ಐವಿಎಫ್ ಚಿಕಿತ್ಸೆ ವೇಳೆ ತಿನ್ನೋ ಆಹಾರದ ಮೇಲೆ ಸಕ್ಸೆಸ್ ರೇಟ್ ಡಿಪೆಂಡ್ ಆಗಿರುತ್ತೆ!
ಮಕ್ಕಳನ್ನು ಪಡೆಯಬೇಕೆಂಬ ಆಸೆ ಪ್ರತಿಯೊಬ್ಬ ಹೆಣ್ಣು ಮಗಳಿಗಿರುತ್ತದೆ. ಆಕೆ ನೈಸರ್ಗಿಕವಾಗಿ ಮಕ್ಕಳನ್ನು ಪಡೆಯಲು ಸಾಧ್ಯವಾಗದೆ ಹೋದಾಗ ವಿಎಫ್ ಮೊರೆ ಹೋಗ್ತಾಳೆ. ಈ ಸಂದರ್ಭದಲ್ಲಿ ವೈದ್ಯರು ನೀಡಿದ ಮಾತ್ರೆ ಮಾತ್ರವಲ್ಲ ಆಕೆ ಸೇವನೆ ಮಾಡುವ ಆಹಾರ ಕೂಡ ದೊಡ್ಡ ಪಾತ್ರವಹಿಸುತ್ತದೆ.
ಐವಿಎಫ್, ಇನ್ ವಿಟ್ರೊ ಫಲೀಕರಣ, ಅನೇಕ ದಂಪತಿ ಮಡಿಲಿನಲ್ಲಿ ಮಗು ಆಡಲು ನೆರವಾಗಿದೆ. ನೈಸರ್ಗಿಕವಾಗಿ ಸಂತಾನ ಪಡೆಯಲು ಸಾಧ್ಯವಾಗದ ದಂಪತಿ ವೈದ್ಯಕೀಯ ವಿಧಾನದ ಮೂಲಕ ಮಕ್ಕಳನ್ನು ಪಡೆಯುತ್ತಾರೆ. ಐವಿಎಫ್ ಪ್ರಕ್ರಿಯೆಯಲ್ಲಿ ಹಾರ್ಮೋನ್ ಔಷಧಿ ಪ್ರಮುಖ ಪಾತ್ರವಹಿಸುತ್ತದೆ. ಮಹಿಳೆಯ ಹಾರ್ಮೋನ್ ಗಳಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿರುತ್ತದೆ. ಅವರ ಆರೋಗ್ಯ ಮತ್ತು ಜೀವನಶೈಲಿ, ಅವರು ಸೇವನೆ ಮಾಡುವ ಆಹಾರ ಮುಖ್ಯವಾಗುತ್ತದೆ.
ಮಹಿಳೆ ಸೇವನೆ ಮಾಡುವ ಆಹಾರ, ಮಗುವಿನ ಬೆಳವಣಿಗೆಗೆ ಆರೋಗ್ಯಕರ ವಾತಾವರಣವನ್ನು ಸೃಷ್ಟಿಸುವ ಮೂಲಕ ಐವಿಎಫ್ (IVF) ಗರ್ಭಧಾರಣೆ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ನೀವು ಐವಿಎಫ್ ಚಿಕಿತ್ಸೆ (Treatment) ಗೆ ಒಳಗಾಗುತ್ತಿದ್ದರೆ ನಿಮ್ಮ ಪೋಷಣೆ ಬಗ್ಗೆ ಮಹತ್ವ ನೀಡಬೇಕಾಗುತ್ತದೆ. ಯಾವ ಆಹಾರ ಸೇವನೆ ಮಾಡುತ್ತಿದ್ದೀರಿ ಎಂಬುದನ್ನು ಗಮನಿಸಬೇಕಾಗುತ್ತದೆ. ನಮ್ಮಲ್ಲಿ ಅನೇಕ ಮಹಿಳೆಯರು ಪೋಷಕಾಂಶ (Nutrients) ಕೊರತೆ ಎದುರಿಸುತ್ತಿದ್ದಾರೆ. ಇದ್ರಿಂದ ಆರೋಗ್ಯವಂತ ಮಗುವಿನ ಜನನ ಸಾಧ್ಯವಾಗ್ತಿಲ್ಲ. ಆರೋಗ್ಯವಂತ ದೇಹದಿಂದ ಮಾತ್ರ ಆರೋಗ್ಯವಂತ ಮಗುವಿಗೆ ಜನ್ಮ ನೀಡಲು ಸಾಧ್ಯ ಎಂಬುದನ್ನು ಪ್ರತಿಯೊಬ್ಬರು ತಿಳಿಯಬೇಕು.
