Asianet Suvarna News Asianet Suvarna News

ಆಗಾಗ ತಿನ್ಬೇಡಿ, ಮಧ್ಯಂತರ ಆಹಾರದಲ್ಲಿ ಏನೆಲ್ಲ ಸೇವನೆ ಮಾಡ್ತೀರಿ ಅನ್ನೋದ್ರ ಮೇಲಿದೆ ನಿಮ್ಮ ಆರೋಗ್ಯ!

ಕೆಲವರು ಪದೇ ಪದೆ ತಿನ್ನುತ್ತಿರುತ್ತಾರೆ. ಕೆಲವರು ಇನ್ನೇನು, ಊಟ ಸಿದ್ಧವಾಗುತ್ತಿದೆ ಎನ್ನುವ ಸಮಯದಲ್ಲಿ ಹಸಿವು ತಾಳಲಾರದೇ ಏನಾದರೂ ತಿಂದು ಹೊಟ್ಟೆ ಹಾಳು ಮಾಡಿಕೊಳ್ಳುತ್ತಾರೆ. ಇನ್ನು, ಮಧುಮೇಹಿಗಳಂತೂ ಆಹಾರದ ಬಗ್ಗೆ ಎಲ್ಲರಿಗಿಂತ ಹೆಚ್ಚು ಎಚ್ಚರಿಕೆ ವಹಿಸುವುದು ಅಗತ್ಯ.  ಮಧ್ಯಂತರ ಆಹಾರ ಮಧುಮೇಹಿಗಳಿಗೆ ಉತ್ತಮ. ಆದರೆ, ಈ ಆಹಾರದಲ್ಲಿ ಏನೆಲ್ಲ ಇರಬೇಕು, ಯಾವೆಲ್ಲ ಅಂಶಗಳಿಗೆ ಆದ್ಯತೆ ನೀಡಬೇಕು ಎನ್ನುವುದನ್ನು ತಿಳಿದುಕೊಳ್ಳಿ.
 

Intermittent fasting food is very important for health
Author
First Published Jul 15, 2023, 6:13 PM IST

ದಿನಕ್ಕೆ ಮೂರು ಹೊತ್ತು ಹೊಟ್ಟೆ ತುಂಬ ಆಹಾರ ಸೇವಿಸುವುದು ಹಳೆಯ ಸ್ಟೈಲ್ ಆಗಿದೆ. ಈಗ, ಒಂದೇ ಬಾರಿ ಹೆಚ್ಚು ಆಹಾರ ಸೇವನೆ ಮಾಡುವ ಬದಲು ಅವು ಮೂರನ್ನೂ ಎರಡಾಗಿ ವಿಭಾಜಿಸಿ ಆರು ಭಾಗವನ್ನಾಗಿ ವಿಂಗಡಿಸಿಕೊಳ್ಳಬೇಕು, ಅದರಲ್ಲಿ ಎಲ್ಲ ರೀತಿಯ ಆಹಾರ ಸೇವಿಸುವ ಪ್ಲಾನ್ ಮಾಡಿಕೊಳ್ಳುವುದು ಉತ್ತಮ ಎಂದು ಆಹಾರ ತಜ್ಞರು ಸಲಹೆ ನೀಡುವುದು ಸಾಮಾನ್ಯ. ಮಧುಮೇಹ ಸೇರಿದಂತೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಗೆ ಈ ಮಾದರಿಯ ಆಹಾರ ಸೇವಿಸಬೇಕು ಎಂದು ಹೇಳಲಾಗುತ್ತದೆ. ತೂಕ ಇಳಿಕೆಗೂ ಇದು ಸಹಕಾರಿ. ಇದನ್ನೇ ಭಾರೀ ಅಂದವಾಗಿ ಮಧ್ಯಂತರ ಉಪವಾಸ ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ನಾವು ಬೆಳಗ್ಗೆ ತಿಂಡಿಯ ಬಳಿಕ ಮಧ್ಯಾಹ್ನ ಊಟವರೆಗೂ ಏನನ್ನೂ ಸೇವಿಸುವುದಿಲ್ಲ. ಆದರೆ, ಸಂಜೆಯ ಊಟಕ್ಕೂ ಮುನ್ನ ಮಧ್ಯದಲ್ಲಿ ಒಮ್ಮೆ ತಿಂಡಿ ಸೇವಿಸುತ್ತೇವೆ. ತಿಂಡಿ, ಊಟ ಎರಡೂ ಹೆವಿ ಆದಾಗ ಅಥವಾ ಒಂದೇ ಮಾದರಿಯಲ್ಲಿದ್ದಾಗ ದೇಹಕ್ಕೆ ಅಗತ್ಯವಾದ ಪೌಷ್ಟಿಕಾಂಶಗಳು ದೊರೆಯುವುದಿಲ್ಲ. ಹೀಗಾಗಿ, ಆಹಾರ ಸೇವನೆ ಮಾಡುವಾಗ ಕೆಲವು ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು.

