Asianet Suvarna News Asianet Suvarna News

ಕೋವಿಡ್‌ ನಂತರ ಯುವಜನತೆಯಲ್ಲಿ ಹಾರ್ಟ್‌ಅಟ್ಯಾಕ್‌ ಹೆಚ್ಚಳ; ICMRನಿಂದ ಅಧ್ಯಯನ

ಕೋವಿಡ್‌ ಸಾಂಕ್ರಾಮಿಕದ ಬಳಿಕ ಯುವಜನತೆಯಲ್ಲಿ ಹಠಾತ್‌ ಸಾವಿನ ಪ್ರಮಾಣ ಹೆಚ್ಚಾಗ್ತಿದೆ. ಹೆಚ್ಚಿನವರು ಹಾರ್ಟ್‌ಅಟ್ಯಾಕ್‌ನಿಂದ ಸಾವನ್ನಪ್ಪುತ್ತಿದ್ದಾರೆ. ಈ ಕುರಿತಂತೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮಹತ್ವದ ಅಧ್ಯಯನ ನಡೆಸಲು ಮುಂದಾಗಿದೆ.

ICMR launches studies to investigate rising deaths due heartattacks amoung youths post covid Vin
Author
First Published Aug 20, 2023, 9:35 AM IST

ನವದೆಹಲಿ: ಕೋವಿಡ್‌ ಸಾಂಕ್ರಾಮಿಕದ ಬಳಿಕ 18ರಿಂದ 45 ವರ್ಷದ ವಯೋಮಾನದವರಲ್ಲಿ ಸಂಭವಿಸುತ್ತಿರುವ ಹಠಾತ್‌ ಸಾವುಗಳ ಕುರಿತಂತೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮಹತ್ವದ ಅಧ್ಯಯನವನ್ನು ನಡೆಸುತ್ತಿದೆ. 'ಯಾವುದೇ ಕಾರಣಗಳಿಲ್ಲದೇ ಹಠಾತ್‌ ಸಾವುಗಳು ಸಂಭವಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಹಾಗಾಗಿ ಈಗ ನಡೆಸುತ್ತಿರುವ ಅಧ್ಯಯನಗಳು ಕೋವಿಡ್‌ನ ಏಕಾಏಕಿ ಪರಿಣಾಮಗಳನ್ನು ಅರ್ಥ ಮಾಡಿಕೊಳ್ಳಲು ನಮಗೆ ಸಹಾಯ ಒದಗಿಸುತ್ತದೆ. ಯಾವುದಾದರೂ ಪರಿಣಾಮ ಇದ್ದರೆ ಅದನ್ನು ಸರಿಪಡಿಸಿಕೊಳ್ಳಲು ಅನುಕೂಲವಾಗಲಿದೆ' ಎಂದು ಐಸಿಎಂಆರ್‌ನ ಮಹಾ ನಿರ್ದೇಶಕ ಡಾ.ರಾಜೀವ್‌ ಬಹಲ್‌ ಹೇಳಿದ್ದಾರೆ.

ಯಾವುದೇ ಆರೋಗ್ಯ ಸಮಸ್ಯೆ (Health problem)ಗಳಿಲ್ಲದ ವ್ಯಕ್ತಿ ಇದ್ದಕ್ಕಿದ್ದಂತೆ ಸಾವಿಗೀಡಾಗುತ್ತಿರುವುದನ್ನು ಐಸಿಎಂಆರ್‌ ಹಠಾತ್‌ ಸಾವು ಎಂದು ಪರಿಗಣಿಸಿದೆ. ಇಲ್ಲಿವರೆಗೆ ಕೋವಿಡ್‌ನಿಂದ ಸಾವಿಗೀಡಾದ 50 ಮಂದಿಯ ಶವಪರೀಕ್ಷೆ ವರದಿಯ ಅಧ್ಯಯನಗಳನ್ನು ಐಸಿಎಂಆರ್‌ ನಡೆಸಿದೆ. ಮುಂದಿನ ದಿನಗಳಲ್ಲಿ ಇದನ್ನು 100ಕ್ಕೆ ಹೆಚ್ಚಿಸಲಾಗುತ್ತದೆ. ಕೋವಿಡ್‌ ಬಳಿಕ ಸಾವು (Death) ತರುವಂತಹ ಬದಲಾವಣೆಗಳು ದೇಹದಲ್ಲಿ ಘಟಿಸಿವೆಯೇ ಎಂಬುದನ್ನು ಈ ಅಧ್ಯಯನ (Study) ಒಳಗೊಂಡಿದೆ ಎಂದು ಅವರು ಹೇಳಿದ್ದಾರೆ.

