Asianet Suvarna News Asianet Suvarna News

ಎಲ್ಲರನ್ನೂ ಬಿಡದೇ ಕಾಡೋ ಗ್ಯಾಸ್ ಸಮಸ್ಯೆಗೆ ಇಲ್ಲಿದೆ ಸಿಂಪಲ್ ಮನೆ ಮದ್ದು

ಅಜೀರ್ಣ, ಗ್ಯಾಸ್ ಸೇರಿ ಹೊಟ್ಟೆ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಮಾಮೂಲಿಯಾಗಿವೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಇದ್ರಿಂದ ಹೊರತಾಗಿಲ್ಲ. ಹೊಟ್ಟೆ ಊದಿಕೊಂಡು ಹಿಂಸೆಯಾಗ್ತಿದ್ದರೆ ಅಡುಗೆ ಮನೆ ಮದ್ದನ್ನ ನೀವು ಬಳಸಬಹುದು. 
 

Jeera home remedies to overcome gas issues
Author
Bangalore, First Published Jun 9, 2022, 5:47 PM IST

ಭಾರತ (India) ದಲ್ಲಿ ಗಿಡಮೂಲಿಕೆ (Herbal) ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಲಾಗುತ್ತದೆ. ಹಾಗೆಯೇ ಮಸಾಲೆ (Spice) ರೂಪದಲ್ಲಿ ಅಡುಗೆ ಮನೆಯಲ್ಲಿ ಬಳಸಲಾಗುವ ಆಹಾರ ಪದಾರ್ಥಗಳನ್ನು ಔಷಧಿ ರೂಪದಲ್ಲಿಯೂ ಬಳಸಲಾಗುತ್ತದೆ. ಅಡುಗೆ ಮನೆಯಲ್ಲಿ ಪ್ರಮುಖ ಸ್ಥಾನ ಪಡೆದಿರುವ ಮಸಾಲೆಗಳಲ್ಲಿ ಜಿರಿಗೆ ಕೂಡ ಒಂದು. ಜೀರಿಗೆಯನ್ನು ಅನೇಕ ಆಹಾರ ತಯಾರಿಕೆಗೆ ಬಳಸಲಾಗುತ್ತದೆ. ಹಾಗೆಯೇ ಔಷಧಿ ರೂಪದಲ್ಲಿಯೂ ಅದನ್ನು ಬಳಕೆ ಮಾಡಲಾಗುತ್ತದೆ. ಸಾಮಾನ್ಯವಾಗಿ ಹೊಟ್ಟೆ ನೋವು ಬಂದಿದೆ, ಅಜೀರ್ಣವಾಗಿದೆ ಎಂದಾಗ ಬಹುತೇಕರು ಮೊದಲು ಬಳಸುವುದು ಜೀರಿಗೆಯನ್ನು. ಜೀರಿಗೆಯನ್ನು ಜಗಿದು ರಸ ನುಂಗಿದ್ರೆ ಸ್ವಲ್ಪ ನೆಮ್ಮದಿ ಅನುಭವವಾಗುತ್ತದೆ. ಜೀರ್ಣಕ್ರಿಯೆಗೆ ಮಾತ್ರವಲ್ಲ ಜೀರಿಗೆ ಅನೇಕ ಖಾಯಿಲೆಗೆ ಮದ್ದು. ಅಜ್ಜಿಯರ ಕಾಲದಲ್ಲಿ ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗ್ತಾಯಿತ್ತು. ಆದ್ರೀಗ ಅನೇಕರಿಗೆ ಇದ್ರ ಪ್ರಯೋಜನ ತಿಳಿದಿಲ್ಲ. ಆಯುರ್ವೇದ ವೈದ್ಯೆ ಐಶ್ವರ್ಯ ಸಂತೋಷ್ ಜೀರಿಗೆ ಪ್ರಯೋಜನಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜೀರಿಗೆ ಜೀರ್ಣಕ್ರಿಯೆಯನ್ನು ಸುಧಾರಿಸಲು, ಮುಟ್ಟಿನ ನೋವನ್ನು ಕಡಿಮೆ ಮಾಡಲು, ತಾಯಂದಿರ ಹಾಲಿನ ಪ್ರಮಾಣವನ್ನು ಹೆಚ್ಚಿಲು ಮತ್ತು ಗ್ಯಾಸ್ ಸಮಸ್ಯೆಯನ್ನು ಕಡಿಮೆ ಮಾಡಲು ಪರಿಣಾಮಕಾರಿ ಎಂದು ಅವರು ವಿವರಿಸಿದ್ದಾರೆ. ಇದರ ಜೊತೆ ಜೀರಿಗೆಯನ್ನು ಸೇವಿಸುವ ವಿಧಾನ, ಪ್ರಮಾಣ ಮತ್ತು ಸಮಯವನ್ನೂ ತಿಳಿಸಿದ್ದಾರೆ. ಜೀರಿಗೆ ಉರಿಯೂತದ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಫಂಗಲ್ ಗುಣಲಕ್ಷಣಗಳನ್ನು ಹೊಂದಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಜೀರಿಗೆಯ ಪ್ರಯೋಜನಗಳು : 

