Asianet Suvarna News Asianet Suvarna News

ಹೈಪರ್‌ಟೆನ್ಷನ್ ಕಡಿಮೆ ಮಾಡಲು ಯೋಗ ಮಾಡಿ

ಅಧಿಕ ರಕ್ತದೊತ್ತಡವನ್ನು ಹೈಪರ್‌ಟೆನ್ಷನ್(Hypertension) ಎಂದೂ ಕರೆಯುತ್ತಾರೆ. ಇತ್ತೀಚಿನ ಜೀವನಶೈಲಿಯಿಂದಾಗಿ(Lifestyle) ಹಲವು ಕಾಯಿಲೆಗಳಿಗೆ ಕಾರಣವಾಗುತ್ತಿದೆ. ಇದಕ್ಕೆ ಕಾರಣ ಹಲವು. ಪ್ರತೀ ದಿನ ಯೋಗಾಭ್ಯಾಸ(Yoga) ಮಾಡಿದರೆ ಹೈಪರ್‌ಟೆನ್ಷನ್ ದೂರಾಗುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.

Yoga can control Hypertension
Author
First Published Dec 25, 2022, 5:28 PM IST

 ಪ್ರತೀ ದಿನ ದೇಹದ ಪ್ರಕೃತಿ ಒಂದೇ ರೀತಿ ಇರುವುದಿಲ್ಲ. ಅದು ಬದಲಾಗುತ್ತಿರುತ್ತದೆ. ನಮ್ಮ ದೈನಂದಿನ ಚಟುವಟಿಕೆಯೇ ಇದಕ್ಕೆ ಕಾರಣ. ದೇಹದ ರಕ್ತದ ಒತ್ತಡದಲ್ಲಿಯೂ(Blood Pressure) ಏರುಪೇರಾಗುತ್ತದೆ, ದೈನಂದಿನ ಚಟುವಟಿಕೆ(Daily Activities) ಹೆಚ್ಚುಕಮ್ಮಿಯಾದಾಗ ರಕ್ತದೊತ್ತಡದ ಮಟ್ಟವು(Blood Pressure Level) ಹೆಚ್ಚಾಗುತ್ತದೆ. ಹೀಗಾದಲ್ಲಿ ಅಧಿಕ ರಕ್ತದೊತ್ತಡ ಸಮಸ್ಯೆಯು ಕಾಣಿಸಿಕೊಳ್ಳುತ್ತದೆ, ರೋಗನಿರ್ಣಯವು ಅವಲಂಬಿಸಿರುತ್ತದೆ. ಅಧಿಕ ರಕ್ತದೊತ್ತಡವನ್ನು ಹೈಪರ್‌ಟೆನ್ಷನ್ ಎಂದೂ ಕರೆಯುತ್ತಾರೆ. 

ಹೈಪರ್‌ಟೆನ್ಷನ್ ಇದು ಇತ್ತೀಚಿನ ಬದಲಾದ ಜೀವನಶೈಲಿಯಲ್ಲಿ ಸಾಮಾನ್ಯವಾಗಿ ಎಲ್ಲಾ ವರ್ಗದ ಜನರಲ್ಲಿ ಕಂಡುಬರುತ್ತದೆ. ಒತ್ತಡ(Stress) ಹೆಚ್ಚಾದಲ್ಲಿ ಆರೋಗ್ಯವೂ ಏರುಪೇರಾಗುತ್ತದೆ. ಅಧಿಕ ರಕ್ತದೊತ್ತಡವು ಮುಂಜಾನೆ ತಲೆನೋವು(Morning Headache), ಮೂಗಿನ ರಕ್ತಸ್ರಾವ(Nasal Bleeding), ಅನಿಯಮಿತ ಹೃದಯದ ಬಡಿತ(Heart Beat), ದೃಷ್ಟಿ ಬದಲಾವಣೆಗಳು ಮತ್ತು ಕಿವಿಗಳಲ್ಲಿ ಝೇಂಕರಿಸಲು(Ringing) ಕಾರಣವಾಗಬಹುದು. ತೀವ್ರ ಅಧಿಕ ರಕ್ತದೊತ್ತಡವು ಆಯಾಸ, ವಾಕರಿಕೆ, ವಾಂತಿ(Vomit), ಗೊಂದಲ, ಆತಂಕ(Anxiety) ಮತ್ತು ಎದೆನೋವಿಗೆ(Heart Pain) ಕಾರಣವಾಗಬಹುದು.

ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಕೇವಲ ಉಪ್ಪು ಸೇವನೆಯನ್ನು(Salt Intake) ನಿಯಂತ್ರಿಸುವುದರ ಜೊತೆಗೆ ತೂಕ ಕಡಿಮೆ(Weight Loss) ಮಾಡಿಕೊಳ್ಳುವುದು, ಒತ್ತಡ ನಿರ್ವಹಣೆ, ಹೃದಯ ಆರೋಗ್ಯಕರ ಆಹಾರ, ನಿಯಮಿತ ದೈಹಿಕ ಚಟುವಟಿಕೆ(Physical Activities) ಮತ್ತು ಆಲ್ಕೊಹಾಲ್(Alcohol) ಸೇವನೆಯನ್ನು ಮಿತಿಗೊಳಿಸುವುದು ಅಧಿಕ ರಕ್ತದೊತ್ತಡವನ್ನು ನಿರ್ವಹಿಸುವ ಕೆಲವು ಪ್ರಾಥಮಿಕ ಕ್ರಮಗಳಾಗಿವೆ.

ಇತ್ತೀಚೆಗೆ ಅಧ್ಯಯನವೊಂದು ನಡೆದಿದ್ದು, ಈ ಪ್ರಕಾರ ಯೋಗ(Yoga) ಮತ್ತು ಅಧಿಕ ರಕ್ತದೊತ್ತಡದ(High Blood Pressure) ನಡುವಿನ ಸಂಬAಧದ ಬಗ್ಗೆ ಅನ್ವೇಷಿಸಿದ್ದಾರೆ. ಸ್ಟೆçಚಿಂಗ್(Stretching) ತಂತ್ರಗಳಿಗಿAತ ಯೋಗವು ರಕ್ತದೊತ್ತಡವನ್ನು ನಿಯಂತ್ರಿಸಲು ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಸೂಚಿಸಲಾಗಿದೆ.

Yoga Tips : ಮಧುಮೇಹಿಗಳು ಈ ಯೋಗ ಮಾಡಿದ್ರೆ ಹೆಚ್ಚುತ್ತೆ ಸಮಸ್ಯೆ

ಯೋಗ ಮತ್ತು ಅಧಿಕ ರಕ್ತದೊತ್ತಡ
ಪ್ರತೀ ನಿತ್ಯ ಸುಮಾರು 15 ನಿಮಿಷಗಳ ಕಾಲ ಯೋಗ ಮಾಡುವುದರಿಂದ ಅಧಿಕ ರಕ್ತದೊತ್ತಡವನ್ನು ಹಾಗೂ ಹೃದಯದ ಆರೋಗ್ಯವನ್ನು(Heart Health) ಹೇಗೆ ನಿಯಂತ್ರಿಸಬಹುದು ಎಂದು ಅಧ್ಯಯನ ನಡೆದಿದೆ. ಈ ಕುರಿತು ಕೆನಡಿಯನ್ ಜರ್ನಲ್ ಆಫ್ ಕಾರ್ಡಿಯಾಲಜಿಯಲ್ಲಿ(Canadian Journal of Cardiology) ಪ್ರಕಟವಾಗಿದೆ. ಈ ಅಧ್ಯಯನದ ಪ್ರಮುಖ ಅಂಶಗಳು ಹೀಗೆ ಹೇಳಿದೆ.

