Asianet Suvarna News Asianet Suvarna News

ಕೊಬ್ಬು ಹೆಚ್ಚಿರೋರಿಗೆ ಈ ಆ್ಯಪಲ್ ವಿನೆಗರ್ ಬೆಸ್ಟ್ ಮೆಡಿಸನ್!

ಕೊಬ್ಬು ಬಹುತೇಕ ಎಲ್ಲರ ಸಮಸ್ಯೆ. ಕೊಬ್ಬು ಕರಗಿಸಿಕೊಳ್ಳಲು ಪ್ರತಿಯೊಬ್ಬರೂ ಹರಸಾಹಸಪಡ್ತಾರೆ. ಆದ್ರೆ ಕೆಲವೊಂದು ಸುಲಭ ಉಪಾಯದಿಂದಲೂ ಹೊಟ್ಟೆ ಬೊಜ್ಜನ್ನು ತೆಗೆಯಬಹುದು. ಅದು ಯಾವುದು ಅಂತಾ ನಾವಿಂದು ಹೇಳ್ತೆವೆ.
 

How To Use Apple Cider Vinegar
Author
First Published Dec 26, 2022, 2:19 PM IST

ಈಗಿನ ದಿನಗಳಲ್ಲಿ ಹೊಟ್ಟೆ ಸೇರಿದಂತೆ ಎಲ್ಲ ಭಾಗಗಳಲ್ಲಿ ಕೊಬ್ಬು ಸಾಮಾನ್ಯ. ಕೊಬ್ಬು ನಮ್ಮ ಸೌಂದರ್ಯವನ್ನು ಹಾಳು ಮಾಡುತ್ತದೆ. ಕೈ, ಕಾಲಿನಲ್ಲಿ ಕಾಣಿಸಿಕೊಳ್ಳುವ ಕೊಬ್ಬಿಗಿಂತ ಹೊಟ್ಟೆಯಲ್ಲಿರುವ ಕೊಬ್ಬು ಅಸಹ್ಯವಾಗಿ ಕಾಣುತ್ತದೆ. ಕೊಬ್ಬು ಕೇವಲ ಸೌಂದರ್ಯವನ್ನು ಹಾಳು ಮಾಡುವುದಲ್ಲದೆ ಆರೋಗ್ಯಕ್ಕೂ ಹಾನಿಕಾರಕವಾಗಿದೆ. ಇದು ಅನೇಕ ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತದೆ.  ಕೊಬ್ಬನ್ನು ಕರಗಿಸಿಕೊಳ್ಳಲು ಜನರು ಸಾಕಷ್ಟು ಕಸರತ್ತು ಮಾಡ್ತಿದ್ದಾರೆ. ಫಿಟ್ ಆಗಿರಲು ಮತ್ತು ಆಕರ್ಷಕವಾಗಿ ಕಾಣಲು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುವುದು ಬಹಳ ಮುಖ್ಯ.  

ಹೊಟ್ಟೆ (Stomach) ಬೊಜ್ಜನ್ನು ಕಡಿಮೆ ಮಾಡುವುದು ಅಷ್ಟು ಸುಲಭವಲ್ಲ. ಆಹಾರ, ಜೀವನ ಶೈಲಿ, ವ್ಯಾಯಾಮ (Exercise) ಎಲ್ಲವೂ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದ್ರಿಂದ ತೂಕ ಕಡಿಮೆಯಾಗುತ್ತದೆ. ವೇಗದ ಕೊಬ್ಬು (Fat) ಕಡಿಮೆ ಮಾಡಲು, ಸಮತೋಲಿತ ಆಹಾರದೊಂದಿಗೆ  ಕೆಲವು ವಿಶೇಷ ಆಹಾರವನ್ನು ನಾವು ಸೇರಿಸಿಕೊಳ್ಳಬೇಕು. ಅದ್ರಲ್ಲಿ  ಉತ್ತಮ ಆಹಾರವೆಂದರೆ ಆಪಲ್ ಸೈಡರ್ ವಿನೆಗರ್ (Apple Cider Vinegar). ಸೇಬು ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿಯೋ, ಸೇಬು ವಿನೆಗರ್ ಆರೋಗ್ಯಕ್ಕೆ ಹೆಚ್ಚು ಉಪಯುಕ್ತವಾಗಿದೆ. ಆಪಲ್ ಸೈಡರ್ ವಿನೆಗರ್ ಅನ್ನು ಸೇಬಿನ ರಸ ತೆಗೆದು ತಯಾರಿಸಲಾಗುತ್ತದೆ. ಫರ್ಮೆಂಟೇಶನ್ ನಂತರ ಉಳಿಯುವ ವಿನೆಗರ್ ಅನ್ನು ಆಪಲ್ ಸೈಡರ್ ವಿನೆಗರ್ ಎಂದು ಕರೆಯಲಾಗುತ್ತದೆ. ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಸೇಬು ವಿನೆಗರ್ ಆಹಾರ (Food) ದ ರುಚಿಯನ್ನು ಹೆಚ್ಚಿಸುವುದಲ್ಲದೆ, ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಆಪಲ್ ಸೈಡರ್ ವಿನೆಗರ್ ಹೊಟ್ಟೆಯಲ್ಲಿ ಸಂಗ್ರಹವಾಗಿರುವ  ಕೊಬ್ಬನ್ನು ಕಡಿಮೆ ಮಾಡಲು ಬಹಳ ಪ್ರಯೋಜನಕಾರಿಯಾಗಿದೆ. ಆಪಲ್ ಸೈಡರ್ ವಿನೆಗರ್ ಸೇವನೆ ಮಾಡುವುದು ಹೇಗೆ ಎಂಬುದನ್ನು ಕೂಡ ನಾವು ತಿಳಿದುಕೊಳ್ಳುವುದು ಮುಖ್ಯ. ನಾವಿಂದು ಹೊಟ್ಟೆ ಕೊಬ್ಬು ಕಡಿಮೆ ಮಾಡಲು ಆಪಲ್ ವಿನೆಗರ್ ಹೇಗೆ ಬಳಸಬೇಕು ಎಂದು ನಿಮಗೆ ಹೇಳ್ತೆವೆ. 