ಅಜೀರ್ಣ ಸಮಸ್ಯೆಗೆ ಜೀರಿಗೆ ಮದ್ದು : ಸರಿಯಾದ ಸಮಯಕ್ಕೆ ಸರಿಯಾದ ಆಹಾರ ಸೇವನೆ ಮಾಡದೆ ಹೋದ್ರೆ ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ. ಇದ್ರಿಂದಾಗಿ ಅಜೀರ್ಣ ನಮ್ಮನ್ನು ಕಾಡುತ್ತದೆ. ಈ ಸಂದರ್ಭದಲ್ಲಿ  ಜೀರಿಗೆ ಬಳಕೆ ತುಂಬಾ ಪ್ರಯೋಜನಕಾರಿಯಾಗಿದೆ.

ಅಜೀರ್ಣಕ್ಕೆ ಜೀರಿಗೆ ಬಳಕೆ  : 20 ಗ್ರಾಂ ಜೀರಿಗೆ, 200 ಮಿಲಿ ನೀರನ್ನು ತೆಗೆದುಕೊಳ್ಳಿ. ಮೊದಲು ಒಂದು ಬಾಣಲೆಗೆ ಜೀರಿಗೆ ಹಾಕಿ ಚೆನ್ನಾಗಿ ಹುರಿಯಿರಿ. ನಂತ್ರ ನೀರನ್ನು ಹಾಕಿ 5 ನಿಮಿಷಗಳ ಕಾಲ ಕುದಿಸಿ. ಇದರ ನಂತರ ಅದನ್ನು ಫಿಲ್ಟರ್ ಮಾಡಿ ಮತ್ತು ದಿನಕ್ಕೆ ಎರಡು ಬಾರಿ ಸೇವಿಸಿ.

ಎಕ್ಕದ ಎಲೆ ಬಳಸಿ, ಮತ್ತೆ ಮೊಣಕಾಲು ನೋವಿನ ಚಿಂತೆಯಿಲ್ಲ

ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆ : ಇತ್ತೀಚಿನ ದಿನಗಳಲ್ಲಿ ಈ ಗ್ಯಾಸ್ ಸಮಸ್ಯೆ ವಿಪರೀತವಾಗ್ತಿದೆ. ಹೊಟ್ಟೆ ಉಬ್ಬಿದ ಅನುಭವವಾಗುತ್ತದೆ. ಹೊಟ್ಟೆಯಲ್ಲಿ ಕಿರಿಕಿರಿಯಾಗ್ತಿರುತ್ತದೆ. ಆದ್ರೆ ಗ್ಯಾಸ್ ಯಾವುದೇ ವಿಧಾನದ ಮೂಲಕವೂ ಹೊರಗೆ ಬರೋದಿಲ್ಲ. ಹೆಚ್ಚು ಕರಿದ ಆಹಾರವನ್ನು ಸೇವಿಸುವುದರಿಂದ ಇದು ಹೆಚ್ಚಾಗಿ ಸಂಭವಿಸುತ್ತದೆ.  

ಗ್ಯಾಸ್ ಸಮಸ್ಯೆಗೆ ಜೀರಿಗೆ ಬಳಸುವ ವಿಧಾನ : ಒಣ ಶುಂಠಿ ಮತ್ತು ಕಲ್ಲು ಉಪ್ಪಿನೊಂದಿಗೆ ಜೀರಿಗೆಯನ್ನು ಪುಡಿ ಮಾಡಿ ಮಾಡಬೇಕು. ನಂತ್ರ ಅದನ್ನು ಬಿಸಿ ನೀರಿನೊಂದಿಗೆ ಸೇವನೆ ಮಾಡ್ಬೇಕು. ಇದ್ರಿಂದ ಗ್ಯಾಸ್ ಸಮಸ್ಯೆ ಕಡಿಮೆಯಾಗುತ್ತದೆ.ಹೊಟ್ಟೆ ಹಗುರವಾಗುತ್ತದೆ.

