Asianet Suvarna News Asianet Suvarna News

ದಿನವೂ ಮಜ್ಜಿಗೆ ಕುಡಿಯುವುದು ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತೇ?

ನಮ್ಮ ಪೂರ್ವಜರು(Ancestor) ಬಿಸಿಲಿನಿಂದ ಮನೆಗೆ ಬಂದಾಗ ಲೋಟಗಟ್ಟಲೆ ಮಜ್ಜಿಗೆ(Buttermilk) ಕುಡಿಯುತ್ತಿದ್ದರು. ಅಲ್ಲದೆ ಊಟಕ್ಕೆ ಮಜ್ಜಿಗೆ ಇರಲೇಬೇಕು. ಇಂದಿಗೂ ಬಹಳಷ್ಟು ಮನೆಗಳಲ್ಲಿ ಮಜ್ಜಿಗೆಗೆ ಮಹಳ ಮಹತ್ವ ನೀಡಲಾಗುತ್ತದೆ. ಹಾಗಾದರೆ ಮಜ್ಜಿಗೆಯಿಂದ ಆರೋಗ್ಯದ ಮೇಲಾಗುವ ಪ್ರಯೋಜನಗಳ ಬಗ್ಗೆ ಇಲ್ಲಿ ಹೇಳಲಾಗಿದೆ.

Is Drinking Buttermilk daily good for Health
Author
First Published Nov 30, 2022, 9:00 PM IST

ಎಲ್ಲಾ ಕಾಲಕ್ಕೂ ಯಾವುದೇ ಅಡ್ಡಪರಿಣಾಮವಿಲ್ಲದೆ(Side effects) ಆರೋಗ್ಯವನ್ನು ಕಾಯ್ದುಕೊಳ್ಳುವ ಮಜ್ಜಿಗೆ ನಮ್ಮ ಆಹಾರ ಸೇವನೆಯ ಅವಿಭಾಜ್ಯ ಪದಾರ್ಥ ಎಂದರೆ ತಪ್ಪೇನಿಲ್ಲ. ಮಜ್ಜಿಗೆ ಇಲ್ಲದೆ ಊಟ ಅಪೂರ್ಣ ಎನ್ನುವವರು ಇದ್ದಾರೆ. ಎಷ್ಟೋ ಆರೋಗ್ಯ ಸಮಸ್ಯೆಗೆ ದಿವ್ಯೌಷಧವಾಗಿ ಕೆಲಸ ಮಾಡುತ್ತದೆ. ಅಲ್ಲದೆ ಆಯುರ್ವೇದದಲ್ಲೂ(Ayurveda) ಮಜ್ಜಿಗೆ ಕುರಿತು ಹೇಳಲಾಗಿದ್ದು, ಗ್ಯಾಸ್ಟಿçಕ್(Gyastric), ಮಲಬದ್ಧತೆ(Constipation), ನಿರ್ಜಲೀಕರಣ(Dehydration) ಸೇರಿದಂತೆ ಹಲವು ಸಮಸ್ಯೆಗಳನ್ನು ನಿವಾರಿಸುವ ಗುಣವಿದೆ.

ಭಾರೀ ಊಟದ ನಂತರ ಅಸಿಡಿಟಿಯಿಂದ(Acidity) ಬಳಲುತ್ತಿದ್ದರೆ, ಬಿಸಿಲಿನಿಂದ ಸುಸ್ತಾಗಿ ಮನೆಗೆ ಬಂದಾಗ, ತಂಪು ಪಾನೀಯಗಳ(Cool drinks), ಸೋಡಾ(Soda) ಇತರೆ ಬಾಟಲಿಯನ್ನು ಮೊರೆ ಹೋಗುವ ಬದಲು ಮನೆಯಲ್ಲೇ ಮಜ್ಜಿಗೆ ಸೇವಿಸಿ ನೋಡಿ. ಹೌದು ಮಸಾಲೆ ಮಜ್ಜಿಗೆ, ಮೊಸರು ಕಡಿದು ಬೆಣ್ಣೆ ತಗೆದ ಕಡಿದ ಮಜ್ಜಿಗೆ, ನೀರಾಗಿರುವ ಮಜ್ಜಿಗೆ ಸೇವಿಸಿ ನಂತರ ಅದರ ಚಮತ್ಕಾರವನ್ನು ಅನುಭವಿಸಿ ನೋಡಿ. 
ಮೊಸರು ಮತ್ತು ಜೀರಿಗೆ(Cumin), ಕರಿಬೇವಿನ ಎಲೆಗಳು(Curry Leaves), ಶುಂಠಿ(Ginger) ಮತ್ತು ಉಪ್ಪು(Salt), ಮಜ್ಜಿಗೆ ಮುಂತಾದ ಮಸಾಲೆಗಳಿಂದ ತಯಾರಿಸಿದ ರುಚಿಕರವಾದ, ತಂಪಾದ ಪಾನೀಯವು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ನೀವು ಪ್ರತಿದಿನ ಒಂದು ಲೋಟ ಮಜ್ಜಿಗೆ ಕುಡಿಯುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.

