ಕೊರೋನಾ JN.1 ರೂಪಾಂತರದ ಆತಂಕದ ನಡುವೆ ಭಾರತದಲ್ಲಿ 11 ಹೊಸ ಕೋವಿಡ್ ಕೇಸ್!
ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಪ್ರಕಾರ, ಜೆಎನ್.1 ರೂಪಾಂತರದ ಕರೋನಾವೈರಸ್ ಇತ್ತೀಚೆಗೆ ಅಮೆರಿಕಾ ಸೇರಿದಂತೆ ಇತರ 11 ದೇಶಗಳಲ್ಲಿ ಪತ್ತೆಯಾಗಿದೆ.
ನವಹದೆಹಲಿ (ನ,8): ವಿಶ್ವದಾದ್ಯಂತ ಕೊರೋನಾವೈರಸ್‌ನ ಜೆಎನ್.1 ರೂಪಾಂತರದ ಆತಂಕದ ನಡುವೆ ಭಾರತದಲ್ಲಿ 11 ಹೊಸ ಕೋವಿಡ್ ಕೇಸ್ ಬುಧವಾರ ಪತ್ತೆಯಾಗಿದೆ. ಕೋವಿಡ್ 19ನ ಹೊಸ ರೂಪಾಂತರವಾಗಿರುವ ಜೆಎನ್.1 ಅಮೆರಿಕ ಸೇರಿದಂತೆ ವಿಶ್ವದ 11 ದೇಶಗಳಲ್ಲಿ ಪತ್ತೆಯಾಗಿದೆ ಎಂದು ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ತಿಳಿಸಿದೆ. ಇದರ ಬೆನ್ನಲ್ಲಿಯೇ ವಿಶ್ವದ ವಿಜ್ಞಾನಿಗಳು ಹೊಸ ಕೋವಿಡ್ ರೂಪಾಂತರದ ಬಗ್ಗೆ ಚಿಂತಿತರಾಗಿದ್ದಾರೆ. ಇದು ಇನ್ನಷ್ಟು ಆತಂಕಕಾರಿಯಾಗಿದ್ದು, ಈಗ ಇರುವ ಲಸಿಕೆಯೆ ಪ್ರತಿರಕ್ಷಣೆಯನ್ನು ಬಹಳ ಸುಲಭವಾಗಿ ತಪ್ಪಿಸಿ ಮಾನವನ ಜೀವಕೋಶಗಳ ಮೇಲೆ ದಾಳಿ ಮಾಡುತ್ತದೆ ಎಂದು ತಿಳಿಸಿದ್ದಾರೆ. ಹೊಸ ಕೊರೋನಾವೈರಸ್, ವಿಶ್ವದಲ್ಲಿ ಕೋವಿಡ್ ಸೋಂಕಿನ ಸಂಖ್ಯೆ ಇನ್ನಷ್ಟು ಉಲ್ಭಣ ಮಾಡಬಹುದು. ಆರೋಗ್ಯ ಕ್ಷೇತ್ರದ ಅಧಿಕಾರಿಗಳು ಈ ಬಗ್ಗೆ ಇನ್ನಷ್ಟು ಎಚ್ಚರಿಕೆ ವಹಿಸಬೇಕು ಎಂದು ಸಿಡಿಸಿ ತಿಳಿಸಿದೆ.
ಇದರ ನಡುವೆ ಬುಧವಾರ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ 11 ಹೊಸ ಕೊರೋನಾವೈರಸ್ ಸೋಂಕುಗಳು ದಾಖಲಾಗಿವೆ. ಇತ್ತೀಚಿನ ದಿನಗಳಲ್ಲಿ ಒಂದೇ ದಿನಗಳಲ್ಲಿ ದಾಖಲಾದ ಗರಿಷ್ಠ ಏರಿಕೆ ಇದಾಗಿದೆ. ಪ್ರಸ್ತುತ ದೇಶದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 176ಕ್ಕೆ ಏರಿದಂತಾಗಿದೆ.
ತಜ್ಞರ ಪ್ರಕಾರ, ಹೊಸ ಕೋವಿಡ್ ರೂಪಾಂತರವು BA.2.86 ರ ವಂಶಾವಳಿಯಾಗಿದ್ದು, ಇದನ್ನು 'ಪಿರೋಲಾ' ಎಂದೂ ಕರೆಯಲಾಗುತ್ತದೆ. ಇದು ಒಮಿಕ್ರಾನ್‌ನಿಂದ ಬಂದಿದೆ. "ಇದೀಗ ಯುನೈಟೆಡ್ ಸ್ಟೇಟ್ಸ್‌ನಲ್ಲಿ JN.1 ಅಥವಾ BA.2.86 ಸಾಮಾನ್ಯವಾಗಿ ಕಾಣುವ ವೈರಸ್ ಆಗಿಲ್ಲ. JN.1 ಅನ್ನು ತೀರಾ ಅಪರೂಪವಾಗಿ ಪತ್ತೆಹಚ್ಚಲಾಗಿದೆ, ಅದು SARS-CoV-2 ವೈರಸ್‌ಗಳಲ್ಲಿ 0.1 ಪ್ರತಿಶತಕ್ಕಿಂತ ಕಡಿಮೆಯಿರುತ್ತದೆ," ಎಂದು ಸಿಡಿಸಿ ತನ್ನ ವೆಬ್‌ಸೈಟ್‌ನಲ್ಲಿ ಬರೆದಿದೆ.
