ಕೋವಿಡ್ ವ್ಯಾಕ್ಸಿನ್ ಸೈಡ್ ಎಫೆಕ್ಟ್ ಆಗಿದ್ಯಾ? ಲೈವ್ ಶೋದಲ್ಲೇ ಬ್ರಿಟನ್ ಪ್ರಧಾನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವ್ಯಕ್ತಿ
ಬ್ರಿಟನ್‌ನಲ್ಲಿ ವ್ಯಕ್ತಿಯೊಬ್ಬ ಕೋವಿಡ್ ವ್ಯಾಕ್ಸಿನ್ ನಂತರ ನನ್ನ ಆರೋಗ್ಯ ಸಂಪೂರ್ಣ ಹದಗೆಟ್ಟಿದೆ. ಅದರಿಂದ ನಾನು ಸಾಕಷ್ಟು ಅಡ್ಡ ಪರಿಣಾಮ ಎದುರಿಸಿದೆ ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಭಾಗವಹಿಸಿದ್ದ ಲೈವ್ ಟಿವಿ ಶೋದಲ್ಲಿ ಪ್ರಧಾನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ಬ್ರಿಟನ್‌ನಲ್ಲಿ ನಡೆದಿದೆ.
ಇಂಗ್ಲೆಂಡ್: ಕೋವಿಡ್ 19 ರೋಗಕ್ಕೆ ತುತ್ತಾದವರಲ್ಲಿ ಹಲವು ದಿಢೀರ್ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದು ಹೆಚ್ಚಾಗಿದೆ, ಕೋವಿಡ್ ಬಳಿಕ ದಿಢೀರ್ ಹೃದಯಾಘಾತಕ್ಕೆ ಒಳಗಾಗುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಆದರೆ ಕೋವಿಡ್ ವ್ಯಾಕ್ಸಿನ್‌ನಿಂದ ಯಾವುದೇ ಅಡ್ಡ ಪರಿಣಾಮಗಳು ಆಗಿಲ್ಲ ಎಂಬುದನ್ನು ಹಲವು ಸಂಶೋಧನೆಗಳು ಸಾಬೀತುಪಡಿಸಿವೆ. ಹಾಗೆಯೇ ಭಾರತ ಸರ್ಕಾರವೂ ಕೂಡ ಕೋವಿಡ್ ವ್ಯಾಕ್ಸಿನ್‌ನಿಂದ ಯಾವುದೇ ಅಡ್ಡ ಪರಿಣಾಮ ತೊಂದರೆ ಆಗಿಲ್ಲ ಎಂದು ಹಲವು ಬಾರಿ ಹೇಳಿದೆ. ಆದರೆ ಬ್ರಿಟನ್‌ನಲ್ಲಿ ವ್ಯಕ್ತಿಯೊಬ್ಬ ಕೋವಿಡ್ ವ್ಯಾಕ್ಸಿನ್ ನಂತರ ನನ್ನ ಆರೋಗ್ಯ ಸಂಪೂರ್ಣ ಹದಗೆಟ್ಟಿದೆ. ಅದರಿಂದ ನಾನು ಸಾಕಷ್ಟು ಅಡ್ಡ ಪರಿಣಾಮ ಎದುರಿಸಿದೆ ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಭಾಗವಹಿಸಿದ್ದ ಲೈವ್ ಟಿವಿ ಶೋದಲ್ಲಿ ಪ್ರಧಾನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ಬ್ರಿಟನ್‌ನಲ್ಲಿ ನಡೆದಿದೆ.
ಬ್ರಿಟನ್‌ನ ಜಿಬಿ ನ್ಯೂಸ್ ಚಾನೆಲ್ ನಡೆಸಿಕೊಡುತ್ತಿದ್ದ ಪೀಪಲ್ ಫಾರಂ ಪ್ರೋಗ್ರಾಂನಲ್ಲಿ ಈ ಘಟನೆ ನಡೆದಿದೆ. ವೀಕ್ಷಕರ ಗ್ಯಾಲರಿಯಲ್ಲಿದ್ದ ಜಾನ್ ಎಂಬ ಬ್ರಿಟನ್ ಪ್ರಜೆ ಈ ಬಗ್ಗೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರನ್ನು ಪ್ರಶ್ನೆ ಮಾಡಿದ್ದಾರೆ. ನಾನು ನಿಮ್ಮ ಬಳಿ ಇಷ್ಟು ಸಣ್ಣ ಕಾಲಾವಕಾಶದಲ್ಲಿ ತುಂಬಾ ಹೇಳಬೇಕಿದ, ನನ್ನ ಹೆಸರು ಜಾನ್ ವಾಟ್, ಕೋವಿಡ್ ವ್ಯಾಕ್ಸಿನ್‌ನಿಂದ ತೊಂದರೆಗೊಳಗಾದ ಈ ದೇಶಗಳ ಪ್ರಜೆಗಳಲ್ಲಿ ನಾನು ಓರ್ವ ನಾನು ನೀವು ನನ್ನ ಕಣ್ಣಲ್ಲಿ ಕಣ್ಣಿಟ್ಟು ನನ್ನ ಕಷ್ಟ ನೋಡಬೇಕು, ನನ್ನ ಭಯ ನನ್ನ ಕಣ್ಣಲ್ಲಿರುವ ಹತಾಶೆಯನ್ನು ನೀವು ನೋಡಬೇಕು ಎಂದು ಬಯಸುತ್ತೇನೆ.