1. ಯೋಗ ಮತ್ತು ಹೈಪರ್‌ಟೆನ್ಷನ್ ನಡುವಿನ ಸಂಬAಧ ಹಾಗೂ ಯೋಗದಿಂದ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಬಹುದೇ ಎಂದು ಪರೀಕ್ಷಿಸಲು ಸುಮಾರು 60ಕ್ಕೂ ಹೆಚ್ಚು ಅಧಿಕ ರಕ್ತದೊತ್ತಡ(High Blood Pressure) ಇರುವವರು ಪಾಲ್ಗೊಂಡಿದ್ದರು. ಇವರಲ್ಲಿ ಎರಡು ಗುಂಪುಗಳಾಗಿ ಮಾಡಿದ್ದು, ಏರೋಬಿಕ್ ವ್ಯಾಯಾಮ(Aerobic Exercise) ಕಾರ್ಯಕ್ರಮದ ನಂತರ ಎರಡೂ ಗುಂಪುಗಳಿಗೆ ವಾರಕ್ಕೆ(Weekly) 5ದಿನ ಸುಮಾರು 15 ನಿಮಿಷಗಳ ಕಾಲ ಯೋಗ ಮತ್ತು ವಾರಕ್ಕೆ 5 ದಿನ 15 ನಿಮಿಷ ಸ್ಟೆçಚಿಂಗ್(Stretching) ಮಾಡಲು ಸೂಚಿಸಲಾಯಿತು. ಸುಮಾರು 3 ತಿಂಗಳ ಕಾಲ ಈ ಪ್ರಯೋಗ ನಡೆಸಲಾಯಿತು.
2. ಎರಡೂ ಗುಂಪುಗಳಲ್ಲಿ ವಿಶ್ರಾಂತಿ ರಕ್ತದೊತ್ತಡ(Resting Blood pressure) ಮತ್ತು ಹೃದಯ ಬಡಿತದಲ್ಲಿ(Heart Beat) ಸುಧಾರಣೆ ಕಂಡುಬAದಿದೆ. ಆದರೆ ಯೋಗ ಗುಂಪಿನಲ್ಲಿ ರಕ್ತದೊತ್ತಡ, ಹೃದಯ ಬಡಿತ ಮತ್ತು ರೆನಾಲ್ಡ್÷್ಸ(Reynolds) ಅಪಾಯದ ಅಂಕಗಳಲ್ಲಿ ಹೆಚ್ಚಿನ ಸುಧಾರಣೆ ಕಂಡುಬAದಿದೆ.
3. ರೆನಾಲ್ಡ್ ರಿಸ್ಕ್ ಸ್ಕೋರ್ ಅನ್ನು ಬಳಸಿಕೊಂಡು ಹೃದಯ ರಕ್ತನಾಳದ ಕಾಯಿಲೆ(Heart Blood Vessels) ಮತ್ತು ಪ್ರತಿಕೂಲ ಹೃದಯದ ಫಲಿತಾಂಶಗಳನ್ನು ಸಂಶೋಧಕರು ಅಳೆದಿದ್ದಾರೆ. 
4. ಅಧಿಕ ರಕ್ತದೊತ್ತಡವನ್ನು ಸುಧಾರಿಸಲು ಅಸ್ತಿತ್ವದಲ್ಲಿರುವ ಚಿಕಿತ್ಸೆಗಳಿಗೆ ಯೋಗವು ಪರಿಣಾಮಕಾರಿ ಸೇರ್ಪಡೆಯಾಗಬಹುದು ಎಂದು ಫಲಿತಾಂಶದಲ್ಲಿ ಕಂಡುಬAದಿದೆ.
5. ಯೋಗವು ಆರೋಗ್ಯದಲ್ಲಿ ವ್ಯತ್ಯಾಸವನ್ನು ಉಂಟುಮಾಡಲು ಹಲವು ಕಾರಣಗಳಿವೆ. ಅವು ಸಹಾನುಭೂತಿಯ ನರಮಂಡಲದ ಚಟುವಟಿಕೆಯನ್ನು ಕಡಿಮೆ ಮಾಡುತ್ತದೆ, ಕಾರ್ಟಿಸೋಲ್ ಮಟ್ಟವನ್ನು(Cortisol Level) ಕಡಿಮೆ ಮಾಡುತ್ತದೆ ಮತ್ತು ವಾಸೋಡಿಲೇಷನ್ (Vasodilation) ಅನ್ನು ಉತ್ತೇಜಿಸುತ್ತದೆ. ಹಾಗಾಗಿ ಅಧಿಕ ರಕ್ತದೊತ್ತಡವನ್ನು ನಿರ್ವಹಿಸುವಲ್ಲಿ ಯೋಗವು ಪ್ರಯೋಜನಕಾರಿ ಎಂದು ತಿಳಿದುಬಂದಿದೆ.

