Asianet Suvarna News Asianet Suvarna News

ಕೊರೋನಾಗೆ ಭಾರತೀಯ ಮೂಲದ ವೈದ್ಯನಿಂದ ಲಸಿಕೆ: ಮಾದರಿಯಾದರು ವಿಶ್ವಕ್ಕೆ!

ಮಾರಕ ಕೊರೋನಾ ವೈರಸ್'ಗೆ ಲಸಿಕೆ ಸಿದ್ಧ| ಅಭಿವೃದ್ಧಿ ಹಂತದಲ್ಲಿರುವ ಕೊರೋನಾ ವೈರಸ್ ಲಸಿಕೆ| ಭಾರತೀಯ ಮೂಲದ ವೈದ್ಯ ಎಸ್.ಎಸ್. ವಾಸನ್ ನೇತೃತ್ವದ ವೈದ್ಯರ ತಂಡ| ಆಸ್ಟ್ರೇಲಿಯದ ಡೊಹೆರ್ಟಿ ವಿವಿಯಲ್ಲಿ ಲಸಿಕೆ ಅಭಿವೃದ್ಧಿ ಕಾರ್ಯ| ರಕ್ತದಿಂದ ವೈರಸ್ ಬೇರ್ಪಡಿಸುವಲ್ಲಿ ಯಶಶ್ವಿಯಾದ ವಾಸನ್ ನೇತೃತ್ವದ ತಂಡ| ಶೀಘ್ರದಲ್ಲೇ ವೈರಸ್ ನಾಶ ಮಾಡಬಲ್ಲ ಪ್ರಬಲ ಲಸಿಕೆ| ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಿದ್ಯಾರ್ಥಿ ಎಸ್.ಎಸ್. ವಾಸನ್|

Indian Scientist In Australia Succeeded In Developing Corona Virus Vaccine
Author
Bengaluru, First Published Feb 7, 2020, 5:40 PM IST

ಸಿಡ್ನಿ(ಫೆ.07): ಚೀನಾ ಸೇರಿದಂತೆ ಇಡೀ ವಿಶ್ವವನ್ನೇ ಭಯದ ನೆರಳಲ್ಲಿ ಬದುಕುವಂತೆ ಮಾಡಿರುವ ಮಾರಕ ಕೊರೋನಾ ವೈರಸ್'ಗೆ,  ಭಾರತೀಯ ಮೂಲದ ವೈದ್ಯ ವಿಜ್ಞಾನಿ ನೇತೃತ್ವದ ತಂಡ ಲಸಿಕೆ ಕಂಡುಹಿಡಿದಿದೆ ಎನ್ನಲಾಗಿದೆ.

ಆಸ್ಟ್ರೆಲೀಯಾದಲ್ಲಿರುವ ಕಾಮನ್‌ವೆಲ್ತ್ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಂಸ್ಥೆ (CSIRO)ಯ ವೈದ್ಯರ ತಂಡ ಈ ಸಂಶೋಧನೆ ನಡೆಸಿದ್ದು, ಈ ತಂಡದ ನೇತೃತ್ವವನ್ನು ವೈದ್ಯ ಡಾ.ಎಸ್.ಎಸ್. ವಾಸನ್ ವಹಿಸಿದ್ದಾರೆ.

ಕೊರೋನಾ ಬಗ್ಗೆ ಮೊದಲೇ ಎಚ್ಚರಿಸಿದ್ದ ವೈದ್ಯ ಬಲಿ?

ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್'ನ ವಿದ್ಯಾರ್ಥಿಯಾಗಿರುವ ವಾಸನ್, ಕೊರೋನಾ ವೈರಸ್'ಗೆ ಲಸಿಕೆ ಕಂಡುಹಿಡಯುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.

ಆಸ್ಟ್ರೇಲಿಯದ ಡೊಹೆರ್ಟಿ ವಿಶ್ವ ವಿದ್ಯಾಲಯದ ಸಂಶೋಧಕರ ತಂಡ, ಕೊರೋನಾ ಸೋಂಕಿತ ವ್ಯಕ್ತಿಯ ರಕ್ತದ ಮಾದರಿಯನ್ನು ಪಡೆದು ಅದರಿಂದ ವೈರಸ್ ಅನ್ನು ಪ್ರತ್ಯೇಕಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ರಕ್ತದಲ್ಲಿ ವೈರಸ್ ಹೆಚ್ಚಳವಾಗುವ ಬಗೆ ಕುರಿತು ಮಾಡಲಾದ ಪ್ರಾಥಮಿಕ ಅಧ್ಯಯನ ಯಶಸ್ವಿಯಾಗಿದ್ದು, ಇದಕ್ಕೆ ಸೂಕ್ತ ಲಸಿಕೆ ಶೀಘ್ರದಲ್ಲೇ ದೊರೆಯಲಿದೆ ಎಂದು ವೈದ್ಯ ವಿಜ್ಞಾನಿ ಡಾ.ಎಸ್.ಎಸ್. ವಾಸನ್ ಹೇಳಿದ್ದಾರೆ.