Food Tips: ಮಜ್ಜಿಗೆ ಊಟಾನೋ, ಮೊಸರನ್ನವೋ ಆರೋಗ್ಯಕ್ಕೆ ಯಾವುದು ಬೆಸ್ಟ್?

1. ಮಸಾಲೆಯುಕ್ತ ಊಟದ ನಂತರ ಹೊಟ್ಟೆಯನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ(Spicy Dinner): ತಂಪಾದ, ನೀರಿರುವ ಮೊಸರಿನೊಂದಿಗೆ ಅಂದರೆ ಮಜ್ಜಿಗೆಯೊಂದಿಗೆ ತಯಾರಿಸಲಾಗುತ್ತದೆ. ಈ ಪಾನೀಯವು ಹೊಟ್ಟೆಯ ಉರಿಯನ್ನು ಶಮನಗೊಳಿಸುತ್ತದೆ. ಊಟದ ಮಸಾಲೆಯಿಂದ(Spicy) ಉಂಟಾಗುವ ಕಿರಿಕಿರಿಯಿಂದ(Irritation) ಹೊಟ್ಟೆಯನ್ನು ಶಾಂತಗೊಳಿಸುತ್ತದೆ. ಮೊಸರು, ನೀರು, ಜೀರಿಗೆ, ಮೆಣಸು ಹಾಗೂ ಕರಿಬೇವು, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕುಡಿಯುವುದರಿಂದ ಹೊಟ್ಟೆಯ ಕಿರಿಕಿರಿ ನಿವಾರಿಸುತ್ತದೆ. 

2. ಕೊಬ್ಬನ್ನು ಕರಗಿಸುತ್ತದೆ(Cholesterol): ಹೊಟ್ಟೆ ಭಾರವಾಗುವಷ್ಟು ಊಟ ಸೇವಿಸಿದಾಗ ಕಡಲತೀರದ ತಿಮಿಂಗಿಲದAತೆ ಆಗುತ್ತೇವೆ. ಹೀಗೆ ಹೊಟ್ಟೆ ಭಾರವಾಗುಷ್ಟು ಊಟ ಮಾಡಿದ ನಂತರ ಒಂದು ಸಣ್ಣ ಲೋಟ ನೀರಾಗಿರುವ ಮಜ್ಜಿಗೆಯನ್ನು ಕುಡಿಯಿರಿ. ಏಕೆಂದರೆ ಸಾಮಾನ್ಯವಾಗಿ ಆಹಾರ ಪೈಪ್(Food Pipe) ಮತ್ತು ಹೊಟ್ಟೆಯ ಒಳಗೆ ಆವರಿಸುವ ಕೊಬ್ಬು(Fat), ಎಣ್ಣೆ(Oil) ಅಥವಾ ತುಪ್ಪವನ್ನು(Ghee) ತೊಳೆಯುವಲ್ಲಿ ಮಜ್ಜಿಗೆ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಅಲ್ಲದೆ ಈ ಮಜ್ಜಿಗೆಗೆ ಶುಂಠಿ, ಮೆಣಸು ಮತ್ತು ಇತರೆ ಮಸಾಲೆಗಳು ಜೀರ್ಣಕ್ರಿಯೆಯನ್ನು(Digestion) ಸುಧಾರಿಸಲು ಸಹಾಯ ಮಾಡುತ್ತದೆ. 

