ನೀವು ಮಲಗುವ ಮುನ್ನ ಮೊಬೈಲ್ ನೋಡುವ ಅಭ್ಯಾಸವಿದೆಯಾ? ಇದು ಸಾಮಾನ್ಯ ಬಿಡಿ. ಆದರೆ ಮಲಗುವ ಮುನ್ನ ನೀವು 1 ಗಂಟೆ ಮೊಬೈಲ್ ನೋಡಿದರೆ ನಿಮಗೆ ಶೇಕಡಾ 59 ರಷ್ಟು ಇನ್ಸೋಮ್ನಿಯಾ ರಿಸ್ಕ್ ಹಾಗೂ 24 ನಿಮಿಷ ನಿದ್ದೆ ಕಡಿತ ಸಮಸ್ಯೆ ಎದುರಾಗುತ್ತೆ. ಇದು ವೈದ್ಯರ ಅಧ್ಯಯನ ವರದಿ.

ಮೊಬೈಲ್ ಇಲ್ಲದೆ ಬದಕಲು ಸಾಧ್ಯವಿಲ್ಲ. ಆದರೆ ಸಮಸ್ಯೆ ಇದಲ್ಲ, ಮೊಬೈಲ್ ಯಾವಾಗ ಬಳಕೆ ಮಾಡುತ್ತೀರಿ? ಅನಗತ್ಯವಾಗಿ ಎಷ್ಟು ಸಮಯ ಬಳಕೆ ಮಾಡುತ್ತೀರಿ ಅನ್ನೋದೆ ಈಗಿನ ಸಮಸ್ಯೆ. ಬಹುತೇಕರು ಮಲಗುವ ಮುನ್ನ ಕನಿಷ್ಠ 1 ಗಂಟೆ, ಅರ್ಧಗಂಟೆ ಮೊಬೈಲ್ ನೋಡುವ ಅಭ್ಯಾಸವಿದೆ. ಒಂದಷ್ಟು ಮಂದಿ ಬೆಡ್‌ಲ್ಲಿ ಹಾಗೇ ಮಲಗಿಕೊಂಡು ಮೊಬೈಲ್ ನೋಡುತ್ತಾರೆ. ನಿದ್ದೆ ಹತುತ್ತಿದ್ದಂತೆ ಮಲಗಿಬಿಡುತ್ತಾರೆ. ಈ ಅಭ್ಯಾಸ ಉತ್ತಮವಲ್ಲ ಅನ್ನೋದು ಹಲವರು ಸೂಚಿಸಿದ್ದಾರೆ.ಆದರೆ ಮಲಗುವ ಮುನ್ನ ಮೊಬೈಲ್ ನೋಡುವುದರಿಂದ ಏನಾಗಲಿದೆ ಅನ್ನೋದು ಪತ್ತೆ ಹಚ್ಚಲು ಕೆಲ ವೈದ್ಯರು, ಮನೋಶಾಸ್ತ್ರಜ್ಞರು ಅಧ್ಯಯನ ನಡೆಸಿದ್ದಾರೆ. ಈ ವರದಿ ಬಿಡುಗಡೆಯಾಗಿದ್ದು, ಕೆಲ ಮಹತ್ವದ ಅಂಶಗಳು ಬಹಿರಂಗವಾಗಿದೆ.

ನಾರ್ವೆಯ ಸಾರ್ವಜನಿಕ ಆರೋಗ್ಯ ಕೇಂದ್ರ ಈ ಕುರಿತು ಮಹತ್ವದ ಅಧ್ಯಯನ ನಡೆಸಿ ವರದಿ ನೀಡಿದೆ. ಮಲಗುವ ಮುನ್ನ ಮೊಬೈಲ್ ನೋಡುವುದು, ಅಥವಾ ಟಿವಿ ನೋಡುವುದು ಹಲವು ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತಿದೆ ಎಂದು ಈ ವರದಿ ಹೇಳುತ್ತಿದೆ. ಮಲಗುವ ಮುನ್ನ ಕೇವಲ 1 ಗಂಟೆ ಮೊಬೈಲ್ ನೋಡಿದರೆ ಸಾಕು, ನಿಮ್ಮ ಇನ್ಸೋಮ್ನಿಯಾ ರಿಸ್ಕ್ ಶೇಕಡಾ 59 ರಷ್ಟು ಹೆಚ್ಚಾಗುತ್ತದೆ ಎಂದು ನಾರ್ವೆ ತಜ್ಞರ ವರದಿ ಹೇಳುತ್ತಿದೆ. ನೀವು ಕನಿಷ್ಠ 1 ಗಂಟೆ ಮಲಗುವ ಮುನ್ನ ಮೊಬೈಲ್ ನೋಡುವವರಾಗಿದ್ದರೆ, ನಿಮ್ಮ ಇನ್ಸೋಮ್ನಿಯಾ ರಿಸ್ಕ್ ಶೇಕಡಾ 59ರಷ್ಟು ಹೆಚ್ಚು ಎಂದು ವರದಿ ಹೇಳುತ್ತಿದೆ. ಇದು ಅಧ್ಯಯನದಲ್ಲಿ ಸಾಬೀತಾಗಿದೆ. 

