Asianet Suvarna News Asianet Suvarna News

Fact Check| 20000 ಕೊರೋನಾ ರೋಗಿಗಳ ಕೊಲ್ಲಲು ಚೀನಾ ಯತ್ನ?

ಕೊರೋನಾ ವೈರಸ್‌ನಿಂದಾಗಿ ಕಂಗೆಟ್ಟಿರುವ ಚೀನಾ ಇದರ ನಿಯಂತ್ರಣಕ್ಕೆ 20 ಸಾವಿರ ಸೋಂಕಿತರನ್ನು ಕೊಲ್ಲುವ ಯತ್ನಕ್ಕಿಳಿದಿದೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ನಿಜಾನಾ? ಇಲ್ಲಿದೆ ವಿವರ

fact Check China Seeks Court Approval To Kill Over 20000 Coronavirus Patients
Author
Bangalore, First Published Feb 7, 2020, 1:33 PM IST

ಬೀಜಿಂಗ್[ಫೆ.07]: ಸದ್ಯ ಕೊರೋನಾ ವೈರಸ್ ಎಂಬ ಮಹಾಮಾರಿ ಚೀನಾವನ್ನು ಕಂಗೆಡಿಸಿದೆ. ಇದನ್ನು ನಿಯಂತ್ರಿಸಲು ನಾನಾ ಯತ್ನಗಳನ್ನು ನಡೆಸುತ್ತಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಸದ್ಯ ಈ ಸೋಂಕು ಭಾರತ ಸೇರಿದಂತೆ ಸುಮಾರು 11 ದೇಶಗಳಿಗೆ ವ್ಯಾಪಿಸಿದೆ. ಹೀಗಿರುವಾಗ ಚೀನಾ ಕೊನೆಯ ಪ್ರಯತ್ನ ಎಂಬಂತೆ ಈ ರೋಗವನ್ನು ಹತ್ತಿಕ್ಕಲು ಕೊರೋನಾ ವೈರಸ್ ಸೋಂಕಿತ 20 ಸಾವಿರ ರೋಗಿಗಳನ್ನು ಕೊಲ್ಲುವ ಯತ್ನಕ್ಕಿಳಿದಿದೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಕೊರೋನಾ ರೋಗ ಮುಚ್ಟಿಟ್ಟರೆ ಮರಣದಂಡನೆ!

ಹೌದು ರೋಗ ಹಬ್ಬುವುದನ್ನು ತಡೆಯಲು, ಸುಮಾರು 20000 ರೋಗಿಗಳ ಕೊಲ್ಲಲು ಚೀನಾ ಸರ್ಕಾರ ಯೋಜಿಸಿದೆ. ಈ ಕುರಿತು ಅದು ಸುಪ್ರೀಂಕೋರ್ಟ್‌ ಅನುಮತಿ ಕೋರಿದ್ದು, ಆ ಅರ್ಜಿ ಶುಕ್ರವಾರ ವಿಚಾರಣೆಗೆ ಬರಲಿದೆ ಎಂದು ಅನಾಲಿಸಿಸ್‌ ಟೀವಿ ಎಂಬ ವಾಹಿನಿ ವರದಿ ಮಾಡಿದೆ. ಆದರೆ ಈ ರೀತಿಯ ಸುದ್ದಿಯನ್ನು ಇತರೆ ಯಾವುದೇ ಪ್ರಮುಖ ವಾಹಿನಿಗಳು ಪ್ರಸಾರ ಮಾಡಿಲ್ಲ. ಹೀಗಿರುವಾಗ ಈ ಸುದ್ದಿ ನಿಜಾನಾ? ಎಂದು ಮರು ಪರಿಶೀಲಿಸಿದಾಗ ಇದೊಂದು ಸುಳ್ಸುದ್ದಿ ಎಂಬುವುದು ತಿಳಿದು ಬಂದಿದೆ.

ಈ ಸುದ್ದಿ ಮೊಟ್ಟ ಮೊದಲು ಪ್ರಕಟಿಸಿದ ಜಾಲಾತಾಣ ನಕಲಿಯಾಗಿದೆ. ಅಲ್ಲದೇ ಚೀನಾದಲ್ಲಿರುವ ಜಾಲಾತಾಣದಲ್ಲಿ ಸುದ್ದಿಯನ್ನು ಆಂಗ್ಲ ಭಾಷೆಯಲ್ಲಿ ಪ್ರಕಟಿಸಲಾಗಿದ್ದು, ಇದು ಸುಳ್ಸುದ್ದಿ ಎನ್ನುವುದಕ್ಕೆ ಮತ್ತಷ್ಟು ಇಂಬು ನೀಡಿದೆ. ಲ್ಲದೇ ಈ ಜಾಲತಾಣದಲ್ಲಿ ಈ ಹಿಂದೆಯೂ ಪ್ರಕಟವಾದ ಹಲವಾರು ಲೇಖನಗಳು ನಕಲಿಯಾಗಿದ್ದು, ಇದು ಕೇವಲ 6 ತಿಂಗಳ ಹಿಂದಷ್ಟೇ ಅಸ್ತಿತ್ವಕ್ಕೆ ಬಂದಿದೆ.

ಕೊರೋನಾದಿಂದ ಜಗತ್ತು ರಕ್ಷಿಸಲು ಚೀನಾದ ಒಂದು ಇಡೀ ಪ್ರಾಂತ್ಯವೇ ಬಲಿ!

 

Follow Us:
Download App:
  • android
  • ios