Asianet Suvarna News Asianet Suvarna News

ಕೋವಿಡ್ ಪರೀಕ್ಷೆ ವೇಳೆ ನೀಡಿದ 81.5 ಕೋಟಿ ಜನರ ವೈಯಕ್ತಿಕ ಮಾಹಿತಿ ಸೋರಿಕೆ?

ಐಸಿಎಂಆರ್ ವೆಬ್‌ಸೈಟಲ್ಲಿ ಕೋವಿಡ್ ಪರೀಕ್ಷೆ ಸಂಬಂಧ ಸಂಗ್ರಹಿಸಲಾಗಿದ್ದ ದೇಶದ 81.5 ಕೋಟಿ ನಾಗರಿಕರ ಮಾಹಿತಿ ಕಳ್ಳತನವಾಗಿದ್ದು, ಇದನ್ನು ಮಾರಾಟಕ್ಕೆ ಇಡಲಾಗಿದೆ ಎಂದು ವ್ಯಕ್ತಿಯೊಬ್ಬರು ಪೋಸ್ಟ್ ಮಾಡಿದ್ದಾರೆ. 

data of 81.5 crore citizens of the country, which was collected in Covid test Is leaked from ICMR website akb
Author
First Published Oct 31, 2023, 10:03 AM IST

ನವದೆಹಲಿ: ಐಸಿಎಂಆರ್ ವೆಬ್‌ಸೈಟಲ್ಲಿ ಕೋವಿಡ್ ಪರೀಕ್ಷೆ ಸಂಬಂಧ ಸಂಗ್ರಹಿಸಲಾಗಿದ್ದ ದೇಶದ 81.5 ಕೋಟಿ ನಾಗರಿಕರ ಮಾಹಿತಿ ಕಳ್ಳತನವಾಗಿದ್ದು, ಇದನ್ನು ಮಾರಾಟಕ್ಕೆ ಇಡಲಾಗಿದೆ ಎಂದು ವ್ಯಕ್ತಿಯೊಬ್ಬರು ಪೋಸ್ಟ್ ಮಾಡಿದ್ದಾರೆ. ಇದು ದೇಶದಲ್ಲೇ ನಡೆದ ಅತಿದೊಡ್ಡ ದತ್ತಾಂಶ ಕಳ್ಳತನ ಎಂದು ಹೇಳಲಾಗುತ್ತಿದೆ. ಪರೀಕ್ಷೆ ವೇಳೆ ಜನರು ನೀಡಿದ್ದ ಆಧಾರ್, ಪಾಸ್‌ಪೋರ್ಟ್ ಮಾಹಿತಿ, ಮೊಬೈಲ್ ನಂಬರ್, ವಿಳಾಸ ಮೊದಲಾದ ಮಾಹಿತಿಗಳು ಸೋರಿಕೆಯಾಗಿವೆ ಎನ್ನಲಾಗಿದೆ. ಆದರೆ ಈ ಕುರಿತಾಗಿ, ಐಸಿಎಂಆರ್ ಯಾವುದೇ ದೂರು ದಾಖಲಿಸಿಲ್ಲ. ಒಂದು ವೇಳೆ ದೂರು ದಾಖಲಾದರೆ ಸಿಬಿಐ ಈ ಪ್ರಕರಣದ ತನಿಖೆ ನಡೆಸಬಹುದು ಎಂದು ವರದಿಗಳು ತಿಳಿಸಿವೆ.

'ಫೆಟ್ ಆಕ್ಟರ್ ಅಲಿಯಾಸ್ ಪಿಡಬ್ಲ್ಯುಎನ್ 0001 ' ಎಂಬ ಬಳಕೆದಾರ ಆಧಾರ್ (Adhar) ಮಾಹಿತಿ ಒಳಗೊಂಡಂತೆ ಹಲವು ಜನರ ಮಾಹಿತಿಯನ್ನು ಹಂಚಿಕೊಂಡಿದ್ದು, 81.5 ಕೋಟಿ ಜನರ ದತ್ತಾಂಶ ಮರಾಟಕ್ಕಿದೆ ಎಂದು ಹೇಳಿದ್ದಾರೆ. ಕೋವಿಡ್ ಸಮಯದಲ್ಲಿ ಚಿಕಿತ್ಸೆ, ಲಸಿಕೆ ಸೇರಿದಂತೆ ಹಲವು ಕಾರಣಗಳಿಗಾಗಿ ಜನರು ತಮ್ಮ ವೈಯಕ್ತಿಕ ದಾಖಲೆಗಳನ್ನು ಐಸಿಎಂಆರ್‌ನಲ್ಲಿ ದಾಖಲಿಸಿದ್ದರು.