ಹೈಪರ್‌ಟೆನ್ಷನ್ ಕಡಿಮೆ ಮಾಡಲು ಯೋಗ ಮಾಡಿ

ಹೊಟ್ಟೆಯ ಕೊಬ್ಬು ಕಡಿಮೆ ಮಾಡಲು ಆಪಲ್ ವಿನೆಗರ್ ಹೀಗೆ ಬಳಸಿ : ಆಪಲ್ ಸೈಡರ್ ವಿನೆಗರ್‌ ನಲ್ಲಿ ಕ್ಯಾಲೋರಿ ತುಂಬಾ ಕಡಿಮೆಯಿದೆ.   100 ಗ್ರಾಂ ಆಪಲ್ ಸೈಡರ್ ವಿನೆಗರ್‌ನಲ್ಲಿ ಸುಮಾರು 22 ಕ್ಯಾಲೊರಿಗಳಿವೆ. ಇದು ಅಮೈನೋ ಆಮ್ಲಗಳು, ಪೊಟ್ಯಾಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಇದು ದೇಹದಲ್ಲಿ ಇರುವ ಹಾನಿಕಾರಕ ರಾಡಿಕಲ್‌ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದು ನಮ್ಮ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಆರೋಗ್ಯವಾಗಿರಲು ಮತ್ತು ತೂಕವನ್ನು ಕಡಿಮೆ ಮಾಡಲು ದೇಹವನ್ನು ನಿರ್ವಿಷಗೊಳಿಸುವುದು ಬಹಳ ಮುಖ್ಯ. ಆಪಲ್ ಸೈಡರ್ ವಿನೆಗರ್ ಆಹಾರ ಜೀರ್ಣವಾಗಲು ಸಹಾಯ ಮಾಡುತ್ತದೆ. ಇದು ಜೀರ್ಣಾಂಗವನ್ನು ಸುಧಾರಿಸುತ್ತದೆ. ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ. ಇದು ಹೆಚ್ಚುವರಿ ಕ್ಯಾಲೊರಿಗಳನ್ನು ಬರ್ನ್ ಮಾಡಲು ಸಹಾಯ ಮಾಡುತ್ತದೆ. ತೂಕ ಇಳಿಕೆ ಜೊತೆಗೆ ಅನೇಕ ಇತರ ಆರೋಗ್ಯ ಪ್ರಯೋಜನಗಳನ್ನು ಸಹ ಆಪಲ್ ಸೈಡರ್ ವಿನೆಗರ್ ನೀಡುತ್ತದೆ.  

ಪ್ರಯಾಣದಲ್ಲಿ ಆರೋಗ್ಯ ಚೆನ್ನಾಗಿರಬೇಕೆಂದರೆ ಹೀಗೆ ಮಾಡಿ

ಆಪಲ್ ಸೈಡರ್ ವಿನೆಗರ್ ಬಳಕೆ ಹೇಗೆ? : ಹೊಟ್ಟೆಯ ಕೊಬ್ಬನ್ನು ಇಳಿಸಲು ಆಪಲ್ ಸೈಡರ್ ವಿನೆಗರ್ ಬಳಸುವುದು ಹೇಗೆ ಎಂಬುದನ್ನು ತಿಳಿಯಬೇಕು. ಬೆಳಿಗ್ಗೆ ಒಂದರಿಂದ ಎರಡು ಚಮಚ ಆಪಲ್ ಸೈಡರ್ ವಿನೆಗರ್ ನೊಂದಿಗೆ ಬೆರೆಸಿದ ಬೆಚ್ಚಗಿನ ನೀರನ್ನು ಕುಡಿಯಬಹುದು. ಇದಲ್ಲದೆ, ನೀವು ಒಂದರಿಂದ ಎರಡು ಚಮಚ ಸೇಬು ವಿನೆಗರ್ ಅನ್ನು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಅರ್ಧ ಗಂಟೆಯ ಮೊದಲು ಸೇವನೆ ಮಾಡಬೇಕು.ಇದು ಆಹಾರದ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಪೋಷಕಾಂಶಗಳ ಹೀರಿಕೊಳ್ಳಲು  ಸಹಾಯ ಮಾಡುತ್ತದೆ. 
 

Follow Us:
Download App:
  • android
  • ios