ಕೋವಿಡ್ 2ನೇ ಡೋಸ್ ಲಸಿಕೆ ಪಡೆದವರಿಗೆ ಕಾರ್ಬೋವ್ಯಾಕ್ಸ್ ಲಸಿಕೆ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ!
ನಮಗೆ ಯಾವುದೇ ಸಹಾಯ ಸಿಗಲಿಲ್ಲ, ಕೋವಿಡ್ ಲಸಿಕೆಯಿಂದ ಸಂತ್ರಸ್ತನಾದವ ನಾನು ಮಾತ್ರ ಅಲ್ಲ, ಇನ್ನೊಬ್ಬರಿದ್ದಾರೆ ಅವರ ಜೀವನವೂ ಹಾಳಾಗಿದೆ. ಈ ಲಸಿಕೆಯಿಂದಾಗಿ ಕಾಲುಗಳ ಬಲ ಕಳೆದುಕೊಂಡವರು ಅಂಗಾಂಗ ಕತ್ತರಿಸಲ್ಪಟ್ಟವರು, ಹೃದಯ ರೋಗಕ್ಕೆ ಒಳಗಾದವರನ್ನು ನೋಡಿದ್ದೇನೆ. ಆ ಲಸಿಕೆಯಿಂದ ಪ್ರಭಾವಿತರಾದ ಜನರನ್ನು ನೋಡಿಕೊಳ್ಳಲು ನಾನು ಸ್ಕಾಟ್ಲೆಂಡ್‌ನಲ್ಲಿ ಬೆಂಬಲ ಗುಂಪನ್ನು ಏಕೆ ಸ್ಥಾಪಿಸಬೇಕಾಗಿತ್ತು. ನಮ್ಮನ್ನೆಲ್ಲಾ ಸರಿ ಮಾಡುತ್ತೇವೆ ಎಂದು ಹೇಳಿದ ಈ ದೇಶದ ಜವಾಬ್ದಾರಿ ಹೊತ್ತಿರುವವರೇ ಈ ದೇಶದ ಹತ್ತಾರು ಜನರನ್ನು ಕೊಳೆಯುವಂತೆ ಏಕೆ ಮಾಡ್ತಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಕೇವಲ ಸ್ಕಾಟ್‌ಲ್ಯಾಂಡ್ ಒಂದರಲ್ಲೇ 30 ಸಾವಿರಕ್ಕೂ ಹೆಚ್ಚು ಜನ ಲಸಿಕೆಯಿಂದ ಹಾನಿಗೊಳಗಾಗಿದ್ದಾರೆ. ರಿಷಿ ಸುನಕ್ ಅವರೇ ನನ್ನ ಕಣ್ಣುಗಳಲ್ಲಿ ಕಣ್ಣಿಟ್ಟು ಹೇಳಿ ನೀವು ಯಾವಾಗ ಒಳ್ಳೆಯ ಕೆಲಸಗಳನ್ನು ಮಾಡಲು ಶುರು ಮಾಡುತ್ತೀರಿ ಹೇಳಿ ಎಂದು ಹೇಳಿ ಎಂದು ಬ್ರಿಟನ್ ಪ್ರಜೆ ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ರಿಷಿ ಸುನಕ್ ನಿಮ್ಮ ವೈಯಕ್ತಿಕ ಸ್ಥಿತಿ ಹಾಗೂ ನೀವು ಹೇಳಿದಂತೆ ನಿಮ್ಮಂತೆ ಕಷ್ಟ ಅನುಭವಿಸುತ್ತಿರುವವರ ವಿಚಾರ ಕೇಳಿ ಬೇಸರವಾಯ್ತು, ನೀವು ಯಾವ ಸ್ಥಿತಿಯಲ್ಲಿದ್ದೀರಿ ಎಂಬುದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ, ಮಧ್ಯೆ ಮಾತನಾಡಿದ ಜಾನ್ ನಾವು ಮೌನವಾಗಿದ್ದೇವೆ, ನೀವು ಮೌನವಾಗಿದ್ದೀರಿ ಎಂದು ಹೇಳಿದ್ದಾರೆ. ನಂತರ ಮಾತನಾಡಿದ ಸುನಕ್, ಲಸಿಕೆ ಪರಿಹಾರ ಸ್ಕೀಮ್ ಇದೆ. ಆದರೆ ಪ್ರತಿಯೊಬ್ಬರ ವೈಯಕ್ತಿಕ ಪ್ರಕರಣದ ಬಗ್ಗೆ ನಾನು ಮಾತನಾಡುವುದು ಕಷ್ಟ, ನೀವು ಮಾಡಿರುವ ಕೆಲಸ ಪ್ರಶಂಸಾರ್ಹ, ನೀವು ಇಷ್ಟು ದಿನ ಮೌನವಾಗಿದ್ದುದರಿಂದ ನನಗೆ ಬೇಸರವಾಗಿದೆ ಎಂದು ಸುನಕ್ ಉತ್ತರಿಸಿದ್ದಾರೆ.
ಕೋವಿಡ್ ಪರೀಕ್ಷೆ ವೇಳೆ ನೀಡಿದ 81.5 ಕೋಟಿ ಜನರ ವೈಯಕ್ತಿಕ ಮಾಹಿತಿ ಸೋರಿಕೆ?