3 ಜೀರ್ಣಕ್ರಿಯೆಗೆ ಸಹಕಾರಿ(Digestion): ನೀರಾಗಿರುವ ಮಜ್ಜಿಗೆಗೆ ಶುಂಠಿ, ಮೆಣಸು ಮತ್ತು ಜೀರಿಗೆ ಸಂಯೋಜಿಸಿದಾಗ ಅತ್ಯುತ್ತಮ ಜೀರ್ಣಕಾರಿ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಮಸಾಲೆಗಳ ಕಾರ್ಮಿನೇಟಿವ್(Carminative) ಗುಣಲಕ್ಷಣಗಳು ಮತ್ತು ಹಿತವಾದ ಮಜ್ಜಿಗೆ ಹಾಗೂ ರಿಫ್ರೆಶ್(Refresh) ಗುಣಲಕ್ಷಣಗಳು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಆದ್ದರಿಂದ, ಅಜೀರ್ಣವಾದಾಗ(Indigestion) ತ್ವರಿತ ಪರಿಹಾರಕ್ಕಾಗಿ ಒಂದು ಲೋಟ ಮಸಾಲೆ ಮಜ್ಜಿಗೆಯನ್ನು ಕುಡಿಯಿರಿ. 

4. ನಿರ್ಜಲೀಕರಣವಾಗುವುದನ್ನು ತಡೆಯುತ್ತದೆ(Dehydration): ಉಪ್ಪು, ನೀರು, ಮೊಸರು ಮತ್ತು ಮಸಾಲೆಗಳನ್ನು ಬೆರೆಸಿ ರುಚಿಕರವಾದ ಪಾನೀಯವನ್ನು ಮಾಡುತ್ತದೆ. ವಿದ್ಯುದ್ವಿಚ್ಛೇದ್ಯಗಳು ಮತ್ತು ಸಾಕಷ್ಟು ನೀರಿನಿಂದ ತುಂಬಿರುವ ಈ ಮಜ್ಜಿಗೆ ದೇಹವನ್ನು ನಿರ್ಜಲೀಕರಣದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಬೇಸಿಗೆಯಲ್ಲಿ ಸೂರ್ಯನ ಅತಿಯಾದ ಶಾಖದಿಂದ ದೇಹ ನಿರ್ಜಲೀಕರಣವಾಗುತ್ತದೆ. ಈ ವೇಳೆ ಒಂದು ಲೋಟ ಮಸಾಲೆ ಮಜ್ಜಿಗೆ ಕುಡಿಯುವುದು ಸಾಮಾನ್ಯವಾಗಿದೆ. 

ಬೇಸಿಗೆಯಲ್ಲಿ ಹಸಿವಾಗೋದು ಕಷ್ಟ, ಈ ಡಯಟ್ ಮಾಡಿದರೆ ಸುಸ್ತಾಗೋಲ್ಲ

5. ಕ್ಯಾಲ್ಸಿಯಂ ಒದಗಿಸುತ್ತದೆ(Calcium): ಲ್ಯಾಕ್ಟೋಸ್ ಅಸಹಿಷ್ಣುತೆ(Lactose Intolerance) ಹೊಂದಿರುವವರು ಅಂದರೆ ಹಾಲು ಹೊಂದಲು ಸಾಧ್ಯವಿಲ್ಲದವರು ನೈಸರ್ಗಿಕ ಕ್ಯಾಲ್ಸಿಯಂ(Natural Calcium) ಅನ್ನು ಲೋಡ್ ಮಾಡುವುದನ್ನು ತಪ್ಪಿಸುತ್ತಾರೆ. ಈ ಸಮಯದಲ್ಲಿ ಮಜ್ಜಿಗೆ ಸಹಕಾರಿಯಾಗಿದೆ. ಲ್ಯಾಕ್ಟೋಸ್ ಅಸಹಿಷ್ಣುತೆ ಹೊಂದಿರುವ ಜನರಿಗೆ ಪ್ರತಿಕೂಲವಾಗುವಂತೆ ಮಜ್ಜಿಗೆ ಸಹಾಯ ಮಾಡುತ್ತದೆ. ಆದರೆ ಹಾಲಿನಲ್ಲಿ ಸಾಮಾನ್ಯವಾಗಿ ಕಂಡುಬರುವ ಕೊಬ್ಬನ್ನು ಹೊರತುಪಡಿಸಿ ಕ್ಯಾಲ್ಸಿಯಂ ಅನ್ನು ಸರಿಪಡಿಸಲು ಇದು ಪರಿಪೂರ್ಣ ಮಾರ್ಗವಾಗಿದೆ.

