದನ್ನು ತಿಳಿಯೋಣ.  

2 Min read
Suvarna News
Published : Sep 15 2023, 05:11 PM IST
Share this Photo Gallery
  • FB
  • TW
  • Linkdin
  • Whatsapp
19

ಕಳೆದ ಕೆಲವು ವರ್ಷಗಳಲ್ಲಿ, ಗ್ರೀನ್ ಟೀ (green tea) ಜನಪ್ರಿಯತೆ ಗಮನಾರ್ಹವಾಗಿ ಹೆಚ್ಚಾಗಿದೆ. ಇತರ ಚಹಾಗಳಿಗೆ ಹೋಲಿಸಿದರೆ, ಗ್ರೀನ್ ಟೀಯಲ್ಲಿ ಹೆಚ್ಚಿನ ಪ್ರಮಾಣದ ಆಂಟಿ-ಆಕ್ಸಿಡೆಂಟ್‌ಗಳಿವೆ. ಇದಲ್ಲದೆ, ಗ್ರೀನ್ ಟೀಯಲ್ಲಿ ಇತರ ಅನೇಕ ಪೋಷಕಾಂಶಗಳು (Proteins) ಕಂಡುಬರುತ್ತವೆ. ತೂಕ ನಷ್ಟ, ಹೃದಯದ ರಕ್ಷಣೆ (Heart Care), ಕೂದಲು (Hair) ಮತ್ತು ಚರ್ಮದ ಆರೈಕೆಗೆ (Skin Care) ಗ್ರೀನ್ ಟೀ ಉತ್ತಮ ಪರಿಹಾರ  ಹಾಗಿದ್ರೆ ಇದು ಗರ್ಭಿಣಿಯರಿಗೆ ಸಹಾಯ ಮಾಡುತ್ತೋ? ಅಪಾಯ ಉಂಟು ಮಾಡುತ್ತೋ?
 

29

ಗರ್ಭಧಾರಣೆಯು ಮಹಿಳೆಯ (pregnant women) ಜೀವನದ ಒಂದು ಹಂತವಾಗಿದ್ದು, ಇದರಲ್ಲಿ ಜೀವನದಲ್ಲಿ ಅನೇಕ ಪ್ರಮುಖ ಬದಲಾವಣೆಗಳಾಗುತ್ತವೆ. ಗರ್ಭಿಣಿ ಮಹಿಳೆ ಹೊಸ ಸಂಬಂಧಕ್ಕೆ ಪ್ರವೇಶಿಸುತ್ತಿದ್ದಾಳೆ. ಈ ಸಮಯದಲ್ಲಿ, ಆಹಾರ ಪದ್ಧತಿಯಲ್ಲಿ , ದೇಹದಲ್ಲಿ ಅನೇಕ ಬದಲಾವಣೆಗಳಾಗೋದು ಸಹಜ. 
 

39

ಗರ್ಭಿಣಿಯಾಗಿದ್ದಾಗ, ಕೆಲವರು ಸಿಹಿ (Sweets), ಕೆಲವು ಹುಳಿ ಮತ್ತು ಉಪ್ಪು (Salt) ಆಹಾರ ತಿನ್ನಲು ಇಷ್ಟಪಡುತ್ತಾರೆ. ಆದರೆ ಏನೇ ಮಾಡಿದ್ರೂ ಆಹಾರವನ್ನು ತುಂಬಾನೆ ಯೋಚನೆ ಮಾಡಿ ಸೇವಿಸಬೇಕು. ಹಾಗಿದ್ರೆ ಗರ್ಭಾವಸ್ಥೆಯಲ್ಲಿ (pregnancy) ಗ್ರೀನ್ ಟೀ ಕುಡಿಯಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಜನರ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ. ನಿಮಗೆ ಆ ಸಂಶಯ ಇದ್ರೆ, ಇದನ್ನ ಓದಿ… 

49

ಗರ್ಭಾವಸ್ಥೆಯಲ್ಲಿ ಗ್ರೀನ್ ಟೀ ಕುಡೀಬಹುದಾ?
ಗರ್ಭಾವಸ್ಥೆಯಲ್ಲಿ ಗ್ರೀನ್ ಟೀ ಕುಡಿಯುವುದು (green tea during pregnancy)ಸುರಕ್ಷಿತ. ಆದರೆ ಗರ್ಭಿಣಿಯರು ಇದನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು. ಅತಿಯಾಗಿ ಗ್ರೀನ್ ಟೀ ಕುಡಿಯುವುದು ಆರೋಗ್ಯಕ್ಕೆ ಹಾನಿಕಾರಕ. ಗರ್ಭಾವಸ್ಥೆಯಲ್ಲಿ 3 ರಿಂದ 4 ಕಪ್ ಗ್ರೀನ್ ಟೀ ಕುಡಿಯಿರಿ. ಗರ್ಭಾವಸ್ಥೆಯಲ್ಲಿ ಕೆಫೀನ್ ಅನ್ನು 200 ಮಿಗ್ರಾಂಗಿಂತ ಕಡಿಮೆ ಸೇವಿಸಬೇಕು. ಒಂದು ಕಪ್ ಗ್ರೀನ್ ಟೀಯಲ್ಲಿ 35 ಮಿಗ್ರಾಂ ಕೆಫೀನ್ ಇರುತ್ತದೆ. 
 

