ಎಚ್ಚರ..ಬೇಯಿಸಿದ ಮತ್ತು ಬೇಯಿಸದ ಆಹಾರ ಮಿಕ್ಸ್ ಮಾಡಿ ತಿನ್ಲೇಬೇಡಿ

ಕೆಲವರು ಹೆಚ್ಚಿನ ತರಕಾರಿ ಧಾನ್ಯಗಳನ್ನು ಬೇಯಿಸದೇ ತಿನ್ನುತ್ತಾರೆ. ಮತ್ತೆ ಕೆಲವರು ಬೇಯಿಸಿ ತಿನ್ನುತ್ತಾರೆ. ಇವಿಷ್ಟೇ ಅಲ್ಲದೆ ಕೆಲವರು ಇವೆರಡನ್ನೂ ಮಿಕ್ಸ್ ಮಾಡಿ ತಿನ್ನುವುದಿದೆ. ಆದರೆ ಈ ರೀತಿ ಆಹಾರವನ್ನು ತಿನ್ನೋ ಅಭ್ಯಾಸ ಆರೋಗ್ಯಕ್ಕೆ ಒಳ್ಳೆಯದಲ್ಲ ಅಂತಾರೆ ತಜ್ಞರು. 

Why not mix Cooked and Uncooked foods Vin

ತಿನ್ನುವ ಆಹಾರ ಯಾವಾಗಲೂ ಆರೋಗ್ಯಕರವಾಗಿರಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಆಹಾರವನ್ನು ಹೊಟ್ಟೆತುಂಬಲು, ಆರೋಗ್ಯಕ್ಕಾಗಿ ತಿನ್ನುವುದಕ್ಕಿಂತ ತೋರ್ಪಡಿಕೆಗಾಗಿ ಸ್ಟೈಲಿಶ್ ಆಗಿ ತಿನ್ನುವ ಅಭ್ಯಾಸವೇ ಹೆಚ್ಚಾಗಿದೆ. ಹೀಗಾಗಿಯೇ ಅರೆಬೆಂದ ಆಹಾರ, ಸ್ಮೋಕೀ ಫುಡ್‌, ಅನ್‌ ಕುಕ್ಕಡ್ ಫುಡ್‌ಗಳನ್ನು ತಿನ್ನುವ ಅಭ್ಯಾಸವನ್ನು ಜನರು ಹೊಂದಿದ್ದಾರೆ. ಇನ್ನು ಕೆಲವರು ಹೆಚ್ಚಿನ ತರಕಾರಿ ಧಾನ್ಯಗಳನ್ನು ಬೇಯಿಸದೇ ತಿನ್ನುತ್ತಾರೆ. ಮತ್ತೆ ಕೆಲವರು ಬೇಯಿಸಿ ತಿನ್ನುತ್ತಾರೆ. ಇವಿಷ್ಟೇ ಅಲ್ಲದೆ ಕೆಲವರು ಇವೆರಡನ್ನೂ ಮಿಕ್ಸ್ ಮಾಡಿ ತಿನ್ನುವುದಿದೆ. ಆದರೆ ಈ ರೀತಿ ಆಹಾರವನ್ನು ತಿನ್ನೋ ಅಭ್ಯಾಸ ಆರೋಗ್ಯಕ್ಕೆ ಒಳ್ಳೆಯದಲ್ಲ ಅಂತಾರೆ ತಜ್ಞರು. 

ಜೀರ್ಣಕ್ರಿಯೆಯ ಪ್ರಕ್ರಿಯೆಗೆ ತೊಂದರೆ
ಹೌದು, ಬೇಯಿಸಿದ (Cooked) ಮತ್ತು ಬೇಯಿಸದ ಆಹಾರಗಳನ್ನು (Uncooked food) ಮಿಶ್ರಣ ಮಾಡುವುದು ಆರೋಗ್ಯಕ್ಕೆ (Health) ಹಾನಿಕರ ಎಂದು ವಿಜ್ಞಾನ ಹೇಳುತ್ತದೆ. ನೋಂದಾಯಿತ ಆಹಾರ ತಜ್ಞ ಗರಿಮಾ ಗೋಯಲ್ ಈ ಬಗ್ಗೆ ಹೇಳಿದ್ದಾರೆ. ಕಚ್ಚಾ ಮತ್ತು ಬೇಯಿಸಿದ ಆಹಾರವನ್ನು ಮಿಶ್ರಣ ಮಾಡುವುದು ಜೀರ್ಣಕ್ರಿಯೆಯ (Digestion) ಪ್ರಕ್ರಿಯೆಯನ್ನು ಸಂಕೀರ್ಣಗೊಳಿಸುತ್ತದೆ ಎಂದು ಅವರು ತಿಳಿಸಿದ್ದಾರೆ. 'ಬೇಯಿಸಿದ ಆಹಾರಗಳನ್ನು ನಮ್ಮ ಜೀರ್ಣಾಂಗ ಅಥವಾ ಕರುಳಿಗೆ (Gut) ಜೀರ್ಣಿಸಿಕೊಳ್ಳಲು ತುಂಬಾ ಸುಲಭವಾಗಿದೆ. ಅವುಗಳನ್ನು ಸೇವಿಸಿದ ನಂತರ ದೇಹದ ಕಿಣ್ವಗಳನ್ನು ಸಕ್ರಿಯಗೊಳಿಸುವ ಮೂಲಕ ದೇಹವು ಅಂತಹ ಆಹಾರವನ್ನು ಸುಲಭವಾಗಿ ಜೀರ್ಣಿಸಿಕೊಳ್ಳುತ್ತದೆ. ಆದರೆ ಕಚ್ಚಾ ಆಹಾರಗಳ ಸೇವನೆಯ ಪ್ರಮಾಣವು ಇದಕ್ಕೆ ತದ್ವಿರುದ್ಧವಾಗಿದೆ' ಎಂದು ಅವರು ಹೇಳುತ್ತಾರೆ.