ಫ್ಲಾಟ್ ಫುಟ್ ಸಮಸ್ಯೆ ನಿವಾರಿಸಲು ಈ ವ್ಯಾಯಾಮ ತಪ್ಪದೇ ಮಾಡಿ

ಈ ಯೋಗಾಸನಗಳನ್ನು ಮಾಡಿ
ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಿಕೊಳ್ಳಲು ಹಾಗೂ ಒತ್ತಡ(Stress) ಮತ್ತು ತೂಕದಿಂದ(Weight) ಉಂಟಾಗುವ ಹೈಪರ್‌ಟೆನ್ಷನ್(Hypertension) ಅನ್ನು ನಿಯಂತ್ರಣಕ್ಕೆ ತರಲು ಈ ಕೆಳಗೆ ಹೇಳಿರುವ ಯೋಗಾಸನಗಳನ್ನು ಪ್ರತೀ ನಿತ್ಯ 15 ನಿಮಿಷಗಳ ಕಾಲ ಮಾಡಿ ಆರೋಗ್ಯ ಕಾಯ್ದುಕೊಳ್ಳಿ.
1. ಶವಾಸನ(Corpse Pose): ಇದಕ್ಕೆ ಕಾಲುಗಳ ನೇರವಾಗಿ, ಕೈಗಳು ಚಾಚಿಕೊಂಡು, ಬೆನ್ನು ನೆಲಕ್ಕೆ ತಾಕುವಂತೆ ಮಲಗಿಕೊಳ್ಳಬೇಕು. ದೇಹವನ್ನು ಹಗುರ ಬಿಟ್ಟು, ಕಣ್ಣುಗಳನ್ನು ಸರಳವಾಗಿ ಮುಚ್ಚಿರಬೇಕು. ಒಂದು ರೀತಿಯಲ್ಲಿ ಅಂಗಾತ ಮಲಗಿಕೊಂಡAತೆ ಮಾಡಬೇಕು. ಹೀಗೆ ಮಲಗಿಕೊಂಡು ನಿಧಾನವಾಗಿ ದೀರ್ಘ ಉಸಿರು ತೆಗೆದುಕೊಂಡು(Breathe In) ಹಾಗೆ ಉಸಿರು ಬಿಡಬೇಕು(Breathe Out). 
2. ಉತ್ತನಾಸನ(Standing Forward Bend Pose): ಎರಡೂ ಕಾಲುಗಳನ್ನು ಜೋಡಿಸಿ ನೇರವಾಗಿ ನಿಂತುಕೊಳ್ಳಿ. ನಂತರ ದೀರ್ಘ ಉಸಿರು ತೆಗೆದುಕೊಂಡು ಮಂಡಿಗೆ(Knee) ತಾಕುವಂತೆ ಅರ್ಧ ದೇಹವನ್ನು ಬಗ್ಗಿಸಬೇಕು. ಎರಡೂ ಕೈಗಳ ಹಸ್ತವು ನೆಲಕ್ಕೆ ಅಂಟಿಕೊAಡಿರಬೇಕು. ಇದರಲ್ಲಿ ಇಡೀ ದೇಹದ ಭಾರವು ಕಾಲಿನಲ್ಲಿ ಹೊತ್ತಿರುತ್ತದೆ.
3. ಶಿಶುಸಾಸನ(Child Pose): ಪುಟ್ಟ ಮಗು ಮಲಗಿದಂತಿರುತ್ತದೆ. ಒಂದು ರೀತಿ ದೇವರಿಗೆ ಬಗ್ಗಿ ನಮಸ್ಕರಿಸಿದಂತೆ. ಕಾಲು ಮಡಚಿಕೊಂಡು ಕಾಲಿನಮೇಲೆ ಕುಳಿತುಕೊಳ್ಳಬೇಕು.  ತಲೆ ನೆಲಕ್ಕೆ ತಾಕುವಂತೆ ಎರಡೂ ಕೈಗಳು ಪಾದಗಳ ಪಕ್ಕದಲ್ಲಿರಿಸಿ ಅರ್ಧ ದೇಹವು ಬಗ್ಗಿಸಬೇಕು. ಒಂದು ರೀತಿ ಮಗು ಮಲಗಿದಂತಿರುತ್ತದೆ. 

Follow Us:
Download App:
  • android
  • ios