ಭಾರತದಿಂದಲೂ ಇಸ್ರೇಲ್‌ ರೀತಿ ಸ್ವದೇಶಿ 'ಐರನ್‌ ಡೋಮ್‌': ಡಿಆರ್‌ಡಿಒದಿಂದ 5 ವರ್ಷಗಳಲ್ಲಿ ನಿರ್ಮಾಣ

'ಕೋವಿಡ್ ಲಸಿಕೆ ಹಠಾತ್ ಹೃದಯಾಘಾತಕ್ಕೆ ಕಾರಣವಲ್ಲ

ನವದೆಹಲಿ: ಕೋವಿಡ್ ಲಸಿಕೆ ಯುವಕರಲ್ಲಿ ಹಠಾತ್ ಹೃದಯಾಘಾತದ (Sudden Heart Attack) ಅಪಾಯವನ್ನು ಹೆಚ್ಚು ಮಾಡುತ್ತಿಲ್ಲ ಎಂದು ಐಸಿಎಂಆ‌ರ್‌ ನಡೆಸಿರುವ ಅಧ್ಯಯನದಿಂದ ತಿಳಿದು ಬಂದಿದೆ. ಆದರೆ ಕೋವಿಡ್ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದವರಲ್ಲಿ ಅತಿ ಹೆಚ್ಚು ಮದ್ಯಪಾನ ಮಾಡುತ್ತಿದ್ದವರು ಹಾಗೂ ಅತಿಯಾದ ದೈಹಿಕ ಚಟುವಟಿಕೆ ನಡೆಸುತ್ತಿದ್ದವರು ಸಾವಿಗೀಡಾಗಿದ್ದಾರೆ ಎಂದು ವರದಿ ಹೇಳಿದೆ. 

ಗಾಜಾ ನಗರದೊಳಗೆ ನುಗ್ಗಿ ನೆಲೆ ಸ್ಥಾಪಿಸಿದ ಇಸ್ರೇಲ್‌ ಸೈನಿಕರು: ಎಚ್ಚರಿಕೆ ಬಳಿಕ ತೀಕ್ಷ್ಣ ಭೂದಾಳಿ

'ಭಾರತದಲ್ಲಿ ಉಂಟಾಗುತ್ತಿರುವ 18 ರಿಂದ 45 ವರ್ಷದೊಳಗಿನ ಯುವಕರ ಸಾವಿಗೆ ಕಾರಣವಾದ ಅಂಶಗಳು' ಹೆಸರಿನಲ್ಲಿ ಈ ಅಧ್ಯಯನವನ್ನು ನಡೆಸಿದ್ದು, ಈ ತಿಂಗಳ ಆರಂಭದಲ್ಲಿ ವರದಿಯನ್ನು ಪೂರ್ಣಗೊಳಿ ಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇತ್ತೀಚೆಗೆ ದೇಶದಲ್ಲಿ ಯುವಕರ ಸಾವಿನ ಸಂಖ್ಯೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಕೋವಿಡ್ ಲಸಿಕೆಯಿಂದಲೇ (covid vaccine) ಇದು ಸಂಭವಿಸುತ್ತಿದೆ ಎಂಬ ಹಲವು ಆರೋಪಗಳು ಕೇಳಿ ಬಂದಿತ್ತು. ಹೀಗಾಗಿ ಐಸಿಎಂಆರ್ ಅಧ್ಯಯನ ನಡೆಸಿದ್ದು, ಕೋವಿಡ್ ಲಸಿಕೆ ಈ ಅಪಾಯವನ್ನು ಹೆಚ್ಚು ಮಾಡಿಲ್ಲ ಎಂದು ಹೇಳಿದೆ.

2021ರ ಅ.1ರಿಂದ 2023ರ ಮಾ.31ರ ನಡುವೆ ಸಂಭವಿಸಿದ ಮರಣಗಳನ್ನು ಆಧರಿಸಿ ಈ ಅಧ್ಯಯನವನ್ನು ಕೈಗೊಳ್ಳ ಲಾಗಿದೆ. ಇದಕ್ಕಾಗಿ ಸುಮಾರು 729 ಪ್ರಕರಣಗಳನ್ನು ಅಧ್ಯಯನ ಮಾಡಲಾಗಿದೆ. ಇವರೆಲ್ಲರ ವೈದ್ಯಕೀಯ ಇತಿಹಾಸ, ಧೂಮಪಾನ (Smoking), ಮದ್ಯಪಾನ, ಅತಿಹೆಚ್ಚು ವ್ಯಾಯಾಮ ಮುಂತಾದವುಳ ಅಧ್ಯಯನ ಮಾಡಲಾಗಿತ್ತು.

Follow Us:
Download App:
  • android
  • ios