ಮಸಾಲೆ ದೋಸೆಗೆ ಸಾಂಬಾರ್ ಕೊಡದ್ದಕ್ಕೆ ವ್ಯಕ್ತಿಯಿಂದ ದೂರು, ಕೋರ್ಟ್ ತೀರ್ಪಿಗೆ ರೆಸ್ಟೋರೆಂಟ್ ಮಾಲೀಕ ಕಕ್ಕಾಬಿಕ್ಕಿ

ಗ್ಯಾಸ್, ಅಜೀರ್ಣ ಮೊದಲಾದ ಅಸ್ವಸ್ಥತೆಗೆ ಕಾರಣ
ಊಟದಲ್ಲಿ ಹಸಿ ಮತ್ತು ಬೇಯಿಸಿದ ಆಹಾರವನ್ನು ಬೆರೆಸಿದಾಗ, ಇದು ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗುತ್ತದೆ . ಬೆಲ್ಚಿಂಗ್, ಗ್ಯಾಸ್, ಅಜೀರ್ಣ ಮುಂತಾದ ಅಸ್ವಸ್ಥತೆಗಳಿಗೆ ಕಾರಣವಾಗುತ್ತದೆ. ಏಕೆಂದರೆ ಕಚ್ಚಾ ಆಹಾರವನ್ನು ಜೀರ್ಣಿಸಿಕೊಳ್ಳಲು ನಮ್ಮ ದೇಹಕ್ಕೆ ಬೇಯಿಸಿದವುಗಳಿಗಿಂತ. ಗಣನೀಯವಾಗಿ ಹೆಚ್ಚಿನ ಶಕ್ತಿ ಮತ್ತು ಶ್ರಮ ಬೇಕಾಗುತ್ತದೆ.  ಆಹಾರವನ್ನು ಅಗಿಯುವುದು ಜೀರ್ಣಕ್ರಿಯೆಯ ಮೊದಲ ಹಂತವಾಗಿದೆ ಮತ್ತು ಆಹಾರವನ್ನು ಸರಿಯಾಗಿ ಅಗಿಯುವಾಗ ಅದು ಜೀರ್ಣಕಾರಿ ಅಸ್ವಸ್ಥತೆಯನ್ನು ಉಂಟುಮಾಡುತ್ತದೆ. ಆಹಾರವನ್ನು ಬೇಯಿಸಿದಾಗ, ಆಹಾರದ ಕೆಲವು ಫೈಬರ್ ಮತ್ತು ಸಸ್ಯ ಜೀವಕೋಶದ ಗೋಡೆಗಳು ಒಡೆಯುತ್ತವೆ ಮತ್ತು ಇದು ಆಹಾರದ ಜೀರ್ಣಕ್ರಿಯೆ ಮತ್ತು ಪೋಷಕಾಂಶಗಳನ್ನು ಹೀರಿಕೊಳ್ಳುವ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ ಎಂದು ಗೋಯಲ್ ಹೇಳಿದರು.