ಪೋಷಕಾಂಶ ಸಿಗುತ್ತೆ ಅಂತ ಬೇಕಾಬಿಟ್ಟಿ ಬೇಳೆ, ಕಾಳು ತಿನ್ನೋರೇ ಇಲ್ ಓದಿ!
ಹಾರ್ಮೋನ್ (Hormone) ಸಮತೋಲ, ಪೋಷಕಾಂಶ, ತೂಕ ನಿಯಂತ್ರಣ ಎಲ್ಲವೂ ಇಲ್ಲಿ ಮುಖ್ಯವಾದ ಕಾರಣ, ಐವಿಎಫ್ ಗೆ ಒಳಗಾಗುವ ಮಹಿಳೆಯರು ಈ ಕೆಳಗಿನ ಆಹಾರದ ಬಗ್ಗೆ ಹೆಚ್ಚು ಗಮನ ನೀಡಬೇಕು.
ಹಸಿರು ತರಕಾರಿ, ಸೊಪ್ಪು : ವಿಟಮಿನ್ ಬಿ ಭರಿತ ತರಕಾರಿಗಳಾದ ಪಾಲಕ್ ಸೇರಿದಂತೆ ಹಸಿರು ತರಕಾರಿ ಆರೋಗ್ಯಕರ ಭ್ರೂಣವನ್ನು ನಿರ್ಮಿಸಲು ಸಹಾಯ ಮಾಡುತ್ತದೆ.
ಧಾನ್ಯ : ಓಟ್ಸ್, ಬ್ರೌನ್ ರೈಸ್, ಕ್ವಿನೋವಾದಂತಹ ಧಾನ್ಯಗಳಲ್ಲಿ ಕಾರ್ಬೋಹೈಡ್ರೇಟ್‌ಗಳು ಹಾರ್ಮೋನ್ ಹೆಚ್ಚಿರುವ ಕಾರಣ ನೀವು ಅದನ್ನು ಸೇವನೆ ಮಾಡಬೇಕು.
ಆರ್ಯುವೇದದ ಪ್ರಕಾರ ಅತೀ ಕೆಟ್ಟ ಫುಡ್ ಕಾಂಬಿನೇಶನ್ ಇವು, ತಿಂದ್ರೆ ಆರೋಗ್ಯ ಹಾಳಾಗೋದು ಗ್ಯಾರಂಟಿ!
ದ್ವಿದಳ ಧಾನ್ಯಗಳು : ಮಸೂರ ಮತ್ತು ಬೀನ್ಸ್ ನಂತಹ ಸಸ್ಯ ಆಧಾರಿತ ಧಾನ್ಯಗಳಲ್ಲಿ ಕಬ್ಬಿಣ ಮತ್ತು ಫೋಲಿಕ್ ಆಮ್ಲ ಸಮೃದ್ಧವಾಗಿದ್ದು, ಅವು ಸಂತಾನೋತ್ಪತ್ತಿ ಆರೋಗ್ಯಕ್ಕೆ ಬಹಳ ಮುಖ್ಯ.