ಉತ್ತಮ ಕೊಬ್ಬು (Good Fat) ಇರಲಿ: 1-4 ಚಮಚದಷ್ಟು ಉತ್ತಮ ಕೊಬ್ಬನ್ನು ಆಹಾರದಲ್ಲಿ (Food) ಸೇರ್ಪಡೆ ಮಾಡಿಕೊಳ್ಳುವುದು ಉತ್ತಮ. ಇದು ಸಹಜವಾಗಿ ಹೆಚ್ಚು ಕ್ಯಾಲರಿಯನ್ನೂ (Calorie) ಹೊಂದಿರುತ್ತದೆ. ರಾತ್ರಿ ಸಮಯದಲ್ಲಿ ಉತ್ತಮ ಕೊಬ್ಬು ಸೇವನೆ ಮಾಡಿದಾಗ ನಿದ್ರೆಗೂ (Sleep) ಅನುಕೂಲ. ಇದರಿಂದ ದೇಹದ ಮೇಲೆ ಕೆಟ್ಟ ಪರಿಣಾಮವೇನೂ ಆಗುವುದಿಲ್ಲ. ಕಾರ್ಬೋಹೈಡ್ರೇಟ್, ಪ್ರೊಟೀನ್ (Protein) ಬೀರುವಷ್ಟೇ ಪರಿಣಾಮ ಉಂಟಾಗುತ್ತದೆ. ಬದಲಿಗೆ, ಬೇರೆ ರೀತಿಯ ಪ್ರಯೋಜನವಾಗುತ್ತದೆ.

ಮಧುಮೇಹ ನಿಯಂತ್ರಿಸಲು ಮಟನ್ ತಿನ್ನಿ ಸಾಕು

ಉದಾಹರಣೆಗೆ, ತೆಂಗಿನ ಎಣ್ಣೆಯಲ್ಲಿರುವ (Coconut Oil) ಮಧ್ಯಮ ಸರಪಳಿ ಫ್ಯಾಟಿ ಆಸಿಡ್ ಗಳು ದೇಹವನ್ನು ಕೆಟೋಸಿಸ್ ಎನ್ನುವ ಸ್ಥಿತಿಗೆ ತಳ್ಳುತ್ತವೆ. ಅಂದರೆ, ದೇಹಕ್ಕೆ ಶಕ್ತಿ (Energy) ಬೇಕಾದಾಗ ದೇಹದಲ್ಲಿ ಈಗಾಗಲೇ ಇರುವ ಕೊಬ್ಬು ಕರಗುವ ಮೂಲಕ ಅಗತ್ಯ ಶಕ್ತಿ ದೊರೆಯುತ್ತದೆ. ಹೀಗಾಗಿ, ಮಧ್ಯಂತರ ಆಹಾರದಲ್ಲಿ ಉತ್ತಮ ಕೊಬ್ಬುಗಳಾದ ತೆಂಗಿನೆಣ್ಣೆ, ತುಪ್ಪ (Ghee), ಬೆಣ್ಣೆ, ಯೋಗರ್ಟ್, ಬೆಣ್ಣೆಹಣ್ಣು (Avocado)ಗಳನ್ನು ಬಳಕೆ ಮಾಡುವುದು ಸೂಕ್ತ.

