ಬಲವಾದ ಇಚ್ಚಾಶಕ್ತಿಯಿಂದ ಕ್ಯಾನ್ಸರ್ ಗೆದ್ದು ಬಂದ್ರು ಕ್ರಿಕೇಟರ್ ಯುವರಾಜ್ ಸಿಂಗ್
ಭಾರತ ಕ್ರಿಕೆಟ್ ತಂಡದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಕ್ಯಾನ್ಸರ್ ಅನ್ನು ಸೋಲಿಸಿದ್ದಲ್ಲದೆ, ಟೀಮ್ ಇಂಡಿಯಾಕ್ಕೆ ಯಶಸ್ವಿಯಾಗಿ ಮರಳಿರೋ ಸುದ್ದಿ ಹೊಸದೇನೂ ಅಲ್ಲ. ಕ್ಯಾನ್ಸರ್ ವಿರುದ್ಧದ ಅವರ ಸುದೀರ್ಘ ಹೋರಾಟದ ಕಥೆ ಸ್ಪೂರ್ತಿದಾಯಕವಾಗಿದೆ.
ಯುವರಾಜ್ ಸಿಂಗ್ (Yuvraj Singh) ಭಾರತೀಯ ಕ್ರಿಕೆಟ್ ತಂಡದ ಮಾಜಿ ಶ್ರೇಷ್ಠ ಆಲ್ರೌಂಡರ್, ಅವರು ಕೇವಲ ಕ್ರಿಕೆಟ್ ನಲ್ಲಿ ಮಾತ್ರ ಚಾಂಪಿಯನ್ ಆಗಿರಲಿಲ್ಲ. ವೈಯಕ್ತಿಕ ಜೀವನದಲ್ಲಿಯೂ ವಿಜೇತರಾದರು. ೨೦೧೧ ರ ವಿಶ್ವಕಪ್ ಸಮಯದಲ್ಲಿ ಯುವರಾಜ್ ಹೊಂದಿದ್ದ ಅಪರೂಪದ ಕ್ಯಾನ್ಸರ್ ಅನ್ನು ಸೋಲಿಸುವುದು ಸುಲಭವಾಗಿರಲಿಲ್ಲ. ಅನಾರೋಗ್ಯದ ಸಮಯದಲ್ಲಿ ರಕ್ತ ವಾಂತಿ ಮಾಡುವ ಮೂಲಕ ಸೀರಿಯಸ್ ಕಂಡೀಶನ್ ಗೆ ತಲುಪಿದರೂ ಸಹ ಯುವರಾಜ್ ಧೈರ್ಯವನ್ನು ಕಳೆದುಕೊಳ್ಳಲಿಲ್ಲ.
2011ರ ವಿಶ್ವಕಪ್ ಟೂರ್ನಿಯಲ್ಲಿ (World Cup) ಯುವರಾಜ್ ಸಿಂಗ್ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದರು. ಇದರ ನಂತರ, ಕ್ಯಾನ್ಸರ್ ನ್ನು ಸೋಲಿಸುವ ಮೂಲಕ, ಮನಸ್ಸಿನ ಸೋಲು ಜೀವನದ ಸೋಲು, ಮತ್ತು ಮನಸ್ಸಿನ ಗೆಲುವು ಜೀವನ ಗೆಲುವು ಎಂಬುದನ್ನು ಸಾಬೀತುಪಡಿಸಿದರು. ಇಂದು ಯುವರಾಜ್ ಸಿಂಗ್ ಅವರು ಕ್ಯಾನ್ಸರ್ ಸೋಲಿಸಲು ಬಲವಾಗಿ ನಂಬಿಕೊಂಡ ಅಸ್ತ್ರದ ಬಗ್ಗೆ ತಿಳಿಸುತ್ತೇವೆ.
ಸಂದರ್ಶನವೊಂದರಲ್ಲಿ, ಯುವರಾಜ್ ಸಿಂಗ್ ತಿಳಿಸಿದಂತೆ 2011 ರ ಆರಂಭದಲ್ಲಿ ಉಸಿರಾಟದ ತೊಂದರೆ (breathing problem), ಬಾಯಿಯಿಂದ ರಕ್ತಸ್ರಾವ ಮತ್ತು ಸ್ಟಾಮಿನಾ ಕೊರತೆಯಂತಹ ಸಮಸ್ಯೆಗಳನ್ನು ಎದುರಿಸಲು ಪ್ರಾರಂಭಿಸಿದರು ಎಂದು ಹೇಳಿದ್ದರು. ಆದರೆ, ಅವರು ಯಾವುದೇ ಕಾರಣಕ್ಕೂ ವಿಶ್ವಕಪ್ ನಿಂದ ಹೊರಗುಳಿಯಲು ಬಯಸಲಿಲ್ಲ, ಆದ್ದರಿಂದ ಅವರು ಈ ಸಮಸ್ಯೆಗಳನ್ನು ನಿರ್ಲಕ್ಷಿಸಿದರು. ಅವರು 2011 ರ ಕ್ರಿಕೆಟ್ ವಿಶ್ವಕಪ್ನಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಮಿಂಚಿದರು ಮತ್ತು ಮ್ಯಾನ್ ಆಫ್ ದ ಸೀರೀಸ್ ಪ್ರಶಸ್ತಿಯನ್ನು ಗೆದ್ದರು.
