ನಗರದಲ್ಲಿ ಕೆಲವು ದಿನಗಳಿಂದ ವಾತಾವರಣ ಬದಲಾಗ್ತಿದ್ದಂತೆ ಸಿಟಿ ಜನರ ಆರೋಗ್ಯದಲ್ಲೂ ಏರುಪೇರು ಆಗಿದೆ. ಕಳೆದೊಂದು ತಿಂಗಳಿಂದ ಡೆಂಗ್ಯೂ ಫೀವರ್ ದುಪ್ಪಟ್ಟಾಗ್ತಿದೆ. ಸಿಕ್ಕಾಪಟ್ಟೆ ತಲೆನೋವು ಜ್ವರ ಅಂತಾ ಆಸ್ಪತ್ರೆಗೆ ಹೋಗುವವರ ಸಂಖ್ಯೆ ಹೆಚ್ಚಳವಾಗ್ತಿದೆ. 

ಬೆಂಗಳೂರು (ಡಿ.15): ನಗರದಲ್ಲಿ ಕೆಲವು ದಿನಗಳಿಂದ ವಾತಾವರಣ ಬದಲಾಗ್ತಿದ್ದಂತೆ ಸಿಟಿ ಜನರ ಆರೋಗ್ಯದಲ್ಲೂ ಏರುಪೇರು ಆಗಿದೆ. ಕಳೆದೊಂದು ತಿಂಗಳಿಂದ ಡೆಂಗ್ಯೂ ಫೀವರ್ ದುಪ್ಪಟ್ಟಾಗ್ತಿದೆ. ಸಿಕ್ಕಾಪಟ್ಟೆ ತಲೆನೋವು ಜ್ವರ ಅಂತಾ ಆಸ್ಪತ್ರೆಗೆ ಹೋಗುವವರ ಸಂಖ್ಯೆ ಹೆಚ್ಚಳವಾಗ್ತಿದೆ. 

Add Asianetnews Kannada as a Preferred SourcegooglePreferred

ನಗರದಲ್ಲಿ ಕಳೆದ ಒಂದೇ ತಿಂಗಳಲ್ಲಿ 1400ಕ್ಕೂ ಹೆಚ್ಚು ಡೆಂಘಿ ಪ್ರಕರಣಗಳು ದಾಖಲಾಗಿವೆ. ಬೊಮ್ಮನಹಳ್ಳಿಯಲ್ಲಿ ಅತಿ ಹೆಚ್ಚು ಡೆಂಘಿ ಪ್ರಕರಣ ಪತ್ತೆಯಾಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಕಳೆದ ತಿಂಗಳ ಚಂಡಮಾರುತ ಸೃಷ್ಟಿಯಾದ ನಂತರ ನಗರದಲ್ಲಿ ಶೀತಗಾಳಿ, ಮೋಡಮುಸುಕಿದ ಇದೆ. ವಾತಾವರಣದಲ್ಲಿನ ಈ ಬದಲಾವಣೆಯಿಂದ ಡೆಂಘಿ ಪ್ರಕರಣದಲ್ಲಿ ಹೆಚ್ಚಳವಾಗಿದೆ.

ಕಳೆದ ನವೆಂಬರ್ 1 ರಿಂದ ಡಿಸೆಂಬರ್ 8 ರವರೆಗೆ ನಗರದಲ್ಲಿ ಒಟ್ಟು 7,642 ಮಂದಿಗೆ ಡೆಂಘಿ ಪ್ರಕರಣಗಳು ದಾಖಲಾಗಿವೆ.

ಡೆಂಘಿ ಮೇಲೆ ನಿಗಾ ಇಡಲು ಬಂತು ಮೊಬೈಲ್‌ ಆ್ಯಪ್‌ ! ಹೇಗೆ ಕೆಲಸ ಮಾಡುತ್ತೆ ಗೊತ್ತಾ?

ವಲಯವಾರು ಡೆಂಘಿ ಪ್ರಕರಣ

  • ಬೊಮ್ಮನಹಳ್ಳಿ 182
  • ದಾಸರಹಳ್ಳಿ 3
  • ಪೂರ್ವ 343 
  • ಮಹದೇವಪುರ 180
  • ಆರ್ ಆರ್ ನಗರ 149
  • ದಕ್ಷಿಣವಲಯ 299
  • ಪಶ್ಚಿಮವಲಯ 168
  • ಯಲಹಂಕವಲಯ 144

ನಗರದಲ್ಲಿ ಒಟ್ಟು 1,468 ಕೇಸ್ ದಾಖಲು