ಎದೆ ಹಾಲಿಗೆ ಸಹಕಾರಿ : ಹೆರಿಗೆಯ ನಂತರ ಅನೇಕ ಮಹಿಳೆಯರಲ್ಲಿ ಸರಿಯಾದ ಪ್ರಮಾಣದಲ್ಲಿ ಹಾಲು ಉತ್ಪತ್ತಿಯಾಗುವುದಿಲ್ಲ. ಆಗ ಮಗುವಿಗೆ ಹೆಚ್ಚುವರಿ ಹಾಲು ನೀಡಬೇಕಾಗುತ್ತದೆ. ಇದರಿಂದ ಮಗುವಿಗೆ ಅಗತ್ಯವಾದ ಪೋಷಕಾಂಶಗಳು ಸಿಗುವುದಿಲ್ಲ. ಈ ಸಂದರ್ಭದಲ್ಲಿ, ನೀವು ಜೀರಿಗೆ ಬಳಸಬಹುದು. ಇದರಲ್ಲಿರುವ ಔಷಧೀಯ ಗುಣ, ಎದೆಹಾಲು ತಯಾರಿಸಲು ಸಹಾಯ ಮಾಡುತ್ತದೆ.

ರಾಷ್ಟ್ರೀಯ ಆಹಾರ ಗುಣಮಟ್ಟ ಸೂಚ್ಯಂಕ; ಅಗ್ರಸ್ಥಾನಕ್ಕೇರಿದ ತಮಿಳುನಾಡು, ಆಂಧ್ರಕ್ಕೆ ಕೊನೆಯ ಸ್ಥಾನ

ಬಳಸುವ ವಿಧಾನ :  ಜೀರಿಗೆಯನ್ನು ಬಿಸಿ ಹಾಲು ಮತ್ತು ಕಲ್ಲು ಸಕ್ಕರೆ ಜೊತೆ ಬೆರೆಸಿ ಕೆಲವು ದಿನಗಳವರೆಗೆ ಸೇವಿಸಿದರೆ ಎದೆ ಹಾಲು ಹೆಚ್ಚಾಗುತ್ತದೆ.

ಮುಟ್ಟಿನ ನೋವಿಗೆ ಪರಿಹಾರ : ಮುಟ್ಟಿನ ಸಂದರ್ಭದಲ್ಲಿ ನೋವು ಸಾಮಾನ್ಯ. ಕೆಲ ಮಹಿಳೆಯರು ವಿಪರೀತ ನೋವು ಅನುಭವಿಸುತ್ತಾರೆ. ಈ ನೋವಿಗೆ ಜೀರಿಗೆ ಪರಿಹಾರವಾಗಬಲ್ಲದು. 

ಮುಟ್ಟಿನ ನೋವಿಗೆ ಜೀರಿಗೆ ಬಳಕೆ ಹೀಗೆ ಮಾಡಿ : 50 ಗ್ರಾಂ ಜೀರಿಗೆ,25 ಗ್ರಾಂ ಬೆಲ್ಲ ಇದಕ್ಕೆ ಬೇಕು. ಜೀರಿಗೆಯನ್ನು ರುಬ್ಬಿಕೊಳ್ಳಬೇಕು. ನಂತರ ಅದನ್ನು 25 ಗ್ರಾಂ ಬೆಲ್ಲದೊಂದಿಗೆ ಬೆರೆಸಿ ಕ್ಯಾಪ್ಸುಲ್ ರೂಪದಲ್ಲಿ ತಯಾರಿಸಬೇಕು. ಮುಟ್ಟಿನ ದಿನಾಂಕಕ್ಕೆ 2-3 ದಿನಗಳ ಮೊದಲು ಸಿದ್ಧಪಡಿಸಿದ ಕ್ಯಾಪ್ಸುಲ್ ಅನ್ನು ಸೇವನೆ ಮಾಡ್ಬೇಕು. ಇದ್ರಿಂದ ಮುಟ್ಟಿನ ಸಮಯದಲ್ಲಿ ಹೆಚ್ಚು ನೋವು ಕಾಡುವುದಿಲ್ಲ. 
 

Follow Us:
Download App:
  • android
  • ios