ಪುರುಷರೇ ಅತೀ ಬಿಸಿ ನೀರಲ್ಲಿ ಸ್ನಾನ ಮಾಡ್ತೀರಾ? ಈಗ್ಲೇ ಬಿಟ್ಟುಬಿಡಿ! ಏನೇನು ಅನಾಹುತ ಆಗಬಹುದು ನೋಡಿ

ಏನಿದು ಇನ್ಸೋಮ್ನಿಯಾ?
ಇನ್ಸೋಮ್ನಿಯಾ ಬದಲು ಸರಳವಾಗಿ ಬಳಸುವ ಪದ ಸ್ಲೀಪ್ ಡಿಸ್ಸಾರ್ಡರ್ ಅಥವಾ ನಿದ್ದೆ ಸಮಸ್ಯೆ. ಮಲಗಿದರೆ ಬೇಗ ನಿದ್ದೆ ಬರುವುದಿಲ್ಲ, ಚಪಡಿಕೆ, ಒದ್ದಾಟ, ಬೆಳಗಾಗುವಾಗ ನಿದ್ದೆ ತಲೆಗೆ ಹತ್ತುವುದು, ಬಳಿಕ ಬೇಗನ ಎಚ್ಚರವಾಗುದು. ನಿದ್ದೆಯಿಂದ ಎದ್ದರೂ ತೂಕಡಿಸುವುದು, ಆಯಾಸವಾಗುದು, ನಿದ್ದೆ ಸರಿಯಾಗಿ ಆಗದ ಕಾರಣ ತಲೆನೋವು ಸೇರಿದಂತೆ ಇತರ ಆರೋಗ್ಯ ಸಮಸ್ಯೆಗಳು ಕಾಡುವುದೇ ಇನ್ಸೊಮ್ನಿಯಾ.

ಮಲಗುವ ಮುನ್ನ ಮೊಬೈಲ್ ನೋಡುವ ಅಭ್ಯಾಸವಿರುವ ಜನರಲ್ಲಿ ಈ ಇನ್ಸೋಮ್ನಿಯಾ ಸಮಸ್ಯೆ ಶೇಕಡಾ 59 ರಷ್ಟು ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ವರದಿ ಹೇಳುತ್ತಿದೆ. ಇಷ್ಟಕ್ಕೆ ಮುಗಿದಿಲ್ಲ. ಇನ್ನು 1 ಗಂಟೆ ಮೊಬೈಲ್ ನೋಡಿ ಮಲಗಿದರೆ ನಿಮ್ನ ಗಾಢ ನಿದ್ದೆಯಲ್ಲಿ 24 ನಿಮಿಷ ಕಡಿತಗೊಳ್ಳುತ್ತದೆ. ಅಂದರೆ ನಿಮ್ಮ ದೇಹಕ್ಕೆ ಬೇಕಾದ ಕನಿಷ್ಠ 8 ಗಂಟೆ ನಿದ್ದೆ ಅವಧಿಯಲ್ಲಿ 24 ನಿಮಿಷ ಕಡಿತಗೊಳ್ಳತ್ತದೆ. ಹಾಗಂತ ಹಲವರು 10 ಗಂಟೆ ಮಲಗಿರುತ್ತಾರೆ. ಆದರೆ ದೇಹಕ್ಕೆ ಬೇಕಾದ ವಿಶ್ರಾಂತಿಯ ನಿದ್ದೆ ಪ್ರಮಾಣ 10 ಗಂಟೆ ಇರುವುದಿಲ್ಲ. ಹೀಗೆ ದೇಹಕ್ಕೆ ಬೇಕಾದ ನಿದ್ದೆ ಪ್ರಮಾಣಲ್ಲಿ 24 ನಿಮಿಷ ಕಡಿತಗೊಳ್ಳುತ್ತದೆ ಎಂದು ನಾರ್ವೆ ಅಧ್ಯಯನ ವರದಿ ಹೇಳುತ್ತಿದೆ.

ಎಳನೀರು ಕುಡಿಯೋದು ಆರೋಗ್ಯಕ್ಕೆ ಒಳ್ಳೆಯದು, ಅತಿಯಾದ್ರೆ ಏನಾಗುತ್ತೆ ಗೊತ್ತಾ? ಹುಷಾರ್ ಕಣ್ರಪ್ಪ!