ವಾರದ ಆಹಾರ ಚಾರ್ಟ್ (Food Chart) ಸಿದ್ಧ ಮಾಡಿಕೊಳ್ಳಿ: ಒಂದೆರಡು ದಿನಗಳಾದರೆ ಆಹಾರ ಸೇವನೆಗೆ ಹೆಚ್ಚು ಪ್ಲಾನ್ ಮಾಡಿಕೊಳ್ಳದೆ ಕಳೆಯಬಹುದು. ಆದರೆ, ನಿತ್ಯವೂ ನಿಮ್ಮ ಆಹಾರ ಶುದ್ಧವಾಗಿ, ಅಗತ್ಯ ಪ್ರಮಾಣದ ಕಾರ್ಬೈಹೈಡ್ರೇಟ್ಸ್, ಪ್ರೊಟೀನ್ (Protein), ಕೊಬ್ಬು ಎಲ್ಲವೂ ಇರುವಂತೆ ನೋಡಿಕೊಳ್ಳಲು ವಾರದ ಚಾರ್ಟ್ ಸಿದ್ಧಪಡಿಸಿಕೊಳ್ಳಿ. ಏಕೆಂದರೆ, ಸಂಜೆಯಾದಂತೆ ಸ್ನ್ಯಾಕ್ಸ್ (Snacks) ಮತ್ತು ಜಂಕ್ ಫುಡ್ (Junk Food) ಗಳು ಸೆಳೆಯುವ ಸಾಧ್ಯತೆ ಹೆಚ್ಚು. ಆ ಸಮಯದಲ್ಲಿ ಸೂಕ್ತ ಆಹಾರ ಸೇವನೆ ಅತಿ ಮುಖ್ಯ. ಇವು ವ್ಯಸನವನ್ನು ಉಂಟು ಮಾಡುವ ಆಹಾರಗಳು. ಆಹಾರ ಸಂಬಂಧಿತ ವ್ಯಸನಗಳನ್ನು ಅಳವಡಿಸಿಕೊಳ್ಳದೆ ಇರಲು, ಹೆಚ್ಚು ಕಾರ್ಬೋಹೈಡ್ರೇಟ್ (Carbohydrates) ಸೇವನೆಯಿಂದ ದೂರವಿರಲು ಪ್ಲಾನ್ ಮಾಡುವುದು ಅತಿ ಮುಖ್ಯ.

ಆಹಾರ ತೆಯೂ (Preparation) ಮುಖ್ಯ: ಮಧ್ಯಂತರ ಆಹಾರ ಸೇವನೆಗೆ ಅವುಗಳನ್ನು ಸಿದ್ಧಪಡಿಸುವ ಮನಸ್ಥಿತಿಯೂ ಅತಿ ಮುಖ್ಯ. ಅನಾರೋಗ್ಯರ ಆಹಾರ ಸೇವಿಸದಿರಲು, ದೇಹಕ್ಕೆ ಏನು ಬೇಕೋ ಅವುಗಳನ್ನಷ್ಟೇ ಸೇವಿಸಲು ಮಾನಸಿಕ ಸಿದ್ಧತೆಯೂ ಅತಿ ಮುಖ್ಯ. ಹಾಗೆಯೇ, ಆಹಾರವನ್ನು ಸಿದ್ಧಪಡಿಸುವುದೂ ಮುಖ್ಯ. ತರಕಾರಿಗಳು, ಮೊಳಕೆ ಕಾಳುಗಳು, ಚೀಸ್, ತುಪ್ಪ, ತೆಂಗಿನೆಣ್ಣೆ ಇವುಗಳ ಸ್ಟಾಕ್ ಇಟ್ಟುಕೊಳ್ಳಿ.

ಎಚ್ಚರ..ಬೇಯಿಸಿದ ಮತ್ತು ಬೇಯಿಸದ ಆಹಾರ ಮಿಕ್ಸ್ ಮಾಡಿ ತಿನ್ಲೇಬೇಡಿ

ದೇಹ ಹೈಡ್ರೇಟ್ (Hydrate) ಆಗಿರಲಿ: ಆಹಾರ ಸೇವನೆಯ ಸಮಯದಲ್ಲಿ ನೀರು (Water) ಕುಡಿಯುವುದು ಹಿತವಲ್ಲ. ಆದರೆ, ಸೇವನೆಯ ಬಳಿಕವೂ ನೀರು ಕುಡಿಯದಿದ್ದರೆ ದೇಹ ನಿರ್ಜಲೀಕರಣಕ್ಕೆ ಒಳಗಾಗುತ್ತದೆ. ಸಕ್ಕರೆ ಬೆರೆಸದ ನೀರು, ಬ್ಲಾಕ್ ಕಾಫಿ, ಹರ್ಬಲ್ ಟೀ ಇತ್ಯಾದಿಗಳನ್ನು ಸೇವಿಸಬೇಕು.

Follow Us:
Download App:
  • android
  • ios