ಶ್ವಾಸಕೋಶದ ಕ್ಯಾನ್ಸರ್ (Lungs Cancer): ಯುವರಾಜ್ ಸಿಂಗ್ ಅವರಿಗೆ ಶ್ವಾಸಕೋಶದ ಕ್ಯಾನ್ಸರ್ ಇರಲಿಲ್ಲ, ಆದರೆ ಶ್ವಾಸಕೋಶದ ಮಧ್ಯದಲ್ಲಿ ಕ್ಯಾನ್ಸರ್ ಇತ್ತು. ಇದನ್ನು ಮೆಡಿಯಾಸ್ಟಿನಲ್ ಸೆಮಿನೋಮಾ ಎಂದು ಕರೆಯಲಾಗುತ್ತದೆ, ಇದು ವಿಶ್ವದ ಕೇವಲ ಒಂದು ಪ್ರತಿಶತದಷ್ಟು ಜನರಲ್ಲಿ ಕಂಡುಬರುತ್ತದೆ. ಮೆಡಿಯಾಸ್ಟಿನಲ್ ಸೆಮಿನೋಮಾ ಒಂದು ರೀತಿಯ ವೃಷಣ ಕ್ಯಾನ್ಸರ್ ಆಗಿದೆ. ಆದಾಗ್ಯೂ, ವೃಷಣ ಕ್ಯಾನ್ಸರ್ನಿಂದ ಮೆಡಿಯಾಸ್ಟಿನಲ್ ಸೆಮಿನೋಮಾ ಉದ್ಭವಿಸುವುದಿಲ್ಲ. ಈ ಕ್ಯಾನ್ಸರ್ ಎದೆಯ ನಡುವಿನ ಜಾಗವಾದ ಮೆಡಿಯಾಸ್ಟಿನಮ್ನಲ್ಲಿ ಸಂಭವಿಸುತ್ತದೆ. ಮೆಡಿಯಾಸ್ಟಿನಮ್ ಹೃದಯ, ಶ್ವಾಸಕೋಶಗಳು, ಥೈಮಸ್ ಗ್ರಂಥಿ ಮತ್ತು ಇತರ ಪ್ರಮುಖ ಅಂಗಗಳನ್ನು ಒಳಗೊಂಡಿದೆ.
ಯುವರಾಜ್ ಕ್ಯಾನ್ಸರ್ ಅನ್ನು ಹೇಗೆ ಸೋಲಿಸಿದರು: ಈ ಅಪರೂಪದ ಕ್ಯಾನ್ಸರ್ ಸಮಯದಲ್ಲಿ, ಯುವರಾಜ್ ಸಿಂಗ್ ಅನೇಕ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು (mental problem) ಎದುರಿಸಬೇಕಾಯಿತು. ಯುವರಾಜ್ ಸಿಂಗ್ ತಮ್ಮ ಇಚ್ಛಾಶಕ್ತಿ ಮತ್ತು ಮನೋಬಲದಿಂದ ಒಂದು ವರ್ಷದಲ್ಲಿ ಕ್ಯಾನ್ಸರ್ ಅನ್ನು ಸೋಲಿಸಿದ್ದಲ್ಲದೆ, ಕ್ರಿಕೆಟ್ ಮೈದಾನಕ್ಕೂ ಮರಳಿದರು. ಜೊತೆಗೆ ಕ್ಯಾನ್ಸರ್ ಜಾಗೃತಿಗಾಗಿ ಸಂಸ್ಥೆಯನ್ನು ಪ್ರಾರಂಭಿಸಿದರು. ಈ ಸಂಸ್ಥೆಯು ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅದರ ವಿರುದ್ಧ ಹೋರಾಡಲು ಜನರಿಗೆ ಸಹಾಯ ಮಾಡುತ್ತದೆ.
ಬಲವಾದ ಇಚ್ಛಾಶಕ್ತಿ: ಯುವರಾಜ್ 'ಮೆಡಿಯಾಸ್ಟಿನಲ್ ಸೆಮಿನೋಮಾ' ಎಂಬ ಅಪರೂಪದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಈ ವಿಷಯ ತಿಳಿದ ಕೂಡಲೇ ಅವರ ಅಭಿಮಾನಿಗಳು ನಿರಾಶೆಗೊಂಡರು. ಯುವರಾಜ್ ಚೇತರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಜನರು ಭಾವಿಸಿದ್ದರು ಆದರೆ 'ಸಿಕ್ಸರ್ ಕಿಂಗ್' (sixer king) ತನ್ನ ಬಲವಾದ ಇಚ್ಛಾಶಕ್ತಿಯಿಂದ ಕ್ಯಾನ್ಸರ್ ಅನ್ನು ಸೋಲಿಸಿದರು ಮತ್ತು ಅದರಿಂದ ಬಳಲುತ್ತಿರುವ ಲಕ್ಷಾಂತರ ಜನರಿಗೆ ಸ್ಫೂರ್ತಿಯಾದರು.
ಸಕಾರಾತ್ಮಕ ಚಿಂತನೆ: ಇಚ್ಛಾಶಕ್ತಿ ಇರುವಲ್ಲಿ ಮಾರ್ಗವಿದೆ ಎಂಬ ಮಾತಿದೆ. ಕ್ಯಾನ್ಸರ್ ವಿರುದ್ಧ ಹೋರಾಡುವಾಗ ಯುವರಾಜ್ ಇದನ್ನೇ ಮಾಡಿದ್ದು. ಅವರ ಜೀವನದ ಅತ್ಯಂತ ಕಷ್ಟಕರ ಹಂತದಲ್ಲಿಯೂ, ಅವರು ನಿರುತ್ಸಾಹಗೊಳ್ಳಲಿಲ್ಲ ಮತ್ತು ಕ್ಯಾನ್ಸರ್ ಅನ್ನು ಸೋಲಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಲೇ ಇದ್ದರು. ಕೊನೆಯಲ್ಲಿ, ಗೆಲುವು ಅವರದಾಗಿತ್ತು ಮತ್ತು ಕ್ಯಾನ್ಸರ್ ಅವರ ಮುಂದೆ ಸೋಲಲೇಬೇಕಾಯಿತು.