ಅತೀ ಹೆಚ್ಚು ಕ್ಯಾನ್ಸರ್ ಆರೋಗ್ಯ ಸಮಸ್ಯೆಗಳ ಪಟ್ಟಿಯಲ್ಲಿ ಭಾರತವೂ ಇದೆ. ಹೀಗಾಗಿ ಭಾರತದಲ್ಲಿ ಕ್ಯಾನ್ಸರ್ ಕುರಿತು ಜಾಗೃತಿ ಹೆಚ್ಚಾಗುತ್ತಿದೆ. ಇದರ ನಡುವೆ ಕ್ಯಾನ್ಸರ್ ವಿರುದ್ಧ ಹೋರಾಡಲು ವಿಶೇಷ ಆ್ಯಪ್ ಲಾಂಚ್ ಮಾಡಲಾಗಿದೆ. ಕನ್ನಡ ಸೇರಿದಂತೆ ಹಲವು ಪ್ರಾದೇಶಿಕ ಭಾಷೆಯಲ್ಲಿ ಈ ಆ್ಯಪ್ ಸೇವೆ ನೀಡುತ್ತಿದೆ.

ಬೆಂಗಳೂರು(ಫೆ.05)ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಶಕ್ತಿಯುತ ಅಸ್ತ್ರವಾಗಿ ಮೇಡ್ ಇನ್ ಇಂಡಿಯಾ ಆಪ್ ಬಿಡುಗಡೆ ಮಾಡಲಾಗಿದ್ದು, ಮೊದಲ ಹಂತದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಭಾರತೀಯರಿಗೆ ನೆರವಾಗಲಿದೆ. ವಿವಿಧ ರೀತಿಯ ಕ್ಯಾನ್ಸರ್‌ಗಳು, ಅವುಗಳ ಕಾರಣಗಳು, ಗುಣಲಕ್ಷಣಗಳು, ತಡೆ ಮತ್ತು ಚಿಕಿತ್ಸೆಯ ಆಯ್ಕೆಗಳು ಸೇರಿದಂತೆ ವಿವಿಧ ಮಾಹಿತಿಯನ್ನು ಇಂಗ್ಲಿಷ್, ಕನ್ನಡ, ಹಿಂದಿ, ಮರಾಠಿ ಮತ್ತು ಬೆಂಗಾಳಿ ಭಾಷೆಯಲ್ಲಿ ರೈಸ್ ಅಗೇನಸ್ಟ್ ಕ್ಯಾನ್ಸರ್‌ ಆ್ಯಪ್ ಒದಗಿಸುತ್ತಿದೆ. 

 ಭಾರತದ ಅತಿ ದೊಡ್ಡ ಕ್ಯಾನ್ಸರ್‌ ತಡೆ ಎನ್‌ಜಿಒ ಇಂಡಿಯಾ ಕ್ಯಾನ್ಸರ್ ಸೊಸೈಟಿ (ಐಸಿಎಸ್) ತನ್ನ ವಿಶಿಷ್ಟವಾದ ರೈಸ್ ಅಗೇನಸ್ಟ್ ಕ್ಯಾನ್ಸರ್ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದೆ. ರಾಜೀವ್ ಗಾಂಧಿ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್ & ರಿಸರ್ಚ್‌ ಸೆಂಟರ್ (ಆರ್‌ಜಿಸಿಐಆರ್‌ಸಿ) ಬೆಂಬಲಿತ ಮತ್ತು ರೋಶೆ ಪ್ರಾಯೋಜಿತ ಈ ಮೇಡ್ ಇನ್ ಇಂಡಿಯಾ ಆಪ್‌ ಕ್ಯಾನ್ಸರ್‌ ಬಗ್ಗೆ ಮಾಹಿತಿ ಕೊರತೆ ನಿವಾರಿಸುವುದು, ಜಾಗೃತಿ ಮೂಡಿಸುವುದು ಮತ್ತು ಕ್ಯಾನ್ಸರ್‌ ಮುಕ್ತ ಭವಿಷ್ಯಕ್ಕೆ ಸಮುದಾಯಗಳನ್ನು ಸಂಘಟಿಸುವ ಗುರಿಯನ್ನು ಹೊಂದಿದೆ. ಕ್ಯಾನ್ಸರ್‌ ಅನ್ನು ಎದುರಿಸಲು ಜನರು ಮತ್ತು ಸಮುದಾಯಗಳಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಅಪ್ಲಿಕೇಶನ್ ಅನ್ನು ರೂಪಿಸಲಾಗಿದೆ.

ವಿಶ್ವ ಕ್ಯಾನ್ಸರ್ ದಿನ; ಪತ್ನಿ ತಹಿರಾಳ ನಗ್ನ ಬೆನ್ನಿನ ಫೋಟೋ ಹಾಕಿ ವಿಶೇಷ ಸಂದೇಶ ಬರೆದ ಆಯುಶ್ಮಾನ್ ಖುರಾನಾ