6. ವಿಟಮಿನ್ ಕೊರತೆ ನೀಗಿಸುತ್ತದೆ(Vitamin Deficiency): ಮಜ್ಜಿಗೆಯು ಬೆಣ್ಣೆ, ಹಾಲು, ವಿಟಮಿನ್ ಬಿ ಕಾಂಪ್ಲೆಕ್ಸ್, ಪ್ರೋಟೀನ್‌ಗಳು(Protein) ಮತ್ತು ಪೊಟ್ಯಾಸಿಯಮ್‌ನಂತಹ(Potassium) ವಿಟಮಿನ್‌ಗಳ ಉತ್ತಮ ಮೂಲವಾಗಿದೆ. ವಿಟಮಿನ್ ಬಿ, ವಿಶೇಷವಾಗಿ ರೈಬೋಫ್ಲಾವಿನ್, ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸಲು, ಹಾರ್ಮೋನ್‌ಗಳ(Hormone) ಸ್ರವಿಸುವಿಕೆ ಮತ್ತು ಜೀರ್ಣಕ್ರಿಯೆಗೆ ಅತ್ಯಗತ್ಯ. ವಿಟಮಿನ್ ಕೊರತೆಯಿಂದಾಗಿ ರೋಗಗಳನ್ನು ಸೋಲಿಸಲು ಮಜ್ಜಿಗೆಯು ಅತ್ಯಗತ್ಯ ವಿಧಾನವಾಗಿದೆ.

7. ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ(High Blood Pressure): ಜರ್ನಲ್ ಆಫ್ ನ್ಯೂಟ್ರಿಷನ್‌ನಲ್ಲಿ(General Of Nutrition) ಪ್ರಕಟವಾದ ಅಧ್ಯಯನದ ಪ್ರಕಾರ ಮಜ್ಜಿಗೆಯಲ್ಲಿ ಕಂಡುಬರುವ ಹಾಲಿನ ಕೊಬ್ಬಿನ(Milk Fat) ಗ್ಲೋಬ್ಯುಲ್ ಮೆಂಬರೇನ್ ಕೊಲೆಸ್ಟ್ರಾಲ್ ಕಡಿಮೆಗೊಳಿಸುವ, ಆಂಟಿವೈರಲ್(Anti Viral), ಆಂಟಿಬ್ಯಾಕ್ಟೀರಿಯಲ್(Anti Bacterial) ಮತ್ತು ಆಂಟಿಕ್ಯಾನ್ಸರ್(Anti Cancer) ಗುಣಲಕ್ಷಣಗಳನ್ನು ಹೊಂದಿರುವ ವಿಶಿಷ್ಟ ಜೈವಿಕ ಸಕ್ರಿಯ ಪ್ರೋಟೀನ್‌ನಲ್ಲಿ ಸಮೃದ್ಧವಾಗಿದೆ ಎಂದು ತಿಳಿಸಿದೆ. ಅಲ್ಲದೆ  ಈ ಅಧ್ಯಯನದಲ್ಲಿ, ವಿಜ್ಞಾನಿಗಳು ಮಜ್ಜಿಗೆಯನ್ನು ಪ್ರತಿದಿನ ಸೇವಿಸಿದ್ದು, ರಕ್ತದೊತ್ತಡ ಗಮನಾರ್ಹವಾಗಿ(Blood Pressure) ಕಡಿಮೆಯಾಗಿರುವುದು ಕಂಡುಬAದಿದೆ.

8. ಆಮ್ಲೀಯತೆ ನಿವಾರಣೆ(Prevent Acidity): ನೀರಾಗಿರುವ ಮಜ್ಜಿಗೆಗೆ ಮೆಣಸು ಮತ್ತು ಶುಂಠಿಯAತಹ ಅಗತ್ಯ ಮಸಾಲೆಗಳನ್ನು ಹೊಂದಿದೆ. ಇದು ಆಮ್ಲೀಯತೆಯ ಸಂದರ್ಭದಲ್ಲಿ ನೀವು ಅನುಭವಿಸುವ ಸುಡುವ ಸಂವೇದನೆಯನ್ನು(Burning sensation) ನಿವಾರಿಸಲು ಸಹಾಯ ಮಾಡುತ್ತದೆ. ಇದಲ್ಲದೆ ಮಜ್ಜಿಗೆ ಹೊಟ್ಟೆಯನ್ನು ತಂಪಾಗಿಸುತ್ತದೆ ಮತ್ತು ಆಸಿಡ್ ರಿಫ್ಲಕ್ಸ್ನಿಂದಾಗಿ ಹೊಟ್ಟೆಯ ಒಳಪದರದಲ್ಲಿನ ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ. ಇದು ನಿಮಗೆ ಅಸ್ವಸ್ಥತೆಯಿಂದ ಪರಿಹಾರವನ್ನು ನೀಡುತ್ತದೆ.

Follow Us:
Download App:
  • android
  • ios