ಕೊರೋನಾ ವೈರಸ್ ಲಸಿಕೆ ಅಭಿವೃದ್ಧಿ ಹಂತದಲ್ಲಿದೆ ಎಂದು ತಿಳಿಸಿರುವ ವಾಸನ್, ಇದಕ್ಕಾಗಿ ಕ್ವೀನ್ಸ್‌ಲ್ಯಾಂಡ್ ವಿಶ್ವವಿದ್ಯಾಲಯ ನಡೆಸಿದ ಸಂಶೋಧನೆಗೆ ಸಿಎಸ್ಐಆರ್ ಸಂಸ್ಥೆ ಸಹಕಾರ ನೀಡಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Fact Check| 20000 ಕೊರೋನಾ ರೋಗಿಗಳ ಕೊಲ್ಲಲು ಚೀನಾ ಯತ್ನ?

ಆಸ್ಟ್ರೇಲಿಯಾದ ಪ್ರಾಣಿ ಆರೋಗ್ಯ ಪ್ರಯೋಗಾಲಯದಲ್ಲಿ ಕೂಡ ನನ್ನ ಸಹೋದ್ಯೋಗಿಗಳು ಈ ವೈರಸ್ ಶಮನಕ್ಕೆ ಸಂಶೋಧನೆ ನಡೆಸುತ್ತಿದ್ದಾರೆ ಎಂದು ವಾಸನ್ ಹೇಳಿದ್ದಾರೆ. ಜತೆಗೆ ಲಸಿಕೆ ಅಭಿವೃದ್ಧಿ ಕುರಿತು 

ಪ್ರಸ್ತುತವಾಗಿ ಕಂಡುಹಿಡಿಯಲಾಗಿರುವ ಲಸಿಕೆ ಕೇವಲ ವೈರಸ್ ಸೋಂಕಿತ ವ್ಯಕ್ತಿಯ ದೇಹವನ್ನು ಸುಧಾರಿಸುತ್ತದೆ. ಹೆಚ್ಚಿನ ಸಂಶೋಧನೆ ಬಳಿಕ ವೈರಸ್ ನಾಶ ಮಾಡಬಲ್ಲ ಪ್ರಬಲ ಲಸಿಕೆ ಲಭ್ಯವಾಗಲಿದೆ ಎಂದು ವಾಸನ್ ಸ್ಪಷ್ಟಪಡಿಸಿದ್ದಾರೆ.

ಕೊರೋನಾದಿಂದ ಜಗತ್ತು ರಕ್ಷಿಸಲು ಚೀನಾದ ಒಂದು ಇಡೀ ಪ್ರಾಂತ್ಯವೇ ಬಲಿ!

ಎಸ್.ಎಸ್. ವಾಸನ್:
ಡಾ.ಎಸ್.ಎಸ್. ವಾಸನ್ ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ರಾಜಸ್ಥಾನದ ಪಿಲಾನಿಯಲ್ಲಿರುವ ಬಿರ್ಲಾ ಇಸ್ಟಿಟ್ಯೂಷನ್ ಆಫ್ ಟೆಕ್ನಾಲಜಿ ಮತ್ತು ಸೈನ್ಸ್ ಕಾಲೇಜಿನಲ್ಲಿ ಅಧ್ಯಯನ ನಡೆಸಿದ್ದಾರೆ.

ಬಳಿಕ ಆಕ್ಸ್‌ಫರ್ಡ್' ವಿವಿಯಿಂದ ಡಾಕ್ಟರೇಟ್ ಪದವಿ ಪಡೆದ ವಾಸನ್, ಡೆಂಗ್ಯೂ, ಚಿಕನ್ ಗೂನ್ಯಾ ಮತ್ತು ಝಿಕಾ ವೈರಸ್ ಕುರಿತು ಸಂಶೋಧನೆ ನಡೆಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Follow Us:
Download App:
  • android
  • ios