ಡ್ರೈ ಫ್ರೂಟ್ಸ್ (Dry Fruits) : ಬಾದಾಮಿ ಮತ್ತು ವಾಲ್‌ನಟ್‌ಗಳಂತಹ ಡ್ರೈ ಫ್ರೂಟ್ಸ್ ಮತ್ತು ಅಗಸೆ ಬೀಜಗಳು ಮತ್ತು ಚಿಯಾ ಬೀಜಗಳು ಆರೋಗ್ಯಕರ ಕೊಬ್ಬುಗಳು ಮತ್ತು ಫೈಬರ್‌ನ ಮೂಲಗಳಾಗಿವೆ. ಇದು ಫಲವತ್ತತೆಗೆ ಒಳ್ಳೆಯದು. ಅಗಸೆ ಬೀಜಗಳಲ್ಲಿ ಇರುವ ಒಮೆಗಾ -3 ಕೊಬ್ಬಿನಾಮ್ಲಗಳು ಹಾರ್ಮೋನುಗಳನ್ನು ನಿಯಂತ್ರಿಸಲು ಮತ್ತು ವೀರ್ಯದ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಸಿಟ್ರಸ್ ಹಣ್ಣುಗಳು (Citrus Fruits) : ಕಿತ್ತಳೆ, ನಿಂಬೆ, ದ್ರಾಕ್ಷಿಹಣ್ಣು, ಕ್ಯಾಪ್ಸಿಕಂನಂತಹ ವಿಟಮಿನ್ ಸಿ ಸಮೃದ್ಧವಾಗಿರುವ ಹಣ್ಣುಗಳು ವೀರ್ಯದ ಗುಣಮಟ್ಟ ಮತ್ತು ಚಲನಶೀಲತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಮೊಟ್ಟೆ (Egg) : ಮೊಟ್ಟೆಗಳು ಪ್ರೋಟೀನ್‌ನ ಸಮೃದ್ಧ ಮೂಲವಾಗಿವೆ. ಅವು ಶಕ್ತಿ ನೀಡುವ ಜೊತೆಗೆ ತೂಕ ನಿಯಂತ್ರಣಕ್ಕೆ ನೆರವಾಗುತ್ತದೆ.
ಬೆರ್ರಿ ಹಣ್ಣು (Berry Fruits) : ಬೆರಿಹಣ್ಣು , ಸ್ಟ್ರಾಬೆರಿ, ರಾಸ್ಬೆರ್ರಿ ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ. ಆಕ್ಸಿಡೇಟಿವ್ ಒತ್ತಡದಿಂದ ಮೊಟ್ಟೆ ಮತ್ತು ವೀರ್ಯವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಹಾಗಾಗಿ ಇವುಗಳನ್ನು ನೀವು ಸೇವನೆ ಮಾಡಬೇಕು.
ನೀರು (Water) : ಐವಿಎಫ್ ಚಿಕಿತ್ಸೆಯ ಸಮಯದಲ್ಲಿ ದೇಹ ಹೈಡ್ರೀಕರಣಗೊಳ್ಳುವುದು ಬಹಳ ಮುಖ್ಯ. ಹಾಗಾಗಿ ನಿಮ್ಮ ಆಹಾರದಲ್ಲಿ ನೀರಿರುವಂತೆ ನೀವು ನೋಡಿಕೊಳ್ಳಿ.
ಐವಿಎಫ್ ಚಿಕಿತ್ಸೆ ಸಮಯದಲ್ಲಿ ಈ ಆಹಾರ ಸೇವನೆ ಮಾಡಬೇಡಿ :
ಕರಿದ ಆಹಾರಗಳು : ನೀವು ಐವಿಎಫ್ ಚಿಕಿತ್ಸೆ ಪಡೆಯುತ್ತಿದ್ದರೆ ಚಿಪ್ಸ್, ಬಿಸ್ಕತ್ತು, ಹೆಚ್ಚು ಉಪ್ಪಿರುವ ಆಹಾರ, ಪಕೋಡಾ, ಬರ್ಗರ್ ನಂಹತ ಆಹಾರವನ್ನು ಸೇವನೆ ಮಾಡಬೇಡಿ.
• ಸಂಸ್ಕರಿಸಿದ ಆಹಾರ, ಹೆಚ್ಚು ಸಕ್ಕರೆ ಬೆರೆಸಿದ ಪಾನೀಯ, ಸಿಹಿತಿಂಡಿಗಳನ್ನು ಸೇವನೆ ಮಾಡದಿರುವುದು ಒಳ್ಳೆಯದು.
• ತುಪ್ಪ, ಬೆಣ್ಣೆಯಂತಹ ಸ್ಯಾಚುರೇಟೆಡ್ ಕೊಬ್ಬುಗಳನ್ನು ಅಧಿಕವಾಗಿ ಸೇವನೆ ಮಾಡಬೇಡಿ.
• ಅತಿಯಾದ ಕಾಫಿ ಮತ್ತು ಚಹಾ ಸೇವನೆ ಕೂಡ ಐವಿಎಫ್ ಚಿಕಿತ್ಸೆಗೆ ಅಡ್ಡಿಯುಂಟು ಮಾಡುತ್ತದೆ.
• ಧೂಮಪಾನ ಮತ್ತು ಮದ್ಯಪಾನದಿಂದಲೂ ನೀವು ದೂರ ಇರಬೇಕು.