ಕೊರೋನಾ ಬಗ್ಗೆ ಮೊದಲೇ ಎಚ್ಚರಿಸಿದ್ದ ವೈದ್ಯ ಬಲಿ?
ಕೊರೋನಾ ಬಗ್ಗೆ ಎಚ್ಚರಿಸಿದ್ದ ವೈದ್ಯ ಬಲಿ?| ಲೀ ವೆನ್ ಲಿಯಾಂಗ್ ಎಂಬ ವೈದ್ಯರೊಬ್ಬರು ಇದೀಗ ಕೊರೋನಾಕ್ಕೆ ಬಲಿ
ಬೀಜಿಂಗ್[ಫೆ.07]: ಚೀನಾದಲ್ಲಿ ಸಾರ್ಸ್ ರೀತಿಯ ಕೊರೋನಾ ವೈರಸ್ ಹಬ್ಬುತ್ತಿದೆ ಎಂದು ಪೊಲೀಸರು ಹಾಗೂ ವೈದ್ಯಕೀಯ ವಲಯಕ್ಕೆ ಎಚ್ಚರಿಕೆ ರೂಪದ ಮಾಹಿತಿ ನೀಡಿದ್ದ ಲೀ ವೆನ್ ಲಿಯಾಂಗ್ ಎಂಬ ವೈದ್ಯರೊಬ್ಬರು ಇದೀಗ ಕೊರೋನಾಕ್ಕೆ ಬಲಿಯಾಗಿದ್ದಾರೆ ಎನ್ನಲಾಗಿದೆ. ಚೀನಾದ ಸರ್ಕಾರಿ ಸ್ವಾಮ್ಯದ ಗ್ಲೋಬಲ್ ಟೈಮ್ಸ ಈ ಕುರಿತು ಸುದ್ದಿ ಪ್ರಕಟಿಸಿದೆ.
ಆದರೆ ಸಾವಿನ ಬಗ್ಗೆ ಜಾಗತಿಕ ಮಟ್ಟದಲ್ಲಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಲೀ ಸಾವನ್ನಪ್ಪಿಲ್ಲ. ಅವರ ಹೃದಯ ಬಡಿತ ನಿಂತಿದೆ. ಅವರಿಗೆ ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ಗ್ಲೋಬಲ್ ಟೈಮ್ಸ್ ಹೊಸದಾಗಿ ಸುದ್ದಿ ಪ್ರಕಟಿಸಿದೆ. ಕಳೆದ ಡಿಸೆಂಬರ್‌ನಲ್ಲಿ ವುಹಾನ್‌ನಲ್ಲಿ ಕೊರೋನಾ ಹಬ್ಬುತ್ತಿರುವ ಬಗ್ಗೆ ವೀಚಾಟ್ ಆ್ಯಪ್ ಮೂಲಕ ಲೀ ಮೊದಲ ಬಾರಿಗೆ ವೈದ್ಯಕೀಯ ವಲಯಕ್ಕೆ ಎಚ್ಚರಿಸಿದ್ದರು.
ಆದರೆ, ಈ ಎಚ್ಚರಿಕೆ ಸಂದೇಶ ರವಾನಿಸಿದ್ದಕ್ಕೆ ಲೀ ಅವರು ಸುಳ್ಳು ಹಬ್ಬಿಸುತ್ತಿದ್ದಾರೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದರು.