ದಿನದಲ್ಲಿ ಶೂಟಿಂಗ್ ಇಲ್ಲಾ ಅಂದ್ರೆ ನಾನು ಸಿಗೋದು ಜಿಮ್‌ನಲ್ಲಿ, ಹೆಚ್ಚಾಗಿ ಪುಲ್‌ಅಪ್ಸ್ ಮಾಡುತ್ತಾ ಇರ‌್ತೀನಿ. ಇದರಿಂದ ಬಲ ಹೆಚ್ಚಾಗುತ್ತೆ. ಇದಕ್ಕೆ ಜಿಮ್ಮೇ ಬೇಕಾಗಿಲ್ಲ. ಮನೆಯಲ್ಲಿರೋ ರಾಡ್ ಹಿಡಿದೂ ಈ ಎಕ್ಸರ್‌ಸೈಸ್ ಮಾಡಬಹುದು.

ಡೇಟಿಂಗ್‌ಗೆ ಫಿಟ್ನೆಸ್ ಏಕೆ ಮುಖ್ಯ ಗೊತ್ತಾ?

ಎತ್ತರದ ರಾಡ್ ಹಿಡಿದು ಅದರಲ್ಲಿ ನೇತಾಡುತ್ತಾ ಇಡೀ ದೇಹವನ್ನು ಮೇಲ್ಮುಖವಾಗಿ ಮೂವ್ ಮಾಡೋದು. ಒಂಥರ ಮಕ್ಕಳಾಟದ ಹಾಗಿರುತ್ತೆ. ಯಾರು ಬೇಕಿದ್ರೂ ಮಾಡಬಹುದು, ಆದರೆ ಶುರು ಶುರುವಲ್ಲಿ ಉಳುಕೋ ಚಾನ್ಸನ್ ಇರುತ್ತೆ. ಮಾರ್ಗದರ್ಶಕರಿಲ್ಲದೇ ಟ್ರೈ ಮಾಡ್ಬೇಡಿ. ಉಳಿದಂತೆ ಸಿಂಪಲ್ ಎಕ್ಸರ್‌ಸೈಸ್ ನಂಗಿಷ್ಟ. ಇದು ಬಿಟ್ರೆ ಡ್ಯಾನ್ಸ್ ಮಾಡೋ ಅಭ್ಯಾಸ ಇದೆ. ಇವೆಲ್ಲ ದೇಹ ಫಿಟ್ ಆಗಿರಲಿಕ್ಕೆ, ಆರೋಗ್ಯವಂತವಾಗಿರೋದಕ್ಕೆ ಪೂರಕ.