JN.1 ಮತ್ತು BA.2.86 ನಡುವೆ ಒಂದೇ ಒಂದು ಬದಲಾವಣೆ ಇದೆ. ಅದೇನೆಂದರೆ, ಇದು ಸ್ಪೈಕ್ ಪ್ರೋಟೀನ್ ಆಗಿದೆ. ಸ್ಪೈಕ್ ಪ್ರೋಟೀನ್ - ಇದನ್ನು "ಸ್ಪೈಕ್" ಎಂದು ಕರೆಯಲಾಗುತ್ತದೆ ಏಕೆಂದರೆ ಇದು ವೈರಸ್ ಮೇಲ್ಮೈಯಲ್ಲಿ ಸಣ್ಣ ಸ್ಪೈಕ್‌ಗಳಂತೆ ಕಾಣುತ್ತದೆ . ಈ ವೈರಸ್ ಜನರಿಗೆ ಸೋಂಕು ತಗುಲಿಸಲು ಸಹಾಯ ಮಾಡುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ" ಎಂದು ಸಿಡಿಸಿ ವಿವರಿಸಿದೆ, "ಇದರಿಂದಾಗಿ, ಸ್ಪೈಕ್ ಪ್ರೋಟೀನ್ ಕೂಡ ಲಸಿಕೆಗಳು ಗುರಿಪಡಿಸುವ ವೈರಸ್‌ನ ಭಾಗ, ಅಂದರೆ ಲಸಿಕೆಗಳು JN.1 ಮತ್ತು BA.2.86 ವಿರುದ್ಧ ಅದೇ ರೀತಿ ಕಾರ್ಯನಿರ್ವಹಿಸಬೇಕು" ಎಂದು ಹೇಳಿದೆ.
ಮತ್ತೆ ಭಯ ಬೀಳಿಸುತ್ತಿದ್ದಾನೆ ಕೊರೊನಾ ರಾಕ್ಷಸ: ಅನಿರೀಕ್ಷಿತ ಸಾವುಗಳ ಹಿಂದಿದೆ ಕೋವಿಡ್ ಕೈವಾಡ?
ಇದಲ್ಲದೆ, ಈಗ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸಕ್ರಿಯವಾಗಿರುವ ಎಲ್ಲಾ ವೈರಸ್‌ಗಳು XBB ಕುಟುಂಬದ ಭಾಗವಾಗಿದೆ ಮತ್ತು JN.1 SARS-CoV-2 ವೈರಸ್‌ಗಳಲ್ಲಿ 0.1% ಕ್ಕಿಂತ ಕಡಿಮೆಯಿದೆ ಎಂದು ಹೇಳಿದೆ. CDC ಯ ಆರಂಭಿಕ ಡೇಟಾದ ಪ್ರಕಾರ, ಕೋವಿಡ್ ಲಸಿಕೆಗಳು BA.2.86 ವಿರುದ್ಧ ರಕ್ಷಿಸಲು ಸಹಾಯ ಮಾಡುತ್ತದೆ ಮತ್ತು JN.1 ವಿರುದ್ಧ ಇದೇ ರೀತಿಯ ಪರಿಣಾಮವನ್ನು ನಿರೀಕ್ಷೆ ಮಾಡುದುವು ಕಷ್ಟ ಎಂದು ಸೂಚಿಸುತ್ತದೆ. ಫೆಡರಲ್ ಸರ್ಕಾರದ SARS-CoV-2 ಇಂಟರೆಜೆನ್ಸಿ ಗ್ರೂಪ್‌ನ ವಿಶ್ಲೇಷಣೆಯು ಚಿಕಿತ್ಸೆಗಳು ಮತ್ತು ಪರೀಕ್ಷೆಯು ಪರಿಣಾಮಕಾರಿಯಾಗಿ ಉಳಿಯುತ್ತದೆ ಎಂದು ಸೂಚಿಸುತ್ತದೆ ಎಂದು ಅದು ಹೇಳಿದೆ.
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಹೆಸರಲ್ಲಿ 'ಹೃದಯ ಜ್ಯೋತಿ ಯೋಜನೆ ' ಆರಂಭ: ಹೃದಯಾಘಾತಕ್ಕೆ ಆಗುವುದೇ ಪರಿಹಾರ!