ಕೊರೋನಾದಿಂದ ನೆನಪಿನ ಶಕ್ತಿ ಕುಂಠಿತ, ಅಧ್ಯಯನದಲ್ಲಿ ಶಾಕಿಂಗ್ ಮಾಹಿತಿ ಬಹಿರಂಗ

ಕೋವಿಡ್ ಸೋಂಕಿಗೂ, ಹಾರ್ಟ್‌ಅಟ್ಯಾಕ್‌ಗೂ ಸಂಬಂಧವಿದ್ಯಾ?
ಕೋವಿಡ್‌ ಸೋಂಕಿನ ಹರಡುವಿಕೆಯ ನಂತ್ರ ಹಾರ್ಟ್‌ಅಟ್ಯಾಕ್‌ ಹೆಚ್ಚಾಗ್ತಿದೆ ಅನ್ನೋ ಮಾತು ಈ ಹಿಂದೆಯೂ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿತ್ತು. ಇನ್ನು ಕೆಲವರು ಕೊರೋನಾ ಲಸಿಕೆ (Vaccine)ಯನ್ನು ಹಾಕಿಸಿಕೊಂಡ ನಂತರ ಹೃದಯಾಘಾತ ಹೆಚ್ಚಾಗ್ತಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ಇದರ ಅಸಲಿಯತ್ತೇನು? ಕೋವಿಡ್‌ ಸೋಂಕಿನ ಹರಡುವಿಕೆಯ ನಂತ್ರ ಹಾರ್ಟ್‌ಅಟ್ಯಾಕ್‌ ಹೆಚ್ಚಾಗ್ತಿದೆ ಅನ್ನೋ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಮಾಹಿತಿ ನೀಡಿದ್ದರು. 

ಯುವ ಮತ್ತು ಆರೋಗ್ಯವಂತ ಜನರಲ್ಲಿಯೂ ಸಹ ಹೆಚ್ಚುತ್ತಿರುವ ಹೃದಯಾಘಾತದ ಬಗ್ಗೆ ಮಾತನಾಡಿದ ಸಚಿವರು, ಆರೋಗ್ಯ ಸಚಿವಾಲಯವು (Health ministry) ಕೋವಿಡ್‌ ಮತ್ತು ಹೆಚ್ಚುತ್ತಿರುವ ಹೃದಯಾಘಾತದ ಮಧ್ಯೆಯಿರುವ ಸಂಭವನೀಯ ಸಂಬಂಧವನ್ನು ಪರಿಶೀಲಿಸುತ್ತಿದೆ ಎಂದು ಹೇಳಿದರು. ಕೋವಿಡ್‌ಗೆ ತುತ್ತಾಗಿದ್ದ ಯುವಜನರಲ್ಲಿ ಇತ್ತೀಚಿನ ಹೃದಯಾಘಾತಗಳ ನಡುವಿನ ಸಂಬಂಧವನ್ನು ಕಂಡುಹಿಡಿಯಲು ಸರ್ಕಾರವು ಸಂಶೋಧನೆಯನ್ನು ಮಾಡುತ್ತಿದೆ. ಮತ್ತು ಎರಡು ಮೂರು ತಿಂಗಳಲ್ಲಿ ಫಲಿತಾಂಶಗಳನ್ನು ನಿರೀಕ್ಷಿಸಲಾಗಿದೆ' ಎಂದು ಅವರು ಹೇಳಿದ್ದರು.

ಕೋವಿಡ್ ಹೊಸ ರೂಪಾಂತರಿ ಸೋಂಕು ಪತ್ತೆ; WHO ವಾರ್ನಿಂಗ್, ಆತಂಕ ಪಡೋ ವಿಷ್ಯಾನ?

'ದಿಢೀರ್ ಹೃದಯಾಘಾತದ ಹಲವಾರು ಪ್ರಕರಣಗಳನ್ನು ನಾವು ನೋಡಿದ್ದೇವೆ. ಹಲವಾರು ಯುವ ಕಲಾವಿದರು, ಕ್ರೀಡಾಪಟುಗಳು,  ಪ್ರದರ್ಶನ ಮಾಡುವಾಗ ವೇದಿಕೆಯಲ್ಲೇ ಹಾರ್ಟ್‌ ಅಟ್ಯಾಕ್‌ನಿಂದ ಸಾವನ್ನಪ್ಪಿದ್ದಾರೆ. ಇಂಥಾ ಘಟನೆಗಳು ಹಲವಾರು ಸ್ಥಳಗಳಿಂದ ವರದಿಯಾಗಿವೆ. ಹೀಗಾಗಿ ಈ ಬಗ್ಗೆ ತನಿಖೆ ನಡೆಸಬೇಕಾಗಿದೆ" ಎಂದು ಅವರು ಹೇಳಿದರು.

Follow Us:
Download App:
  • android
  • ios