ಕ್ಯಾನ್ಸರ್‌ ತಡೆಗೆ ಐಸಿಎಸ್‌ ಕಳೆದ ಏಳು ದಶಕಗಳಿಂದಲೂ ಕೆಲಸ ಮಾಡುತ್ತಿದೆ. ಚಿಕಿತ್ಸೆಗೆ ಹಣಕಾಸು ನೆರವನ್ನು ಒದಗಿಸುತ್ತದೆ ಮತ್ತು ಚಿಕಿತ್ಸೆಯ ನಂತರದ ಜೀವನವನ್ನು ನಿರ್ವಹಿಸುತ್ತಿದೆ. ಐಸಿಎಸ್‌ನ ಇತ್ತೀಚಿನ ಕಾರ್ಯಕ್ರಮವಾದ ರೈಸ್ ಅಗೇನಸ್ಟ್ ಕ್ಯಾನ್ಸರ್‌ ಈಗ ಕ್ಯಾನ್ಸರ್‌ ರೋಗಿಗಳು ಮತ್ತು ಅವರ ಶುಶ್ರೂಷಕರ ಕಳವಳಗಳು ಮತ್ತು ಪ್ರಶ್ನೆಗಳನ್ನು ಪರಿಹರಿಸುವ ಉದ್ದೇಶವನ್ನು ಹೊಂದಿದೆ. ಮೊಬೈಲ್ ಅಪ್ಲಿಕೇಶನ್‌ನಲ್ಲಿ ಹಲವು ಸೌಕರ್ಯಗಳಿವೆ. ಹೊಸ ಹೊಸ ಮಾಹಿತಿಗೆ ಸುಲಭ ಲಭ್ಯತೆ, ಸಹಭಾಗಿಗಳಿಂದ ಸಮುದಾಯ ಬೆಂಬಲ ಮತ್ತು ಸ್ಥಳೀಯ ಮತ್ತು ವರ್ಚುವಲ್ ಈವೆಂಟ್‌ಗಳು ಇತ್ಯಾದಿಯನ್ನು ಇದು ಒದಗಿಸುತ್ತದೆ. ವಿಶ್ವ ಕ್ಯಾನ್ಸರ್‌ ದಿನ 2024 ರ ಥೀಮ್‌ “ಕ್ಲೋಸ್ ದಿ ಕೇರ್ ಗ್ಯಾಪ್” ಅಂದರೆ ಆರೈಕೆಯ ಕೊರತೆಯನ್ನು ನೀಗಿಸಿ ಎಂಬುದಕ್ಕೆ ಪೂರಕವಾಗಿ, ಐಸಿಎಸ್‌ ಈ ಬಹುಭಾಷೆಯ ಪರಿಕರವನ್ನು ಬಿಡುಗಡೆ ಮಾಡಿದೆ. ಇದು ಕ್ಯಾನ್ಸರ್ ವಿರುದ್ಧದ ತನ್ನ ಹೋರಾಟದಲ್ಲಿ ವ್ಯಕ್ತಿಗಳು ಮತ್ತು ಸಮುದಾಯಗಳನ್ನು ಸಬಲೀಕರಿಸುತ್ತದೆ.

ಕ್ಯಾನ್ಸರ್‌ ಇಂದಿಗೂ ಪ್ರಮುಖ ಜಾಗತಿಕ ಆರೋಗ್ಯ ಸವಾಲು ಆಗಿದ್ದು, ಭಾರತ ಮತ್ತು ವಿಶ್ವದಲ್ಲಿ ಲಕ್ಷಾಂತರ ಜನರ ಜೀವನದ ಮೇಲೆ ಪರಿಣಾಮ ಬೀರುತ್ತಿದೆ. ರೈಸ್ ಅಗೇನಸ್ಟ್ ಕ್ಯಾನ್ಸರ್‌ ಆಪ್ ಅನ್ನು ಬಿಡುಗಡೆ ಮಾಡುವ ಮೂಲಕ ಐಸಿಎಸ್ ತೆಗೆದುಕೊಂಡಿರುವ ಈ ಕ್ರಮವು ಮೊಬೈಲ್ ತಂತ್ರಜ್ಞಾನದ ಅನುಕೂಲವನ್ನು ಬಳಸಿಕೊಂಡು, ಸಮಗ್ರ ಮಾಹಿತಿ ಮತ್ತು ಮಾರ್ಗದರ್ಶನವನ್ನು ಕ್ಯಾನ್ಸರ್‌ ಮತ್ತು ಅದರ ಕುಟುಂಬದಿಂದ ಬಾಧಿತರಾದವರಿಗೆ ಒದಗಿಸುತ್ತದೆ ಎಂದು ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ರಾಷ್ಟ್ರೀಯ ಮ್ಯಾನೇಜಿಂಗ್ ಟ್ರಸ್ಟೀ ಉಷಾ ಥೋರಟ್‌ ಹೇಳಿದ್ದಾರೆ.

ಬಲವಾದ ಇಚ್ಚಾಶಕ್ತಿಯಿಂದ ಕ್ಯಾನ್ಸರ್ ಗೆದ್ದು ಬಂದ್ರು ಕ್ರಿಕೇಟರ್ ಯುವರಾಜ್ ಸಿಂಗ್

ಕ್ಯಾನ್ಸರ್ ಎದುರಿಸುವ ತನ್ನ ಪ್ರಯತ್ನದಲ್ಲಿ ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ಕರ್ನಾಟಕ ವಿಭಾಗವು ರಾಜ್ಯದಲ್ಲಿ ತನ್ನ ವ್ಯಾಪ್ತಿಯನ್ನು ಗಮನಾರ್ಹವಾಗಿ ಹೆಚ್ಚಿಸಿಕೊಂಡಿದೆ. ಐಸಿಎಸ್ ಕರ್ನಾಟಕ ಬೆಂಗಳೂರಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದ್ದು, ಮಂಗಳೂರು, ಕಲಬುರಗಿ ಮತ್ತು ಧಾರವಾಡದಲ್ಲಿ ಪ್ರಾದೇಶಿಕ ಕಚೇರಿಗಳಿವೆ. ಸಂಪನ್ಮೂಲ ಮತ್ತು ಮಾಹಿತಿಯ ಕೊರತೆಯನ್ನು ಹೊಂದಿರುವ ಗ್ರಾಮೀಣ ಮತ್ತು ನಗರ ಪ್ರದೇಶದ ಜನರನ್ನೂ ಅದು ತಲುಪುತ್ತಿದೆ.