ಆಹಾರ ಜೀರ್ಣಸಾಧ್ಯತೆ ಕಡಿಮೆ
ನೀವು ಸೇವಿಸುವ ಯಾವುದೇ ಆಹಾರವು ಅದರ ಎಲ್ಲಾ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಮತ್ತು ಅದರ ಪೋಷಕಾಂಶಗಳನ್ನು ಚೆನ್ನಾಗಿ ಹೀರಿಕೊಳ್ಳಲು ಸಾಧ್ಯವಾದರೆ ಅದು ಆರೋಗ್ಯಕರವಾಗಿರುತ್ತದೆ. ಇದನ್ನು ಆಹಾರ ಜೀರ್ಣಸಾಧ್ಯತೆ ಎಂದು ಕರೆಯಲಾಗುತ್ತದೆ. ನೀವು ಸೇವಿಸುವ ಆಹಾರವು ಕಚ್ಚಾ ರೂಪದಲ್ಲಿರುವುದಕ್ಕಿಂತ ಬೇಯಿಸಿದ ರೂಪದಲ್ಲಿದ್ದರೆ, ಅದು ಹೆಚ್ಚು ಜೀರ್ಣವಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಕಚ್ಚಾ ಮತ್ತು ಬೇಯಿಸಿದ ಎರಡೂ ಆಹಾರಗಳು ತಮ್ಮದೇ ಆದ ಅನುಕೂಲಗಳು ಮತ್ತು ಮಿತಿಗಳನ್ನು ಹೊಂದಿವೆ. ಇವೆರಡರ ಸೇವನೆಯೂ ಒಳ್ಳೆಯದು. ಆದರೆ ಎರಡನ್ನೂ ಒಟ್ಟಿಗೆ ತಿನ್ನುವ ಅಭ್ಯಾಸ ಒಳ್ಳೆಯದಲ್ಲ ಎಂದು ಗರಿಮಾ ಸ್ಪಷ್ಟಪಡಿಸಿದ್ದಾರೆ. 

ದಿನಾಲೂ ಸೋರೆಕಾಯಿ ಸೇವಿಸಿ, ಇವೆ 7 ಅದ್ಭುತ ಆರೋಗ್ಯ ಪ್ರಯೋಜನ

ಆಯುರ್ವೇದ ಮತ್ತು ಕರುಳಿನ ಆರೋಗ್ಯ ತರಬೇತುದಾರರಾದ ಡಾ ಡಿಂಪಲ್ ಜಂಗ್ಡಾ ಅವರು ಸಹ Instagram ನಲ್ಲಿ ವಿಷಯದ ಕುರಿತಾದ ಪೋಸ್ಟ್‌ನ್ನು ಹಂಚಿಕೊಂಡಿದ್ದಾರೆ. 'ಬೇಯಿಸದ ಆಹಾರಗಳೊಂದಿಗೆ ಬೇಯಿಸಿದ ಆಹಾರವನ್ನು ಎಂದಿಗೂ ಮಿಶ್ರಣ ಮಾಡಬೇಡಿ. ಇದು ಹೊಟ್ಟೆ ಉಬ್ಬರಕ್ಕೆ ಕಾರಣವಾಗುತ್ತದೆ' ಎಂದು ತಿಳಿಸಿದ್ದಾರೆ. ಹೊಟ್ಟೆ ಉಬ್ಬುವುದು ಒಂದು ರೋಗವಲ್ಲ. ಇದು ನೀವು ಸೇವಿಸಿದ ಆಹಾರಗಳು, ತಪ್ಪು ಆಹಾರ ಪದಾರ್ಥಗಳು, ಜೀರ್ಣವಾಗದ ಆಹಾರಗಳ ನೇರ ಪರಿಣಾಮವಾಗಿದೆ' ಎಂದು ಅವರು ಹೇಳಿದರು.

ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಗುರುಗ್ರಾಮ್‌ನ ಆಹಾರ ತಜ್ಞರಾದ ಮೋಹಿನಿ ಡೋಂಗ್ರೆ ಮಾತನಾಡಿ, ನಮ್ಮ ದೇಹವು ಬೇಯಿಸಿದ ಮತ್ತು ಬೇಯಿಸದ ಆಹಾರವನ್ನು ವಿಭಿನ್ನವಾಗಿ ಜೀರ್ಣಿಸಿಕೊಳ್ಳುತ್ತದೆ' ಎಂದು ಹೇಳಿದರು. 'ಅಡುಗೆ ಸಂಕೀರ್ಣ ಅಣುಗಳನ್ನು ಒಡೆಯುತ್ತದೆ ಮತ್ತು ಹೀರಿಕೊಳ್ಳಲು ಪೋಷಕಾಂಶಗಳು ಹೆಚ್ಚು ಸುಲಭವಾಗಿ ಲಭ್ಯವಾಗುವಂತೆ ಮಾಡುತ್ತದೆ. ಬೇಯಿಸಿದ ಮತ್ತು ಬೇಯಿಸದ ಆಹಾರಗಳನ್ನು ಮಿಶ್ರಣ ಮಾಡುವುದು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಅಡ್ಡಿಪಡಿಸುತ್ತದೆ ಮತ್ತು ಜೀರ್ಣಕಾರಿ ಅಸ್ವಸ್ಥತೆ ಅಥವಾ ಪೋಷಕಾಂಶಗಳ ಅಸಮತೋಲನಕ್ಕೆ ಕಾರಣವಾಗಬಹುದು' ಎಂದು ಡೋಂಗ್ರೆ ವಿವರಿಸಿದರು.

Latest Videos
Follow Us:
Download App:
  • android
  • ios