Asianet Suvarna News Asianet Suvarna News

ಡೆಂಘಿ ಪ್ರಕರಣ ಹೆಚ್ಚಳ; ಇಂಟೆನ್ಸ್ ಸರ್ವೆಲೆನ್ಸ್ ಗೆ ಮುಂದಾದ ಪಾಲಿಕೆ

 ಆಗಾಗ ಮಳೆ, ಬಿಸಿಲು ವಾತಾವರಣದಿಂದ ನಗರದಲ್ಲಿ ಡೇಂಜರಸ್ ಡೆಂಘಿ ಪ್ರಕರಣಗಳು ಹೆಚ್ಚಳವಾಗಿರೋದು ಆತಂಕ ಮೂಡಿಸಿದೆ.  ದಿನಬಿಟ್ಟು ದಿನ ಮಳೆ ಬರುತ್ತಿರುವುದರಿಂದ ಸೊಳ್ಳೆಗಳು ಹೆಚ್ಚುತ್ತಿವೆ. ಕೊಳಚೆ ಪ್ರದೇಶ, ನಿಂತ ಚರಂಡಿ ನೀರಲ್ಲಿ ಸೊಳ್ಳೆಗಳು ಹೆಚ್ಚಳ. ಮನೆ ಸುತ್ತಮುತ್ತ ಕೊಳಚೆ ನೀರು ನಿಂತಿದ್ದರೆ ಅಪಾಯ ಕಟ್ಟಿಟ್ಟಬುತ್ತಿ!

Increase in dengue cases issue  intense surveillance by BBMP bengaluru rav
Author
First Published Jul 24, 2023, 9:46 AM IST

ಬೆಂಗಳೂರು (ಜು.24)  ಆಗಾಗ ಮಳೆ, ಬಿಸಿಲು ವಾತಾವರಣದಿಂದ ನಗರದಲ್ಲಿ ಡೇಂಜರಸ್ ಡೆಂಘಿ ಪ್ರಕರಣಗಳು ಹೆಚ್ಚಳವಾಗಿರೋದು ಆತಂಕ ಮೂಡಿಸಿದೆ. 

ದಿನಬಿಟ್ಟು ದಿನ ಮಳೆ ಬರುತ್ತಿರುವುದರಿಂದ ಸೊಳ್ಳೆಗಳು ಹೆಚ್ಚುತ್ತಿವೆ. ಕೊಳಚೆ ಪ್ರದೇಶ, ನಿಂತ ಚರಂಡಿ ನೀರಲ್ಲಿ ಸೊಳ್ಳೆಗಳು ಹೆಚ್ಚಳ. ಮನೆ ಸುತ್ತಮುತ್ತ ಕೊಳಚೆ ನೀರು ನಿಂತಿದ್ದರೆ ಅಪಾಯ ಕಟ್ಟಿಟ್ಟಬುತ್ತಿ. ಮನೆಯೊಳಗೆ ನುಗ್ಗುವ  ಸೊಳ್ಳೆಗಳ ಕಡಿತದಿಂದ ಡೆಂಘಿ ಕಾಣಿಸಿಕೊಳ್ಳಬಹುದು. ಈಗಾಗಲೇ ನಗರದಲ್ಲಿ ಡೆಂಘಿ ಜ್ವರದಿಂದ ಬಳಲುವವರು ಸಂಖ್ಯೆ ಹೆಚ್ಚಳವಾಗಿರೋದು ಆರೋಗ್ಯ ಇಲಾಖೆಗೆ ಹೊಸ ತಲೆ ನೋವು ಶುರುವಾಗಿದೆ.

ಈ ಹಿನ್ನೆಲೆ ನಗರದಲ್ಲಿ ಹೆಚ್ಚಾಗಿ ಕೊಳಚೆ ಪ್ರದೇಶಗನ್ನು ಗುರುತಿಸಿ ಇಂಟೆನ್ಸ್ ಸರ್ವೆಲೆನ್ಸ್ ಮಾಡೋಕೆ ಮುಂದಾದ ಪಾಲಿಕೆ ಆರೋಗ್ಯ ಇಲಾಖೆ. ಡೆಂಘಿ ಜ್ವರಕ್ಕೆ ತುತ್ತಾಗಿರೋ ವ್ಯಕ್ತಿಯ ಮನೆಯ 100 ಮೀಟರ್ ವ್ಯಾಪ್ತಿಯಲ್ಲಿ ಇರೋ ಪ್ರದೇಶಗಳಲ್ಲಿ ಸರ್ವೆಲೆನ್ಸ್ ಮಾಡುತ್ತಿರುವ ಪಾಲಿಕೆ. ಇದರ ಜೊತೆಗೆ ಆರೋಗ್ಯ ಇಲಾಖೆ ಜೊತೆಗೆ ಸಭೆ ಮಾಡಲು ನಿರ್ಧರಿಸಿದೆ. 