59

- ಗರ್ಭಾವಸ್ಥೆಯಲ್ಲಿ ಗ್ರೀನ್ ಟೀ ಕುಡಿಯುವುದರಿಂದ ರಕ್ತದೊತ್ತಡ (blood pressure) ನಿಯಂತ್ರಣದಲ್ಲಿರುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು (Immunity Power) ಬಲಪಡಿಸುತ್ತದೆ. ಇದಲ್ಲದೆ, ಆತಂಕ ಮತ್ತು ಒತ್ತಡವನ್ನು (Stress) ಕಡಿಮೆ ಮಾಡಲು ಇದು ಉತ್ತಮವಾಗಿದೆ. ಇದು ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ. 

69

ಅಷ್ಟೇ ಯಾಕೆ ಗ್ರೀನ್ ಟೀ ಸೇವಿಸೋದರಿಂದ ಗರ್ಭಾವಸ್ಥೆಯಲ್ಲಿ ವಾಕರಿಕೆ ಸಮಸ್ಯೆ ನಿವಾರಣೆಯಾಗುತ್ತೆ. ಇದು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಸಹ ಕೆಲಸ ಮಾಡುತ್ತದೆ. ಹಾಗಾಗಿ ನಿಯಮಿತ ಪ್ರಮಾಣದಲ್ಲಿ ಗ್ರೀನ್ ಟೀ ಸೇವಿಸೋದ್ರಲ್ಲಿ ತಪ್ಪೇನೂ ಇಲ್ಲ. 
 

79

ಇದಲ್ಲದೆ, ಗ್ರೀನ್ ಟೀ ಪಾರ್ಶ್ವವಾಯು (Paralysis Stroke) ಅಪಾಯವನ್ನು ಸಹ ಕಡಿಮೆ ಮಾಡುತ್ತದೆ. ಜೀವನಶೈಲಿಯಲ್ಲಿ ಇದನ್ನು ಸೇರಿಸುವುದರಿಂದ ಮಧುಮೇಹದ ಅಪಾಯ ಕಡಿಮೆ ಮಾಡುತ್ತದೆ. ಇನ್ಸುಲಿನ್ (Insulin) ಮತ್ತು ಸಕ್ಕರೆ ಮಟ್ಟವನ್ನು (Sugar Contrl) ನಿಯಂತ್ರಿಸಲು (sugar control) ಗ್ರೀನ್ ಟೀ ಸಹಾಯಕ.
 

89

ಅಧಿಕ ಗ್ರೀನ್ ಟೀ ಸೇವಿಸಿದ್ರೆ ಏನೇನಾಗುತ್ತೆ?
ಗರ್ಭಾವಸ್ಥೆಯಲ್ಲಿ ಫೋಲಿಕ್ ಆಮ್ಲವನ್ನು (folic acid) ತೆಗೆದುಕೊಳ್ಳುವುದು ತಾಯಿ ಮತ್ತು ಮಗು ಇಬ್ಬರಿಗೂ ಮುಖ್ಯ. ಅದರ ಕೊರತೆಯಿಂದಾಗಿ, ಮಗುವಿನ ಪೂರ್ಣ ಮೆದುಳಿನ ಬೆಳವಣಿಗೆ ಸಾಧ್ಯವಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ನೀವು ಸಾಕಷ್ಟು ಗ್ರೀನ್ ಟೀ ತೆಗೆದುಕೊಂಡರೆ, ನಿಮ್ಮ ಮಗುವಿಗೆ ಫೋಲಿಕ್ ಆಮ್ಲದ ಸಂಪೂರ್ಣ ಪ್ರಯೋಜನ ಸಿಗುವುದಿಲ್ಲ.  
 

99

ಹೆಚ್ಚು ಗ್ರೀನ್ ಟೀ ಕುಡಿಯುವುದರಿಂದ ಕಬ್ಬಿಣದ ಹೀರಿಕೊಳ್ಳುವಿಕೆಯಲ್ಲಿ ಸಮಸ್ಯೆಗಳು ಉಂಟಾಗುತ್ತವೆ. ಈ ಕಾರಣದಿಂದಾಗಿ ಹಿಮೋಗ್ಲೋಬಿನ್ ಉತ್ಪತ್ತಿಯಾಗುವುದಿಲ್ಲ ಮತ್ತು ತಾಯಿ-ಮಗುವಿಗೆ ರಕ್ತಹೀನತೆ (Anema) ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತೆ.. ಇದಲ್ಲದೇ ಚಯಾಪಚಯ ಕ್ರಿಯೆ ಹೆಚ್ಚಾದ್ರೆ ತಾಯಿ ಮತ್ತು ಮಗುವಿನ ಮೇಲೆಯೂ ಪರಿಣಾಮ ಬೀರುತ್ತೆ. 

About the Author

SN
Suvarna News
ಗರ್ಭಧಾರಣೆ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved