ವರ್ಕ್‌ ಔಟ್‌ ಮಾಡುವ ಮುನ್ನ ಈ ವಿಷ್ಯ ತಪ್ಪದೇ ತಿಳ್ಕೊಳಿ

ವ್ಯಾಯಾಮ ನಮ್ಮ ಆರೋಗ್ಯ ವೃದ್ಧಿಸುತ್ತದೆ. ಪ್ರತಿ ದಿನ ಸರಿಯಾದ ಸಮಯಕ್ಕೆ ವ್ಯಾಯಾಮ ಮಾಡುವುದು ಕೂಡ ಮುಖ್ಯ. ವರ್ಕ್ ಔಟ್ ಮಾಡುವ ಮೊದಲು ಅದ್ರ ಬಗ್ಗೆ ಸ್ವಲ್ಪ ಮಟ್ಟಿಗೆ ಜ್ಞಾನ ಇರಬೇಕು. ಹೇಗೇಗೋ ವ್ಯಾಯಾಮ ಮಾಡಿದ್ರೆ ಆರೋಗ್ಯ ಹದಗೆಡುತ್ತೆ.
 

Important Tips For Workout

ಫಿಟ್ನೆಸ್ ಅನೇಕರ ಗುರಿಯಾಗಿರುತ್ತದೆ. ಹಾಗಾಗಿ ಕಾಲ ಯಾವ್ದೇ ಇರಲಿ ಬೆಳಿಗ್ಗೆ ಬೇಗ ಎದ್ದು ವ್ಯಾಯಾಮ, ಯೋಗ, ವಾಕಿಂಗ್ ಅಂತ ಶುರು ಮಾಡ್ತಾರೆ. ಮತ್ತೆ ಕೆಲವರು ಕೆಲಸ ಮುಗಿಸಿ ಸಂಜೆ ಮನೆಗೆ ಬಂದ್ಮೇಲೆ ವ್ಯಾಯಾಮ ಮಾಡ್ತಾರೆ. ನಿಯಮಿತ ವ್ಯಾಯಾಮ ಆರೋಗ್ಯಕ್ಕೆ ಬಹಳ ಅಗತ್ಯ. ಇದು ಮೂಳೆಗಳನ್ನು ಬಲಪಡಿಸುವ ಜೊತೆಗೆ ನಿಮ್ಮ ದೈಹಿಕ ಮತ್ತು ಮಾನಸಿಕ ಎರಡೂ ಆರೋಗ್ಯವನ್ನು ಕಾಪಾಡಲು ನೆರವಾಗುತ್ತದೆ. ಕೆಲವರು ವ್ಯಾಯಾಮ ಮಾಡ್ಬೇಕು ಎನ್ನುವ ಕಾರಣಕ್ಕೆ ಮಾಡುವವರಿರುತ್ತಾರೆ. ಯೋಗ ಮಾಡುವಾಗ ಬರಿ ನೆಲದಲ್ಲಿ ಮಾಡುವುದು, ಜಿನ್ಸ್ ಫ್ಯಾಂಟ್ ಧರಿಸಿ ಜಿಮ್ ಗೆ ಹೋಗುವುದು ಹೀಗೆ ಅನೇಕ ತಪ್ಪುಗಳನ್ನು ಮಾಡ್ತಿರುತ್ತಾರೆ. ಬರೀ ವ್ಯಾಯಾಮ ಹಾಗೂ ಯೋಗವನ್ನು ನಿಯಮಿತವಾಗಿ ಮಾಡಿದ್ರೆ ಸಾಲುವುದಿಲ್ಲ. ನೀವು ವ್ಯಾಯಾಮ ಮಾಡುವ ಮುನ್ನ ಅದ್ರ ಬಗ್ಗೆ ಕೆಲ ಸಂಗತಿ ತಿಳಿದಿರಬೇಕು. ಸರಿಯಾದ ಕ್ರಮದಲ್ಲಿ ಹಾಗೂ ಸರಿಯಾದ ನಿಯಮ ಪಾಲನೆ ಮಾಡಿ ವ್ಯಾಯಾಮ ಮಾಡಿದಲ್ಲಿ ಮಾತ್ರ ನೀವು ಮಾಡಿದ ವ್ಯಾಯಾಮದಿಂದ ನಿಮ್ಮ ದೇಹ ಹಾಗೂ ಮನಸ್ಸಿಗೆ ಶಕ್ತಿ ಸಿಗುತ್ತದೆ. ನಾವಿಂದು ವ್ಯಾಯಾಮ ಮಾಡುವ ಮೊದಲು ಏನು ತಿಳಿದಿರಬೇಕು ಎಂಬುದನ್ನು ಹೇಳ್ತೆವೆ.

ಯೋಗ (Yoga), ವ್ಯಾಯಾಮದ ಮೊದಲು ಆಹಾರ (Food) ಸೇವನೆ : ವ್ಯಾಯಾಮದ ಮೊದಲು ಆಹಾರ ಸೇವನೆ ಮಾಡ್ಬೇಕೆ ಬೇಡ್ವೆ ಎನ್ನುವ ಬಗ್ಗೆ ಕೆಲ ಗೊಂದಲವಿದೆ. ಒಂದೊಂದು ತಜ್ಞರ ಅಭಿಪ್ರಾಯ ಒಂದೊಂದು ರೀತಿಯಲ್ಲಿದೆ. ಆದ್ರೆ ವ್ಯಾಯಾಮ ಮಾಡುವ ಮುನ್ನ ನೀವು ಲಘು ಆಹಾರ ಸೇವನೆ ಮಾಡವುದು ಒಳ್ಳೆಯದು. ನೀವು ಆಹಾರ ಸೇವನೆ ಮಾಡಿದ 2 -3 ಗಂಟೆ ನಂತ್ರ ವ್ಯಾಯಾಮ ಮಾಡಿದ್ರೆ ಒಳ್ಳೆಯದು. ಈ ಮಧ್ಯೆ ಹಸಿವು ಎನ್ನಿಸಿದ್ರೆ ನೀವು ಡ್ರೈ ಫ್ರೂಟ್ಸ್ (Dry Fruits ) ಮೊಸರನ್ನು ಸೇವನೆ ಮಾಡಬಹುದು. ನೀವು ತಿನ್ನುವ ಆಹಾರದಲ್ಲಿ ಪ್ರೋಟೀನ್ ಹಾಗೂ ಕಾರ್ಬೋಹೈಡ್ರೇಟ್ ಎರಡೂ ಇರುವಂತೆ ನೋಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಅತಿಯಾಗಿ ಆಹಾರ ಸೇವನೆ ಮಾಡಿದ ತಕ್ಷಣ ವ್ಯಾಯಾಮ ಮಾಡಬೇಡಿ.

ವ್ಯಾಯಾಮಕ್ಕಿಂತ ಮೊದಲು ದ್ರವ ಪದಾರ್ಥ ಸೇವನೆ : ನೀವು ವರ್ಕ್ ಔಟ್ ಗಿಂತ ಮೊದಲು ದ್ರವ ಆಹಾರ ಸೇವನೆ ಮಾಡದೆ ಹೋದ್ರೆ ನಿರ್ಜಲೀಕರಣ ಸಮಸ್ಯೆ ಎದುರಿಸುತ್ತೀರಿ. ಹಾಗಂತ ಅತಿಯಾದ ದ್ರವ ಆಹಾರ ಸೇವನೆ ಮಾಡುವುದು ಕೂಡ ಒಳ್ಳೆಯದಲ್ಲ. ಇದು ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚು ಮಾಡುತ್ತದೆ. ಹಾಗೆಯೇ ಅನ್ನನಾಳಕ್ಕೆ ಅಡ್ಡಿಯುಂಟು ಮಾಡುತ್ತದೆ. ಹಾಗಂತ ಸಂಪೂರ್ಣ ದೇಹ ನಿರ್ಜಲೀಕರಣಗೊಂಡ್ರೆ ವ್ಯಾಯಾಮ ಮಾಡಲು ಸಾಧ್ಯವಿಲ್ಲ. ಹಾಗಾಗಿ ಸ್ವಲ್ಪ ಪ್ರಮಾಣದಲ್ಲಿ ನೀವು ದ್ರವ ಪದಾರ್ಥ ಸೇವನೆ ಮಾಡಬಹುದು.  

ಚಳಿಗಾಲದಲ್ಲಿ ಯೋನಿ ಸಮಸ್ಯೆಗೇನು ಸುಲಭದ ಪರಿಹಾರ!

ಹೃದ್ರೋಗಿಗಳು ವ್ಯಾಯಾಮ ಮಾಡುವುದು ಎಷ್ಟು ಸರಿ? : ಹೃದ್ರೋಗಿಗಳು ವ್ಯಾಯಾಮ ಮಾಡುವುದು ಅವರ ಆರೋಗ್ಯದ ಮೇಲೆ ಅವಲಂಬಿಸಿರುತ್ತದೆ. ವೈದ್ಯರ ಸಲಹೆ ಮೇರೆಗೆ ಅವರು ವ್ಯಾಯಾಮ ಮಾಡಬೇಕಾಗುತ್ತದೆ. ಸಾಮಾನ್ಯವಾಗಿ ಹೃದ್ರೋಗಿಗಳು ವಾರದಲ್ಲಿ 3 ದಿನ 30 ನಿಮಿಷಗಳ ಕಾಲ ವ್ಯಾಯಾಮ ಮಾಡಿದ್ರೆ ಸಮಸ್ಯೆಯಿಲ್ಲ. 

High Blood Pressure : ಈ ಆಹಾರ ತಿಂದ್ರೆ ನಿಯಂತ್ರಣದಲ್ಲಿಟ್ಟುಕೊಳ್ಳೋದು ಕಷ್ಟವಲ್ಲ ಬಿಡಿ!

ವ್ಯಾಯಾಮದ ಆರಂಭ ಹೀಗಿರಲಿ : ಆರಂಭದಲ್ಲಿಯೇ ನೀವು ಹೆಚ್ಚು ತಾಲೀಮು ಮಾಡಿದ್ರೆ ಸಮಸ್ಯೆ ಎದುರಿಸಬೇಕಾಗುತ್ತದೆ. ಹಾಗಾಗಿ ನೀವು ನಿಧಾನವಾಗಿ ನಿಮ್ಮ ವ್ಯಾಯಾಮದ ವೇಗವನ್ನು ಹೆಚ್ಚಿಸಬೇಕಾಗುತ್ತದೆ. ಆರಂಭದಲ್ಲಿ ವಾಕಿಂಗ್ ಮಾಡಿ ನಂತ್ರ ಬೇರೆ ವ್ಯಾಯಾಮಗಳನ್ನು ಶುರು ಮಾಡಬೇಕು. ಒಂದೇ ದಿನ ತೀವ್ರ ವ್ಯಾಯಾಮ ಸಲ್ಲದು. ನಿಮ್ಮ ಆರೋಗ್ಯಕ್ಕೆ ತಕ್ಕಂತೆ ನೀವು ವ್ಯಾಯಾಮ ಮಾಡಬೇಕು. ಸ್ನಾಯು, ಕೀಲು ಮತ್ತು ಮೂಳೆ ಸಮಸ್ಯೆ, ಹೃದ್ರೋಗ, ಸಂಧಿವಾತ ಸಮಸ್ಯೆ ಹೊಂದಿದ್ದರೆ  ವೈದ್ಯರ ಸಲಹೆ ಮೇರೆಗೆ ನೀವು ವ್ಯಾಯಾಮ ಮಾಡಬೇಕು.

Latest Videos
Follow Us:
Download App:
  • android
  • ios