ಬಿಸಿಲು ಮಳೆ: ಬೆಂಗಳೂರಲ್ಲಿ 1636 ಮಂದಿಗೆ ಡೆಂಘೀ ಜ್ವರ..!

ರಾಪಿಡ್ ಟೆಸ್ಟ್ ಕಿಟ್‌ ಅಡ್ಡಿ:

 ಡೆಂಘಿ ಜ್ವರ ಟೆಸ್ಟ್ ಮಾಡೋಕೆ ರಾಪಿಡ್ ಟೆಸ್ಟ್ ಕಿಟ್‌ಗಳು ಈಗಾಗಲೇ ಲಭ್ಯವಿರುವ ಹಿನ್ನೆಲೆ ಡೆಂಘಿ ಜ್ವರದ ಲಕ್ಷಣಗಳು ಕಂಡುಬಂದ ತಕ್ಷಣ ಮನೆ ಅಥವಾ ಲ್ಯಾಬ್‌ಗಳಲ್ಲಿ ಟೆಸ್ಟ್ ಮಾಡಿಸಿ ಔಷಧ ಪಡೆಯುತ್ತಿರೋ ಜನರು. ಇದ್ರಿಂದ ಡೆಂಘಿ ಪ್ರಕರಣಗಳ ಸರಿಯಾದ ಸಂಖ್ಯೆ ಪತ್ತೆ ಹಚ್ಚೋಕೆ ಪಾಲಿಕೆಗೆ ಅಡ್ಡಿಯಾಗ್ತಿದೆ. ಡೆಂಘಿ ತಡೆಗಟ್ಟೋಕೆ ಸಮರಸನ್ನದ್ಧರಾಗಿರುವ ಪಾಲಿಕೆ ಇದೀಗ ಪ್ರತಿ ವಾರ್ಡ್‌ಗಳಿಗೆ ಔಷಧಸಿಂಪಡಿಸೋದಕ್ಕೆ ತಯಾರಿ ನಡೆಸಿದೆ.

ಸ್ವಚ್ಛತೆ ಕಾಪಾಡಿದರೆ ರೋಗ ದೂರ

ನಗರದ ಜನರು ಮನೆ ಮತ್ತು ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಆರೋಗ್ಯಕರ ಜೀವನ ನಡೆಸಲು ಪೂರಕವಾದ ವಾತಾವರಣ ಸೃಷ್ಟಿ ನಮ್ಮಿಂದಲೇ ಸಾಧ್ಯ, ಸ್ಪಚ್ಛತೆಗೆ ಒತ್ತು ನೀಡಿ ರೋಗ ತಾನಾಗಿಯೇ ದೂರಾಗುತ್ತದೆ, ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ರೋಗಗಳು ಪತ್ತೆಯಾಗುತ್ತಿವೆ. ಇದರಲ್ಲಿ ಡೆಂಘೀ ಜ್ವರವು ಸಹ ಒಂದಾಗಿದ್ದು, ಇದರ ಬಗ್ಗೆ ಪ್ರತಿಯೊಬ್ಬರು ಎಚ್ಚರಿಕೆ ವಹಿಸಬೇಕಿದೆ.

ಬೆಂಗಳೂರಲ್ಲಿ ಮಳೆಯಿಂದ ಹೆಚ್ಚಿದ ಸೊಳ್ಳೆ ಕಾಟ, ಪ್ರತಿದಿನ 50ಕ್ಕೂ ಹೆಚ್ಚು ಡೆಂಘಿ ಕೇಸ್ ಪತ್ತೆ

ಮನೆಯಲ್ಲಿ ಇರುವ ನೀರಿನ ತೊಟ್ಟಿಗಳು, ಡ್ರಂಗಳು ಮತ್ತು ಸಿಂಟೆಕ್ಸ್‌ಗಳನ್ನು ಕನಿಷ್ಠ ವಾರಕ್ಕೆ ಒಂದು ಬಾರಿ ಸ್ವಚ್ಛಗೊಳಿಸಬೇಕು, ಮನೆಯ ಸುತ್ತಮುತ್ತ ಎಸೆದಿರುವ ವಸ್ತುಗಳಲ್ಲಿ ಮಳೆ ನೀರು ಶೇಖರಣೆಯಾಗದಂತೆ ಎಚ್ಚರಿಕೆ ವಹಿಸಬೇಕು. ಈಡಿಸ್‌ ಸೊಳ್ಳೆಗಳು ಹಗಲು ಹೊತ್ತಿನಲ್ಲಿ ಕಚ್ಚುವುದರಿಂದ ಮಕ್ಕಳು, ವೃದ್ಧರು ಹಾಗೂ ಗರ್ಭಿಣಿಯರು ಸೊಳ್ಳೆ ಪರದೆಯನ್ನು ಬಳಸುವುದರಿಂದ ಡೆಂಘಿ ಹರಡುವಿಕೆ ತಡೆಗಟ್ಟಬಹುದು.

Follow Us:
Download App:
  • android
  • ios